ವಿಷಯಕ್ಕೆ ಹೋಗು

ಎಳ್ಳೆಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಡ
ಹೂವು
ಕಾಯಿ
ಬಿಳಿ ಎಳ್ಳು

ಎಳ್ಳೆಣ್ಣೆ (sesame oil/Gingelly oil/Til oil)ಯನ್ನು ಎಳ್ಳು/ತಿಲದಿಂದ ತೆಗೆಯುತ್ತಾರೆ. 'ಸೆಸಮಮ್ ಇಂಡಿಕಮ್ '(sesamum Indicum.L) ಇದರ ಸಸ್ಯ ಶಾಸ್ತ್ರದ ಹೆಸರು. ಇದು ಸೆಸಮಮ್ ಪ್ರಜಾತಿ(sesamum)ಯ ಪೆಡಾಲಿಸಿಯೇ(pedaliacea)ಕುಟುಂಬಕ್ಕೆ ಸೇರಿದ ಗಿಡ. ಎಳ್ಳನ್ನು ಸಂಸ್ಕೃತದಲ್ಲಿ 'ತಿಲ(tila) ಎನ್ನುತ್ತಾರೆ. ತಿಲದಿಂದ ಬಂದದ್ದು ತೈಲ(Oil) ಆಗಿದೆ. ತೈಲವನ್ನು ಮೂಲ ದ್ರಾವಿಡದಲ್ಲಿ 'ಎನ್ನ', 'ಎನ್ನೈ' ಯಂತ ಕರೆಯಲಾಗುತ್ತದೆ. ಕ್ರಮೇಣ ಇದು ಕನ್ನಡದಲ್ಲಿ ಎಣ್ಣೆ ಆಗಿದೆ.

ಇತಿಹಾಸ

[ಬದಲಾಯಿಸಿ]

ವೇದಗಳಲ್ಲಿಯು ಎಳ್ಳಿನ ಪ್ರಸ್ತಾವನೆ ಇದೆ. ಸಿಂಧೂ ಕಣಿವೆ ನಾಗರಿಕತೆ ಸಮಯದಲ್ಲಿ, ಆ ಕಾಲದ ಜನ ಎಳ್ಳಿನಿಂದ ಎಣ್ಣೆಯನ್ನು ತೆಗೆಯುವುದನ್ನು ಕಲಿತಿದ್ದರು. ತಿಲವನ್ನು ಬಳಸಿ ಆ ಕಾಲದಲ್ಲಿ ಗಾಣದಿಂದ ಎಣ್ಣೆಯನ್ನು ತೆಗೆಯುತ್ತಿದ್ದರು. ಕ್ರೀ.ಪೂ.೬೦೦ ಸಂವತ್ಸರ ಕಾಲದಲ್ಲಿ ಸಿಂಧಿ ಲೋಯದಿಂದ ಮೆಸೊಪೊಟೊಮಿಯಕ್ಕೆ ವ್ಯಾಪ್ತಿ ಹೊಂದಿದೆ. ಅಲ್ಲಿಂದ ಎಲ್ಲಾ ಕಡೆಗೆ ವ್ಯಾಪಿಸಿದೆ. ಸದ್ಯಕ್ಕೆ ಎಕ್ಸುಪೆಲ್ಲರು ಎನ್ನುವ ಯಂತ್ರಗಳನ್ನು ಬಳಸಿ ಎಣ್ಣೆಯನ್ನು ಉತ್ಪನ್ನ ಮಾಡುತ್ತಿದ್ದಾರೆ. ಹಿಂಡಿ(cake)ಯಲ್ಲಿರುವ, ಉಳಿದಿದ್ದ ಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ನಲ್ಲಿ ನಡಿಸಿ, ಎಣ್ಣೆಯನ್ನು ತೆಗೆಯುತ್ತಾರೆ. ಒಟ್ಟು ಎಣ್ಣೆ ತೆಗೆಸಿದ ಹಿಂಡಿಯನ್ನು ಹಸು/ಆಕಳ ಆಹಾರವಾಗಿ ಬಳಸುತ್ತಾರೆ.

