ಜಟ್ರೋಫಾ ಎಣ್ಣೆ
ಜಟ್ರೋಫಾ ಎಣ್ಣೆ
[ಬದಲಾಯಿಸಿ]ಜಟ್ರೋಫಾ ಎಣ್ಣೆಯನ್ನು ಜಟ್ರೋಫಾ ಬೀಜದಿಂದ ತೆಗೆಯಲಾಗುತ್ತದೆ. ಜಟ್ರೋಫಾ ಒಂದು ಪೊದೆ ಗಿಡ. ಗಿಡಕ್ಕೆ ಹಲವಾರು ಕೊಂಬೆಗಳಿರುತ್ತವೆ. ಇದು ಯುಫೋರ್ಬಿಯೇಸಿಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರಹೆಸರು 'ಜಟ್ರೋಫಾ ಕುರ್ಕಸ್'(curcas).ಇದರಲ್ಲಿ ಹಲವಾರು ಪ್ರಭೇದಗಳಿವೆ. ಜಟ್ರೋಫಾ ಗಿಡದ ಉಗಮಸ್ಥಾನ ದಕ್ಷಿಣ ಅಮೇರಿಕ ಆಗಿದೆ. ಪೋರ್ಚೂಗೀಸರಿಂದ ಇದು ಆಫ್ರಿಕಾ, ಏಷ್ಯಾ ದೇಶಗಳಿಗೆ ವ್ಯಾಪ್ತಿಸಿದೆ. ಎಲ್ಲಾ ನೆಲಗಳಲ್ಲಿ ಈ ಗಿಡ ಬೆಳೆಯುತ್ತದೆ. ಸಾಗುವಳಿಗೆ ಅನಾನುಕುಲವಾದ ಭೂಮಿಯಲ್ಲಿ ಇದ್ದರೂ ಬೇಸಾಯ ಮಾಡಬಹುದು. ಮಳೆ ಅಭಾವ ಪರಿಸ್ಥಿತಿಯನ್ನು ಇದು ತಡಕೊಳ್ಳುತ್ತದೆ. ಜಟ್ರೋಫಾ ಎಣ್ಣೆಯನ್ನು ಜೈವಿಕ ಡಿಸೇಲ್(Bio diesel) ತಯಾರು ಮಾಡುವುದ್ದಕ್ಕೆ ಉಪಯೋಗಿಸುತ್ತಾರೆ. ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಯೋಗ್ಯವಲ್ಲ. ಜೈವಿಕ ಡಿಸೇಲ್ ಸಲುವಾಗಿ ಜಟ್ರೋಫಾ ತೋಟೆಗಳನ್ನು ಬೆಳಸುವುದಕ್ಕೆ ಭಾರತ ಪ್ರಭುತ್ವ ಪ್ರೋತ್ಸಾಹ ಕೊಡುತ್ತಿದೆ.
ಬೇರೆ ಭಾಷೆಗಳಲ್ಲಿ ಜಟ್ರೋಫಾ ಹೆಸರು
[ಬದಲಾಯಿಸಿ]- ಸಂಸ್ಕೃತ=ಕಾನನ್ ಎರಂಡ್(kanan erand),ಪರ್ವತ್ ಎರಂಡ್(Parvat erand)
- ಹಿಂದಿ=ಸಫೆದ್ ಎರಂಡ್(safed erand).ಬಾಗ್ ಎರಂಡ್(Bagh erand)
- ಮಲಯಾಳಂ=ಕಟ್ಟವೆನಕ್ಕು(kattavenakka)
- ತಮಿಳು=ಅಡ್ಡಲಾಲ್ ಕಟ್ಟಮನಕು(Addalal kattamanku)
- ತೆಲುಗು=ನೇಪಾಲಂ(nepalamu),ಅಡವಿ ಆಮುದಂ(Adavi amudam)
- ಗುಜರಾತ್,ರಾಜಸ್ಥಾನ=ರತನ್ ಜ್ಯೊತ್(Ratan jyot),ಜಂಗ್ಲಿ ಎರಂಡ್(Jangli erand)
- ಮರಾಠಿ=ವೊಗ್ಲಿ ಎರಂಡಿ(Mogli erand)
- ಒರಿಯಾ=ಜಹಜಿಗಬ(Jahajigaba)
- ಅಸ್ಸಾಮಿ=ಬೊಂಗಲಿ(Bongali)
- ಇಂಗ್ಲೀಷ್=ಫ್ಜಿಕ್ ನಟ್(physic nut),ಪರ್ಜಿಂಗ್ ನಟ್(purging nut)
ಸಾಗುವಳಿಗೆ ಅನುಕೂಲವಾದ ರಾಷ್ಟ್ರಗಳು
[ಬದಲಾಯಿಸಿ]ಈ ಗಿಡಗಳು ದೇಶದ ಎಲ್ಲಾ ಕಡೆ ಕಾಣಿಸಿದರೂ, ಈ ಕೆಳಗಿನ ರಾಜ್ಯಗಳು ಜಟ್ರೋಫಾ ಬೇಸಾಯಕ್ಕೆ ಅನುಕೂಲವೆಂದು ಪರಿಗಣಿಸಲಾಗಿದೆ.
