ಬೆಂಡೆಬೀಜ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಂಡೆಗಿಡ-ಹೂವು
ಹಸಿ ಬೆಂಡೆ
ಹಸಿ ಬೀಜ
ಒಣಗಿಸಿದ ಬೀಜ

ಬೆಂಡೆ (ಅಬೆಲ್‍ಮಾಸ್ಕಸ್ ಎಸ್ಕ್ಯುಲೆಂಟಸ್ ಮಾಂಕ್) ಮ್ಯಾಲೊ ಕುಟುಂಬದಲ್ಲಿನ ಒಂದು ಹೂ ಬಿಡುವ ಸಸ್ಯ. ಅದನ್ನು ಅದರ ತಿನ್ನಬಹುದಾದ ಹಸಿರು ಬೀಜ ಕೋಶಗಳಿಗಾಗಿ ಮಹತ್ವ ಕೊಡಲಾಗುತ್ತದೆ. [೧]. ಬೆಂಡೆಯ ಭೌಗೋಳಿಕ ಮೂಲ ವಿವಾದಾತ್ಮಕವಾಗಿದೆ, ದಕ್ಷಿಣ ಏಷ್ಯಾ, ಈಥಿಯೋಪಿಯಾ ಮತ್ತು ಪಶ್ಚಿಮ ಆಫ್ರಿಕಾ ಮೂಲಗಳದ್ದೆನ್ನುವ ಬೆಂಬಲಿಗರಿದ್ದಾರೆ[೨].[೩]

ಭಾರತೀಯ ಭಾಷೆಗಳಲ್ಲಿ ಬೆಂಡೆ ಹೆಸರು[ಬದಲಾಯಿಸಿ]

ಬೆಂಡೆಗಿಡ-ಬೀಜ[ಬದಲಾಯಿಸಿ]

ಇದು ವಾರ್ಷಿಕ ಸಸ್ಯ.೦೯-೨.೦ಮೀಟರುಗಳ ಎತ್ತರ ಬೆಳೆಯುತ್ತದೆ. ಕೊಂಬೆಗಳಿವೆ. ಪತ್ರ/ಎಲೆಗಳು ಹಸ್ತಾಕಾರದಲ್ಲಿದ್ದು, ಹಲ್ಲೆಗಳನ್ನು ಹೊಂದಿದೆ .ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ, ಪತ್ರಗಳ ಮೇಲೆ, ಕಾಂಡದ ಮೇಲೆ, ಕಾಯಿ ಮೇಲೆ ಕೇಶಗಳು ಇರುತ್ತವೆ. ಎಳೆಯ ಕಾಯಿಗಳನ್ನು ಮಾತ್ರ ಅಡಿಗೆ ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಹೂವುಗಳು ಹಳದಿಬಣ್ಣ (ಮಂಜಾಗಿ) ಹೊಂದಿರುತ್ತವೆ. ಬೆಂಡೆಕಾಯಿ ೧೦-೨೫ ಸೆಂ. ಮೀ (೪-೧೦ ಅಂಗುಲ)ಉದ್ದವಾಗಿರುತ್ತವೆ. ಕಾಯಿ ಮೇಲೆ ಕೇಶದಂತನುನುಪಾದ ಪದಾರ್ಥೈಗಳಿರುತ್ತದೆ(ಕೆಲವು ಪ್ರಭೇದಗಳ ಕಾಯಿ ಚಿಕ್ಕದಾಗಿರುತ್ತದೆ). ಕಾಯಿಯ ಕೆಳಗಿನ ಭಾಗ ದಪ್ಪಗಿದ್ದು ಕಡೆಯಲ್ಲಿ ಕಿರಿದಾಗುತ್ತಾ ಹೋಗುತ್ತದೆ. ಕಾಯಿಯ ಒಳಗೆ ಅಂಡಾಕಾರದಲ್ಲಿ, ಕೋಚುಗಿದ್ದ ಕಪ್ಪುವರ್ಣದ ಬೀಜಗಳಿರುತ್ತವೆ. ಕೆಲವು ದೇಶಗಳಲ್ಲಿ ಇದರ ಬೀಜವನ್ನು ಕಾಫಿಯಲ್ಲಿ ಬಳಸುತ್ತಾರೆ. ಒಣಗಿಸಿದ ಬೀಜದಲ್ಲಿ ೧೬-೧೭% ಎಣ್ಣೆ, ೧೮-೧೯% ಪ್ರೋಟೀನ್,೨೧% ನಾರು (fiber) ಪದಾರ್ಥಗಳಿರುತ್ತವೆ[೪].

ಬೆಂಡೆ ಬೀಜದಲ್ಲಿ ಎಣ್ಣೆ ಇದ್ದುದನ್ನು ೧೯೨೦ರಲ್ಲಿ ಜಮೈಸನ್(jamieson)ಮತ್ತು ಬಾಗ್ ಮಾನ್(Baugman)ಕಂಡು ಹಿಡಿದಿದ್ದಾರೆ.[೫]

ಎಣ್ಣೆ ತೆಗೆಯುವ ವಿಧಾನ[ಬದಲಾಯಿಸಿ]

