ಹಿಪ್ಪೆ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
MADHUCA LONGLFOlIA 03
ಹಿಪ್ಪೆ ಕಾಯಿ
ಹಿಪ್ಪೆ ಬೀಜ

ಮಧೂಕ ಮರವನ್ನು ಹಿಪ್ಪೆ, ಮಹುವ, ಕಾಡು ಹಿಪ್ಪೆ ಎಂದು ಕೂಡಾ ಕರೆಲಾಗುತ್ತದೆ. ಕೃತಕವಾಗಿ ಬೆಳೆಸಿದಲ್ಲಿ ಮಾತ್ರ ಕರ್ನಾಟಕದಲ್ಲಿ ಮಧೂಕ ಮರವನ್ನು ಬೆಳೆಯಲು ಸಾಧ್ಯ. ಸಾಮಾನ್ಯವಾಗಿ ಕರ್ನಾಟಕದಲ್ಲಿ ಮಧೂಕ ಸ್ವಾಭಾವಿಕವಾಗಿ ಕಂಡುಬರುವುದಿಲ್ಲ. ಶೀತೋಷ್ಣ ಪ್ರದೇಶದಲ್ಲಿ ಅತಿ ವೇಗವಾಗಿ ಬೆಳೆಯುವ ಮರಗಳಲ್ಲಿ ಮಧೂಕವೂ ಒಂದಾಗಿದೆ. ಮಧ್ಯ ಪ್ರದೇಶ,ಹಿಮಾಲಯದ ತಪ್ಪಲು ಈ ಪ್ರದೇಶಗಳಲ್ಲಿ ಮಧೂಕ ಕಂಡುಬರುವುದು.ಇದು ವೇಗವಾಗಿ ಬೆಳೆಯುತ್ತಿರುವ ಮರವಾಗಿದೆ. ದೊಡ್ಡದಾಗಿ ಹರಡುವ ಬಾಹ್ಯ ಬೇರಿನ ವ್ಯವಸ್ಥೆಯನ್ನು ಹೊಂದಿದೆ. ಇದು ನಿತ್ಯಹರಿದ್ವರ್ಣ ಅಥವಾ ಅರೆ-ನಿತ್ಯಹರಿದ್ವರ್ಣದ ಎಲೆಗಳನ್ನು ಹೊಂದಿರುತ್ತದೆ ಮತ್ತು ಕುಟುಂಬದ ಸಪೋಟೇಸಿಗೆ ಸೇರಿದೆ. ಒಂದು ವರ್ಷದ ಧಾರಕ ಸಸಿಗಳನ್ನು ನೆಟ್ಟು ಇದನ್ನು ಬೆಳೆಸಬೇಕು. ಹೊಸ ಬೀಜವನ್ನು ಉಪಯೋಗಿಸುವುದು ಲೇಸು. ಬೇರೆ ಬೇರೆ ಪ್ರದೇಶಗಳಲ್ಲಿ ಮಧೂವನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಮಧೂಕ ಮರದ ಹೂಗಳ ಮಾಂಸಲ ದಳವಲಯಗಳನ್ನು ಹೆಚ್ಚಾಗಿ ಮಧ್ಯ ಪ್ರದೇಶ, ಒರಿಸ್ಸಾ, ಹಿಮಾಲಯದ ತಪ್ಪಲುಗಳಲ್ಲಿನ ಅಲ್ಲಿನ ಬುಡಕಟ್ಟಿನವರು ಹಸಿಯದನ್ನೇ ಇಲ್ಲವೇ ಬೇಯಿಸಿ ತಿನ್ನಲು ಬಳಸುತ್ತಾರೆ. ಅಥವಾ ಹಿಟ್ಟಿನೊಂದಿಗೆ ಅರೆದು ರೊಟ್ಟಿಯೊಂದಿಗೆ ಬಳಸುತ್ತಾರೆ.ಈ ಮರದ ಕೆಳಗೆ ಉದುರುವ ಇದರ ಹೂವುಗಳನ್ನು ಕರಡಿಗಳು ಹೇರಳವಾಗಿ ಕಬಳಿಸಿ ಮತ್ತು ಬರಿಸಿಕೊಳ್ಳುವುವು.[೨]'ಹಿಪ್ಪೆ ಎಣ್ಣೆ'ಯನ್ನು ಹಿಪ್ಪೆ ಬೀಜದಿಂದ ತೆಗೆಯಲಾಗುತ್ತದೆ.

