ಮಾವಿನಬೀಜ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾವಿನಮರ-ಕಾಯಿಗಳು
ಮಾವಿನ ಹೂವು
ಹಣ್ಣು
ಗೊರಟೆ-ಒಳಗಿನ ಬೀಜ
ಗೊರಟೆ(mango stone)

ಮಾವಿನ ಬೀಜ ಎಣ್ಣೆಯನ್ನು ಮಾವಿನಬೀಜದಿಂದ ತೆಗೆಯಲಾಗುತ್ತದೆ. ಈ ಎಣ್ಣೆ ಒಳ್ಳೆಣ್ಣೆ/ಅಡುಗೆ ಎಣ್ಣೆ. ಮಾವಿನ ಬೀಜ ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬು ಆಮ್ಲಗಳು ಹೆಚ್ಚಿನ ಶೇಕಡದಲ್ಲಿರುವುದರಿಂದ ಸಾಧಾರಣ ಪರಿಸರ ಉಷ್ಣೋಗ್ರತಯಲ್ಲಿಯೂ ಘನ ಇಲ್ಲವೆ ಅರ್ಥಘನ ರೂಪದಲ್ಲಿರುತ್ತದೆ. ಅದಕ್ಕೆ ಇದನ್ನು ಕೊಬ್ಬು(fat)ಎಂದು ಕರೆಯಲಾಗುತ್ತದೆ. ಮಾವಿನ ಗಿಡ ಅನಕಾರ್ಡೆಸಿಯೇ (Anacardiaceae) ಸಸ್ಯ ಕುಟುಂಬಕ್ಕೆ ಸೇರಿದ ಗಿಡ. ಇದರ ಪ್ರಜಾತಿ ಮ್ಯಾಂಗಿಫೆರಾ(Mangifera). ಮಾವಿನ ಗಿಡ ಸಸ್ಯಶಾಸ್ತ್ರ ಹೆಸರು ಮ್ಯಾಂಗಿಫೆರ ಇಂಡಿಕ(Mangifera Indica). ಮಾವಿನ ಗಿಡಕ್ಕೆ ೪ ಸಾವಿರ ವರ್ಷಕ್ಕಿಂತ ಹೆಚ್ಚಿನ ಇತಿಹಾಸವಿದೆ. ಮಾವಿನ ಮೂಲ ಜನ್ಮಸ್ಥಾನ ದಕ್ಷಿಣ ಆಸಿಯ ಮತ್ತು ಪೂರ್ವ ದಿಕ್ಕಿನ ಭಾರತ ಆವಾಸ ಪ್ರಾಂತ. ಚರಿತ್ರಕಾರರ ನಂಬಿಕೆ ಪ್ರಕಾರ ಮಾವು ದಕ್ಷಿಣ ಆಸಿಯನಿಂದ ಮಧ್ಯಧರಾ ಪ್ರಾಂತಕ್ಕೆ ಪರ್ಶಿಯ(ಇರಾನ್) ವ್ಯಾಪಾರಿಗಳಿಂದ ತರಲಾಗಿದೆ. ೧೬ನೇ ಶತಾಬ್ದಿ ಯಲ್ಲಿ ಪೋರ್ಚುಗ್ರೀಸರಿಂದ ಆಫ್ರಿಕಾಕ್ಕೆ ವ್ಯಾಪಿಸಿದೆ. ಅಲ್ಲಿಂದ ೧೭ನೇ ಶತಾಬ್ದಿಯಲ್ಲಿ ಬ್ರೆಜಿಲ್ ಪ್ರಾಂತಕ್ಕೆ ಪರಿಚಯವಾಗಿದೆ[೧]. ಅತಿ ಶೀಘ್ರದಲ್ಲಿ ಅಮೆರಿಕಖಂಡದಲ್ಲಿಯು ವ್ಯಾಪ್ತಿ ಹೊಂದಿದೆ.19ನೇ ಶತಾಬ್ದ ಪ್ರಾರಂಭ ಕಾಲಕ್ಕೆ ಮೆಕ್ಸಿಕೋ,೧೮೬೦ ವರ್ಷದ ಸಮಯಕ್ಕೆ ಅಮೆರಿಕಾ ಸಂಯುಕ್ತ ರಾಜ್ಯದಲ್ಲಿ ಇದರ ಸಾಗುವಳಿ ಪ್ರಾರಂಭವಾಗಿದೆ.