ಬೆಂಡೆ ಬೀಜದಲ್ಲಿ ೨೦% ಪ್ರತಿ ಶತಕ್ಕಿಂತ ಎಣ್ಣೆ ಕಡಿಮೆ ಇರುವುದರಿಂದ, ಎಕ್ಸುಪೆಲ್ಲರು ಎಣ್ಣೆ ಯಂತ್ರಗಳಿಂದ ಎಣ್ಣೆಯನ್ನು ತೆಗೆಯುವುದಕ್ಕೆ ಆಗುವದಿಲ್ಲ. ಬೆಂಡೆ ಬೀಜಗಳಿಂದ ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್ ಸಹಾಯದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಎಣ್ಣೆ ಅರಿಸಿನ ಮತ್ತು ಹಸುರು ವರ್ಣಗಳ ಮೇಳವಾಗಿ ಕಾಣಿಸುತ್ತದೆ [೬] .ಎಣ್ಣೆಯಲ್ಲಿರುವ ಫೆನೋಫೈಟಿನ್(phenophitin) ಎಣ್ಣೆಗೆ ಹಸಿರು ಬಣ್ಣ ಇರುವುದಕ್ಕೆ ಕಾರಣವಾಗಿದೆ. ಎಣ್ಣೆ ಆಲ್ಫಾ,ಗಾಮಾ ಟೊಕೋಫೆರೊಲುಗಳನು ಹೊಂದಿರುತ್ತದೆ.

ಬೆಂಡೆ ಎಣ್ಣೆ ಲಕ್ಷಣಗಳು[ಬದಲಾಯಿಸಿ]

ಎಣ್ಣೆ ಗುಣ,ಲಕ್ಷಣಗಳ ಪಟ್ಟಿ

ಭೌತಿಕ ಲಕ್ಷಣ ಮಿತಿ
ವಕ್ರೀಭವನ ಸೂಚಿಕೆ 400Cಕಡೆ 1.4620 -1.4700
ಅಯೋಡಿನ್ ಮೌಲ್ಯ 75-100
ಸಪೋನಿಫಿಕೆಸನು ಸಂಖ್ಯೆ/ಮೌಲ್ಯ 192-200
ಅನ್ ಸಪೋನಿಫಿಯಮುಲ್ ಪದಾರ್ಥ 1.5 గరిష్టం
ಆಮ್ಲ ಮೌಲ್ಯ(acid value) 15.0గరిష్టం
ವಿಶಿಷ್ಟಗುರುತ್ವ 30/300Cవద్ద 0.9160-.9190
ವರ್ಣ 1/4"cell 35.0ಯೋನಿಟ್
ಹೆಲ್ಪನ್ ಪರಿಕ್ಷ ಪಾಸಿಟಿವ್(+ve)

ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು[೭]

ಕೊಬ್ಬಿನ ಆಮ್ಲ ಶೇಕಡೆ
ಮಿರಿಸ್ಟಿಕ್ ಆಮ್ಲ(C14:0) 0.2
ಪಾಮಿಟಿಕ್ ಆಮ್ಲ(C16:0) 32.0
ಸ್ಟಿಯರಿಕ್ ಆಮ್ಲ(C18:0) 4-5
ಪಾಮಿಟೋಲಿಕ್ ಆಮ್ಲ(C16:1) 0.4
ಒಲಿಕ್ ಆಮ್ಲ(C18:1) 23-29
ಲಿನೊಲಿಕ್ ಆಮ್ಲ((C18:2) 34-39
ಸೈಕ್ಲೋ ಪ್ರೊಪೆನ್ 2.0

ಎಣ್ಣೆ ಉಪಯುಕ್ತತತೆಗಳು[ಬದಲಾಯಿಸಿ]

  • ಪ್ರಸ್ತುತದಲ್ಲಿ ಈ ಎಣ್ಣೆ ಉತ್ಪತ್ತಿ ಪ್ರಾಥಮಿಕ ಸ್ಥಾನದಲ್ಲಿದೆ. ಇನ್ನೂ ಭಾರಿ ಪ್ರಮಾಣದಲ್ಲಿ ಉತ್ಪನ್ನ ಮಾಡುವ ಪ್ರಯತ್ನಗಳು ನಡೆಯುತ್ತಾ ಇವೆ..
  • ಬೆಂಡೆ ಬೀಜ ಎಣ್ಣೆಯನ್ನು ಜೈವಿಕ ಇಂಧನವಾಗಿ ಪರಿವರ್ತನೆ ಮಾಡಿ, ವಾಹನಗಳಲ್ಲಿ ಉಪಯೋಗಿಸಬಹುದು.[೮]
  • ಎಣ್ಣೆಯನ್ನು ರಿಫೈಂಡ್ ಮಾಡಿದ ಮೇಲೆ ಅಡುಗೆ ಎಣ್ಣೆಯಾಗಿ ಬಳಸಬಹುದು.

ಉಲ್ಲೇಖನ[ಬದಲಾಯಿಸಿ]

  1. http://www.britannica.com/EBchecked/topic/426573/okra
  2. http://aggie-horticulture.tamu.edu/archives/parsons/publications/vegetabletravelers/okra.html.
  3. "ಆರ್ಕೈವ್ ನಕಲು" (PDF). Archived from the original (PDF) on 2017-03-29. Retrieved 2013-10-02.
  4. SEA Hand Book.2009. Published Solvent Extractors'Association of India
  5. http://books.google.co.in/books?id=ZN5IWPGqhwUC&pg=PA44&lpg=PA44&dq=uses+okra+seed+oil&source=bl&ots=lQvJrJyzCj&sig=9hJVmHxTC_3g9U-T0xPAMT06Qs0&hl=en&sa=X&ei=ZV5MUsn1L4mMrQepqIDgCQ&ved=0CGMQ6AEwDDgK#v=onepage&q=uses%20okra%20seed%20oil&f=false
  6. http: //www.crirec. com/2011/01/okra-seed/
  7. http://pubs.acs.org/doi/abs/10.1021/ja01446a023
  8. http://www.sciencedirect.com/science/article/pii/S0306261909004127