ತಂಬಾಕು ಬೀಜದ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಡ
ಹೂಗಳು
ವಿತ್ತನ

ತಂಬಾಕು ಗಿಡವನ್ನು ಹೆಚ್ಚಾಗಿ ಇದರ ಎಲೆಗಳಿಗಾಗಿ ಬೆಳೆಸುತ್ತಾರೆ. ತಂಬಾಕು ಎಲೆಪುಡಿಯಿಂದ ಸಿಗರೇಟ್, ಬೀಡಿ, ಸುಟ್ಟೆ, ಗುಟ್ಕಾ ಉತ್ಪನ್ನ ಮಾಡುತ್ತಾರೆ. ತಂಬಾಕು ಗಿಡವನ್ನು ಹೊಗೆಸೊಪ್ಪು ಎಂದು ಕರೆಯುತ್ತಾರೆ. ಇದು ಸೊಲನೇಸಿಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ ಗಿಡ[೧] . ಇದರ ಸಸ್ಯ ಶಾಸ್ತ್ರ ಹೆಸರುನಿಕೊಟಿನ ಟಬಕಂ. ಲಿನ್ನೇ(nicotina Tabacum.Linn). ಸಿಗರೇಟ್, ಬೀಡಿ, ಗುಟ್ಕಾಗಳನ್ನು ವರ್ಜಿನೀಯಾ ಟೊಬಾಕೋಎನ್ನುವ ಜಾತಿ ಎಲೆ/ಪತ್ರಗಳಿಂದ ಉತ್ಪನ್ನ ಮಾಡಲಾಗುತ್ತದೆ. ತಂಬಾಕು ಗಿಡದಲ್ಲಿ ಇನ್ನೊಂದು ಜಾತಿ ಗಿಡದ ಹೆಸರು ನಿಕೋಟಿನ ರಸ್ಟಿಕ. ಲಿನ್ನೆ( Nicotina rustica.linn). ತಂಬಾಕು ಬೀಜದಲ್ಲಿ ಎಣ್ಣೆ ಇರುತ್ತದೆ .ತಂಬಾಕು ಎಲೆಗಳಿಂದ ನಿಕೊಟಿನ್ ಮತ್ತು ಔಷಧ ಗುಣ ಇರುವ ಪದಾರ್ಥಗಳನ್ನು ಉತ್ಪನ್ನ ಮಾಡಲಾಗುತ್ತದೆ [೨],[೩].

ಭಾರತೀಯ ಭಾಷೆಗಳಲ್ಲಿ ತಂಬಾಕು ಹೆಸರು[ಬದಲಾಯಿಸಿ]

ಭಾರತದಲ್ಲಿ ತಂಬಾಕು ಸಾಗುವಳಿ ಮಾಡುತ್ತಿರುವ ರಾಜ್ಯಗಳು[೪][ಬದಲಾಯಿಸಿ]

  1. ಅಸ್ಸಾಂ
  2. ಗುಜರಾತ್
  3. ಉತ್ತರಪ್ರದೇಶ
  4. ಆಂಧ್ರ ಪ್ರದೇಶ
  5. ಪಶ್ಚಿಮ ಬಂಗಾಳ
  6. ಬಿಹಾರ
  7. ರಾಜಸ್ಥಾನ
  8. ಕರ್ನಾಟಕ
  9. ಮಹಾರಾಷ್ಟ್ರ

ಪ್ರಪಂಚದಲ್ಲಿ ತಂಬಾಕು ಬೆಳೆಸುತ್ತಿರುವ ದೇಶಗಳು[ಬದಲಾಯಿಸಿ]

ಪ್ರಪಂಚದಲ್ಲಿ ತಂಬಾಕನ್ನು ಹೆಚ್ಚಾಗಿ ಬೆಳೆಸುವ ದೇಶಗಳಲ್ಲಿ ಜಿಂಬಾಬ್ವೆ ಪ್ರಥಮ ಸ್ಥಾನದಲ್ಲಿದೆ (೨೦೦೮-೨೦೦೯ ವರ್ಷಕ್ಕೆ)[೫]. ಎರಡನೆ ಸ್ಥಾನದಲ್ಲಿ ಚೈನಾ ದೇಶವಿದೆ. ಉಳಿದಿರುವ ದೇಶಗಳಲ್ಲಿ ಅರ್ಜೆಂಟಿನಾ, ಬ್ರೆಜಿಲ್, ಬಲ್ಗೆರಿಯಾ, ಗ್ರೀಸ್, ಇಂಡೋನೇಷಿಯಾ, ಕೊರಿಯಾ, ಪಾಕಿಸ್ತಾನ್, ಥಾಯ್ ಲಾಂಡ್ ,ಟರ್ಕಿ, ಅಮೆರಿಕ ಮತ್ತು ಭಾರತ ದೇಶಗಳು ಇವೆ. [೬].

