ಶೇಂಗಾ ಎಣ್ಣೆ
ಶೇಂಗಾ ಎಣ್ಣೆಯನ್ನು ಶೇಂಗಾ ಅಥವಾ ಕಡಲೇಕಾಯಿ ಬೀಜದಿಂದ ತೆಗೆಯುತ್ತಾರೆ. ಶೇಂಗಾ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ದಕ್ಷಿಣ ಅಮೇರಿಕ ಶೇಂಗಾ ಗಿಡದ ಜನ್ಮ ಸ್ಥಾನವಾಗಿದೆ. ಇದು ಲೆಗುಮಿನಸ್ ಜಾತಿಗೆ ಸೇರಿದ ಗಿಡ. ಅರಾಚಿಸ್ ಪ್ರಜಾತಿಯ, ಫಾಬೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದರ ಸಸ್ಯ ಶಾಸ್ತ್ರ ಹೆಸರು ಅರಾಚಿಸ್ ಹೈಪೊಜಿಯಾ . ಶೇಂಗಾಗಿಡ ಉಷ್ಣವಲಯದ ನೆಲದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಈ ಗಿಡಗಳು ಹುಸಿ ಮಣ್ಣು, ಕಪ್ಪುಮಣ್ಣು ಭೂಮಿಗಳಲ್ಲಿ ಚೆನ್ನಾಗಿ ಬೆಳೆಯುತ್ತವೆ. ಇಂಡಿಯಾ, ಚೈನಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಖಂಡಗಳಲ್ಲಿ ಶೇಂಗಾ ಸಾಗುವಳಿ ಹೆಚ್ಚಾಗಿ ಮಾಡುತ್ತಿದ್ದಾರೆ.
ಸಾಗುವಳಿ
[ಬದಲಾಯಿಸಿ]ಭೂಮಿ : ಶೇಂಗಾ' ಬೆಳವಣಿಗೆ ಸಡಿಲ ಮಣ್ಣಿನ(loose soil), ಕರಿನೆಲ(ಎರೆಮಣ್ಣು)(Black soil)ಗಳು ಅನುಕೂಲವಾಗಿವೆ. ನೀರನ್ನು ಚೆನ್ನಾಗಿ ಹೀರಿಕೊಳ್ಳುವ ಲಕ್ಷಣ ಇರಬೇಕು. ಗಿಡಗಳ ವೊದಲಿನಲ್ಲಿ ನೀರು ನಿಂತುಕೊಳ್ಳ ಬಾರದು. ಹೊಲದ ಮಣ್ಣಿನ ಆಮ್ಲಗುಣ(acidity)ಸೂಚಕ ೬.೦ -೬.೫ ನಡುವೆ ಇರಬೇಕು.
ಮಳೆ : ಮಳೆಸುರಿತ ೫೦೦ ರಿಂದ ೧೨೦೦ ಮಿ.ಮೀ ಗಳಷ್ಟು ಇರಬೇಕು. ಸರಾಸರಿ ಮಳೆಸುರಿತ ೪೦೦-೫೦೦ ಮೀ.ಮೀ ಅವಸರವಿದೆ.
ತಾಪಮಾನ : ಪರಿಸರದ ತಾಪಮಾನ ೨೫-೩೦೦C ಇರಬೇಕು.
ಸಾಗುವಳಿ ಮಾಡುವ ಕಾಲ : ಖಾಾರೀಫ್ ಮತ್ತು ರಾಬಿ ಎರಡು ಋತುಗಳಲ್ಲಿ ಸಾಗುವಳಿ ಮಾಡಬಹುದು.
ಖಾರಿಫ್ ಕಾಲ : ಮೇ-ಜೂನ್ ತಿಂಗಳು(ಮಳೆ ತಡೆಯಾಗಿದ್ದರೆ ಆಗಸ್ಟ್-ಸೆಪ್ಟೆಂಬರ)
ರಾಬಿ : ಮಾರ್ಚ್ ತಿಂಗಳವರೆಗೆ.
ಸಾಗುವೊಳಿ ಮಾಡುವ ರಾಷ್ಟ್ರಗಳು : ಗುಜರಾತ್, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳು. ಗುಜರಾತಿನಲ್ಲಿ ಹೆಚ್ಛಾಗಿ ೧.೭-೨.೦ ಮಿಲಿಯನು ಹೆಕ್ಟೇರುಗಳಲ್ಲಿ, ಆಂಧ್ರ ಪ್ರದೇಶದಲ್ಲಿ ೧.೨-೧.೪ ಮಿಲಿಯನು ಹೆಕ್ಟೇರುಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಆಮೇಲೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಬೆಳೆಸುತ್ತಿದ್ದಾರೆ.
