ವಿಕ್ರಮಾರ್ಜುನ ವಿಜಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡದ ಆದಿಕವಿಯೆಂದು ಹೆಸರುವಾಸಿಯಾದ ಪಂಪನು ಬರೆದ ಮಹಾಭಾರತ ಪಂಪಭಾರತ. ವಿಕ್ರಮಾರ್ಜುನ ವಿಜಯ ಕೃತಿಯನ್ನು ಪಂಪನು ಆರು ತಿಂಗಳಿನಲ್ಲಿ ಬರೆದು ಮುಗಿಸಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.ಈ ಕೃತಿಯಲ್ಲಿ ಲೌಕಿಕವನ್ನು ಅಂದರೆ ಲೋಕದ ವ್ಯಾಪಾರ ವ್ಯವಹಾರವನ್ನು,ನಯಗುಣ ಗರಿಮೆಗಳನ್ನು ತಿಳಿದುಕೊಳ್ಳಬಹುದೆನ್ನುತ್ತಾನೆ ಪಂಪ.[೧]

ಇತಿವೃತ್ತ[ಬದಲಾಯಿಸಿ]

  • ಪಂಪನ ಇತಿವೃತ್ತ ಸಾರುವ ಶಾಸನಗಳು -೧)ಗಂಗಾಧರ ಶಾಸನ

ಪಂಪನ ಕೃತಿಗಳು[ಬದಲಾಯಿಸಿ]

ಪಂಪನು ಒಂದು ಧಾರ್ಮಿಕ ಕಾವ್ಯವನ್ನು ಮತ್ತೊಂದು ಲೌಕಿಕ ಕಾವ್ಯವನ್ನು ರಚಿಸಿದ್ದಾನೆ.

  1. ಪಂಪನ ಮೊದಲನೆಯ ಕೃತಿ ಆದಿಪುರಾಣ.
  2. ಎರಡನೆಯ ಕೃತಿ ವಿಕ್ರಮಾರ್ಜುನ ವಿಜಯ ಅಥವಾ ಪಂಪಭಾರತ.


