ವಿಷಯಕ್ಕೆ ಹೋಗು

ಕರ್ಬೂಜಬೀಜ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿಡ/ಬಳ್ಳಿ
ಹಣ್ಣು
ಬೀಜಗಳು

ಕರ್ಬೂಜ ಬೀಜ ಎಣ್ಣೆ

[ಬದಲಾಯಿಸಿ]

ಕರ್ಬೂಜ ಗಿಡ ಕುಕುರ್ಬಿಟೆಸಿ ಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಸಸ್ಯ ಶಾಸ್ತ್ರದ ಹೆಸರು ಕುಕುಮಿಸ್ ಮೆಲೊ. ಲಿನ್ನೆ(cucumis melo .linn). ಇದು ನಿಟಾರಾಗಿ ಬೆಳೆಯುವ ಗಿಡ ಅಲ್ಲ. ಇದು ವ್ಯಾಪಕವಾಗಿ ಬೆಳೆಯಲಾಗುವ ಸಸ್ಯವಾಗಿದೆ. ಬಳ್ಳಿಯ ತರಹ, (ತೆವಳುವ ಹಾಗು ಜೋಲುಬೀಳುವ) ಹೂ ಬಿಡುವ ಸಸ್ಯ. ಸೌತೆಕಾಯಿ ಸಸ್ಯ, ಮತ್ತು ಕುಂಬಳದ ಗಿಡಗಳು ಇದೇ ಸಸ್ಯ ಕುಟುಂಬಕ್ಕೆ ಸೇರಿದ ಗಿಡಗಳು.[೧] ಈಸಸ್ಯದ ಮೂಲ ಜನ್ಮಸ್ಥಾನ ಪೆರ್ಸಿಯಾ(ಇರಾನ್)ದ ಸುತ್ತಮುತ್ತಲ ಪಶ್ಚಿಮ ಮತ್ತು ಪೂರ್ವಭಾಗಗಳು ಎಂದು ತಿಳಿದು ಬಂದಿದೆ.ಈಜಿಪ್ಟ್ನಲ್ಲಿದ್ದ ಕ್ರಿ.ಪೂ.೨೪೦೦ ಕಾಲದ ವರ್ಣಚಿತ್ರದಲ್ಲಿ ಕರ್ಬೂಜ ಹೂವನ್ನು ಚಿತ್ರಿಸಲಾಗಿದೆ. ಪೆರ್ಸಿಯಾನಿಂದ ಇದು ಕಾಶ್ಮೀರ, ಭಾರತಕ್ಕೆ ಬಂದಿದೆ. [೨]

ಭಾರತೀಯ ಭಾಷೆಗಳಲ್ಲಿ ಕರ್ಬೂಜದ ಸಾಧಾರಣ ಹೆಸರು[೩]

[ಬದಲಾಯಿಸಿ]

ಹಣ್ಣು-ಬೀಜ

[ಬದಲಾಯಿಸಿ]

ಹಣ್ಣು ಗೋಲಾಕಾರವಾಗಿರುತ್ತದೆ. ಹಣ್ಣಿನ ಮೇಲಿನ ತೊಗಟೆ ಒರಟಾಗಿರುತ್ತದೆ. ಹಣ್ಣು ಸಿಹಿಯಾಗಿರುತ್ತದೆ. ಇದರ ಬೀಜ ಸೌತೆಕಾಯಿ ತರಹ ಇದ್ದು, ಅದಕ್ಕಿಂತ ದೊಡ್ದ ಪ್ರಮಾಣ ದಲ್ಲಿರುತ್ತವೆ. ತಿರುಳು ಪಿಂಕು ಬಣ್ಣದಲ್ಲಿದ್ದು ಸಿಹಿಯಾಗಿರುತ್ತದೆ. ಹಣ್ಣಿನ ಒಳಗೆ ಅನೇಕ ವಿತ್ತನಗಳಿರುತ್ತವೆ. ಬೀಜಗಳು ಅಂಡಾಕಾರವಾಗಿ, ಚಪ್ಪಟೆಯಾಗಿ, ಬೂದಿ ಬಣ್ಣದಲ್ಲಿರುತ್ತವೆ. ಬೀಜದಲ್ಲಿ ೩೩.೦% ಎಣ್ಣೆ ಇರುತ್ತದೆ . ಬೀಜಗಳನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿ, ಮತ್ತು ಸಿಹಿ ಉಣಿಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಎಣ್ಣೆ ಉತ್ಪಾದನೆ

[ಬದಲಾಯಿಸಿ]

ಕರ್ಬೂಜ ಬೀಜದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಎನ್ನುವ ಎಣ್ಣೆಯಂತ್ರಗಳ ಸಹಾಯದಿಂದ ತೆಗೆಯುತ್ತಾರೆ. ಹಿಂಡಿಯಲ್ಲಿ ಉಳಿದಿರುವ (೧೦-೧೨%)ಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್ನಲ್ಲಿ ನಡಿಸಿ/ತಿರುಗಿಸಿ ಎಣ್ಣೆಯನ್ನು ತೆಗೆಯುತ್ತಾರೆ.