MADHUCA LONGLFOlIA 10

ವೈಜ್ಞಾನಿಕ ಹೆಸರು ವೈಜ್ಞಾನಿಕ ಹೆಸರು :ಬಾಸಿಯಾ ಲಟಿಫೋಲಿಯ (madhuca-longifolia).[೩]

ಬೇರೆ ಭಾಷೆಗಳಲ್ಲಿ ಹಿಪ್ಪೆ ಮರದ ಹೆಸರು[ಬದಲಾಯಿಸಿ]

ಆಕಾರ[ಬದಲಾಯಿಸಿ]

ದೊಡ್ಡ ಪ್ರಮಾಣದ ಹರಡಿದ ಕೊಂಬೆಗಳನ್ನು ಹೊಂದಿರುತ್ತವೆ .ದುಂಡನೆಯ ಹಂದರ, ಸಾಧಾರಣ ಕುಳ್ಳ ಜಾತಿಯ ಮರ ಮಧೂಕ. ಇವು ೨೦ ಮೀಟರ್ ಎತ್ತರ ಬೆಳೆಯುತ್ತದೆ. ಕಂದು ಬಣ್ಣದ ತೊಗಟೆಯು ಸುಮಾರು ೨ ಸೆ.ಮೀ. ಉದ್ದಇರುತ್ತವೆ.ತೊಗಟೆ ದಪ್ಪವಿದ್ದು ಉದ್ದುದ್ದವಾಗಿ ಬಿರುಕುಗಳನ್ನು ಹೊಂದಿರುತ್ತದೆ.

ಭೌಗೊಳಕ ಪ್ರದೇಶ[ಬದಲಾಯಿಸಿ]

ಪಶ್ಚಿಮ ಬಂಗಾಳ, ಛತ್ತೀಸ್ಗಢ, ಜಾರ್ಖಂಡ್, ಉತ್ತರಪ್ರದೇಶ, ಬಿಹಾರ, ಮಹಾರಾಷ್ಟ್ರ, ತೆಲಂಗಾಣ, ಮಧ್ಯ ಪ್ರದೇಶ, ಕೇರಳ, ಗುಜರಾತ್, ಒರಿಸ್ಸಾ ಮತ್ತು ಭಾರತದ ಹಲವು ರಾಜ್ಯಗಳಲ್ಲಿ ಕಂಡುಬರುವ ಪ್ರಮುಖ ಮರಗಳಲ್ಲಿ ಮಧೂಕವು ಒಂದಾಗಿದೆ. ಇದು ಶುಷ್ಕ ಪರಿಸರಕ್ಕೆ ಹೊಂದಿಕೊಳ್ಳಬಲ್ಲದು.

ಮಧುಕಾದ ಏಲೆ[ಬದಲಾಯಿಸಿ]

ಎಲೆಗಳಿಂದ ಟಸ್ಸಾರ್ ಸಿಲ್ಕ್ ಅನ್ನು ಉತ್ಪಾದಿಸುತ್ತಾರೆ. ಇದು ಭಾರತದಲ್ಲಿನ ವಾಣಿಜ್ಯ ಪ್ರಾಮುಖ್ಯತೆಯನ್ನು ಹೊಂದಿದೆ.ಇದನ್ನು ಕಾಡು ರೇಷ್ಮೆಎಂದು ಕರೆಯುತ್ತಾರೆ.

