ಬಾದಾಮಿ ಎಣ್ಣೆ
ಬಾದಾಮಿ ಎಣ್ಣೆ
[ಬದಲಾಯಿಸಿ]ಬಾದಾಮಿ ಎಣ್ಣೆಯನ್ನು ಬಾದಾಮಿಬೀಜದಿಂದ ತೆಗೆಯಲಾಗುತ್ತದೆ. ಬಾದಾಮಿ ಎಣ್ಣೆ ತಿನ್ನುವುದಕ್ಕೆ ಯೋಗ್ಯ. ಅಡುಗೆ ಎಣ್ಣೆಯಾಗಿ ಉಪಯೋಗಿಸಬಹುದು. ಆದರೆ ಬಾದಾಮಿ ಬೀಜವನ್ನು ಎಣ್ಣೆ ತೆಗೆಯುವುದಕ್ಕಿಂತ, ಆಹಾರಪದಾರ್ಥಗಳಲ್ಲಿ ಬಳಸುವುದು ಹೆಚ್ಚು[೧] . ಬಾದಾಮಿ ಪಪ್ಪು ಬೆಲೆ ತುಂಬಾ ದುಬಾರಿಯಾಗಿ ಇರುವುದು. ಬಾದಾಮಿ ಬೀಜ/ಪಪ್ಪುನಿಂದ ತೆಗೆಯುವ ಎಣ್ಣೆಯನ್ನು ಬೇರೆ ಹೆಚ್ಚಿನ ಮೌಲ್ಯದ ಉತ್ಪಾದನೆಗಳಲ್ಲಿ ಉಪಯೋಗಿಸುತ್ತಾರೆ. ಬಾದಾಮಿ ಪಪ್ಪಿನಿಂದ ಬಾದಾಮಿ ಹಾಲು ತಯಾರು ಮಾಡುವರು. ಹಾಗೆ ಬಾದಾಮಿ ಪಪ್ಪುನ್ನು ಸಿಹಿ ಪದಾರ್ಥಗಳ ತಯಾರಿಕೆಯಲ್ಲೂ ಹೆಚ್ಚಾಗಿ ಬಳಸುತ್ತಾರೆ.
ಬಾದಾಮಿ ಮರ
[ಬದಲಾಯಿಸಿ]ಬಾದಾಮಿ ಮರ ರೋಸೇಸಿ (rosaceae) ಸಸ್ಯಕುಟುಂಬಕ್ಕೆ ಸೇರಿದ ಮರ[೨]. ಇದರ ಸಸ್ಯಶಾಸ್ತ್ರ ಹೆಸರು'ಪುನಸ್ ಡಲ್ಸಿಸ್'(punus dulcis). ಬಾದಾಮಿ ಜಾತಿಯಲ್ಲಿ ಎರಡು, ಮೂರು ಪ್ರಭೇದಗಳಿವೆ. ವ್ಯವಹಾರದಲ್ಲಿ ಸಿಹಿ(sweet)ಬಾದಾಮಿ, ಕಹಿ(bitter) ಬಾದಾಮಿ ಅಂತಾ ಕರೆದರು. ಸಿಹಿ ಬಾದಾಮಿ ಪಪ್ಪುನ್ನು ತಿನ್ನುವ ಮಿಠಾಯಿಗಳಲ್ಲಿ ಉಪಯೋಗಿಸುವರು. ಬಾದಾಮಿ ಹುಟ್ಟು ಸ್ಥಾನದಕ್ಷಿಣ ಏಷ್ಯಾ. ಅಲ್ಲಿಂದ ಎಲ್ಲಾ ಕಡೆಗೆ ವ್ಯಾಪ್ತಿ ಹೊಂದಿದೆ. ಬಾದಾಮಿ ಮರ ೪-೧೦ಮೀಟರುಗಳ ಎತ್ತರ ಬೆಳೆಯುತ್ತದೆ. ಇದು ಬಹುವಾರ್ಷಿಕ ಮರ. ಪ್ರಧಾನ ಕಾಂಡ ಅಡ್ಡಳತೆ ೨೫-೩೦ ಸೆಂ.ಮೀ. ತನಕೆ ಇರುತ್ತದೆ. ಎಲೆಗಳು ಉದ್ದವಾಗಿ ೩-೫ ಅಂಗುಲಗಳಷ್ಟು ಉದ್ದವಾಗಿರುತ್ತವೆ. ಎಲೆಗಳು ದೀರ್ಘಾಂಡಾಕಾರ ರೂಪದಲ್ಲಿರುತ್ತವೆ. ಮರ ಕೊಂಬೆಗಳನ್ನು ಹೊಂದಿರುತ್ತದೆ. ಬಾದಾಮಿ ಹೂವುಗಳು ಬೆಳ್ಳಗೆ ಇದ್ದು, ಹೂವಿನ ಕೆಳಗಿನ ಭಾಗ ಮತ್ತು ಹೂವು ದಳಗಳ ಆಂಚು ನಸುಗೆಂಪು(pink)ಬಣ್ಣ ಹೊಂದಿರುತ್ತವೆ. ಹೂವುಗಳ ಪರಿಮಾಣ ೩-೫ ಸೆಂ.ಮೀ. ಇದ್ದು, ೫ ದಪ್ಪವಾದ ಪುಷ್ಪದಳಗಳನು ಹೊಂದಿ ಕೊಂಡಿರುತ್ತವೆ. ಬಾದಾಮಿ ಮರಕ್ಕೆ ೫-೬ ವರ್ಷವಾದ ಮೇಲೆ ಹೂವು, ಕಾಯಿ ಬರುವುದು ವೊದಲಾಗುತ್ತದೆ.