ಕಡಲೆಕಾಯಿ
[ಬದಲಾಯಿಸಿ]ಕಾಯಿ ಮೇಲೆ(pod)ದಪ್ಪವಾದ, ಗರಗಾದ, ಕಿತ್ತದ ಸಿಪ್ಪೆ/(hull/shell)ಹೊಟ್ಟು ಇರುತ್ತದೆ. ಅದರ ಒಳಗೆ ೧-೪ ಶೇಂಗಾ ಬೀಜ/ಬಿತ್ತನೆ(seed)ಗಳು ಇರುತ್ತವೆ .ಬೀಜ ಎರಡು ಬೀಜಭಾಗಗಳಾಗಿದ್ದು , ಇದರ ಕಡೆ ಭಾಗದಲ್ಲಿ ಜೀವಾಂಕುರ ಸ್ವಲ್ಪ ಪ್ರಮಾಣದಲ್ಲಿ ಕಂಡುಬರುತ್ತದೆ. ಬೀಜದ ಮೇಲೆ ಕೆಂಪು ಬಣ್ಣದಲ್ಲಿ ಹಸಿ ತೊಗಲು ಇರುತ್ತದೆ. ಕಾಯಿಯಲ್ಲಿ ಒಟ್ಟು ೨೧-೨೯%,ಬೀಜಾಂಕುರ/ಜೀವಾಂಕುರ ೨.೧-೩.೬%,ಕಾಳು(kernel)ಭಾಗ ೬೮-೭೨% ಇರುತ್ತವೆ.ಬೀಜದಲ್ಲಿ ಹೆಚ್ಚಿನ ಕಡೆಯಲ್ಲಿ ಎಣ್ಣೆ ಮತ್ತು ಪ್ರೋಟೆನ್ (proteins) ಗಳಿದ್ದು, ಉಳಿದಿದ್ದಿವು ಕಾರ್ಬೋಹೈಡ್ರೆಟ್ಸ್ (carbohydrates), ಮತ್ತು ಫೈಬರು(fibre)ಆಗಿವೆ. ಸಾಧಾರಣವಾಗಿ ಒಂದು ಹೆಕ್ಟೇರಿಗೆ ೧೨೦೦-೧೪೦೦ಕೇ.ಜೀ.ಗಳ ಇರುವರಿ ಬರುತ್ತದೆ. ಶೇಂಗ ಕಾಳನ್ನು ಜಾಸ್ತಿ ದಿನಗಳು ದಾಸ್ತಾನು ಮಾಡಬೇಕೆಂದರೆ, ಶೆಂಗಾಬೀಜದ ತೇವಾಂಶ(moisture)9.0%ಶೇಕಡಕ್ಕಿಂತ ಕಡಿಮೆ ಇರಬೇಕು.
ಎಣ್ಣೆಯನ್ನು ತೆಗೆಯುವ ವಿಧಾನ
[ಬದಲಾಯಿಸಿ]ಮೊದ ಮೊದಲು ಗಾಣದಿಂದ ಎಣ್ಣೆಯನ್ನು ತೆಗೆಯುವ ಅಭ್ಯಾಸವಿತ್ತು. ಗಾಣಗಳಿಂದ ಸ್ವಲ್ಪ ಪ್ರಮಾಣದಲ್ಲಿ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತದೆ. ಈಗಿನ ಕಾಲದಲ್ಲಿ ಎಕ್ಸುಪೆಲ್ಲರು ಯಂತ್ರಗಳನ್ನು ಉಪಯೋಗಿಸಿ ಎಣ್ಣೆ ತೆಗೆಯುತ್ತಿದ್ದಾರೆ. ಎಕ್ಸುಪೆಲ್ಲರು ಯಂತ್ರಗಳನ್ನು ಬಳಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತದೆ. ಗಾಣದಿಂದ ಬರುವ ಹಿಂಡಿಯಲ್ಲಿ ೧೧.೦%ಮೇಲೆ ಎಣ್ಣೆ ಉಳಿದಿರುತ್ತದೆ. ಆದರೆ ಎಕ್ಸುಪೆಲ್ಲರು ಯಂತ್ರಗಳಿಂದ ಬರೋ ಹಿಂಡಿಯಲ್ಲಿ ೬-೭% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಎಣ್ಣೆ ಉಳಿದಿರುತ್ತದೆ. ಶೇಂಗಾ ಹಿಂಡಿಯಲ್ಲಿ ಉಳಿದಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ಎಂಬ ಕೈಗಾರಿಕೆ ಯಂತ್ರ ಯಲ್ಲಿ ನಡೆಸಿ ತೆಗೆಯುವರು. ಸಾಲ್ವೆಂಟ್ ಪ್ಲಾಂಟ್ನಿಂದ ಹೊರಗೆ ಬರೋ ಹಿಂಡಿಯಲ್ಲಿ ೧.೦% ಕ್ಕಿಂತ ಕಡಿಮೆಯಾಗಿ ಎಣ್ಣೆ ಉಳಿದಿರುತ್ತದೆ. ಹಿಂಡಿನಿಂದ ಪೂರ್ಣವಾಗಿ ಎಣ್ಣೆಯನ್ನು ತೆಗೆದ ಮೇಲೆ ಹಿಂಡಿಯ ಪ್ರೋಟಿನ್ ಆಂಶ ಜಾಸ್ತಿ ಆಗುತ್ತದೆ. ಎಣ್ಣೆ ತೆಗೆದ ಹಿಂಡಿಯನ್ನು ಹಸುಗಳಿಗೆ ಮೇವಾಗಿ ಬಳಸುತ್ತಾರೆ, ಮತ್ತು ಹೊಲಗಳಲ್ಲಿ ಎರುಬನ್ನಾಗಿಯೂ ಉಪಯೋಗಿಸುತ್ತಾರೆ.
