ಪುಂಡಿಬೀಜ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಂಡಿ ಗಿಡ
ಪುಂಡಿ ಹೂವು
ಮಾಗಿದ ಕಾಯಿ
ಪುಂಡಿ ವಿತ್ತನ


ಪುಂಡಿ ಗಿಡದ ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಪುಂಡಿ ಗಿಡ ಮಾಲ್ವೇಲಿಸ್ ವರ್ಗದಲ್ಲಿ ಮಾಲ್ವೇಸಿಕುಟುಂಬಕ್ಕೆ ಸೇರಿದ ಗಿಡ. ಇದರ ವೃಕ್ಷಶಾಸ್ತ್ರ ನಾಮ ಹಿಬಿಸ್ಕಸ್ ಸಫ್ದಾರಿಫ್ಫಾ.ಲಿನ್ನೇ(Hibiscus sabdariffa.lin). ಇನ್ನೊಂದು ತರಹ ಗಿಡದ ಸಸ್ಯ ಶಾಸ್ತ್ರ ಹೆಸರುಹಿಬಿಸ್ಕಸ್ ಕನ್ನಬಿನಸ್(Hibiscus cannabinus)[೧] . ಪುಂಡಿ ಗಿಡ ಎಲೆ ಹುಳಿ ಆಗಿರುತ್ತದೆ. ಅದಕ್ಕೆ ಇದರ ಹಸಿ ಎಲೆಗಳನ್ನು ಪಲ್ಯ, ಸಾಂಬಾರು ಇತ್ಯಾದಿಗಳನ್ನು ಮಾಡುವುದರಲ್ಲಿ ಉಪಯೋಗಿಸುತ್ತಾರೆ. ಎರಡನೆ ರಕವನ್ನು ನಾರು(fiber)ಸಲುವಾಗಿ ಬೆಳೆಸುತ್ತಾರೆ. ಇದನ್ನು ನಾರು/ಕಿತ್ತಗೋಗು ಎಂದು ಕರೆಯುತ್ತಾರೆ. ಪುಂಡಿ ನಾರಿನಿಂದ ಸೆಣಬಿನ ನಾರು ತರಹದ ಗೋಣಿಗಳನ್ನು, ಹಗ್ಗಗಳನ್ನು ತಯಾರು ಮಾಡುತ್ತಾರೆ. ಪುಂಡಿ ವಿತ್ತನದಿಂದ ಎಣ್ಣೆಯನ್ನು ತೆಗೆಯುತ್ತಾರೆ. ಈ ಎಣ್ಣೆಯನ್ನು ಅಡಿಗೆ ಎಣ್ಣೆ, ಸಲಾಡ್ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಆಗುತ್ತದೆ[೨]. ಇದನ್ನು Deccan hemp ಎಂದು ಕೂಡಾ ಕರೆಯುತ್ತಾರೆ.

ಭಾರತೀಯ ಭಾಷೆಗಳಲ್ಲಿ ಪುಂಡಿ ಗಿಡದ ಹೆಸರು[೩][ಬದಲಾಯಿಸಿ]

ಭಾರತ ದೇಶದಲ್ಲಿ ಪುಂಡಿ ಸಾಗುವಳಿ ಮಾಡುತ್ತಿದ್ದ ರಾಜ್ಯಗಳು[ಬದಲಾಯಿಸಿ]

ಭಾರತ ದೇಶದಲ್ಲಿ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಲ, ಬೀಹಾರ , ಮಹಾರಾಷ್ಟ್ರ, ಕರ್ನಾಟಕ, ಮತ್ತು ಒರಿಸ್ಸಾರಾಜ್ಯಗಳಲ್ಲಿ ಹೆಚ್ಚಿನ ಪ್ರಾಂತ್ಯಗಳಲ್ಲಿ ಸಾಗುವಳಿ ಮಾಡುತ್ತಿದ್ದಾರೆ.

