ಹಹೊಬ ಎಣ್ಣೆ
ಹಬೊಬ ಎಣ್ಣೆಯನ್ನು ಹಹೊಬ ವಿತ್ತನದಿಂದ ತೆಗೆಯಲಾಗುತ್ತದೆ. ಹಹೊಬ ಪದವನ್ನು ಜೊಜೊಬ (jojoba)ಎಂದು ಬರೆದಿದ್ದರೂ,ಕರೆಯುವುದು ಹಹೊಬ ಎಂದು. ಇದು ಸಿಮ್ಮೊಂನ್ಡಾಸೆಯೆ ಕುಟುಂಬಕ್ಕೆ ಸೇರಿದ ಮರ. ಈ ಮರದ ವೃಕ್ಷ ಶಾಸ್ತ್ರ ಹೆಸರು ಸಿಮ್ಮೊಂಡಸಿ ಚಿನ್ನೆಸಿಸ್ (simmondasia chenensis). ಈ ಮರದ ಮೂಲ/ಹುಟ್ಟು ಸ್ಥಾವರ ಮೆಕ್ಸಿಕೊದಲ್ಲಿನ ಸೊರನ್ ಮರಳು ಗಾಡು [೧]. ಈ ಮರದ ವಿತ್ತನದಲ್ಲಿ ಇದ್ದ ಎಣ್ಣೆಯನ್ನು ಹಹೊಬ ಮೇಣ(wax)ಎಂದು ವ್ಯವಹರಿಸುತ್ತಾರೆ. ಏಕೆಂದರೆ ಉಳಿದ ಸಸ್ಯ ಬೀಜಗಳ ಎಣ್ಣೆಯಲ್ಲಿ ಇರುವ ಕೊಬ್ಬಿನ ಆಮ್ಲಗಳಿಗಿಂತ ಭಿನ್ನವಾದ ಆಮ್ಲಗಳು ಜೊಜೊಬ ಎಣ್ಣೆಯಲ್ಲಿ ಇವೆ. ಈ ಕೊಬ್ಬಿನ ಆಮ್ಲಗಳನ್ನು ಹೈಡ್ರೋಜನೇಶನ್(hydrogenation) ಮಾಡಿದರೆ ಒಂದು ತರಹದ ಮೇಣ(wax)ಉತ್ಪನ್ನ ವಾಗುತ್ತದೆ.
ಭಾರತ ದೇಶದಲ್ಲಿ ಗುಜರಾತ, ಹರಿಯಾಣ, ರಾಜಸ್ಥಾನ, ಉತ್ತರಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು,ಮತ್ತು ಕರ್ನಾಟಕರಾಜ್ಯಗಳು ಹಹೊಬ ಸಾಗುವಳಿಗೆ ಅನುಕೂಲವಾದ ರಾಜ್ಯಗಳು. ಮುಖ್ಯವಾಗಿ ರಾಜಸ್ತಾನ್, ಗುಜರಾತ್ ಗಳ ಕಚ್ ಪ್ರಾಂತ್ಯಗಳು ತುಂಬಾ ಅನುಕೂಲವಾಗಿವೆ. ಕ್ರಿ.ಶ.೧೯೬೦ ಕಾಲದಲ್ಲಿ IARI(Indian Arid region institute)ಯವರಿಂದ ಭಾರತ ದೇಶಕ್ಕೆ ಕರೆತಂದು, ಅದನ್ನು ಅಭಿವೃದ್ದಿ ಮಾಡಿದ್ದಾರೆ. IARI ಹೆಸರನ್ನು NBPGR(National burea of plant genetic resources) ಎಂದು ಬದಲಾಯಿಸಿದರು. ಈ ಸಂಸ್ಥೆಯ ಲಕ್ಷ್ಯ,/ಆಶಯ ನೂತನ ಉತ್ತಮ ಸಂಕರ ತಳಿಗಳನ್ನು ಅಭಿವೃದ್ಧಿ ಗೊಳಿಸುವುದು, ಸಾಗುವಳಿಗೆ ಅನುಕೂಲವಾದ, ಯೋಗ್ಯ ವಾದ ನೆಲಗಳನ್ನು ಕಂಡು ಹಿಡಿಯುವುದು. ವ್ಯವಸಾಯಗಾರರಿಗೆ ಸಾಗುವಳಿ ಬಗ್ಗೆ ಸಲಹೆ ಕೊಟ್ಟು, ಮಾರ್ಗದರ್ಶನ ತೋರಿಸುವುದು. ಸದ್ಯಕ್ಕೆ ರಾಜಸ್ತಾನ್ ಮರಳುಗಾಡು/ಎಡಾರಿ (desert) ಯಲ್ಲಿ ಈ ಮರಗಳನ್ನು ಹೆಚ್ಚಾಗಿ ಬೆಳೆಸಿ ಮರಳುಗಾಡು ವಿಸ್ತಿರ್ಣವನ್ನು ತಡೆ ಹಿಡಿಯಲಾಗುವುದು.