ಭಾರತ ದೇಶ ಜಟ್ರೋಫಾ ತೋಟೆಗಳನ್ನು ಬೆಳಸುವುದಕ್ಕೆ ತುಂಬಾ ಪ್ರೋತ್ಸಾಹ ನೀಡುತ್ತದೆ.
ಎಣ್ಣೆಯನ್ನು ಉತ್ಪಾದನೆ ಮಾಡುವುದು
[ಬದಲಾಯಿಸಿ]ಬಿತ್ತನೆಯಲ್ಲಿ ಪ್ರತಿಶತ ೩೦-೪೦% ಎಣ್ಣೆ ಇರುತ್ತದೆ. ವೊದಲು ಕಾಯಿಗಳನ್ನು ಚಕ್ಕಿ ಅಥಾವಾ ಡಿಕಾರ್ಡಿಕೇಟರು(decorticator)ನಲ್ಲಿ ಹಾಕಿ, ನಡಿಸಿ ಬಿತ್ತನೆ ಮೇಲಿದ್ದ ಹೊಟ್ಟು/ಸಿಪ್ಪೆ(hull)ಬೇರ್ಪಡಿಸಿ, ಹೊಟ್ಟು/ಸಿಪ್ಪೆ ಯನ್ನು ವಿಂಗಡಿಸಲಾಗುತ್ತದೆ. ಹೋಟ್ಟು ತೆಗೆದ ಕಾಳುಗಳನ್ನು ನೀರಿನ ಆವಿ(steam)ಯಿಂದ ಚೆನ್ನಾಗಿ ಬೇಯಿಸಿ, ಆಮೇಲೆ ಬೇಯಿಸಿದ ಕಾಳುಗಳನ್ನು ಎಕ್ಸುಪೆಲ್ಲರು ಯಂತ್ರಗಳಲ್ಲಿ ಹಾಕಿ ಎಣ್ಣೆಯನು ತೆಗೆಯಲಾಗುತ್ತದೆ. ಹೆಚ್ಚಿನ ಎಣ್ಣೆಯ ಇಳುವರಿಗಾಗಿ ಕಾಳು(kernel)ಗಳನ್ನು ಎರಡು ಬಾರಿ ಕ್ರಷಿಂಗ್(double crushing) ಮಾಡಬೇಕಾಗುತ್ತದೆ. ಹಿಂಡಿ(oil cake)ಯಲ್ಲಿ ಇನ್ನು ಎಣ್ಣೆ ಉಳಿದಿರುತ್ತದೆ. ಎಕ್ಸುಪೆಲ್ಲರು ಯಂತ್ರ ಸಹಾಯದಿಂದ ಎಣ್ಣೆ ತೆಗೆದರೆ ಪ್ರತಿಶತ ೨೯% ಎಣ್ಣೆ ಬರುತ್ತದೆ. ಅದೇ ಸಾಲ್ವೆಂಟ್ ಪ್ಲಾಂಟ್ನಲ್ಲಿ ನಡೆಸಿದರೆ ೩೯% ವರಗೆ ಎಣ್ಣೆಯನ್ನು ಉತ್ಪಾದನೆ ಮಾಡುವುದಕ್ಕೆ ಆಗುತ್ತದೆ. ಎಣ್ಣೆ ತೆಗೆದ ಹಿಂಡಿಯನ್ನು ಎರುಬು(fertiliser)ವನ್ನಾಗಿ ಉಪಯೋಗಿಸಬಲ್ಲದು.
