ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

ವಿಕಿಪೀಡಿಯ ಇಂದ
Jump to navigation Jump to search

ವಿವಿದತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ವಿಭಿನ್ನವಾದ ಜಾತಿ ಜನಾಂಗ ಧರ್ಮದವರು ಇದ್ದಾರೆ.ಒಂದೊಂದು ಜನಾಂಗಕ್ಕೂ ತನ್ನದೇ ಆದ ಭಾಷೆ ಸಂಸ್ಕೃತಿ ಪದ್ದತಿ ಇದೆ.ಅಂತಹದರಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಅರೆಭಾಷೆ ಜನಾಂಗ[೧],ಜನಾಂಗದ ಅರೆ ಭಾಷೆ ಸಂಸ್ಕೃತಿ,ಆಚಾರ ವಿಚಾರ,ಆಹಾರ ಪದ್ದತಿಗಳು ವಿಭಿನ್ನವೇ ಆಗಿದೆ.

ಶತಮಾನದಷ್ಟು ಹಳೆಯದಾಗಿರುವ ಈ ಅರೆಭಾಷೆ,ಐತಿಹಾಸಕವಾಗಿ ಸಿರವಂತ ಸಂಸ್ಕೃತಿ ಹೊಂದಿದೆ.ಕನ್ನಡ ಪ್ರಭೇದ ಲಿಂಗವಚನ ವ್ಯವಸ್ಥೆಯ ಉತ್ತರ ಡ್ರಾವಿಡ ವಿಭಾಗದ ನಂತರದ ಹಂತಕ್ಕೆ ಸೇರಿದ್ದಾಗಿದೆ ಎನ್ನಲಾಗುತ್ತದೆ.ಪೂರ್ವವಲಯದ ಅರೆಭಾಷೆ ಜನಾಂಗ ಕನ್ನಡಿಗರ ಒಂದು ಭಾಗ ಎಂದು ಪರಿಗಣಿಸಲಾಗುತ್ತದೆ.

ಅರೆಭಾಷೆ[೨] ಜನಾಂಗದವರು ಹೆಚ್ಚಾಗಿ ವಾಸಿಸುವ ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಕೊಡಗಿನವರ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಇವೆ.ದಕ್ಷಿಣ ಕನ್ನಡದಲ್ಲಿ ಭೂತಾರಾಧನೆ,ಸುಗ್ಗಿ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ.ಆದರೆ ಕೊಡಗಿನಲ್ಲಿ ಹುತ್ತರಿ,ಕೈಲುಮುಹೂರ್ತ ಮತ್ತು ಆಟಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ.ಕೊಡಗಿನ ಅರೆಭಾಷೆ ಜನಾಂಗದವರ ಸಂಸ್ಕೃತಿ ವಿಶೇಷವೇ, ಭಾಷೆ ಸಂಗೀತ, ಕುಣಿತ,ವೇಷ ಭೂಷಣ ಎಲ್ಲವೂ ವಿಭಿನ್ನ. ರಾಜವಂಶಸ್ಥರಿಂದ ಬಂದಿರುವಂತಹದಾಗಿದ್ದು,ವೀರತನದ ಹೆಗ್ಗುರುತಾಗಿ ಕೋವಿ ಮತ್ತೊ ಒಡಿಕತ್ತಿ(ಸಾಂಪ್ರದಾಯಿಕ ಕತ್ತಿ,ಇದೀಗ ಆಭರಣ)ವಾಗಿ ಬಳಸುತ್ತಾರೆ. ಹಸೆರೇ ಹೇಳುಂತೆ ಅರೆಭಾಷೆ ಜನಾಂಗ ಅಂದ್ರೆ ಭೂಮಿಯ ಒಡೆಯ.ಅರೆಭಾಷೆ ಜನಾಂಗದವರು ಎಲ್ಲಿಂದ ಬಂದರೂ ಎನ್ನುವುದಕ್ಕೆ ಉದಾಹರಣೆಗಳಿಲ್ಲ.ಆದರೆ ವಿಜಯನಗರರ ಅರಸರ ಕಾಲದಲ್ಲಿ,ಕೃಷ್ಣದೇವರಾಯರ ಕಾಲದಲ್ಲಿ ಅರೆಭಾಷೆ ಜನಾಂಗದವರು ಇದ್ದರೂ ಎಂದು ಚರಿತ್ರೆಯಿಂದ ತಿಳಿದುಬರುತ್ತದೆ. ಅಲ್ಲಿಂದ ಐಗೂರು ಸೀಮೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಬಂದವರು,ಬಳಿಕ ಕೊಡಗು ಜಿಲ್ಲೆಯಲ್ಲಿ ಆಳುತ್ತಿದ್ದ ಹಾಲೇರಿ ರಾಜವಂಶಸ್ಥದವರು ಇಲ್ಲನ ಉಂಬಳಿಗಾಗಿ ಜಮ್ಮಾದ ಮೂಲಕ ಕೊಟ್ಟು ಇಲ್ಲಿ ನೆಲೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ದಾಖಲೆಗಳು ಇತಿಹಾಸದಿಂದ ತಿಳಿದು ಬರುತ್ತದೆ.ಈ ಹಿನ್ನಲೆಯಲ್ಲಿ ಈ ಪುಟ್ಟ ಜಿಲ್ಲೆಯ ಎಲ್ಲಾ ಭಾಗದಲ್ಲಿ ಅರೆಭಾಷೆ ಜನಾಂಗದವರು ಕಾಣಸಿಗುತ್ತಾರೆ.