MADHUCA LONGLFOlIA 07

ಮಧೂಕದ ಹೂವುಗಳು[ಬದಲಾಯಿಸಿ]

ಮಧೂಕದ ಹೂವುಗಳು ಬುಡಕಟ್ಟು ಜನರ ವಿಶೇಷ ಆಹಾರ ಪದಾರ್ಥವಾಗಿದೆ. ಅವುಗಳನ್ನು ಔಷಧೀಯ ಉದ್ದೇಶಗಳಿಗಾಗಿ ಸಿರಪ್ ಮಾಡಲು ಬಳಸಲಾಗುತ್ತದೆ.ಹೂವುಗಳಿಂದ ಮದ್ಯವನ್ನು ತಯಾರಿಸಲಾಗುತ್ತದೆ. ಹೆಚ್ಚಾಗಿ ಅವಕ್ಕೆ ಬಣ್ಣವಿರುವುದಿಲ್ಲ. ಹೂವುಗಳ ವಿಶಿಷ್ಟವಾದ ಸುವಾಸನೆಯನ್ನು ಹೊಂದಿರುತ್ತವೆ. ಇದು ಅಗ್ಗವಾಗಿ ದೊರೆಯುತ್ತದೆ. ಮತ್ತು ಇದನ್ನೂ ಹೆಚ್ಚಾಗಿ ಮನೆಯಲ್ಲಿಯೇ ಭಟ್ಟಿಯಿಳಿಸುತ್ತಾರೆ. ಹೂವುಗಳನ್ನು ಜಾಮ್ ತಯಾರಿಕೆಯಲ್ಲು ಬಳಸಲಾಗುತ್ತದೆ. ಮರದ ಹೂವುಗಳನ್ನು ಸೂರ್ಯನ ಶಾಖಕ್ಕೆ ಒಣಗಿಸಿ ಹಿಟ್ಟು ಮತ್ತು ವಿವಿಧ ಬಗೆಯ ಬ್ರೆಡ್ಗುಗಳನ್ನು ತಯಾರಿಸುತ್ತಾರೆ.

ಬೀಜ[ಬದಲಾಯಿಸಿ]

ಬೀಜದ ಎಣ್ಣೆಯು ಶಮನಕಾರಿ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಚರ್ಮದ ಕಾಯಿಲೆ, ಸಂಧಿವಾತ ಮತ್ತು ತಲೆನೋವು ನಿವಾರಣೆಗಾಗಿ ಬಳಸಲಾಗುತ್ತದೆ.ಇದರ ಎಣ್ಣೆಯನ್ನು ಜೈವಿಕ ಡೀಸೆಲ್ ಆಗಿಯೂ ಬಳಸಲಾಗುತ್ತದೆ.ಬೀಜವನ್ನು ರಸಗೊಬ್ಬರವಾಗಿ ಬಳಸಲಾಗುತ್ತದೆ.ಇವು ನೇರ ಬೀಜಕಣಗಳು, ಮೊಳಕೆಯೊಡೆಯುತ್ತವೆ. ಸುದೀರ್ಘವಾದ ಪಾಲಿಪಾಟ್ಗಳಲ್ಲಿ ಸುದೀರ್ಘವಾದ ಟ್ಯಾಪ್ರೂಟ್ಗೆ ಹೊಂದಿಕೊಳ್ಳಲು ಬೀಜಗಳನ್ನು ಬಿತ್ತನೆ ಮಾಡಬೇಕು. 2-4 ತಿಂಗಳಲ್ಲಿ ಮೊಳಕೆ ಸಸ್ಯಗಳಿಗೆ ಸಿದ್ಧವಾಗುತ್ತವೆ. ಮೊಳಕೆ ಹಿಮದ ಪ್ರದೇಶಗಳಲ್ಲಿ ಕೋಮಲವಾಗಿರುತ್ತದೆ. 1 ವರ್ಷ ವಯಸ್ಸಿನ ಸ್ಟಂಪ್ಗಳು ಬೇರ್ ಬೇರಿನ ಮೊಳಕೆಗಿಂತ ಹೆಚ್ಚು ಯಶಸ್ವಿಯಾಗಿ ಸ್ಥಾಪಿಸುತ್ತವೆ ಬೀಜಗಳನ್ನು ಪ್ರತಿ ಎರಡು ಅಥವಾ ಮೂರು ವರ್ಷದಲ್ಲಿ ಹೇರಳವಾಗಿ ಉತ್ಪಾದಿಸಬಹುದು. ಕಡಿಮೆ ಅವಧಿಯೊಳಗೆ ಅವು ಕಾರ್ಯಸಾಧ್ಯತೆಯನ್ನು ಕಳೆದುಕೊಳ್ಳುತ್ತವೆ.