ಶೇಂಗಾ ಎಣ್ಣೆಯ ಭೌತಿಕ ಮತ್ತು ರಾಸಾಯನಿಕ ಲಕ್ಷಣಗಳು
[ಬದಲಾಯಿಸಿ]ಗಾಣ ಮತ್ತು ಎಕ್ಸುಪೆಲ್ಲರು ಕಾರ್ಖಾನೆಯಲ್ಲಿ ಉತ್ಪತ್ತಿ ಮಾಡಿದ ಎಣ್ಣೆಯನ್ನು ಫಿಲ್ಟರು ಪ್ರೆಸ್ಸ್(filter press)ಯಲ್ಲಿ ಸೋಸಿ, ಆಮೇಲೆ ನೇರವಾಗಿ ಅಡುಗೆ ಎಣ್ಣೆಯಾಗಿ ಉಪಯೋಗಿಸ ಬಹುದು. ಆದರೆ ಸಾಲ್ವೆಂಟ್ ಪ್ಲಾಂಟ್ ನಿಂದ ತೆಗೆದಿದ್ದ ಎಣ್ಣೆಯು ನೇರವಾಗಿ ತಿಂಡಿ ಮಾಡುವುದಕ್ಕೆ,ಅಥವಾ ಉಪಯೋಗಿಸುವುದಕ್ಕೆ ಯೋಗ್ಯವಲ್ಲ. ಸಾಲ್ವೆಂಟ್ ಪ್ಲಾಂಟ್ನಿಂದ ಬಂದ ಎಣ್ಣೆಯನ್ನು ರಿಫೈನರಿ(Refinery)ನಲ್ಲಿ ಶುದ್ಧಿಗೊಳಿಸಿ(refine), ಆಮೇಲೆ ಅಡುಗೆ ಎಣ್ಣೆಯಾಗಿ ಉಪಯೋಗಿಸುತ್ತಾರೆ. ಶೇಂಗಾಎಣ್ಣೆ ನಾನ್-ಡ್ರಯಿಂಗ್ ಎಣ್ಣೆ. ಹೊಂಬಣ್ಣ ದಲ್ಲಿ ಕಾಣಿಸುತ್ತದೆ. ಇದರಲ್ಲಿ ಅಸಂತೃಪ್ತ ಫ್ಯಾಟಿ ಆಮ್ಲಗಳು(ಕೊಬ್ಬಿನ ಆಮ್ಲಗಳು)ಒಟ್ಟಿಗೆ ೮೦% ವರೆಗೆ ಇರುತ್ತವೆ. ಬೇರೆ ಎಣ್ಣೆಗಳಲ್ಲಿ ಕಾಣಸಿಗದ ಕೆಲವು ಕೊಬ್ಬಿನ ಆಮ್ಲಗಳು ಶೆಂಗಾ ಎಣ್ಣೆಯಲ್ಲಿ ಇವೆ.ಅವು ಅರಾಚಿಡಿಕ್, ಎಯಿಕೊಸೆಯಿನಿಕ್, ಬೆಹೆನಿಕ್ ಮತ್ತು ಲೆಗ್ನೊಸೆರಿಕ್ ಆಮ್ಲಗಳು. ಶೆಂಗಾ ಎಣ್ಣೆ ಯಲ್ಲಿರುವ ಕರೋಟಿನಾಯಿಡ್ಸು ಕಾರಣ ಎಣ್ಣೆ ಹಳದಿ (yellow) ಬಣ್ಣದಲ್ಲಿ ಕಂಡು ಬರುತ್ತದೆ. ಈ ಎಣ್ಣೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಟೊಕೊಪೆರೊಲ್ಸು ಎನ್ನುವ ಆಂಟಿನೋಯಿಡ್ ಇದ್ದ ಕಾರಣವಾಗಿ ಎಣ್ಣೆ ತ್ವರಿತವಾಗಿ ಕೆಡುವುದಿಲ್ಲ. ಎಣ್ಣೆಯಲ್ಲಿ ವಿಟಮಿನ್ 'ಇ 'ಮತ್ತು ವಿಟಮಿನ್ 'ಕೆ' ಇರುತ್ತವೆ.
