ವಿಷಯಕ್ಕೆ ಹೋಗು

ಫುಲ್ವಾರ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರ
ಹೂ ವೊಗ್ಗು
ಕಾಯಿ

ಫುಲ್ವಾರ ಎಣ್ಣೆ ಯನ್ನು ಫುಲ್ವಾರ ಬೀಜದಿಂದ ತೆಗೆಯಲಾಗುತ್ತದೆ. ಈ ಮರವನ್ನು ಇನ್ನೂ ಫಲ್ವಾರ, ಛುರ, ಛೌರಿ ಎಂದೂ ಕರೆಯುತ್ತಾರೆ. ಇದು ಸಪೊಟೆಸಿ(sapoteacea) ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತ್ರ ಹೆಸರುಡಿಪ್ಲೊನೆಮ ಬುಟೇರೆಸಿ(diploknema butyracea). ಇದನ್ನು ಬಿಟ್ಟು ಇನ್ನು ಅನೇಕ ಜಾತಿಗಳಿವೆ. ಅವು ಅಷೆಡ್ರಾ ಬುಟೆರೆಸಿ (aseahdra butyracea), ಮತ್ತು ಬಸ್ಸಿಯ ಬುಟೆರೆಸಿ(bassia butyracea). ಈ ಮರವನ್ನು ಇಂಡಿಯನ್ ಬಟ್ಟರು ಟ್ರೀ(Indian butter tree)ಎಂದೂ ಕರೆಯುತ್ತಾರೆ []

ಇದನ್ನು ಭಾರತದಲ್ಲಿನ ಉಪ ಹಿಮಾಲಯ ಹರವು/ಬಯಲು ಪ್ರಾಂತದಲ್ಲಿ, ಹಿಮಾಲಯ ಸುತ್ತವರಿದ ,ಕುಮೋನ್(kumaon) ಪೂರ್ವದಿಂದಸಿಕ್ಕಿಂ, ಉತ್ತರ ದಿಕ್ಕಾಗಿ ಬಂಗಾಲ, ಮತ್ತು ಬೂಟಾನ್ (ಬುಟಾನ್ ಭಾರತ ದೇಶಭಾಗವಲ್ಲ)ಇನ್ನೂ ಅಂಡಮಾನ್-ನಿಕೋಬಾರ್ ದ್ವೀಪಗಳ ಸಮೂಹ ಪ್ರಾಂತ್ಯದಲ್ಲಿ ಬೆಳೆಯಲಾಗುತ್ತದೆ.