ಪುಂಡಿಬೀಜ[ಬದಲಾಯಿಸಿ]

ಭಾರತದಲ್ಲಿ ಪುಂಡಿಯನ್ನು ನಾರು ಸಲುವಾಗಿ ಬೆಳೆಸುತ್ತಾರೆ. ವಿತ್ತನ ಬರುವ ತನಕ ಗಿಡವನ್ನು ಬೆಳಸಿದರೂ ನಾರು ಬರುವುದಕ್ಕೆ ತೊಂದರೆ ಇಲ್ಲವೆಂದು ತಿಳಿದು ಬಂದಿದೆ. ವಿತ್ತನ ಇಳುವರಿ ಒಂದು ಹೆಕ್ಟೇರಿಗೆ ೭೦೦-೮೦೦ ಕಿಲೋಗಳು ಬರುತ್ತದೆ. ವಿತ್ತನ/ಬೀಜದಲ್ಲಿ ೧೯-೨೦% ತನಕ ಎಣ್ಣೆ ಇರುತ್ತದೆ. ಕನ್ನಾಬಿನಸ್ ಗಿಡ ಬೀಜ ಹಸಿರು ಇಲ್ಲವೆ ಮಂಜಿನ ಹಸಿರು ವರ್ಣದಲ್ಲಿ ಕಾಣಿಸುತ್ತದೆ. ಸಫ್ದಾರಿಫ್ಫಾಗಿಡ ಬೀಜ ಕಂದುಬಣ್ಣ ಇಲ್ಲವೆ ಪಿಂಕು ವರ್ಣದಲ್ಲಿ ಇರುತ್ತದೆ. ಬೀಜ ಚತುರ ಫಲಕವಾಗಿರುತ್ತವೆ. ಬೀಜಮೇಲೆ ಗಟ್ಟಿ ಸಿಪ್ಪೆ/ಪೊಟ್ಟು ಇರುತ್ತದೆ.

ಪುಂಡಿ ಬೀಜದಲ್ಲಿದ್ದ ಪದಾರ್ಥಗಳ ಪಟ್ಟಿ[೪][೩]

ಪದಾರ್ಥಗಳು ಮಿತಿ/ಶೇಕಡ
ತೇವ 4.8%
ಎಣ್ಣೆ 19-21%
F.F.A(ಫ್ರೀ ಫ್ಯಾಟಿ ಆಮ್ಲ) 2.1%
ಪ್ರೋಟಿನ್ 18.0%
ಕಚ್ಚ ನಾರು/ಕೆತ್ತ(crude fibre) 22.0%

ಎಣ್ಣೆ ಉತ್ಪಾದನೆ[ಬದಲಾಯಿಸಿ]

ಪುಂಡಿ ಬೀಜವನ್ನು ಎಕ್ಸುಪೆಲ್ಲರು(ಎಣ್ಣೆ ತೆಗೆಯುವ ಯಂತ್ರ)ದಲ್ಲಿ ಹಾಕಿ ನಡಿಸಿ ತೆಗೆಯಬಹುದು. ಎಕ್ಸುಪೆಲ್ಲರುನಿಂದ ಬರುವ ಹಿಂಡಿಯಲ್ಲಿ ೭-೮% ಎಣ್ಣೆ ಉಳಿದಿರುತ್ತದೆ. ಹಿಂಡಿಯಲ್ಲಿ ಉಳಿದಿದ್ದ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ಬಳಸಿ ಎಣ್ಣೆಯನ್ನು ತೆಗೆಯಲಾಗುತ್ತದೆ. ವಿತ್ತನವನ್ನು ಸ್ಟೀಮು ದ್ವಾರಾ ಬೇಯಿಸಿ, ಫ್ಲೇಕರು ಯಂತ್ರಗಳಿಂದ ವಿತ್ತಗಳನ್ನು ಫ್ಲೇಕ್ಸಿಯನ್ನಾಗಿ ತಯಾರು ಮಾಡಿ, ಆಮೇಲೆ ಎಕ್ಸುಪೆಲ್ಲರು ಯಂತ್ರಕ್ಕೆ ಕಳುಹಿಸಲಾಗುತ್ತದೆ. ಕೆಲಕಡೆ ನೇರವಾಗಿ ವಿತ್ತನ ಪ್ಲೇಕ್ಸುಯನ್ನು ಸಾಲ್ವೆಂಟ್ ಪ್ಲಾಂಟ್ಕ್ಕೆ ಕಳುಹಿಸಿ ಎಣ್ಣೆಯನ್ನು ತೆಗೆಯುತ್ತಾರೆ.