ಮಾವಿನಹಣ್ಣು-ಬೀಜ[ಬದಲಾಯಿಸಿ]

ಮಾವಿನ ಹಣ್ಣು ಅಂಡಾಕಾರವಾಗಿ, ಅಥವಾ ದೀರ್ಘಾಂಡಕಾರವಾಗಿ ಇರುತ್ತದೆ. ಮಾವಿನ ಪ್ರಭೇಧಾನುಸಾರವಾಗಿ ಹಣ್ಣು ವಿವಿಧ ಪ್ರಮಾಣದಲ್ಲಿ ಇರುತ್ತದೆ. ಹಣ್ಣಿನ ಮೇಲಿನ ತೊಗಲು ಹಸಿರು, ಕೆಂಪು, ಮತ್ತು ಹಳದಿ ಬಣ್ಣಗಳ ಮಿಶ್ರಣವಾಗಿ ಕಾಣಿಸುತ್ತದೆ. ಮಾವಿನ ಕಸು ಕಾಯಿ ಹಸಿರು ಬಣ್ಣದಲ್ಲಿದ್ದು, ಹಣ್ಣಾದ ಮೇಲೆ ವಿವಿಧ ಬಣ್ಣದಲ್ಲಿ ಕಾಣಿಸುತ್ತದೆ. ಹಣ್ಣು ಒಳಗಿರುವ ಕುಸುರು ಸಿಹಿ ಸವಿ ಹೊಂದಿರುತ್ತವೆ. ಕೆಲವು ಪ್ರಭೇಧಗಳ ಕಸುಕಾಯಿಗಳು ಹುಳಿ ರುಚಿ ಹೊಂದಿರುತ್ತವೆ [೨]. ೨೧೦ ರೀತಿಯ ಮಾವಿನ ಪ್ರಭೇಧಗಳು ಇವೆ. ಹಣ್ಣು ೮-೧೨ ಸೆಂ.ಮೀ ಉದ್ದ/ಪರಿಮಾಣದಲ್ಲಿರುತ್ತದೆ. ಕೆಲವು ಹಣ್ಣುಗಳು ಮೂತ್ರಪಿಂಡ ಆಕಾರದಲ್ಲಿ, ಇನ್ನೂ ಹೃದಯಾಕಾರದಲ್ಲಿ ಇರುತ್ತವೆ. ಹಣ್ಣುಗಳಲ್ಲಿ ೮೫% ಸಿಹಿ ರುಚಿಯುಳ್ಳ ತಿರುಳು/ಕುಸುರು, ಮತ್ತು ೧೫ % ಗೊರಟೆ (mangoseed stone) ಸಹಿತ ಬೀಜ ಇರುತ್ತದೆ. ಗೊರಟೆ ದೀರ್ಘಅಂಡಾಕಾರವಾಗಿರುತ್ತದೆ. ಗೊರಟೆ ಮಧ್ಯಭಾಗ ಉಬ್ಬಾಗಿರುತ್ತದೆ. ಎರಡು ತುದಿಗಳು ಚೂಪಾಗಿರುತ್ತವೆ. ಗೊರಟೆ ಒಳಗೆ ಬೀಜವು ಅಂಡಾಕಾರದಲ್ಲಿ ಇರುತ್ತದೆ. ಬೀಜದ ಮೇಲೆ ತೆಳುವಾದ ತೊಗಟೆ ಇರುತ್ತದೆ. ಬೀಜದ ಕಣಭಾಗ ಮೃದುವಾಗಿರುತ್ತದೆ. ಒಣಗಿಸಿದ ವಿತ್ತನದಲ್ಲಿ, ತೇವ ೧೦.೦%, ಎಣ್ಣೆ/ಕೊಬ್ಬು ೮-೧೦%, ನಾರು ಪದಾರ್ಥ (fiber) 3.0%,ಪ್ರೋಟಿನ್ 5.0% ವರೆಗೆ ಉಂಟಾಗಿರುತ್ತವೆ. ಗೊರಟೆ/ಸಿಪ್ಪೆ/ಹೊಟ್ಟು ಸಹಿತ ಬೀಜದಲ್ಲಿ ತಿರುಳು(kernel) ೬೨.೦% ಇರುತ್ತದೆ. [೩]

ಎಣ್ಣೆ ಉತ್ಪಾದನಾ ವಿಧಾನ[ಬದಲಾಯಿಸಿ]