ಮರ
[ಬದಲಾಯಿಸಿ]ಇದು ಮರಳುಗಾಡಿನ(Desert) ಪೊದೆ ತರಹದ ಮರ. ಮಧ್ಯಮ ಗಾತ್ರದ ಎತ್ತರ ಬೆಳೆಯುವ ಮರ. ಸಾಧಾರಣವಾಗಿ ೩-೪ ಮೀಟರುಗಳ ಎತ್ತರ ಬೆಳೆದರೂ, ಒಮ್ಮೊಮ್ಮೆ ೬.ಮೀಟರುಗಳಷ್ಟು ಎತ್ತರ ಬೆಳೆಯುತ್ತದೆ. ಒಳ್ಳೆ ಹಂದಲ ಹೊಂದಿರುತ್ತದೆ. ಇದು ಎಲೆ ಉದುರುವ ಮರವಾಗಿದ್ದರೂ ಒಮ್ಮೆಮ್ಮೆ ಸದಾ ಹಸಿರಾಗಿ ಪೂದೆ ತರಹ ಇರುತ್ತದೆ. ಇವು ಏಕಲಿಂಗ ವೃಕ್ಷಗಳಾಗಿ ಬೆಳೆಯುತ್ತವೆ. ಗಂಡು, ಹೆಣ್ಣು ಮರಗಳು ಬೇರೆ ಬೇರೆಯಾಗಿ ಬೆಳೆಯುತ್ತವೆ.
ವಿತ್ತನ
[ಬದಲಾಯಿಸಿ]ಮಾಗಿದ ವಿತ್ತನ ಗಟ್ಟಿಯಾಗಿ ಅಂಡಾಕಾರವಾಗಿರುತ್ತದೆ. ವಿತ್ತನದ ಬಣ್ಣ ಮುದುರು ಕಂದು. ವಿತ್ತನದಲ್ಲಿ ೫೦-೫೪% ವರೆಗೆ ಎಣ್ಣೆ /ಮೇಣ ಇರುತ್ತದೆ. ವಿತ್ತನ ಉತ್ಪತ್ತಿ ಒಂದು ಹೆಕ್ಟೇರುಗೆ ೧-೧.೫ ಟನ್ನುಗಳು ಬರುತ್ತದೆ . ವಿತ್ತನ ಇಳುವರಿ ಮರಕ್ಕೆ ೪ ವರ್ಷ ಆದ ಮೇಲೆ ಪ್ರಾರಂಭವಾಗುತ್ತದೆ. ೪ನೇ ಸಂವತ್ಸರದಲ್ಲಿ ೫೦ಗ್ರಾಂ.ಗಳ ವಿತ್ತನ ಒಂದು ಮರಕ್ಕೆ ಬರುತ್ತದೆ, ಸಂವತ್ಸರ ದಿಂದ ಸಂವತ್ಸರಕ್ಕೆ ಇಳುವರಿ ಹೆಚ್ಚಾಗುತ್ತಾ ಹೋಗುತ್ತದೆ. ೧೦ನೆ ಸಂವತ್ಸರಕ್ಕೆ ೩-೫ಕಿಲೋ ವಿತ್ತನ ಒಂದು ಮರದಲ್ಲಿ ಉತ್ಪನ್ನವಾಗುತ್ತದೆ. ವಿತ್ತನದಲ್ಲಿ ಇದ್ದ ಕೊಬ್ಬಿನ ಆಮ್ಲಗಳು ಇತರ ಎಣ್ಣೆಗಳಿಗಿಂತ ಭಿನ್ನವಾಗಿರುವುದರಿಂದ ಹಹೊಬ ಎಣ್ಣೆಯನ್ನು ಮೇಣ/ಮೈಣ ಎಂದು ಕರೆಯುತ್ತಾರೆ. ವಿತ್ತನದಲ್ಲಿ ೩೭.೦% ವರೆಗೆ ಪ್ರೊಟೀನ್ ಇರುತ್ತದೆ. ವಿತ್ತನದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪಿಂಡಿ ಪದಾರ್ಥಗಳು/ಕಾರ್ಬೊಹೈಡ್ರೇಟು ಮತ್ತು ನಾರು ಪದಾರ್ಥಗಳು ಇರುತ್ತವೆ .