ಎಣ್ಣೆ[ಬದಲಾಯಿಸಿ]

ವಿತ್ತನದಿಂದ ಉತ್ಪದಿಸಲಾದ ಎಣ್ಣೆ ಕಂದು ಮತ್ತು ಅರಿಸಿನ ಬಣ್ಣ ಮಿಶ್ರಣವಾಗಿ ಕಾಣಿಸುತ್ತದೆ. ಎಣ್ಣೆಯಲ್ಲಿ ಪರ್ಯಾಪ್ತ(saturated) ಮತ್ತು ಅಪರ್ಯಾಪ್ತ(unsaturated)ಕೊಬ್ಬಿನ ಆಮ್ಲಗಳೆರಡೂ ಇರುತ್ತವೆ .ಪರ್ಯಾಪ್ತ ಕೊಬ್ಬಿನ ಆಮ್ಲಗಳಾದ ಪಾಮೀಟಿಕ್ ಮತ್ತು ಸ್ಟಿಯರಿಕ್ ಆಮ್ಲಗಳು, ಎರಡು ಒಟ್ಟಿಗೆ ಸೇರಿ ೨೫-೩೫% ತನಕ ಇರುತ್ತವೆ. ಎಣ್ಣೆಯಲ್ಲಿ ಒಲಿಕ್ ಮತ್ತು ಲಿನೊಲಿಕ್ ಕೊಬ್ಬಿನ ಆಮ್ಲಗಳು(ಎರಡು ಸೇರಿಕೊಂಡು)೬೫-೭೦% ವರೆಗೆ ಇರುತ್ತವೆ. ಪುಂಡಿ ಎಣ್ಣೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬೇರೆ ಎಣ್ಣೆಗಳಲ್ಲಿ ಕಾಣದಂತಾ ಎಪೋಕ್ಸಿ ಮತ್ತು ಸೈಕ್ಲೋ ಕೊಬ್ಬಿನ ಆಮ್ಲಗಳನ್ನು ಗೊತ್ತು ಹಚ್ಚಲಾಗಿದೆ.

ಎಣ್ಣೆಯಲ್ಲಿದ್ದ ಕೊಬ್ಬಿನ ಆಮ್ಲಗಳ ಪಟ್ಟಿ[೫][೬]

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ(C16:0) 20-35(ಸರಾಸರಿ:20.1)
ಸ್ಟಿಯರಿಕ್ ಆಮ್ಲ(C18:0) 2.0-4.0(ಸರಾಸರಿ3.5)
ಒಲಿಕ್ ಆಮ್ಲ(C18:1) 25-34(ಸರಾಸರಿ29.2)
ಲಿನೊಲಿಕ್ ಆಮ್ಲ(C18:2) 15-47(ಸರಾಸರಿ45.9)
ಎಪೊಕ್ಷಿ(Epoxy) 3.3-4.5
ಸೈಕ್ಲೊಪ್ರೊಪೆನಿಕ್((C18:1) 1.2-2.9
ಸೈಕ್ಲೊಪ್ರೊಪೆನಿಕ್((C19:1) 2.3-2.4

ಪುಂಡಿ ಎಣ್ಣೆ ಭೌತಿಕ ಲಕ್ಷಣಗಳು [೬]

ಲಕ್ಷಣ ಮೌಲ್ಯ ಮಿತಿ
ವಕ್ರೀಭವನ ಸೂಚಿಕೆ400C 1.465-1.471
ಸಪೋನಿಫಿಕೆಸ ಮೌಲ್ಯ/ಸಂಖ್ಯೆ 189-195
ಅಯೋಡಿನ್ ಮೌಲ್ಯ 93-107
ಹೆಲ್ಪನ್ ಟೆಸ್ಟ್ పాజిటివ్
ಅನ್ ಸಪೋನಿಫಿಯಬುಲ್ ಪದಾರ್ಥ 2.0-2.5
ಆಮ್ಲ ಮೌಲ್ಯ 6-12
ತೇವೆ 0.25-0.5

.

ಉಲ್ಲೇಖನ[ಬದಲಾಯಿಸಿ]

  1. http: //www. pfaf. org/user/Plant. aspx?LatinName=Hibiscus+cannabinus
  2. http: //www. hort.purdue. edu/newcrop /duke_energy/ hibiscus_ cannabinus. html
  3. ೩.೦ ೩.೧ SEA Hand Book-2009 by The Solvent Extractors' Association Of India
  4. http://www.ncbi.nlm.nih.gov/pubmed/9139301
  5. http://www.sciencedirect.com/science/article/pii/092666909500027A
  6. ೬.೦ ೬.೧ "ಆರ್ಕೈವ್ ನಕಲು" (PDF). Archived from the original (PDF) on 2014-03-08. Retrieved 2013-10-10.