ಎಳ್ಳೆಣ್ಣೆ ಸಂಯೋಜನೆ

[ಬದಲಾಯಿಸಿ]

ಎಳ್ಳೆಣ್ಣೆ ಯಲ್ಲಿ[] ಅಸಂತೃಪ್ತ ಕೊಬ್ಬಿನ ಆಮ್ಲಗಳಾದ(ಅಸಂತೃಪ್ತಕೊಬ್ಬಿನ ಆಮ್ಲಗಳು)'ಒಲಿಕ್ ಮತ್ತು ಲಿನೊಲಿಕ್ ಕೊಬ್ಬಿನ ಆಮ್ಲಗಳು ಹೆಚ್ಚಿನ ಶೇಕಡಾ(%)ದಲ್ಲಿರುತ್ತವೆ. ಈ ಎರಡು ಆಮ್ಲಗಳು ಸೇರಿ ಎಣ್ಣೆಯಲ್ಲಿ ೭೦.೦% ತನಕ ಇರುತ್ತವೆ. ಎಳ್ಳೆಣ್ಣೆಯಲ್ಲಿ ವಿಟಮಿನ್ E ಜಾಸ್ತಿಯಾಗಿರುತ್ತದೆ. ವಿಟಮಿನ್ E, ಆಂಟಿ ಅಕ್ಸಿಡಂಟ್(antioxidant ಗುಣವೂಂದಿದೆ. ಇದು ಲೋ ಡೆನ್ಸಿಟಿ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಎಣ್ಣೆಯಲ್ಲಿ ಇನ್ನು ತಾಮ್ರ, ಕಾಲ್ಸಿಯಂ, ಇರನ್, ಜಿಂಕ್, ಮತ್ತೆ ವಿಟಮಿನ್ B6 ಇರುತ್ತವೆ.[]

ಕೊಬ್ಬಿನ ಆಮ್ಲ ಕಾರ್ಬನುಗಳ ಸಂಖ್ಯೆ ಕನಿಷ್ಟ ಗರಿಷ್ಟ
ಪಾಮಿಟಿಕ್ ಆಮ್ಲ C16:0 7.0 % 12.0 %
ಪಾಮಿಟೋಲಿಕ್ ಆಮ್ಲ C16:1 trace 0.5 %
ಸ್ಟಿಯರಿಕ್ ಆಮ್ಲ C18:0 3.5 % 6.0 %
ಒಲಿಕ್ ಆಮ್ಲ C18:1 35.0 % 50.0 %
ಲಿನೋಲಿಕ್ ಆಮ್ಲ C18:2 35.0 % 50.0 %
Linolenic Acid C18:3 trace 1.0 %
Eicosenoic Acid C20:1 trace 1.0 %

ಎಳ್ಳೆಣ್ಣೆ ಭೌತಿಕ ಸ್ವಭಾವ ಲಕ್ಷಣಗಳು

[ಬದಲಾಯಿಸಿ]
ಸ್ವಭಾವ ಲಕ್ಷಣ ಬೆಲೆಯ ಮಿತಿ
ಸಾಂದ್ರತೆ(ತಿಣ್ಮೆ) 0.915-0.919
ವಕ್ರೀಭವನ ಸೂಚಕ(400C) 1.4645-1.4665
ಸಪೋನಿಫಿಕೇಸನ್ ಬೆಲೆ 188-193
ಐಯೋಡಿನ್ ಬೆಲೆ 103-120
ಅನ್ ಸಪೋನಿಫಿಯಬುಲ್ ಮೇಟರ್ 1.5-2.0%
ಬೆಲ್ಲಿಯರ್ ಟರ್ಬಿಟಿಟಿ(ಗರಿಷ್ಟ) 220C