ಎಣ್ಣೆ
[ಬದಲಾಯಿಸಿ]ವಿತ್ತನವನ್ನು ಎಕ್ಸುಪೆಲ್ಲರು ಎಣ್ಣೆಯಂತ್ರಗಳಲ್ಲಿ ಕ್ರಷಿಂಗ್ ಮಾಡಿ ಎಣ್ಣೆಯನ್ನು ತೆಗೆಯುತ್ತಾರೆ. ಸಾಮಾನ್ಯವಾಗಿ ಸಸ್ಯಗಳ ವಿತ್ತನದ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳಾದ ಒಲಿಕ್, ಲಿನಿಲಿಕ್ ಮತ್ತು ಲಿನೊಲೆನಿಕ್ ಅಮ್ಲಗಳಿರುತ್ತವೆ. ಈ ಆಮ್ಲಗಳಲ್ಲಿ ೧೮ ಕಾರ್ಬನ್ ಗಳು ಇರುತ್ತವೆ. ಆದರೆ ಹಹೊಬ ಎಣ್ಣೆಯಲ್ಲಿ ಇದಕ್ಕೆ ಭಿನ್ನವಾಗಿ ೨೦-೨೨ ಕಾರ್ಬನ್ ಗಳಿರುವ ,ದೀರ್ಘ ಶೃಂಖಲಾಯುತ ಆಮ್ಲಗಳಿವೆ .ಅದರಿಂದ ಈ ಎಣ್ಣೆಯ ಭೌತಿಕ, ರಸಾಯನಿಕ ಧರ್ಮಗಳು ಉಳಿದ ಸಸ್ಯ ಎಣ್ಣೆಗಳಿಗಿಂತ ವ್ಯತ್ಯಾಸವನ್ನು ತೊರಿಸುತ್ತವೆ. ಹಹೊಬ ಎಣ್ಣೆಗೂ, ತಿಮಿಂಗಿಲ ಎಣ್ಣೆಗೂ ಸಾದೃಶ್ಯವಿದೆ. ಎರಡು ಎಣ್ಣೆಗಳ ಲಕ್ಷಣಗಳು ಹತ್ತಿರ ಹತ್ತಿರವಾಗಿರುತ್ತವೆ. ಅದರಿಂದ ತಿಮಿಂಗಲ ಎಣ್ಣೆ/ತೆನಿಯೆಣ್ಣೆಗೆ ಔಷಧ ಗುಣಗಳಿವೆ. ಹಹೊಬ ಎಣ್ಣೆಯಿಂದ ಪ್ರಯೋಗತ್ಮಕವಾಗಿ ಜೈವಿಕ ಡಿಸೇಲ್(bio diesel)ಉತ್ಪನ್ನ ಮಾಡಿದ್ದಾರೆ.
ಎಣ್ಣೆಯ ಭೌತಿಕ ಲಕ್ಷಗಳ ಪಟ್ಟಿ[೩][೨]
ಭೌತಿಕ ಲಕ್ಷಣ | ಮಿತಿ |
ವಕ್ರಿಭವನ ಸೂಚಕ 250Cಕಡೆ | 1.4648-1.4650 |
ಅಯೋಡಿನ್ ಮೌಲ್ಯ | 82-89 |
ಸಪೋನಿಫಿಕೆಸನ್ ಮೌಲ್ಯ/ಸಂಖ್ಯೆ | 92-167 |
ಅನ್ ಸಪೋನಿಫಿಯಬುಲ್ ಪದಾರ್ಥ | 37-49 |
ಅಸೈಟೆಲ್ ಮೌಲ್ಯ | 6.8 |
R-M ಮೌಲ್ಯ | 0.7 |
ಸಾಂದ್ರತೆ 250Cಕಡೆ | 0.8642-0.8990 |
ದ್ರವೀಭವನ ಉಷ್ಣೋಗ್ರತೆ (0C) | 11.2-11.8 |
ಫೈರ್ ಪಾಯಿಂಟ್ | 3300C |
ಘನೀಭವನ ಉಷ್ಣೋಗ್ರತೆ | 6.70C |
polenskey number | 0.31 |
ಸಂತೃಪ್ತ ಆಮ್ಲಗಳು | 1.5-1.7 |
ಸಾಧಾರಣವಾಗಿ ಸಸ್ಯ ಬೀಜದ ಎಣ್ಣೆಗಳಲ್ಲಿ ೧೦-೫೦% ತನಕ ಸಂತೃಪ್ತ ಕೊಬ್ಬಿನ ಆಮ್ಲಗಳು ಇರುತ್ತವೆ. ೧೮ ಕಾರ್ಬನ್ ಗಳಿದ್ದ ಏಕ ದ್ವಿಬಂಧ, ಮತ್ತು ಬಹುಳ ದ್ವಿಬಂಧಗಳು ಇರುವಂತಹ ಕೊಬ್ಬಿನ ಆಮ್ಲಗಳು ಇವೆ. ಆದರೆ ಹಹೊಬದ ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲಗಳು ಇಲ್ಲ. ಎಣ್ಣೆಯಲ್ಲಿ ಇಪ್ಪತ್ತು ಮತ್ತು ಇಪ್ಪತ್ತೆರಡು(೨೦&೨೨)ಕಾರ್ಬನ್ ಗಳು ಇರುವ ,ಏಕ ದ್ವಿಬಂಧ ಅಸಂತೃಪ್ತ ಕೊಬ್ಬಿನ ಆಮ್ಲಗಳು ಇರುತ್ತವೆ .ಹಹೊಬ ಎಣ್ಣೆಯನ್ನು ಹೈಡ್ರೋಜನೆಸನ್ ಮಾಡಿ ಹಹೊಬ ಮೇಣವನ್ನು ಉತ್ಪನ್ನ ಮಾಡುತ್ತಾರೆ. ಹಹೊಬ ಎಣ್ಣೆಯಿಂದ ಮಾಡಿದ ಮೇಣ (wax) ದ್ರವೀಭವನ ಉಷ್ಣೊಗ್ರ್ತತ ೭೦೦Cಯಿದ್ದು ಕಂಡೆಲಿಲ್ಲ (candelilla) ಮೇಣ, (wax) ತರಹ ಗಟ್ಟಿಯಾಗಿ ಇರುತ್ತದೆ. .