ಎಣ್ಣೆಯ ಗುಣ ಗಣಗಳು
[ಬದಲಾಯಿಸಿ]ಜಟ್ರೋಫಾ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ಶೇಂಗಾ ಎಣ್ಣೆಯಲ್ಲಿರುವಂತೆ ಇರುತ್ತವೆ. ಆದರೆ ಈ ಎಣ್ಣೆಯನ್ನು ಅಡಿಗೆ ಎಣ್ಣೆಯಾಗಿ ಬಳಸುವುದಕ್ಕೆ ಆಗುವುದಿಲ್ಲ.ಏಕೆಂದರೆ ಇದರಲ್ಲಿ ಕೆಲವು ಟಾಕ್ಸಿನ್(ವಿಷ) ಪದಾರ್ಥಗಳು ಇವೆ. ಅದರಿಂದ ಜಾಟ್ರೋಫಾ ಎಣ್ಣೆ ಬಳಸುವುದಕ್ಕೆ ಯೋಗ್ಯವಲ್ಲ.
ಎಣ್ಣೆಯಲ್ಲಿರುವ ಫ್ಯಾಟಿ(ಕೊಬ್ಬಿನ)ಆಮ್ಲಗಳು
ಕೊಬ್ಬಿನ ಆಮ್ಲಗಳು | ಪ್ರತಿಶತ |
ಮಿರಿಸ್ಟಿಕ್ ಆಮ್ಲ | 0.5-1.4 |
ಪಾಮಿಟಿಕ್ ಆಮ್ಲ | 12-17 |
ಸ್ಟಿಯರಿಕ್ ಆಮ್ಲ | 5.0-9.7 |
ಅರಚಿಡಿಕ್ ಆಮ್ಲ | 2.5-6 |
ಒಲಿಕ್ ಆಮ್ಲ | 37-63 |
ಲಿನೋಲಿಕ್ ಆಮ್ಲ | 19-41 |
ಎಣ್ಣೆಯ ಭೌತಿಕ ಮತ್ತು ರಸಾಯನಿಕ ಲಕ್ಷಣಗಳು
ಭೌತಿಕ,ರಾಸಾಯನಿಕ ಲಕ್ಷಣ | ಮಿತಿ |
ವಕ್ರೀಭವನ ಸೂಚಕ 400Cಕಡೆ | 1.420-1.468 |
ವಿಶಿಷ್ಟಗುರುತ್ವ 30/300C | 0.910-.0919 |
ಐಯೋಡಿನ್ ಮೌಲ್ಯ | 93-107 |
ಸಫೋನಿಫಿಕೇಸನ್ ಮೌಲ್ಯ | 188-196 |
ಅನ್ ಸಪೋನಿಫಿಯಮುಲ್ ಪದಾರ್ಥ | 1.5-2.0% ಗರಿಷ್ಟ |
ಹೈಡ್ರೊಕ್ಷೀಲ್ ಮೌಲ್ಯ | 15 ಗರಿಷ್ಟ |
ತೇವ ಪ್ರತಿ ಶತ | 0.5%ಗರಿಷ್ಟ |
ಎಣ್ಣೆಯ ಉಪಯುಕ್ತತೆಗಳು
[ಬದಲಾಯಿಸಿ]- ಜೈವಿಕ ಡಿಜೆಲ್/ಇಂಧನ ಉತ್ಪಾದನೆ ಮಾಡುವುದರಲ್ಲಿ ಉಪಯೋಗಿಸುತ್ತಾರೆ.
- ಮೇಣಬೆಳಕು (candle)ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
- ಸಾಬೂನು ಕಾರ್ಖಾನೆಯಲ್ಲಿ ಉಪಯೋಗಿಸುತ್ತಾರೆ.
- ಕೀಲೆಣ್ಣೆ (lubricants)ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
- ಆಲ್ಕೈಡ್ (Alkyds) ತಯಾರು ಮಾಡುವುದರಲ್ಲಿಯು ವಿನಿಯೋಗ ಮಾಡುತ್ತಾರೆ.