ಪಂಪಭಾರತ ಮಹಾಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ.ಈ ಕಥೆಯ ನಾಯಕ ಅರ್ಜುನ.ಇಲ್ಲಿ ಪಂಪ ತನ್ನ ಆಶ್ರಯದಾತ,ಮಿತ್ರನಾದ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸಿ ಕಾವ್ಯ ರಚಿಸಿದ್ದಾನೆ.ಈ ಕೃತಿಯ ಪ್ರಕಾರ ದ್ರೌಪದಿ ವಿವಾಹವಾಗುವುದು ಅರ್ಜುನನನ್ನು ಮಾತ್ರ.ತನ್ನ ರಾಜ ಅರಿಕೇಸರಿಗೆ ಹೋಲಿಸಿ ಬರೆದ ಕಾರಣ ಪಂಪ ಮಹಾಭಾರತದ ಕಥೆಯಲ್ಲಿ ಇಂತಹ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕಾಗಿ ಬಂತು. ಅಸಾಧಾರಣವಾದ ಪ್ರತಿಭೆ ಹಾಗೂ ಸೌಂದರ್ಯದಿಂದ ಕೂಡಿದ ಈ ಕಾವ್ಯದ ಕೊನೆಯಲ್ಲಿ ಅರ್ಜುನನೊಡನೆ ಸಿಂಹಾಸನವನ್ನೇರುವವಳು ಸುಭದ್ರೆ! ಇವನು ಹತ್ತನೆಯ ಶತಮಾನಕ್ಕೆ ಸೇರಿದವನು.ಪಂಪಭಾರತ ಕಾವ್ಯವು ಗದ್ಯ ಪದ್ಯ ಮಿಶ್ರಣದ ಒಂದು ಚಂಪೂ ಕಾವ್ಯ.ಪಂಪ ಕವಿ ತನ್ನ ಕಥಾಭಿತ್ತಿಯಾಗಿ ಆರಿಸಿಕೊಂಡಿದ್ದು ಸಂಸ್ಕೃತ ವ್ಯಾಸಭಾರತ ಕಥೆ.[೨] ಕನ್ನಡ ಭಾಷೆಯ ಆದಿಕಾವ್ಯವಾಗಿರುವುದು ಇದರ ವೈಶಿಷ್ಟ್ಯ.ಹಿಂದಿನ ಪ್ರಸಿದ್ಧ ಮಹಾಕಾವ್ಯಗಳಂತಲ್ಲದೆ ನಗರ,ಸಮುದ್ರ, ಪರ್ವತ, ಋತು ಮುಂತಾಗಿ ಪ್ರಸಿದ್ಧವಾಗಿರುವ 18 ವರ್ಣನೆಗಳಿಗೆ ಯಥೋಚಿತ್ತವಾಗಿ ಪ್ರಾಮುಖ್ಯಕೊಟ್ಟು ನಾಯಕನೊಬ್ಬನ ಚರಿತ್ರೆಯ್ನು ಅವನ ಜನನದಿಂದ ಮೊದಲ್ಗೊಂಡು ಅವನು ಅತಿಶಯವಾದ ಅಭ್ಯುದಯವನ್ನು ಪಡೆಯುವವರೆಗೆ ವರ್ಣಿಸಿರುವುದು ಈ ಕಾವ್ಯದ ಸಾಮಾನ್ಯ ಲಕ್ಷಣವಾಗಿದೆ. ಇದರಲ್ಲಿ 14 ಆಶ್ವಾಸಗಳಿವೆ. ಇಲ್ಲಿಯೂ ನಡುನಡುವೆ ಸಣ್ಣ ದೊಡ್ಡ ಗದ್ಯಖಂಡಗಳು ದಟ್ಟವಾಗಿ ಹೆಣೆದುಕೊಂಡು ವಿವಿಧ ಪದ್ಯಜಾತಿಗಳ 1609 ಪದ್ಯಗಳಿವೆ. ಈ ಪದ್ಯಜಾತಿಗಳಲ್ಲಿ ಕಂದಪದ್ಯಗಳೂ ಆ ಬಳಿಕ ಖ್ಯಾತ ಕರ್ಣಾಟಕಗಳು ಸಂಖ್ಯಾಬಾಹುಳ್ಯ ಪಡೆದಿವೆ. ರಗಳೆ, ಪಿರಿಯಕ್ಕರಗಳು ಇಲ್ಲಿ ಕಂಡುಬರುತ್ತವೆ. ಪಂಪಕವಿಯೇ ಹೇಳುವಂತೆ ಇದು ಆರು ತಿಂಗಳಲ್ಲಿ ಬರೆದು ಮುಗಿಸಿದನಂತೆ ಇದರ ರಚನೆಯ ಭಾಷೆ ಶೈಲಿಗಳ ಹದ ಇಲ್ಲಿ ಹೆಚ್ಚಾಗಿ ಕನ್ನಡತನವನ್ನು ತೋರುತ್ತದೆ ಹೀಗೆ ವ್ಯಾಸಭಾರತದಂತಹ ಒಂದು ದೊಡ್ಡಗ್ರಂಥದ ಕಥಾವಸ್ತುವನ್ನು ಸಮಗ್ರವಾಗಿ,ಸಂಕ್ಷಿಪ್ತವಾಗಿ ನಿರೂಪಿಸಿದ್ದಾರೆ.

ನೋಡಿ[ಬದಲಾಯಿಸಿ]

ಪೂರಕ ಓದಿಗೆ[ಬದಲಾಯಿಸಿ]

  • ಪಂಪಭಾರತ- ವಿಕಿಸೋರ್ಸ್‍ನಲ್ಲಿ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2016-04-05. Retrieved 2016-01-12.
  2. http://www.britannica.com/topic/Vikramarjuna-Vijaya