ಹಿಪ್ಪೆಮರ[ಬದಲಾಯಿಸಿ]

ಹಿಪ್ಪೆಮರ 'ಸಪೋಟೆಸಿ'ಕುಟುಂಬಕ್ಕೆ ಸೇರಿರುವ ದೊಡ್ಡ ಮರ. ಇದರ ಸಸ್ಯಶಾಸ್ತ್ರ ಹೆಸರು ' ಮಧುಕ ಲಾಂಗಿಪೋಳಿಯಾ' ಮತ್ತು ಲಾಂಗಿಪೋಲಿಯಾ ಇಂಡಿಕಾ. ಹಿಪ್ಪೆದ ಮರ ಉಷ್ಣವಲಯದಲ್ಲಿರುವ ಅರಣ್ಯ ಗಳಲ್ಲಿ, ಬಯಲು ಸ್ಥಳಗಳಲ್ಲಿ ಬೆಳೆಯುತ್ತವೆ. ಹಿಪ್ಪೆಮರಗಳು ಜಾರ್ಖಂಡ್,ಬಿಹಾರ,ಉತ್ತರಪ್ರದೇಶ,ಕೇರಳ,ಗುಜರಾತ್ ಮತ್ತು ಒಡಿಶಾದ ಅರಣ್ಯಗಳಲ್ಲಿ ವಿಸ್ತರಿಸಿವೆ.[೧] ಹಿಪ್ಪೆಮರ ೧೬-೨೦ ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ. ದೃಢವಾಗಿರುವ ಕಾಂಡ, ಕೊಂಬೆಗಳಿರುತ್ತವೆ. ಕೊಂಬೆಗಳ ತುದಿಯಲ್ಲಿ ಎಲೆಗಳು ಗುಂಪಾಗಿರುತ್ತವೆ. ಎಲೆಗಳು ದಪ್ಪಗಿದ್ದು, ದೀರ್ಘಾಂಡಾಕಾರವಾಗಿ, ೬-೯X೧೩-೨೩ ಸೆಂ.ಮೀ. ಪರಿಮಾಣದಲ್ಲಿ ಇರುತ್ತವೆ. ಹೂವುಗಳು ಕೊಂಬೆಗಳ ಅಂಚಿನಲ್ಲಿ ಗೊಂಚಲಾಗಿ ಬೆಳಯುತ್ತವೆ. ಹಣ್ಣು ಅಂಡಾಕಾರ/ತತ್ತಿಪಾಂಗಿನಯಂತೆ ಇರುತ್ತವೆ. ಹಿಪ್ಪೆ ಹೂಗಳಿಂದ ಹಿಪ್ಪೆ ಹೆಂಡವನ್ನು(alcohol) ತಯಾರು ಮಾಡಲಾಗುತ್ತದೆ. ಒಂದು ಮರದಿಂದ, ಒಂದು ವರ್ಷಕ್ಕೆ ೬೦-೮೦ಕೇ.ಜೀ ಹಿಪ್ಪೆ ಬೀಜ ಇಳುವರಿ ಆಗುತ್ತದೆ. ಹೂವುಗಳಾದರೆ ೧೦೦-೧೫೦ ಕೇ.ಜಿ.ಸಿಗುತ್ತವೆ. ಹಿಪ್ಪೆ ಬೀಜದಲ್ಲಿ ಕಾಳು/ತಿರುಳು ೭೦% ಪ್ರತಿಶತ ಇರುತ್ತದೆ. ಬೀಜದಿಂದ ಆದರೆ ೩೦%, ಕಾಳು/ತಿರುಳುನಿಂದ ೪೫-೫೦% ಎಣ್ಣೆ ಬರುತ್ತದೆ. ಸಾಧಾರಣವಾಗಿ ರೋಟರಿಗಾಣೆ, ಅಥವಾ ಎಕ್ಸುಪೆಲ್ಲರು ಯಂತ್ರಗಳ ಸಹಾಯದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ರೋಟರಿನಲ್ಲಿ ಆದರೆ ಹಿಂಡಿಯಲ್ಲಿ ೧೦-೧೨%,ಎಕ್ಸುಪೆಲ್ಲರು ಆದರೆ ೮-೧೦% ಎಣ್ಣೆ ಹಿಂಡಿಯಲ್ಲಿ ಉಳಿಯುತ್ತದೆ. ಹಿಪ್ಪೆ ಹಿಂಡಿಯಲ್ಲಿರುವ ಎಣ್ಣೆಯನ್ನು ಸಾಲ್ವೆಂಟ್‌ಪ್ಲಾಂಟ್‌‌ನಲ್ಲಿ ತೆಗೆಯಲಾಗುತ್ತದೆ.

