ಬೇವಿನ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇವಿನ ಗಿಡ
ಬೇವಿನ ಹೂವು
ಬೇವಿನ ಹಳ್ಳು
ಬೇವಿನ ಬೀಜ
ಬೇವಿನ ಎಣ್ಣೆ

ಬೇವಿನ ಎಣ್ಣೆ ಯನ್ನು ಬೇವಿನ ಗಿಡದ ಬೀಜದಿಂದ ತೆಗೆಯುತ್ತಾರೆ. ಬೇವು ಗಿಡ ಮೆಲಿಯೆಸಿ/ಮಾಲ್ವೇಸಿ ಸಸ್ಯ ಕುಟುಂಬಕ್ಕೆ ಸೇರಿದ ಮರ. ಇದರ ಸಸ್ಯ ಶಾಸ್ತೀಯ ಹೆಸರು 'ಅಜಾಡಿರಿಕ್ಟ ಇಂಡಿಕ (Azadirichta Indica). ಬೇವು (ಒಳ್ಳೆ ಬೇವು) ಭಾರತ ಉಪಖಂಡದ ಮೂಲ ವಾಸಿ. ಇದು ಭಾರತದ ಜನ ಜೀವನದಲ್ಲಿ ಹಾಸು ಹೊಕ್ಕಾದ ಮರಗಳಲ್ಲಿ ಒಂದು. ತೀವ್ರ ತರದ ಬರಗಾಲದಲ್ಲಿಯೂ ಬದುಕಿ, ಜನೋಪಯೋಗಿ ಎನಿಸಿದ ಮರ ಇದಾಗಿದೆ. ಬೇವಿನ ಗಿಡವನ್ನು ತೆಲುಗು ಭಾಷೆಯಲ್ಲಿ 'ವೇಪ ' ಎಂದು ಕರೆಯುತ್ತಾರೆ. ಆಂಗ್ಲ ಭಾಷೆಯಲ್ಲಿ ಇದನ್ನು 'ನೀಮ್' (neem) ಎನ್ನುತ್ತಾರೆ. ಬೇವಿನ ಎಣ್ಣೆಯು ಆಹಾರವಾಗಿ ಉಪಯೋಗಿಸುವುದಕ್ಕೆ ಯೋಗ್ಯವಲ್ಲ. ಬೇವಿನ ಎಣ್ಣೆಯಲ್ಲಿ ಇರುವ ಅಜಾಡಿರಿಕ್ಟನ್ ಯನ್ನು ಟ್ರೈ ಟೆರ್ಪಎಂಟ್ ಕಾರಣವಾಗಿ ಬೇವಿನ ಎಣ್ಣೆಯನ್ನು ಅಡಿಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಆಗುವುದಿಲ್ಲ. ಬೇವಿನ ಗಿಡ, ಎಲೆ, ತೊಗಟೆ, ಬೀಜ ಎಲ್ಲವೂ ಔಷಧ ಗುಣಗಳನ್ನು ಹೊಂದಿವೆ. ಬರಗಾಲದ ಸಮಯದಲ್ಲಿ ಎಲೆ ಉದುರುತ್ತದೆ. ದಟ್ಟವಾದ ಹಂದರ ತೊಗಟೆ ಸಾಧಾರಣ ಮಂದವಾಗಿ, ಕರಿಬೂದು ಬಣ್ಣವಾಗಿರುತ್ತದೆ. ದಾರ(ನೂಲು)ವು ಕೆಂಪು ಕಂದು ಬಣ್ಣವಿದ್ದು ಸೀಳಿಕೆಗಳಿರುತ್ತವೆ. ಇದು ಮಧ್ಯಮ ಪ್ರಮಾಣದ ನಿತ್ಯಹರಿದ್ವರ್ಣದ ಮರ. ಇದರ ದಾರವು ಬಹುಪಯೋಗಿ, ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರನ್ನು ಪಡೆದಿದೆ. ಹೂಗಳು ಸಣ್ಣದಾಗಿದ್ದು ಬಿಳಿಯ ಬಣ್ಣ ಇರುತ್ತವೆ. ಒಂದು ಗಿಡದಿಂದ ಒಂದು ಬಾರಿಗೆ ೫೦ ರಿಂದ ೬೦ ಕೇ ಜಿ. ಹಣ್ಣು/ಫಲ ಬರುತ್ತದೆ. ಗಿಡಕ್ಕೆ ೩ ಸಂವತ್ಸರ ಬಂದ ಕೊಡಲೇ ಹೂವು ಬರುತ್ತದೆ. ಹಣ್ಣು ಬರುವುದು ೭ ಸಂವತ್ಸರವಾದ ಮೇಲೆ . ಜನವರಿಯಿಂದ ಆರಂಭವಾಗಿ ಏಪ್ರಿಲ್ ತಿಂಗಳವರೆಗೆ ಹೂವು ಬಿಡುತ್ತದೆ. ಫಸಲು ಮೇ ಆಗಸ್ಟ್ ತಿಂಗಳಲ್ಲಿ ಆಗುತ್ತದೆ. ಹಣ್ಣಿನಲ್ಲಿ ಬೀಜದ ಶಾತ ೪:೧ ಇರುತ್ತದೆ. ಒಣಗಿಸಿದ ಹಣ್ಣಿನೊಳಗೆ ಎಣ್ಣೆ ೨೦-೨೨% ಇರುತ್ತದೆ. ಒಣಗಿದ ಹಣ್ಣಿನಲ್ಲಿ ಬೀಜ ೨೩-೨೫%, ಕಾಳು(kernel) ೪೫% ಇರುತ್ತವೆ. ಬೀಜದ ಸಿಪ್ಪೆ (Shell/hull) ೪.೫%,ಕುಸುರ (pulp) 40%ಇರುತ್ತವೆ. ಬೇವಿನ ಎಣ್ಣೆಯಲ್ಲಿ ಟ್ರಿಟೆರಿಪೆಂಟೆನ್ ೩೨-೨೫೦೦ppm ಇರುತ್ತದೆ. ಹಣ್ಣು ೧-೨ ಸೆಂ.ಮೀ ಉದ್ದ ಇರುತ್ತದೆ. ಕಾಯಿ ಹಸಿರು ಬಣ್ಣದಲ್ಲಿದ್ದು, ಮಾಗಿದ ಮೇಲೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಹಸಿರು ಕಾಯಿ ಕಹಿಯಾಗಿರುತ್ತದೆ. ಹಣ್ಣು ಆದ ಮೇಲೆ ಕಹಿ ಮತ್ತು ಸಿಹಿ ಕೂಡಿದ ಒಗರು ರುಚಿ ಬರುತ್ತದೆ.