ಎಣ್ಣೆ ತೆಗೆಯುವುದಕ್ಕೆ ಮಾವಿನ ಬೀಜಗಳನ್ನು ಶೇಕರಣೆ ಮಾಡುವುದು ಉಳಿದ ಎಲ್ಲಾ ತರಹ ಎಣ್ಣೆ ಬೀಜಗಳ ಶೇಕರಣಕ್ಕಿಂತ ಭಿನ್ನವಾಗಿದೆ. ಎಲ್ಲಾ ಎಣ್ಣೆ ಬೀಜಗಳು ಕೊಳ್ಳುವುದಕ್ಕೆ ಮಾರುಕಟ್ಟೆಯಲ್ಲಿ ಸಿದ್ದವಾಗಿರುತ್ತವೆ. ಮಾವಿನ ಬೀಜ ಹಾಗಲ್ಲ. ಇವುಗಳನ್ನು ಪ್ರತ್ಯೇಕವಾಗಿ ಶೇಖರಿಸಬೇಕು. ಬೀಜದ ಶೇಖರಣಕ್ಕೆ ಮೂರು ವಿಧಾನಗಳಿವೆ. ವೊದಲಿನ ವಿಧಾನದಲ್ಲಿ ಊರಗಾಯಿ ಮಾಡುವ ಕೈಗಾರಿಕೆ /ಪರಿಶ್ರಮಗಳಿಂದ ಶೇಕರಣ ಮಾಡಲಾಗುತ್ತದೆ. ಎರಡನೆ ಪದ್ಧತಿ ಪ್ರಕಾರ ಮಾವಿನ ಹಣ್ಣಿನಿಂದ ರಸ(juice)ತಯಾರು ಮಾಡುವ ಕಾರ್ಖಾನೆಗಳಿಂದ ಶೇಕರಣೆ ಮಾಡಲಾಗುತ್ತದೆ .ಮೂರನೆ ವಿಧಾನದಲ್ಲಿ ಮನುಷ್ಯರನ್ನು ನಿಯಮಿಸಿ ಹಣ್ಣುಗಳನ್ನು ತಿಂದ ಮೇಲೆ ಬೀದಿ/ರಸ್ತೆಗಳಲ್ಲಿ ಬಿಸಾಕಿದ ವಿತ್ತನಗಳನ್ನು ಶೇಖರಿಸುವುದು. ಈ ಮೂರನೇ ಪದ್ಧತಿಯಲ್ಲೆ ಹೆಚ್ಚಿನ ಪರಿಮಾಣದಲ್ಲಿ ಬೀಜ ಸಿಗುತ್ತದೆ.

ಬೀದಿ/ರಸ್ತೆಯಿಂದ ಶೇಖರಣೆ ಮಾಡಲಾದ ಗೊರಟೆ(MANGOSEED STONE)ಗಳನ್ನು ನೀರಿಂದ ತೊಳೆದು ಶುಭ್ರಮಾಡಿ, ಬಿಸಿಲಲ್ಲಿ ಚೆನ್ನಾಗಿ ಒಣಗಿಸಬೇಕು. ಹಸಿ ಗೊರಟೆ ಯಲ್ಲಿ ತೇವ ೨೫% ಕ್ಕಿಂತ ಹೆಚ್ಚಾಗಿ ಇರುತ್ತದೆ. ಗೊರಟೆಗಳನ್ನು ಮೊದಲು ಬಿಸಿಲಲ್ಲಿ ಒಣಗಿಸಿ ತೇವ ಕಡಿಮೆ ಮಾಡಿದ ಮೇಲೆ, ಗೊರಟೆಗಳನ್ನು ಒಂದು ಪಿಪಾಯಿ(drum)ತರಹ ರೋಸ್ಟರು/ಸುಡುವ ಸಾಧನ(roaster)ಸಹಾಯದಿಂದ ಸುಟ್ಟು, ಆಮೇಲೆ ಗೊರಟನ್ನು ಒಡೆದು ಒಟ್ಟು/ಸಿಪ್ಪೆ ಮತ್ತು ತಿರುಳನ್ನು ಬೇರ್ಪಡಿಸಿ ಎಸೆವರು. ಇನ್ನೊಂದು ವಿಧಾನದಲ್ಲಿ ಮಾವಿನ ತಿರುಳನ್ನು ಪುಡಿ ಮಾಡಿ ಅದರಿಂದ ಗುಳಿಗೆಗಳನ್ನು ತಯಾರಿಸಿ ,ಗುಳಿಗೆಗಳನ್ನು ಸಾಲ್ವೆಂಟ್ ಪ್ಲಾಂಟ್ಗೆ ಕಳುಹಿಸಿ ಎಣ್ಣೆಯನ್ನು ತೆಗೆಯುತ್ತಾರೆ. ಎರಡನೆ ಪದ್ದತಿಯಲ್ಲಿ ಮಾವಿನ ತಿರುಳನ್ನು ಫ್ಲೆಕರು(flaker)ಎನ್ನುವ ಯಂತ್ರದಲ್ಲಿ ಫ್ಲೇಕ್ಸು ಆಗಿ ಮಾಡಿದ ಮೇಲೆ , ಸಾಲ್ವೆಂಟ್ ಪ್ಲಾಂಟ್ನಲ್ಲಿ ಈ ಫ್ಲೆಕ್ಸುದಿಂದ ಎಣ್ಣೆ ತೆಗೆಯಲಾಗುತ್ತದೆ[೪].