ಅರೆಭಾಷೆ ಜನಾಂಗ ವಿಶೇಷವಾಗಿರುವ ಅರೆಭಾಷೆ ಜನಾಂಗದ ಸಾಹಿತ್ಯ,ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕೆಆಗಿ 2012ರ ಇಸವಿ ಮೇ 25ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯನ್ನು ಸ್ತಾಪಿಸಿ,ಪುಸ್ತಕ,ಪದಕೋಶ,ಭಾಷಾಂತರ,ದಾಖಲೆಗಳನ್ನು ಸಂಗ್ರಹಿಸುವ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಇವುಗಳೊಂದಿಗೆ ಯುವಕರ ಸಬಲೀಕರಣಕ್ಕಾಗಿ ಯುವ ಸಾಹಿತಿಗಳಿಗೆ ವಿಚಾರ ಸಂಕಿರ್ಣ,ಸಾಹಿತ್ಯ ಶಿಬಿರ,ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.ಭಾಷೆ ಸಂಸ್ಕೃತಿ ನಶಿಸಿದಂತೆ ದಾಖಲೆ ರೂಪದಲ್ಲಿ ಸಂಗ್ರಹ ಮಾಡುವ ಕೆಲಸವನ್ನೂ ಅಕಾಡೆಮಿ ಮಾಡುತ್ತಿದೆ.

ಅಧೀನತೆ[ಬದಲಾಯಿಸಿ]

 1. ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯ
 2. ಕರ್ನಾಟಕ ಸರ್ಕಾರ

ಕಾರ್ಯವ್ಯಾಪ್ತಿ[ಬದಲಾಯಿಸಿ]

ಅರೆಭಾಷೆ ಜನಾಂಗದ ಕೊಡಗು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆಯಲ್ಲು ವಿಸ್ಥರಿಸಿದೆ . ಮಂಗಳೂರು,ಉಳ್ಳಾಲ,ವಿಟ್ಲ,ಪುತ್ತೂರು,ಸುಳ್ಯ,ಮಡಿಕೇರಿ,ಸೋಮವಾರಪೇಟೆ, ವಿರಾಜಪೇಟೆ ,ಕೇರಳಕಾಸರಗೋಡುನವರಗೆ ಹರಡಿದೆ.

ಪ್ರಕಟಣೆಗಳು[ಬದಲಾಯಿಸಿ]

 1. ಅಕಾಡೆಮಿ ತ್ರೈಮಾಸಿಕ ಸಂಚಿಕೆ "ಹಿಂಗಾರ ".
 2. ಇತರ ಪುಸ್ತಕಗಳು[೩].

ಕಾರ್ಯಕ್ರಮಗಳು[ಬದಲಾಯಿಸಿ]

 1. ಅರೆಭಾಷೆ ಅಕಾಡೆಮಿ ಕಾರ್ಯಕ್ರಮಗಳು[೪][೫]
 2. ಅಕಾಡೆಮಿ ಪ್ರಾಯೋಜಿಸಿದ ಕಾರ್ಯಕ್ರಮಗಳು[೬]

ಉಲ್ಲೇಖ[ಬದಲಾಯಿಸಿ]

 1. http://kanaja.in/ebook/index.php/e-book/2017-12-16-09-56-00
 2. http://www.arebhasheacademy.com/index.html
 3. http://www.arebhasheacademy.com/hingara_book.html
 4. https://kannada.citytoday.news/72480/
 5. https://vijaykarnataka.indiatimes.com/district/kodagu/application-invited-for-awards/articleshow/64807574.cms
 6. https://www.prajavani.net/news/article/2017/07/28/509408.html