ಬಾದಾಮಿ ಪಪ್ಪು/ಬೀಜ
[ಬದಲಾಯಿಸಿ]ಹೂಗಳು ಅರಳಿದ ೬-೭ ತಿಂಗಳ ತರುವಾಯ ಕಾಯಿ ಹಣ್ಣಾಗುತ್ತದೆ. ಕಾಯಿ ಮೇಲೆ ನಾರು ಪದಾರ್ಥ ಇದ್ದು ,ಅದರ ಕೆಳಗೆ ಬಿರಸಾದ ಸಿಪ್ಪೆ(strong shell)ಇದ್ದು, ಅದರ ಒಳಗೆ ಮೃದುವಾದ ಬಾದಾಮಿ ಬೀಜ/ಪಪ್ಪು ಇರುತ್ತದೆ. ಬೀಜ ದೀರ್ಘಾಂಡಾಕಾರವಾಗಿರುತ್ತದೆ. ಬೀಜದ ಮಧ್ಯಭಾಗ ಉಬ್ಬಾಗೀದ್ದು, ಅಂಚುಗಳು ವೊನಚಾಗಿರುತ್ತವೆ. ಬೀಜ/ಪಪ್ಪು ಮೇಲೆ ಹಗುರವಾದ ಕಂದು ಬಣ್ಣದ ಪೊರೆ ಇರುತ್ತದೆ. ಪೊರೆಗೆ ಮೇಲು ಸಾಲುಗಳಿರುತ್ತವೆ. ತೆಳುವಾದ ಪೊರೆ ತೆಗೆದರೆ ಒಳಗೆ ಬಿಳಿವರ್ಣ ಅಥವಾ ಕ್ರೀಮ್‌ಬಣ್ಣದ ಕಾಳು(kernel) ಇರುತ್ತದೆ. ಬಾದಾಮಿ ಪಪ್ಪು ೧-೨ ಸೆಂ.ಮೀ. ಉದ್ದೈದ್ದು,೧-೨ಗ್ರಾಮುಗಳ ತೂಕ ಬರುತ್ತದೆ. ಬಾದಾಮಿ ಕಾಯಿಯಲ್ಲಿ ಸಿಪ್ಪೆ/ಹೊಟ್ಟು ೩೦-೩೫%, ಬಾದಾಮಿ ಕಾಳು ೬೫-೭೦%ಇರುತ್ತವೆ. ಬಾದಾಮಿ ಬೀಜದಲ್ಲಿ ಪೌಷ್ಟಿಕ ದ್ರವ್ಯಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಬಾದಾಮಿ ಬೀಜದಲ್ಲಿ ಎಣ್ಣೆ(oil/fat), ಪ್ರೊಟೀನ್(protein), ಕಾರ್ಬೋಹೈಡ್ರೇಟ್‌ಗಳು(carbohydrates), [[ಖನಿಜಗಳು] ](minerals), ಮತ್ತು ಬಾಳುಳುಪು(vitamin) ಹೆಚ್ಚಾಗಿವೆ [೩]. ಬಾದಾಮಿ ಪಪ್ಪು ದಲ್ಲಿರುವ ಪುಷ್ಟಿದಾಯಕ ಪದಾರ್ಥಗಳ ಪಟ್ಟಿ
ಪೌಷ್ಟಿಕ ದ್ರವ್ಯಗಳು | ಶೇಕಡ(%) |
ಎಣ್ಣೆ(fat) | 49-51 |
ಪ್ರೋಟೀನ್(protein) | 21-22 |
ಕಾರ್ಬೊಹೈಡ್ರೇಟ್‌ಗಳು(ಚcarbohydrates) | 19-20 |
ಸಕ್ಕರೆಗಳು(sugars) | 4.5-5 |
ನಾರು ಪದಾರ್ಥ(fiber) | 10-11 |
ಪೌಷ್ಟಿಕ ಆಹಾರ ಮೌಲ್ಯ | 5780 కిలో.కెలరీలు |
ವಿಟಮಿನ್(100గ్రాం.లకు) | ಮಿತಿ |
ಥೈಮಿನ್ | 0.24మి.గ్రాం. |
ರಿಬೊಫ್ಲವಿನ್ | 0.4మి.గ్రాంలు. |
ನಿಯಸಿನ್ | 4మి.గ్రాం.లు |
ಪಾಂಥೊತೆನಿಕ್ | 0.3మి.గ్రాంలు |
ವಿಟಮಿನ್B6 | 0.13మి.గ్రాంలు |
ವಿಟಮಿನ್E | 26.22మి.గ్రాం.లు |
ಖನಿಜಗಳು/೧೦೦ ಗ್ರಾಂ. ಪಪ್ಪು[೪]
- ಕಾಲ್ಸಿಯಂ=೨೫೦ಮಿ.ಗ್ರಾಂ.