ಮಾವಿನ ಬೀಜ ಎಣ್ಣೆ/ಕೊಬ್ಬು[ಬದಲಾಯಿಸಿ]

ಎಣ್ಣೆ ನವುಲು ಮಂಜಲು/ಅರಿಸಿನ ಬಣ್ಣವನ್ನು ಹೊಂದಿರುತ್ತದೆ. ಈ ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೫೦% ಕ್ಕಿಂತ ಹೆಚ್ಚಾಗಿ ಇರುವುದರಿಂದ, ಇದರ ದ್ರವೀಭವನ ಉಷ್ಣೊಗ್ರತೆ ಹೆಚ್ಚಾ (೩೪-೪೨C)ಗಿ ಇರುತ್ತದೆ. ಸಾಧಾರಣ ಪರಿಸರ ಉಷ್ಣೋಗ್ರತೆ(೩೨-೪೦C)ದಲ್ಲಿ ಘನ ಅಥವಾ ಅರ್ಥ ಘನ ರೂಪದಲ್ಲಿರುತ್ತದೆ. ಅದಕ್ಕೆ ಇದನ್ನು ಕೊಬ್ಬು ಅಥವಾ ಬೆಣ್ಣೆ ಎಂದು ಕರೆಯಲಾಗುತ್ತದೆ [೫]. ಮಾವು ನಲ್ಲಿ ೨೧೦ ಕ್ಕಿಂತ ಹೆಚ್ಚಿನ ಪ್ರಭೇದಗಳಿವೆ. ಅದರಿಂದ ಎಣ್ಣೆ ತೆಗೆದ ಪ್ರಭೇಧ ಮತ್ತು ಬೆಳೆಸಿದ ನೆಲ ಸ್ವಭಾವ ಇತ್ಯಾದಿ ಕಾರಣಗಳಿಂದ ಎಣ್ಣೆಯ ಭೌತಿಕ ರಸಾಯನಿಕ ಲಕ್ಷಣಗಳಲ್ಲಿ, ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಶೇಕಡದಲ್ಲಿ ತುಂಬಾ ವ್ಯತ್ಯಾಸ ಕಂಡು ಬರುತ್ತದೆ. ಮಾವಿನ ಬೀಜ ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೫೦-೫೫% ತನಕ, ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ೪೫-೫೦% ತನಕ ಇರುತ್ತವೆ. ಎಣ್ಣೆಯಲ್ಲಿ ಸ್ಟಿಯರಿಕ್ ಪರ್ಯಾಪ್ತ ಕೊಬ್ಬಿನ ಆಮ್ಲವು ೪೦-೪೫.೦%, ಪಾಮೆಟಿಕ್ ಕೊಬ್ಬಿನ ಆಮ್ಲವು ೫-೬% ವರೆಗೆ ಇದ್ದರೆ, ಅರಚಿಡಿಕ್ ಪರ್ಯಾಪ್ತ ಆಮ್ಲ(೨೦ ಕರ್ಬನ ಪರಮಾಣುಗಲಿದ್ದ ಕೊಬ್ಬಿನ ಆಮ್ಲ) ೨.೦-೨.೫% ವರೆಗೆ ಉಂಟಾಗಿರುತ್ತದೆ. ಅಪರು ಆಪ್ತ ಕೊಬ್ಬಿನ ಆಮ್ಲಗಳಲ್ಲಿ ಏಕ ದ್ವಿಬಂಧವುಳ್ಳ ಒಲಿಕ್ ಆಮ್ಲವು ೪೦-೪೫%, ದ್ವಿಬಂಧವುಳ್ಳ ಲಿನೊಲೆಕ್ ಆಮ್ಲವು ೪.೫-೫.೫% ವರೆಗೆ ಕಂಡು ಬರುತ್ತವೆ.