ಹಿಪ್ಪೆ ಎಣ್ಣೆ[ಬದಲಾಯಿಸಿ]

ಹಿಪ್ಪೆ ಎಣ್ಣೆ ಹರಿದ್ರ ವರ್ಣದಲ್ಲಿರುತ್ತದೆ. ಕಟುವಾದ ವಾಸನೆ ಹೊಂದಿರುತ್ತದೆ. ಹೊಸ ಬೀಜದಿಂದ ತೆಗೆದ ಎಣ್ಣೆಯಲ್ಲಿ ಫ್ರೀಫ್ಯಾಟಿ ಆಮ್ಲಗಳು ೧.೦-೨.೦% ಇರುತ್ತವೆ. ಹಿಪ್ಪೆ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಉಪಯೋಗಿಸ ಬಹುದು.[೨] ಆದರೆ ಕಾಡಿನಲ್ಲಿರುವ ಕೆಲವು ಗಿರಿಜನರು ಮಾತ್ರ ಇದನ್ನು ಉಪಯೋಗಿಸುತ್ತಾರೆ. ಹಿಪ್ಪ್ಪೆ ಎಣ್ಣೆಯನ್ನು ರಿಫೈಂಡ್ ಮಾಡಿದ ಮೇಲೆ ಡಾಲ್ಡಾ(ವನಸ್ಪತಿ)ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಹಿಪ್ಪೆ ಎಣ್ಣೆಯಲ್ಲಿ ಸಂತೃಪ್ತ ಫ್ಯಾಟಿ(ಕೊಬ್ಬಿನ) ಆಮ್ಲ(saturated fatty acids)ಗಳು ಹೆಚ್ಚಿಗೆ ಇರುತ್ತವೆ. ಅದರಿಂದ ಕಡಿಮೆ ಉಷ್ಣತೆಯಲ್ಲಿ ಗಟ್ಟಿಯಾಗುತ್ತದೆ. ಈ ಕಾರಣವಾಗಿ ಈ ಎಣ್ಣೆಯನ್ನು ವನಸ್ಪತಿ(ಡಾಲ್ಡಾ)ಮಾಡುವುದಕ್ಕೆ ಉಪಯೋಗಿಸುತ್ತಾರೆ.