ಗಿಡ-ಬೀಜ/ವಿತ್ತನ[ಬದಲಾಯಿಸಿ]

ಗಿಡ: ಗಿಡ ೧ ಮೀಟರನಿಂದ ಮೂರು ಮೀಟರುಗಳ ಎತ್ತರ ಬೆಳೆಯುತ್ತದೆ. ಏಕ ವಾರ್ಷಿಕ ಗಿಡ. ದೃಢವಾದ ಕಾಂಡವನ್ನು ಹೊಂದಿರುವ ಗಿಡ. ಗಿಡದ ಕಾಂಡ ನೆಟ್ಟಗೆ ಬೆಳೆಯುತ್ತದೆ. ಕೊಂಬೆಗಳು ಕಡಿಮೆ. ಉಷ್ಣಮಂಡಲ ಪ್ರಾಂತದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಬೇಸಾಯಕ್ಕೆ ಕರಿನೆಲ(black soil)ಉತ್ತಮ. ಮಳೆಸುರಿತ ೫೦-೧೦೦ ಮಿ.ಮೀ.(ಸಾಗುವಳಿ ಸಮಯದಲ್ಲಿ) ಇರಬೇಕು. ಎಲೆಗಳು ಉದ್ದವಾಗಿರುತ್ತವೆ. ಎಲೆಗಳು ಹಸಿರು ಬಣ್ಣದಲ್ಲಿರುತ್ತವೆ. ಪತ್ರಗಳ ಅಂಚು ಸೂಚಿಯಾಗಿರುತ್ತದೆ. ವಿತ್ತನ:ಬೀಜ/ವಿತ್ತನಗಳು ಕಂದು(brown)ಬಣ್ಣದಲ್ಲಿದ್ದು, ಸಾಸಿವೆಗಿಂತ ಸ್ವಲ್ಪ ದೊಡ್ಡ ಪ್ರಮಾಣದಲ್ಲಿರುತ್ತವೆ. ಬೀಜ ಗೋಲಾಕಾರದಲ್ಲಿರುತ್ತದೆ. ಬೀಜ ಗಟ್ಟಿಯಾಗಿರುತ್ತದೆ. ತಂಬಾಕು ಎಲೆಗಳಲ್ಲಿ ನಿಕೊಟಿನ್ ಇದ್ದರೂ ,ಬೀಜಗಳಲ್ಲಿ ನಿಕೋಟಿನ್ ಇರುವುದಿಲ್ಲ. ತಂಬಾಕು ಬೀಜದಲ್ಲಿ ೩೫% ತನಕ ಎಣ್ಣೆ ಲಭ್ಯವಾಗುತ್ತದೆ. ಬೀಜದಲ್ಲಿ ೨೫-೨೬% ಪ್ರೋಟಿನುಗಳಿರುತ್ತವೆ .ತಂಬಾಕು ಗಿಡವನ್ನು ಎಲೆಗಳ ಸಲುವಾಗಿ ಬೆಳೆಸುತ್ತಾರೆ. ಆದ್ದರಿಂದ ಬೀಜಗಳನ್ನು ಉಪವುತ್ಪತ್ತಿ ಎಂದು ಹೇಳಬಹುದು(By products).

ತಂಬಾಕು ಬೀಜದಲ್ಲಿರುವ ಪದಾರ್ಥಗಳ ಪಟ್ಟಿ

ಪದಾರ್ಥ ಮಿತಿ
ಪ್ರೋಟಿನ್ 25.0-26.0%
ಎಣ್ಣೆ 38.0-42.0%
ನಾರು(fiber) 20-22%
ಅನ್ ಸಪೋನಿಫಿಯಬುಲ್ ಪದಾರ್ಥ 1.2-1.5%
ತೇವ 3.3-5.1% గరిష్ట
ಬೂದಿ 3.2-3.6%
ಸಾರಜನಕ(ನೈಟ್ರೊಜನ್) 0.6-2.7%

ಎಣ್ಣೆಯನ್ನು ತೆಗೆಯುವ ಪದ್ಧತಿಗಳು[ಬದಲಾಯಿಸಿ]

ತಂಬಾಕು ಬೀಜದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಎನ್ನುವ ಯಂತ್ರವನ್ನು ಬಳಸಿ, ಅಥವಾ ಸಾಲ್ವೆಂಟ್ ಎಕ್ಸುಟ್ರಾಕ್ಷನು ಕಾರ್ಖಾನೆ ಸಹಾಯದಿಂದ ತೆಗೆಯಲಾಗುತ್ತದೆ[೭]

ತಂಬಾಕು ಬೀಜದ ಎಣ್ಣೆ[ಬದಲಾಯಿಸಿ]