- ಐರನ್=೬ ಮಿ.ಗ್ರಾಂ.
- ಮೆಗ್ನಿಸಿಯಂ=೩೦೦ಮಿ.ಗ್ರಾಂ.
- ಭಾಸ್ವರ=೫೦೦ಮಿ.ಗ್ರಾಂ
- ಪೊಟಾಸಿಯಂ=೭೦೦ಮಿ.ಗ್ರಾಂ.
ಬಾದಾಮಿ ಎಣ್ಣೆ(Almond oil)
[ಬದಲಾಯಿಸಿ]ಬಾದಾಮಿ ಎಣ್ಣೆಯನ್ನು ಒಳ್ಳೆಣ್ಣೆ/ಅಡಿಗೆ ಎಣ್ಣೆಯಾಗಿ ಬಳಸುವುದಕ್ಕೆ ಯೋಗ್ಯವಾದರೂ, ಇದರ ಕಿಮ್ಮತ್ತು ತುಂಬಾ ಹೆಚ್ಚಾಗಿರುವುದರಿಂದ, ಈ ಎಣ್ಣೆಯನ್ನು ಮಕ್ಕಳ ಸಾಬೂನ್(baby soap)ತಯಾರಿಕೆಯಲ್ಲಿ, ಮಕ್ಕಳ ಮೈ ಮರ್ದನ ತೈಲ(baby oil), ಮತ್ತು ಶಿರೋಜ ತೈಲವನ್ನಾಗಿ(hair oil)ಉಪಯೋಗಿಸುವುದು ಹೆಚ್ಚು. ಬಾದಾಮಿ ಅವಶ್ಯಕ ಎಣ್ಣೆಯಾಗಿದೆ (Essential oil). ಬಾದಾಮಿ ಎಣ್ಣೆಯಲ್ಲಿ, ಏಕ ದ್ವಿಬಂಧ ಒಲಿಕ್ ಆಮ್ಲ (ಸಿಂಪಿಲ್ ಟ್ರೈಗ್ಲಿಜರೈಡ್ ರೂಪದಲ್ಲಿ) ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಬಾದಾಮಿ ಎಣ್ಣೆ ಪಾರದರ್ಶಕವಾಗಿರುತ್ತದೆ [೫]. ಎಣ್ಣೆಯ ಗುಣ ಲಕ್ಷಣಗಳು
ಲಕ್ಷಣ | ಮಿತಿ |
ಸಾಂದ್ರತೆ(250Cಕಡೆ) | 0.910-0.915 |
ವಕ್ರೀಭವ ಸೂಚನೆ(400Cవద్ద) | 1.462-1.466 |
ಅಯೋಡಿನ್ ಮೌಲ್ಯ | 94-105 |
ಪೆರಾಕೈಡ್ ಮೌಲ್ಯ(ಗರಿಷ್ಟವಾಗಿ) | 1.0 |
ಅನ್‌ಸಪೋನಿಫಿಯಮುಲ್ ಪದಾರ್ಥ | 1.5% |
ವರ್ಣ(color)(5.1/4" cell(ಸೆಲ್) | Y=15.R=1.5 units |
ಎಣ್ಣೆಯಲ್ಲಿದ್ದ ಫ್ಯಾಟಿ(ಕೊಬ್ಬಿನ) ಆಮ್ಲಗಳ ಪಟ್ಟಿ
ಫ್ಯಾಟಿ(ಕೊಬ್ಬಿನ)ಆಮ್ಲ | ಶೇಕಡ |
ಪಾಮಿಟಿಕ್ ಆಮ್ಲ | 6-8 |
ಒಲಿಕ್ ಆಮ್ಲ | 64-82 |
ಲಿನೊಲಿಕ್ ಆಮ್ಲ | 8-28 |