ಹಿಪ್ಪೆ ಎಣ್ಣೆ-ಫ್ಯಾಟಿ(ಕೊಬ್ಬಿನ) ಆಮ್ಲಗಳ ಪಟ್ಟಿ[೩]

ಕೊಬ್ಬಿನ ಆಮ್ಲ ಹೆಸರು ಕಾರ್ಬನು ಅಣುಸಂಖ್ಯೆ : ಬಂಧಗಳು ಶೇಕಡ
ಪಾಮಿಟಿಕ್ ಆಮ್ಲ C16:0 24.5
ಸ್ಟಿಯರಿಕ್ ಆಮ್ಲ C18:0 22.7
ಒಲಿಕ್ ಆಮ್ಲ C18:1 37.0
ಲಿನೊಲಿಕ್ ಆಮ್ಲ C18:2 14.5

ಎಣ್ಣೆಯ ಭೌತಿಕ ಧರ್ಮಗಳು

ಭೌತಿಕ ಲಕ್ಷಣಗಳು ಮಿತಿ
ವಕ್ರೀಭವನ ಸೂಚಕ 1.452-1.462
ಸಾಂದ್ರತೆ 0.856-0.870
ಐಯೋಡಿನ್ ಮೌಲ್ಯ 58-70
ಸಪೋನಿಫಿಕೇಸನು ಸಂಖ್ಯೆ 187-196
ಅನ್‌ಸಪೋನಿಫಿಯಬುಲ್ ಪದಾರ್ಥ 1.0-3.0%
ಫ್ಲಾಷ್ ಪಾಯಿಂಟ್ 2380C

ಉಪಯುಕ್ತತೆಗಳು[ಬದಲಾಯಿಸಿ]

  • ಎಣ್ಣೆ ಯನ್ನು ವನಸ್ಪತಿ/ಡಾಲ್ಡಾ ತಯಾರು ಮಾಡುವ ಕಾರ್ಖಾನೆಯಲ್ಲಿ ಬಳಸುತ್ತಾರೆ.
  • ಸಾಬೂನ್ಗಳನ್ನು ಉತ್ಪತ್ತಿ ಮಾಡುವುದಕ್ಕೆ ಉಪಯೋಗಿಸುತ್ತಾರೆ.
  • ಇದನ್ನು ಅಂಗಮರ್ದನ ಮಾಡುವ ಎಣ್ಣೆಯಾಗಿಯೂ ಬಳಸುತ್ತಾರೆ ಮತ್ತು ಕೀಲುನೋವು ನಿವಾರಣೆಗೆ ಮಜ್ಜನ ಎಣ್ಣೆಯಾಗಿ ಉಪಯೋಗಿಸುವರು.
  • ಒಮ್ಮೊಮ್ಮೆ ಕೇಶ ತೈಲವನ್ನಾಗಿ ಉಪಯೋಗಿಸುವರು.
  • ದೀಪಾರಾಧನೆ ಮಾಡುವುದಕ್ಕೆ ಉಪಯೋಗಿಸುವರು.
  • ಇದನ್ನು ಇಂಧನವನ್ನಾಗಿ ಬಳಸಿ ಆಯಿಲ್‌ ಇಂಜಿನ್ ನಡೆಸಬಹುದು.
  • ಇದರಿಂದ ಜೈವಿಕ ಡಿಸೇಲ್ ತಯಾರು ಮಾಡಬಹುದು.
  • ತೊಗಟೆಯ ಕಷಾಯವು ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ಹೊರ ಹಾಕಲು ಸಹಕಾರಿ.
  • ಕಷಾಯವು ಸಂಕುಚಿತಗೊಂಡ ಕರುಳಿನ ತೊಂದರೆ ನಿವಾರಣೆ ಮಾಡುತ್ತದೆ.
  • ಇದನ್ನು ಮೂಳೆ ಮುರಿತದ ಚಿಕಿತ್ಸೆಯಲ್ಲಿಯೂ, ಕುಷ್ಠ ರೋಗಕ್ಕೂ ಸಹ ಉಪಯೋಗಿಸಲಾಗುತ್ತದೆ.
  • ಹೂವುಗಳ ಕಷಾಯವು ಹೃದಯದ ತೊಂದರೆಗಳಿಗೆ, ಕಿವಿಯ ತೊಂದರೆಗಳಿಗೆ ಒಳ್ಳೆಯದು.
  • ಶ್ವಾಸಕೋಶದಲ್ಲಿರುವ ಕಫವನ್ನು ನಿವಾರಿಸುವುದರಲ್ಲಿಯೂ ಸಹ ಹೂವಿನ ಕಷಾಯದ ಸೇವನೆಯು ಸಹಕಾರಿಯಾಗಿದೆ.
  • ಬೀಜಗಳ ಕಷಾಯ ಸೇವನೆಯು ತಾಯಂದಿರಯಲ್ಲಿ ಹಾಲು ವೃದ್ಧಿಗೆ ಸಹಾಯಕ.
  • ಮೂಲವ್ಯಾಧಿಗೆ ಹೂವುಗಳನ್ನು ತುಪ್ಪದಲ್ಲಿ ಕಾಯಿಸಿ ಸೇವಿಸುವುದು ಸಹಾಯಕ
  • ಕಾಯಿಯ ಕಷಾಯ ಸೇವನೆಯು ಕ್ಷಯರೋಗಕ್ಕೆ ಉಪಯುಕ್ತವಾಗಿದೆ.
  • ಇಸುಬಿನಿಂದ ಆಗುವ ಉರಿ ಮತ್ತು ನೋವಿಗೆ ಹೂವುಗಳನ್ನು ಹಾಲಿನೊಡನೆ ಅರೆದು ಲೇಪಿಸಿದರೆ ಶಮನವಾಗುತ್ತದೆ.
  • ಸೋಪು, ಗ್ಲಿಸರಿನ್ ಇತ್ಯಾದಿಗಳ ತಯಾರಿಕೆಯಲ್ಲಿಯೂ ಬಳಸಲ್ಪಡುತ್ತದೆ.
  • ಬೀಜದ ಎಣ್ಣೆನ್ನು ಬುಡಕಟ್ಟಿನವರು ಉರಿಸಲು, ಹಾಗೂ ಅಡುಗೆಗೆ ಬಳಸುತ್ತಾರೆ.
  • ಮಾದಕ ದ್ರವವನ್ನು ಭಟ್ಟಿ ಇಳಿಸಲು ಉಪಯೋಗಿಸುತ್ತಾರೆ.
  • ಎಲೆಗಳು, ಹೂವುಗಳು ಮತ್ತು ಹಣ್ಣುಗಳು ಕೂಡ ಆಡುಗಳು ಮತ್ತು ಕುರಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ.