ಬೀಜದಿಂದ ತೆಗೆದ ಎಣ್ಣೆ ಕಪ್ಪು, ಕಂದು(dark brown)ಬಣ್ಣದಲ್ಲಿ, ಅಥವಾ ಹಳದಿ ಮತ್ತು ಹಸಿರು ಬಣ್ಣಗಳ ಮೇಳವಾಗಿರುತ್ತದೆ. ಎಣ್ಣೆಗೆ ತಂಬಾಕು ತರಹ ವಾಸನೆ ಇರುತ್ತದೆ. ಆದರೆ ಎಣ್ಣೆಯನ್ನು ಶುದ್ಧಿ (refining) ಮಾಡಿದ ಮೇಲೆ ಆ ವಾಸನೆ ಇರುವುದಿಲ್ಲ. ರಿಫೈಂಡ್ ಮಾಡಿದ ಎಣ್ಣೆ ವಾಸನೆ ರಹಿತವಾಗಿರುತ್ತದೆ. ತಂಬಾಕು ಬೀಜದ ಎಣ್ಣೆ ಗುಣ ಗಣಗಳು,ಭೌತಿಕ ಲಕ್ಷಣಗಳು ಮತ್ತು ಅದರಲ್ಲಿರುವ ಕೊಬ್ಬಿನ ಆಮ್ಲಗಳ ವಿವರಗಳು ಕೆಳಗಿನ ಪಟ್ಟಿಗಳಲ್ಲಿ ಕೊಡಲಾಗಿದೆ.[೮]

ಎಣ್ಣೆಯ ಭೌತಿಕ ಮತ್ತು ರಸಾಯನಿಕ ಲಕ್ಷಣಗಳು

ಲಕ್ಷಣ ಮಿತಿ
ವಕ್ರೀಭವನ ಸೂಚಿಕೆ 400Cಕಡೆ 1.4673-1.4683
ಅಯೋಡಿನ್ ಮೌಲ್ಯ 130-145
ಸಪೋನಿಫಿಕೆಸನ್ ಮೌಲ್ಯ 186-195
ಅನ್ ಸಪೋನಿಫಿಯಮುಲ್ ಪದಾರ್ಥ 1.5-2.0% ಗರಿಷ್ಟ
ತೇವ 0.5% గరిష్ట(ಕಚ್ಚ ಎಣ್ಣೆ)
ಬಣ್ಣ/ವರ್ಣ 1/4"ಸೆಲ್,(y+5R) 45(ಕಚ್ಚಎಣ್ಣೆ)

ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ(C16:0) 15-16
ಸ್ಟಿಯರಿಕ್ ಆಮ್ಲ(C18:0) 4-5
ಒಲಿಕ್ ಆಮ್ಲ(C18:1) 13-15
ಲಿನೋಲಿಕ್ ಆಮ್ಲ(C18:2) 64-67

ಎಣ್ಣೆಯ ಉಪಯುಕ್ತಗಳು[ಬದಲಾಯಿಸಿ]

  • ರಿಪೈಂಡು ಮಾಡಿದ ಎಣ್ಣೆಯನ್ನು ತಿನ್ನುವ ಎಣ್ಣೆ (edible oil/ಅಡುಗೆ ಎಣ್ಣೆಯಾಗಿ ಬಳಸುವುದಕ್ಕೆ ಆಗುತ್ತದೆ.
  • ಸಾಬೂನ್(soap), ಮೇಣಬತ್ತಿ ತಯಾರಿಕೆಯಲ್ಲಿ ಬಳಸುತ್ತಾರೆ.
  • ಜೈವಿಕ ಡಿಸೇಲ್(bio diesel)ಲನ್ನಾಗಿ ಉಪಯೋಗಿಸ ಬಹುದು [೯].

ಬಾಹ್ಯಾ ಕೊಂಡಿಗಳು[ಬದಲಾಯಿಸಿ]

  1. http://www.asianjournalofchemistry.co.in/User/ViewFreeArticle.aspx?ArticleID=18_1_4 Archived 2016-03-11 ವೇಬ್ಯಾಕ್ ಮೆಷಿನ್ ನಲ್ಲಿ.
  2. https://www.google.co.in/search?q=tobacco+seed+oil&tbm=isch&tbo=u&source=univ&sa=X&ei=zic4UvK_GImJrgfK-IGIBA&sqi=2&ved=0CFAQsAQ&biw=1366&bih=677&dpr=1

ಉಲ್ಲೇಖಗಳು[ಬದಲಾಯಿಸಿ]

  1. http:// botanical. com/botanical /mgmh/t/ tobacc21. html
  2. "ಆರ್ಕೈವ್ ನಕಲು". Archived from the original on 2012-12-30. Retrieved 2013-09-30.
  3. http://www.accessexcellence.org/WN/SUA03/medical_tobacco.php
  4. SEA Hand Book.2009
  5. http://www. tobaccoatlas. org/industry /growing_tobacco/leading_producers/
  6. SEA Hand Book.2009
  7. http:// www.doiserbia.nb.rs/img/doi/1451-9372/2007/1451-93720701041S.
  8. http://link Archived 2013-07-11 ವೇಬ್ಯಾಕ್ ಮೆಷಿನ್ ನಲ್ಲಿ.. springer.com/ article/10.1007% 2FBF 02635515#page-1
  9. http: //www. sciencedirect. com/ science/ article/ pii/ S092666900200002X