ಎಣ್ಣೆಯಲ್ಲಿರುವ ಆಮ್ಲಗಳ ಪಟ್ಟಿ[೨]
ಕೊಬ್ಬಿನ ಆಮ್ಲ | ಶೇಕಡ |
ಪಾಮೀಟೋಲಿಕ್ ಆಮ್ಲ(C16:1) | 0.24 |
ಒಲಿಕ್ ಆಮ್ಲ(C18:1) | 0.66 |
11-Eicosenoic Acid(C20:1) | 30.3 |
Docosenoic Acid(C22:1) | 14.2 |
Docosdienoic acid(C22:2) | 33.7} |
9-Godoelic Acid(C20:1) | 14.6 |
ಎಣ್ಣೆಯ ಉಪಯೋಗಗಳು
[ಬದಲಾಯಿಸಿ]- ತಿಮಿ ಎಣ್ಣೆಗೆ ಬದಲಾಗಿ ಉಪಯೋಗಿಸುತ್ತಾರೆ[೪].
- ಜೈವಿಕ ಡಿಸೇಲನ್ನು ತಯಾರಿಸುತ್ತಾರೆ [೫].
- ಕಾಸ್ಮಟಿಕ್ಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ[೬].
- ಆಡೆಸ್ಸಿವುಗಳು(adhesives)ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
- ಕೀಲೆಣ್ಣೆ(lubricant)ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
- ಔಷಧ ಮದ್ದುಗಳ ತಯಾರಿಕೆಯಲ್ಲಿ ಬಳಸುತ್ತಾರೆ..
ಉಲ್ಲೇಖನ
[ಬದಲಾಯಿಸಿ]- ↑ http://www.hort.purdue.edu/newcrop/afcm/jojoba.html.D.J. Undersander 1, E.A. Oelke2, A.R. Kaminski1, J.D. Doll1, D.H. Putnam2, S.M. Combs1, and C.V. Hanson2
- ↑ ೨.೦ ೨.೧ ೨.೨ SEA Hand book-2009,by The Solvent Extractors' Association of India.Pageno. 931&932
- ↑ http://books.google.be/books?id=b8t59-2bLUMC&pg=PA24&dq=jojoba+oil+flash+point&hl=en&sa=X&ei=86DAUIvqGo2yhAf86oGgBQ&redir_esc=y#v=onepage&q=jojoba%20oil%20flash%20point&f=false.%7CThe Chemistry and Technology of Jojoba Oil By Jaime Wisniak.page,No.25
- ↑ D.J. Undersander, E.A. Oelke, A.R. Kaminski, J.D. Doll, D.H. Putnam, S.M. Combs, and C.V. Hanson (1990). "Jojoba". Alternative Field Crops Manual.
{{cite journal}}
: CS1 maint: multiple names: authors list (link) - ↑ "Jojoba oil could fuel cars and trucks". New Scientist. March 6, 2003. Retrieved 2006-10-13.
- ↑ "Jojoba Oil for Nails: Natural Care for Your Perfect Manicure". Body (personal) care. Oily Oily. Retrieved 29 August 2013.