ಎಣ್ಣೆ ಭೌತಿಕ ಗುಣಗಳು-ಎಣ್ಣೆಯಲ್ಲಿರುವ ಕೊಬ್ಬುಆಮ್ಲಗಳು[೩]

[ಬದಲಾಯಿಸಿ]

ಎಣ್ಣೆಯ ಭೌತಿಕ ಗುಣಗಳು ಮತ್ತು ಎಣ್ಣೆಯಲ್ಲಿರುವ ಕೊಬ್ಬು ಆಮ್ಲ ವಿವರಗಳನ್ನು ಕೆಳಗಿನ ಪಟ್ಟಿಗಳಯಲ್ಲಿ ಕೊಡಲಾಗಿದೆ. ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦-೧೨% ವರೆಗೆ ಇರುತ್ತವೆ. ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ೮೮-೯೦% ವರೆಗೆ ಇರುತ್ತವೆ .ಇದರಲ್ಲಿ ೨೦ ಕಾರ್ಬನುಗಳಿದ್ದ ಅರಚಿಡಿಕ್ ಪರ್ಯಾಪ್ತ ಕೊಬ್ಬಿನ ಆಮ್ಲವು ಕಡಿಮೆ ಶೇಕಡದಲ್ಲಿ ಕಾಣಿಸುತ್ತದೆ(೦.೮-೧.೦). ಎಣ್ಣೆಯಲ್ಲಿ ಇರುವ ಮಿರಿಸ್ಟಿಕ್, ಪಾಮಿಟಿಕ್, ಸ್ಟಿಯರಿಕ್ ಆಮ್ಲಗಳು ಪರ್ಯಾಪ್ತ ಆಮ್ಲಗಳಾಗಿವೆ. ಎಣ್ಣೆಯಲ್ಲಿ ಒಲಿಕ್ ಆಮ್ಲ ಮತ್ತು ಲಿನೊಲಿಕ್ ಎನ್ನುವ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ಇರುತ್ತವೆ.

ಕರ್ಬೂಜ ಎಣ್ಣೆ ಭೌತಿಕ ಲಕ್ಷಣಗಳು

ಭೌತಿಕ ಲಕ್ಷಣ ಮಿತಿ
ವಕ್ರೀಭವನ ಸೂಚಿಕೆ 400Cಕಡೆ 1.468-1.487
ಅಯೋಡಿನ್ ಮೌಲ್ಯ 120-128
ಸಪೋನಿಫಿಕೆಸನು ಮೌಲ್ಯ/ಸಂಖ್ಯೆ 188-196
ಅನ್ ಸಪೋನಿಫಿಯಬುಲ್ ಪದಾರ್ಥ 1.0% గరిష్టం
ತೇವ 0.25% గరిష్టం
ಬಣ್ಣ 1"సెల్,(y+5R) 5 ಯೊನಿಟ್(ರಿಫೈಂಡ್)
ವಿಶಿಷ್ಟ ಗುರುತ್ವ300/300C 0.917-0.918

ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು

ಕೊಬ್ಬಿನ ಆಮ್ಲ ಶೇಕಡ
ಮಿರಿಸ್ಟಿಕ್ ಆಮ್ಲ(C14:0) 1-2
ಪಾಮಿಟಿಕ್ ಆಮ್ಲ(C16:0) 3-7
ಸ್ಟಿಯರಿಕ್ ಆಮ್ಲ(C18:0) 2-5
ಒಲಿಕ್ ಆಮ್ಲ(C18:1) 32-42
లినొలిక్‌ ఆమ్లం(C18:2) 45-55
ಅರಚಿಡಿಕ್ ಆಮ್ಲ(C20:0) 0-9

ಉಲ್ಲೇಖನಗಳು

[ಬದಲಾಯಿಸಿ]
  1. http://www.botanical-online Archived 2013-07-26 ವೇಬ್ಯಾಕ್ ಮೆಷಿನ್ ನಲ್ಲಿ.. com/ english/ watermelon. htm
  2. http://aggie-horticulture.tamu.edu/archives/parsons/publications/vegetabletravelers/muskmelon.html
  3. ೩.೦ ೩.೧ SEA HandBook-2009.by Solvent Extractors'Association of India