ಎಳ್ಳೆಣ್ಣೆಯ ಉಪಯೋಗಗಳು

[ಬದಲಾಯಿಸಿ]
  • ಅಡುಗೆ ಎಣ್ಣೆಯಾಗಿ ಬಳಸುತ್ತಾರೆ.
  • ಊರುಗಾಯಿ/ಉಪ್ಪಿನಕಾಯಿ ತಯಾರು ಮಾಡುವುದರಲ್ಲಿ, ಎಳ್ಳೆಣ್ಣೆಯನ್ನು ಉಪಯೋಗ ಮಾಡುತ್ತಾರೆ.
  • ಸ್ನಾನ ಮಾಡುವುದಕ್ಕೆ ವೊದಲು ದೇಹಮರ್ದನ ತೈಲವನ್ನಾಗಿ ಬಳಸುತ್ತಾರೆ.
  • ಆಯೂರ್ವೇದದ ಮದ್ದುಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
  • ಆರೋಮಾಥೆರಫಿಯಲ್ಲಿಯು ಎಳ್ಳೆಣ್ಣೆಯನ್ನು ಬಳಸುತ್ತಾರೆ.
  • ಈಗಲೂ ಗ್ರಾಮಗಳಲ್ಲಿ ಸಣ್ಣ ಮಕ್ಕಳಿಗೆ ಎಳ್ಳೆಣ್ಣೆಯನ್ನು ಮೈ ಕೈಗೆ ಹಚ್ಚಿ, ಆಮೇಲೆ ಜಳಕ ಮಾಡಿಸುತ್ತಾರೆ.
  • ಗ್ರಹದೋಷ ನಿವಾರಣಾ ಸಂಧರ್ಭದಲ್ಲಿ ಎಳ್ಳನ್ನು ದಾನ ಮಾಡುತ್ತಾರೆ. ಶನಿದೇವರಿಗೆ ಎಳ್ಳೆಣ್ಣೆ ದೀಪ ಹಚ್ಚುತ್ತಾರೆ.
  • ಬನಸ್ಪತಿ/ವನಸ್ಪತಿ ಯಲ್ಲಿ ೧೦% ಎಳ್ಳೆಣ್ಣೆಯನ್ನು ಖಂಡಿತವಾಗಿ ಮಿಶ್ರಣ ಮಾಡಿರುತ್ತಾರೆ.
  • ಎಳ್ಳೆಣ್ಣೆಯಲ್ಲಿ ಸೆಸಮೋಲ್(sesamol),ಮತ್ತು ಸೆಸಮಿನ್(sesamin) ಇರುತ್ತವೆ. ಈ ಎರಡು ರಕ್ತದೊತ್ತಡ(Blood pressure)ವನ್ನು ಕಡಿಮೆ ಮಾಡುತ್ತವೆ.

ಉತ್ಪಾದನೆ

[ಬದಲಾಯಿಸಿ]

ಪ್ರಪಂಚದಲ್ಲಿ ೬೫ ದೇಶಗಳು ಎಳ್ಳೆಣ್ಣೆ ಯನ್ನು ಸಾಗುವಳಿ ಮಾಡುತ್ತಿವೆ. ಒಂದು ವರ್ಷಕ್ಕೆ ೩೦-೪೦ ಲಕ್ಷ ಟನ್ನುಗಳಷ್ಟು ಎಳ್ಳೆಣ್ಣೆ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಭಾರತ ದೇಶ ಭಾಗ ೬-೮ ಲಕ್ಷ ಟನ್ನುಗಳು(೨೦%).ಪ್ರಪಂಚದಲ್ಲಿ ೭.೫ ಮಿಲಿಯನ್ ಹೆಕ್ಟೇರುಗಳಲ್ಲಿ ಸಾಗುವಳಿ ಮಾಡಲಾಗುತ್ತಿದೆ . ಇಂಡಿಯಾದಲ್ಲಿ ೧.೭ ಮಿಲಿಯನ್ ಹೆಕ್ಟೇರುಗಳಲ್ಲಿ ಎಳ್ಳೆಣ್ಣೆ ಬೇಸಾಯ ಮಾಡುತ್ತಿದ್ದಾರೆ.

ಇವುಗಳನ್ನೂ ನೋಡಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
  1. ಎಳ್ಳಿನ ಎಣ್ಣೆ ಪ್ರಯೋಜನಗಳನ್ನು
  2. ಆರೋಗ್ಯ ಬೆನಿಫಿಟ್ಸ್ ಎಳ್ಳಿನ ಎಣ್ಣೆ Archived 2016-11-15 ವೇಬ್ಯಾಕ್ ಮೆಷಿನ್ ನಲ್ಲಿ.