ಇದು ಎಲೆಯುದುರಿಸುವ, ಎತ್ತರವಾಗಿ ಬೆಳೆಯುವ ಮರ. ಇದು ಸಾಧಾರಣವಾಗಿ ೧೫ ಮೀಟರುಗಳ(೪೬ಅಡಿ)ಎತ್ತರ ಬೆಳೆಯುತ್ತದೆ. ಕಾಂಡದ ಅಡ್ಡಳತೆ ೬-೧೦ ಮೀ.ಇರುತ್ತದೆ. ನೇಪಾಲ್, ಸಿಕ್ಕಿಂ ಕಾಡುಗಳಲ್ಲಿ ೪೦ ಮೀಟರ್ ಎತ್ತರ ಬೆಳೆದಿರುವ ಮರಗಳು ಕಂಡು ಬರುತ್ತವೆ. ಇವು ಸಮುದ್ರ ಮಟ್ಟದಿಂದ ೭೦೦-೧೫೦೦ ಮೀಟರುಗಳ ಎತ್ತರದಲ್ಲಿಯು ಬೆಳೆಯುತ್ತವೆ. ಇವು ಹೆಚ್ಚಾಗಿ, ಪರ್ವತ ಕಣಿವೆ/ತಗ್ಗು ಪ್ರದೇಶ, ತೊರೆ ಕೆರೆ , ಪರ್ವತ ಏರು ನೆಲದಲ್ಲಿ ಬೆಳೆಯುತ್ತವೆ. ಎಲೆಗಳು ನಸು ಕೆಂಪಾಗಿ ಮತ್ತು ಬೆಳ್ಳಗೆ ಇರುತ್ತವೆ. ಎಲೆಗಳು ಗುಂಪಾಗಿ ಕೊಂಬೆಗಳ ಕಡೆಯಲ್ಲಿ ಬೆಳೆಯುತ್ತವೆ. ಎಲೆಗಳು ಚೂಪಲ್ಲದ ಅಂಚನ್ನು ಹೊಂದಿ, ದೀರ್ಘ ಅಂಡಾಕಾರವಾಗಿರುತ್ತವೆ. ಫುಲ್ವಾರ ಮರ ೫-೧೦ ವರ್ಷಕ್ಕೆ ಬಲಿತು/ಪಕ್ವ ವಾಗುತ್ತದೆ. ೫೦-೬೦ವರ್ಷದ ವರೆಗೆ ಫಲವನ್ನು ಕೊಡುತ್ತದೆ. ಒಂದು ಮರದಿಂದ ವರ್ಷಕ್ಕೆ ೧೦೦-೨೫೦ಕಿಲೋ ಹಣ್ಣು ಬರುತ್ತದೆ[]. ಮಳೆಯ ಅಳತೆ ೧೦೦೦-೨೫೦೦ ಮಿ.ಮೀ. ಇರಬೇಕು. ತೇವ ಇರುವ ಪ್ರದೇಶಗಳಲ್ಲಿ ಈ ಮರ ಚೆನ್ನಾಗಿ ಬೆಳೆಯುತ್ತದೆ. ಹೂಗಳು ಅರಳುವ/ವಿಕಸಿಸುವ ಸಮಯ ಏಪ್ರಿಲ್-ಮೇ ತಿಂಗಳುಗಳು. ಹೂವು ಬೆಳ್ಳಗೆ ಇಲ್ಲವೆ ಬಣ್ಣಗೆಟ್ಟ ಅರಿಶಿನ ಬಣ್ಣದಲ್ಲಿ ಇರುತ್ತವೆ. ಜಿಗುಟು ಪರಿಮಳ ಹೊಂದಿರುತ್ತದೆ. ಹಣ್ಣುಗಳೊಳಗೆ ಬಾದಾಮಿ ಆಕಾರದ ೨-೨.೫ ಸೆ.ಮೀ.ಪ್ರಮಾಣವುಳ್ಳ ವಿತ್ತನ ಇರುತ್ತದೆ. ಮೇ-ಆಗಸ್ಟು ತಿಂಗಳುಗಳ ಮಧ್ಯಕಾಲದಲ್ಲಿ ಕಾಯಿ ಹಣ್ಣಾಗುತ್ತದೆ. ಹಣ್ಣಿನಲ್ಲಿ ೮.೫%ರಷ್ಟು ಸಕ್ಕರೆ ಪದಾರ್ಥಗಳು, ೫.೬% ಕಚ್ಚ ನಾರಿನ ಪದಾರ್ಥವನ್ನು ಹೊಂದಿರುತ್ತದೆ. ವಿತ್ತನವು ಕಪ್ಪಾಗಿ, ೧.೮-೨.೦ಸೆಂ.ಮೀ.ಉದ್ದವಾಗಿ ಇರುತ್ತದೆ. ವಿತ್ತನ ಹೊಳಗಿನ ಬೀಜ/ಕಾಳು(kernel)ಬೆಳ್ಳಗೆ ಮೂತ್ರ ಪಿಂಡಾಕಾರದಲ್ಲಿರುತ್ತದೆ. ಹಣ್ಣಿನಲ್ಲಿ ವಿತ್ತನ ೨೦% ಇರುತ್ತದೆ. ವಿತ್ತನದಲ್ಲಿ ಎಣ್ಣೆ ೪೨-೪೭%, ತೊಗಟೆ ತೆಗೆದ ಬೀಜ(kernel)ದಲ್ಲಿ ಎಣ್ಣೆ ೬೧%ವರೆಗೆ ಇರುತ್ತದೆ, ಮತ್ತು ಪ್ರೊಟಿನ್ ವಿತ್ತನದಲ್ಲಿ ೧೮% ತನಕ ಲಭ್ಯವಾಗುತ್ತದೆ. ಭಾರತದಲ್ಲಿ ೫ ಸಾವಿರ ಟನ್ನುಗಳ ಪಲ್ವಾರ ವಿತ್ತನವನ್ನು ಶೇಖರಣಮಾಡುವ ಅವಕಾಶವಿದೆ.