ಶೇಂಗಾ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು
ಫ್ಯಾಟಿ ಆಮ್ಲಗಳು | ಶೇಕಡ |
ಸಂತೃಪ್ತ ಕೊಬ್ಬಿನ ಆಮ್ಲಗಳು | ಮೇರ |
ಮಿರಿಸ್ಟಿಕ್ ಆಮ್ಲ(C14:0) | 0.1% |
ಪಾಮಿಟಿಕ್ ಆಮ್ಲ(C16:0)] | 9.5% |
ಸ್ಟಿಯರಿಕ್ ಆಮ್ಲ(C18:0) | 2.2% |
ಅರಚಿಡಿಕ್ ಆಮ್ಲ(C20:0) | 1.4% |
ಅಸಂತೃಪ್ತ ಕೊಬ್ಬಿನ ಅಮ್ಲಗಳು | |
ಪಾಮಿಟೊಲಿಕ್ ಆಮ್ಲ(C16:1) | 0.1% |
ಒಲಿಕ್ ಆಮ್ಲ(C18:1) | 44.8% |
ಲಿನೊಲಿಕ್ ಆಮ್ಲ(C18:2) | 32.5% |
ಮಿಟಮಿನುಗಳು | |
ಮಿಟಮಿನ್ 'E' | 15.7 ಮಿ.ಗ್ರಾಂ. |
ಮಿಟಮಿನ್'K' | 0.7 ಮಿ.ಗ್ರಾಂ. |
ಭೌತಿಕ ಧರ್ಮಗಳ-ಲಕ್ಷಣಗಳ ಪಟ್ಟಿ
ಲಕ್ಷಣ | ಮಿತಿ |
ಸಾಂದ್ರತೆ | 0.909-0.913 |
ವಕ್ರೀಭವನ ಸೂಚಕ(400C) | 1.462-1.4664 |
ಅಯೋಡಿನ್ ಉಪಯುಕ್ತತೆ | 85-99 |
ಸಪೋನಿಫಿಕೆಸನ್ ಉಪಯುಕ್ತತೆ | 188-196 |
ಅನ್ ಸಪೋನಿಫಿಯಬುಲ್ ಮೇಟರು. | 0.8-1.0% |
ಒಂದು ಕೇಜಿ ಎಣ್ಣೆಯ ಕಿಲೋ ಕೆಲರಿಫಿಕ್ ಉಪಯುಕ್ತತೆ =೯೦೦೦೦ ಕಿಲೋ ಕ್ಯಾಲರಿಗಳು.
ಎಣ್ಣೆ-ಉಪಯುಕ್ತತೆಗಳು
[ಬದಲಾಯಿಸಿ]- ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ.
- ವನಸ್ಪತಿ/ಡಾಲ್ಡಾ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ (ಹೆಚ್ಚಾಗಿ ಸಾಲ್ವೆಂಟ್ ಎಕ್ಸುಟ್ರಾಕ್ಸುನು ಪ್ಲಾಂಟ್ ನಿಂದ ತೆಗೆದ ಎಣ್ಣೆಯನ್ನು).
- ಶೇಂಗಾ ಎಣ್ಣೆಯಿಂದ ಬಯೋಡಿಸೆಲ್ ನ್ನು ತಯಾರು ಮಾಡಬಹುದು. ಕಿ.ಶ,೧೯೦೦ ಸಂ.ದಲ್ಲಿ ಅಲ್ಲಿನ ಫ್ರೆಂಚ್ ಸರ್ಕಾರದ ಆಹ್ವಾನ ಮೇಲೆ, ಒಟ್ಟೊ ಕಂಪೆನಿ(Otto company), ೧೯೦೦ಸಂ, ದಲ್ಲಿ, ಪ್ಯಾರಿಸ್ ಎಕ್ಸುಬಿಸನ್ ನಲ್ಲಿ ಶೇಂಗಾ ಎಣ್ಣೆಯಿಂದ ಮಾಡಿದ ಬಯೋಡಿಸೆಲ್ ಅನ್ನು ಪ್ರದರ್ಶಿಸಿದೆ.[೧]