ಎಣ್ಣೆ-ಭೌತಿಕ ರಸಾಯನಿಕ ಗುಣಗಳು[೩]

ಎಣ್ಣೆ ಲಕ್ಷಣ ಮಿತಿ
ವಕ್ರೀಭವನ ಸೂಚಿಕೆ 400C ಕಡೆ 1.4550-1.4570
ಅಯೋಡಿನ್ ಮೌಲ್ಯ 32-60.7
ಸಪೋನಿಫಿಕೆಸನ್ ಸಂಖ್ಯೆ/ಮೌಲ್ಯ 190.1-195.1
ದ್ರವೀಭವ ಉಷ್ಣೋಗ್ರತೆ 35-430C
ಅನ್ ಸಪೋನಿಫಿಯಬುಲ್ ಪದಾರ್ಥ 1.2%ಗರಿಷ್ಟ
ಸ್ಟೆರೊಲ್ 0.22-0.58
ವಿಶಿಷ್ಟಗುರುತ್ವ300Cಕಡೆ 0.9991
ಟೈಟೆರ್ (Titer)0C 30.5-39.2
ಜಾರು(slip)ಉಷ್ಣೋಗ್ರತೆ 30.5-39.20C
ಬೆಲ್ಲಿಯರ್ ಅಂಕಿ/ಸಂಖ್ಯೆ0C 38.5

ಎಣ್ಣೆ-ಕೊಬ್ಬಿನ ಆಮ್ಲಗಳ ಪ್ರತಿಶತ[೪]

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ(C16:0) 5.5
ಸ್ಟಿಯರಿಕ್ ಆಮ್ಲ(C18:0) 40-45
ಒಲಿಕ್ ಆಮ್ಲ(C18:1) 40-46
ಲಿನೊಲಿಕ್ ಆಮ್ಲ(C18:2) 3-4
ಅರಚಿಡಿಕ್ ಆಮ್ಲ(C20:0) 2-2.5

ಎಣ್ಣೆ ಉಪಯೋಗಗಳು[ಬದಲಾಯಿಸಿ]

  • ಕೊಕೋ ಬಟ್ಟರಿ(cocoa butter)ಗೆ ಬದಲಿಯಾಗಿ ಚಾಕೋಲೆಟ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ [೬].
  • ಜೈವಿಕ ಇಂಧನವನ್ನು(bio diesel)ತಯಾರಿಸುವುದಕ್ಕೆ ಆಗುತ್ತದೆ[೭].
  • ದೇಹ ಚರ್ಮ ರಕ್ಷಣೆ ಲೇಪನಗಳುನ್ನು ತಯಾರಿಸುತ್ತಾರೆ[೮].
  • ತಲೆ ಕುರುಳು ಚಿಕಿತ್ಸೆಯಲ್ಲಿ ಬಳಸುತ್ತಾರೆ[೯]

ಉಲ್ಲೇಖನಗಳು[ಬದಲಾಯಿಸಿ]

  1. http: //www. champagnemango. com/history/
  2. http: //www. hort. purdue. edu/ ext/ senior /fruits /mango1.htm
  3. ೩.೦ ೩.೧ SEA Handbook-2009,by Solvent Extractors Association of India,pageNo:902-904
  4. ೪.೦ ೪.೧ http: //aaqua.persistent.co.in/aaqua/forum/viewthread?thread=10463
  5. http://www.thefreedictionary.com/FAT
  6. http://www.ajofai.info/Abstract/Production%20of%20cocoa%20butter%20equivalent%20from%20mango%20seed%20almond%20fat%20and%20palm%20oil%20mid-fraction.pdf
  7. http://iosrjournals.org/iosr-jac/papers/vol2-issue2/D0221822.pdf/IOSR[ಶಾಶ್ವತವಾಗಿ ಮಡಿದ ಕೊಂಡಿ] Journal of Applied chemistry
  8. http://www.yourskinorganic.com/?p=528/Mango[ಶಾಶ್ವತವಾಗಿ ಮಡಿದ ಕೊಂಡಿ] Butter Benefits
  9. http://www.revitaliseyourhealth.com/the-benefits-mango-butter-for-your-hair/The Benefits Of Mango Butter For Your Hair