ಉತ್ಪಾದನೆ ವಿವರಣೆ[ಬದಲಾಯಿಸಿ]

೧೯೯೯ ನಿಂದ೨೦೦೯ ವರಿಗೆ ಉತ್ಪಾದನ ಆದ ಎಣ್ಣೆ ಮತ್ತು ಹಿಂಡಿಯ ವಿವರಗಳು[೪]

  • ಉಪಯೋಗಿಸಿದ ಬೀಜದ ಪ್ರಮಾಣ=೧,೩೬,೯೩೫ ಟನ್ನುಗಳು
  • ಉತ್ಪತ್ತಿಯಾದ ಎಣ್ಣೆ=ಎಡೀಬುಲ್ ಎಣ್ಣೆ:೧೫,೧೩೨ ಟನ್ನುಗಳು, ನಾನ್‌ಎಡಿಬುಲ್: ೧೪,೧೧೪ ಟನ್ನುಗಳು.
  • ಉತ್ಪತ್ತಿಯಾದ ಹಿಂಡಿ=೧,೦೬,೫೮೪ ಟನ್ನುಗಳು.

ಉಲ್ಲೇಖನಗಳು[ಬದಲಾಯಿಸಿ]

  1. http://trifed.nic.in/productdetails.asp?productid=95&id=prod Archived 2009-06-19 ವೇಬ್ಯಾಕ್ ಮೆಷಿನ್ ನಲ್ಲಿ., Product profile, Mahuwa, Trifed, Ministry of Tribal Affairs, Government of India
  2. "ಆರ್ಕೈವ್ ನಕಲು". Archived from the original on 2007-10-01. Retrieved 2013-06-09.
  3. SEA HandBook 2009.page900-901
  4. Annual report.SEA,2008-09 ಆಧಾರ