ಎಣ್ಣೆ ಉತ್ಪಾದನೆ

[ಬದಲಾಯಿಸಿ]

ಫಲ್ವಾರ ವಿತ್ತನವನ್ನು ನೇರವಾಗಿ ಕ್ರಷ್(crush)ಮಾಡಿ, ಇಲ್ಲವೆ ವಿತ್ತನದ ಮೇಲಿದ್ದ ಹೊಟ್ಟನ್ನು ತೆಗೆದ ಮೇಲೆ ಎಕ್ಸುಪೆಲ್ಲರುಗಳಲ್ಲಿ ಕ್ರಷ್(crush)ಮಾಡಿ ಎಣ್ಣೆಯನ್ನು ತೆಗೆಯಲಾಗುತ್ತದೆ. ಗ್ರಾಮದಲ್ಲಿ ಇರುವ ಗಾಣದಿಂದಲೂ ಎಣ್ಣೆಯನ್ನು ತೆಗೆಯಬಹುದು. ಆದರೆ ಹಿಂಡಿಯಲ್ಲಿ ಹೆಚ್ಚಿನ ಪ್ರತಿಶತದಲ್ಲಿ ಎಣ್ಣೆ ಉಳಿದಿರುತ್ತದೆ. ಎಕ್ಸುಪೆಲ್ಲರುನಿಂದ ಬಂದ ಹಿಂಡಿಯಲ್ಲಿ ೮-೧೦% ವರೆಗೆ ಎಣ್ಣೆ ಉಳಿದಿರುತ್ತದೆ. ಹಿಂಡಿಯಲ್ಲಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ತೆಗೆಯುತ್ತಾರೆ.

ಎಣ್ಣೆಯ ಗುಣ ಮತ್ತು ಲಕ್ಷಣಗಳು

[ಬದಲಾಯಿಸಿ]

ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ಪ್ರತಿಶತ ಹೆಚ್ಚಾಗಿ ಇರುತ್ತದೆ .ಅದರಿಂದ ಫಲ್ವರಾ ಎಣ್ಣೆಯನ್ನು ಫಲ್ವರಾ ಬೆಣ್ಣೆ/ಬಟ್ಟರು(phulwara Butter)ಎಂದು ಕರೆಯುತ್ತಾರೆ. ಇದು ತುಪ್ಪ/ನೆಯ್ ತರಹ ಇರುತ್ತದೆ. ಎಣ್ಣೆಯನ್ನು ಹೆಚ್ಚುಕಾಲ ದಾಸ್ತಾನು ಮಾಡಿದರೂ, ಹಾಳಾಗುವುದಿಲ್ಲ. ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳಾದ ಪಾಮಿಟಿಕ್ ೫೫-೫೬%ವರೆಗೆ, ಮತ್ತು ಸ್ಟಿಯರಿಕ್ ಆಮ್ಲ ೩-೬% ಇರುತ್ತವೆ. ಅಸಂತೃಪ್ತ ಕೊಬ್ಬಿನ ಆಮ್ಲ, ಒಲಿಕ್ ಆಮ್ಲ ೩೫-೩೬.೦% ತನಕ, ಲಿನೊಲಿಕಾಮ್ಲ ೩-೬.೦%ವರೆಗೆ ಇರುತ್ತವೆ.

ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣಾ ಪಟ್ಟಿ[][]

ಕೊಬ್ಬಿನ ಆಮ್ಲ ಶೇಕಡ
ಪಾಮಿಟಿಕ್ ಆಮ್ಲ(C16:0) 55.6
ಸ್ಟಿಯರಿಕ್ ಆಮ್ಲ(C18:0) 5.2
ಒಲಿಕ್ ಆಮ್ಲ(C18:1) 36.0
ಲಿನೊಲಿಕ್ ಆಮ್ಲ((C18:2) 3.3

ಎಣ್ಣೆಯ ಭೌತಿಕ ಧರ್ಮಗಳು[]

ಭೌತಿಕ ಲಕ್ಷಣ ಮಿತಿ
ವಕ್ರಿಭವನ ಸೂಚಿಕೆ 400Cಕಡೆ 1.4552-1.4650
ಅಯೋಡಿನ್ ಬೆಲೆ 90-101 (44-48.0೦)*
ಸಪೋನೊಫಿಕೆಸನ್ ಸಂಖ್ಯೆ/ಬೆಲೆ 191-200
ಅನ್ ಸಪೋನಿಫಿಯಬುಲ್ ಪದಾರ್ಥ 1.4-5%
ಆಮ್ಲಬೆಲೆ 9.1%
ವಿಶಿಷ್ಟಗುರುತ್ವ 300Cಕಡೆ 0.856-0.862
ದ್ರವೀಭವನ ಉಷ್ಣೋಗ್ರತ 39-510C
ಟೈಟರು ಬೆಲೆ 48-520C

ನೋಡು:*=ಕೆಲವು ಎಣ್ಣೆಯಲ್ಲಿ.

ಎಣ್ಣೆಯ ಉಪಯುಕ್ತತೆಗಳು

[ಬದಲಾಯಿಸಿ]
  • ಕೋಕೋ ಬಟ್ಟರು ಪ್ರತಿಯಾಗಿ ಫುಲ್ವಾರ ಎಣ್ಣೆಯನ್ನು ಬಳಸುತ್ತಾರೆ.
  • ವನಸ್ಪತಿ ತಯಾರಿಕೆಯಲ್ಲಿಯು ಉಪಯೋಗಿಸುತ್ತಾರೆ.
  • ಇದನ್ನು ದೀಪದ ಎಣ್ಣೆಯಾಗಿ, ಸಿಹಿ ಪದಾರ್ಥ ತಯಾರಿಕೆಯಲ್ಲಿ, ಔಷಧೀಯ ಪದಾರ್ಥ ತಯಾರಿಕೆಯಲ್ಲಿ, ಸಾಬೂನ್ ತಯಾರಿಯಲ್ಲಿ, ಮತ್ತು ಕ್ಯಾಂಡಲ್(ಮೋಂಬತ್ತಿ)ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ[]

ಉಲ್ಲೇಖನ

[ಬದಲಾಯಿಸಿ]
  1. =PA1288&lpg= PA1288&dq= phulwara+tree& source=bl&ots= zpc9fm UBJZ& sig =-libsv-1fJZm6A07K9vhaKza-BU&hl= en&sa=X &ei=ucxaUtD3IsyXrgeI _ICIBQ&ved= 0CC8Q6AEwATgK# v=onepage& q=bassia%20butyracea&f=false/T.pullaiah.pageno>1288
  2. ೨.೦ ೨.೧ SEA Hand Book-2009.By The Solvent Extractors' Association of India
  3. http://link.springer.com/article/10.1007/BF02678959
  4. "ಆರ್ಕೈವ್ ನಕಲು" (PDF). Archived from the original (PDF) on 2013-11-26. Retrieved 2013-10-13.
  5. http://dnexports.trustpass.alibaba.com/product/118251409-106075761/[ಶಾಶ್ವತವಾಗಿ ಮಡಿದ ಕೊಂಡಿ] Phulwara_Butter. html