ಬೇವಿನ ಬೀಜದಿಂದ ಎಣ್ಣೆ ತೆಗೆಯುವ ವಿಧಾನ[ಬದಲಾಯಿಸಿ]

ಶೇಖರಣೆ ಮಾಡಿದ ಬೇವಿನ ಹಣ್ಣುಗಳನ್ನು ವೊದಲು ಚೆನ್ನಾಗಿ ಒಣಗಿಸಬೇಕು. ಹಣ್ಣುಗಳ ಜೊತೆ ಬಂದ ಹಣ್ಣನ್ನು ತೆಗೆದು ಹಾಕಬೇಕು. ಒಣಗಿದ ಬೇವಿನ ಬೀಜವನ್ನು ಹೈಡ್ರಾಲಿಕ್ ಪ್ರೆಸ್ (hydraulic press) ಅಥವಾ ಎಕ್ಸುಪೆಲ್ಲರು(expeller) ಯಂತ್ರಗಳಲ್ಲಿ ನಡೆಸಿ ಎಣ್ಣೆಯನ್ನು ತೆಗೆಯುವರು. ಕೆಲವೂಂದು ಸಂದರ್ಭಗಳಲ್ಲಿ ಹಣ್ಣುಗಳ ಮೇಲೆ ಇರುವ ತೊಗಲು ಮತ್ತು ಸಿಪ್ಪೆಯನ್ನು ತೆಗೆದು ಆಮೇಲೆ ಎಣ್ಣೆಯನ್ನು ತೆಗೆಯುತ್ತಾರೆ. ಎಣ್ಣೆಯನ್ನು ತೆಗೆದ ಮೇಲೆ ಹಿಂಡಿ / ಪಿಂಡಿಯಲ್ಲಿ ಇನ್ನು ೬-೮% ಎಣ್ಣೆ ಉಳಿಯುತ್ತದೆ. ಅದನ್ನು ಸಾಲ್ವೆಂಟ್ ಏಕ್ಸುಟ್ರಾಕ್ಷನು ಪ್ಲಾಂಟ್ನಲ್ಲಿ ನಡೆಸಿ ತೆಗೆಯುತ್ತಾರೆ.

ಬೇವಿನ ಎಣ್ಣೆ[ಬದಲಾಯಿಸಿ]

ಬೀಜದಿಂದ ಸಂಗ್ರಹಣೆ ಮಾಡಿರುವ ಎಣ್ಣೆ ದಟ್ಟವಾದ ಕೆಂಪು ಅಥವಾ ಬೂದು ಬಣ್ಣದಲ್ಲಿರುತ್ತದೆ. ಗಾಢ ವಾಸನೆ (strong smell) ಹೊಂದಿರುತ್ತದೆ. ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚಿನ ಅಂಶದಲ್ಲಿರುತ್ತವೆ. ಬೇವಿನ ಬೀಜದ ಎಣ್ಣೆಯಲ್ಲಿ ಮಿರಿಸ್ಟಿಕ್, ಪಾಮಿಟಿಕ್ ಮತ್ತು ಸ್ಟಿಯರಿಕ್ ಸಂತೃಪ್ತ ಕೊಬ್ಬಿನ ಆಮ್ಲಗಳು, ಒಲಿಕ್, ಲಿನೊಲಿಕ್ ಅಸಂತೃಪ್ತ ಕೊಬ್ಬಿನ ಆಮ್ಲಗಳಿರುತ್ತವೆ. ಎಣ್ಣೆಯಲ್ಲಿ ಅಜಾಡಿರಿಕ್ಟನ್ ಇರುವುದರಿಂದ, ಎಣ್ಣೆಯು ಅಡುಗೆ ಎಣ್ಣೆಯಾಗಿ ಬಳಸುವುದಕ್ಕೆ ಉಪಯುಕ್ತವಲ್ಲ.

ಬೇವಿನ ಬೀಜದ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು

ಕೊಬ್ಬಿನ ಆಮ್ಲ ಹೆಸರು ಶೇಕಡ%
ಮಿರಿಸ್ಟಿಕ್ ಆಸಿಡ್ 2.6%
ಪಾಮಿಟಿಕ್ ಆಸಿಡ್ 1 6-18%
ಸ್ಟಿಯರಿಕ್ ಆಸಿಡ್ 1 4-19%
ಒಲಿಕ್ ಆಸಿಡ್ 45-58%
ಲಿನೊಲಿಕ್ ಆಸಿಡ್ 7-15%

ಬೇವಿನ ಎಣ್ಣೆ ಭೌತಿಕ ಲಕ್ಷ್ಣಣಗಳು

ಭೌತಿಕ ಲಕ್ಷಣ ಮೇರ
ತೇವ-ಕಿಣಿ 1% వరకు
ವಕ್ರೀಭವನ ಸೂಚಿಕೆ 1.4615-1.4705/400C
ಸಾಂದ್ರತೆ 0.908-0.934/300C
ಐಯೋಡಿನ್ ಬೆಲೆ 65-80
ಸಪೋನಿಫಿಕೆಸನ್ ಬೆಲೆ 175-205
ಅನ್ಸಪೋನಿಫಿಯಬುಲ್ ಮೇಟರ್ 2%ಗರಿಷ್ಟ ವಾಗಿ
ಟೈಟರ್ 35.80C

ಬೇವಿನ ಎಣ್ಣೆಯ ಪ್ರಯೋಜನಗಳು[ಬದಲಾಯಿಸಿ]

  • ಬೇವಿನ ಎಣ್ಣೆಗೆ ಇರುವ ಔಷಧ ಗುಣಗಳ ಕಾರಣದಿಂದ, ಇದನ್ನು ಸಾಬೂನುಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ ಎಣ್ಣೆಯಿಂದ ಮಾಡಿದ ಸಾಬೂನ್ ಬುರುಗು/ನೊರೆ ಜಾಸ್ತಿ ಕೊಡುತ್ತದೆ.
  • ಬೇವಿನ ಎಣ್ಣೆ , ಸಾಬೂನು ದ್ರಾವಣದ ಜೊತೆ ನೀರನ್ನು ಮಿಶ್ರಣ ಮಾಡಿ ಸಸ್ಯಗಳ ಮೇಲೆ ಸಿಂಪಡಿಸಿದರೆ, ಸಸ್ಯಗಳಿಗೆ ಜೇಡ, ಕ್ರಿಮಿಕೀಟಗಳಿಂದ ಬರುವ ರೋಗಗಳಿಂದ ರಕ್ಷಣೆ ದೊರೆಯುತ್ತದೆ. ರಾಸಾಯನಿಕ ಮದ್ದುಗಳನ್ನು ಹೆಚ್ಚಾಗಿ ಬಳಸುವುದರಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗುತ್ತದೆ. ಬೇವಿನ ಎಣ್ಣೆ, ಸಾಬೂನು ಮಿಶ್ರಣವನ್ನು ಉಪಯೋಗ ಮಾಡುವುದರಿಂದ ತೊಂದರೆ/ಹಾನಿ ಇರುವುದಿಲ್ಲ.
  • ಎಣ್ಣೆ ತೆಗೆದ ಬೇವಿನ ಹಿಂಡಿಯನ್ನು ಗೊಬ್ಬರವಾಗಿ ಹೊಲದಲ್ಲಿ ಉಪಯೋಗಿಸುತ್ತಾರೆ. ಬೇವಿನ ಹಿಂಡಿಯಲ್ಲಿ ನತ್ರಜನಿ(nitrigen) ೫.೨-೫.೬% ), ಭಾಸ್ವರ ೧.೯%, ಮತ್ತೆ ಪೋಟಾಷಿಯಂ ೧.೫% ಇರುತ್ತವೆ. ಅದಕ್ಕೆ ಎಣ್ಣೆ ತೆಗೆದ ಬೇವಿನ ಹಿಂಡಿ ಒಳ್ಳೆ ಗೊಬ್ಬರವಾಗುತ್ತದೆ.

ಒಳಗಿನಕೊಂಡಿಗಳು[ಬದಲಾಯಿಸಿ]