ಎಣ್ಣೆಯನ್ನು ತೆಗೆಯುವ ಪದ್ಧತಿ
[ಬದಲಾಯಿಸಿ]ತಿರುಗಣೆ ಯಂತ್ರ(screw press)/ಎಕ್ಸುಪೆಲ್ಲರನ್ನು ಉಪಯೋಗಿಸಿ ಬಾದಾಮಿ ಎಣ್ಣೆಯನ್ನು ಸಂಗ್ರಹ ಮಾಡಲಾಗುತ್ತದೆ. ವಿದ್ಯುತ್ತಿನ ಯಂತ್ರದಿಂದ ಕೆಲಸ ಮಾಡುವ ಯಂತ್ರದಿಂದ, ಇಲ್ಲವೆ ಕೈನಿಂದ ತಿರುಗಿಸುವ ಯಂತ್ರವನ್ನು ಉಪಯೋಗಿಸಿ ಎಣ್ಣೆಯನ್ನು ತೆಗೆಯುವುದಕ್ಕೆ ಆಗುತ್ತದೆ. ಮನೆ ಅವಸರಕ್ಕೆ ಬೇಕಾಗುವ ಎಣ್ಣೆಯನ್ನು ಕೈಯಂತ್ರವನ್ನು ಬಳಸಿ ತೆಗೆಯುತ್ತಾರೆ. ದೊಡ್ಡ ಪ್ರಮಾಣದಲ್ಲಿ(ಮಾರಾಟ ಮಾಡುವುದಕ್ಕೆ)ಬೇಕಾದರೆ ವಿದ್ಯುತ್ತಿನ ಯಂತ್ರದಿಂದ ತಿರುಗು ತಿರುಗಣೆ ಯಂತ್ರವನ್ನು ಉಪಯೋಗಿಸುತ್ತಾರೆ. ಚಿಕ್ಕ ತಿರುಗಣಿ ಯಂತ್ರ ಉತ್ಪನ್ನ ಸಾಮಾರ್ಥ್ಯ ಒಂದುಗಂಟೆಗೆ ೧-೫ ಕಿ.ಲೋ ,ದೊಡ್ಡ ಯಂತ್ರ ಆದರೆ ೧-೬ ಟನ್ನುಗಳು ಒಂದು ದಿನಕ್ಕೆ ಇರುತ್ತದೆ. ಪ್ರಕೃತಿ ಸಿದ್ಧ, ಸ್ವಾಭಾವಿಕ ಎಣ್ಣೆ ಬೇಕಾದರೆ ಕೋಲ್ಡ್‌ಪ್ರೆಸ್ಸು(cold press) ಪದ್ಧತಿಯಲ್ಲಿ ಸಂಗ್ರಹ ಮಾಡುವರು. ಸ್ಕ್ರೂಪ್ರೆಸ್ಸು ನಿಂದ ಬಂದ ಎಣ್ಣೆಯನ್ನು ವೊದಲು ಫಿಲ್ಟರುಪ್ರೆಸ್ಸು(Filter press)ನಲ್ಲಿ ಸೋಸಿ, ಎಣ್ಣೆಯಲ್ಲಿರುವ ಮಡ್ದು, ಕೆಸರುಗಳನು ಬೇರೆ ಮಾಡುವರು. ಬೆಳಕು ಇಲ್ಲದಂತಹ ಪಾಂತ್ರಗಳಲ್ಲಿ ಎಣ್ಣೆಯನ್ನು ದಾಸ್ತಾನು ಮಾಡಿದರೆ ೬ತಿಂಗಳವರೆಗೆ ಕೆಡುವುದಿಲ್ಲ. ಇದಕ್ಕಿಂತ ಜಾಸ್ತಿ ಕಾಲ ದಾಸ್ತಾನು ಮಾಡಿದರೆ ಎಣ್ಣೆಯ ಬಣ್ಣ, ವಾಸನೆ ಆಕ್ಸೀಕರಣ ಕಾರಣದಿಂದ ಹೆಚ್ಚಾಗುತ್ತವೆ.
ಎಣ್ಣೆಯ ಉಪಯುಕ್ತಗಳು
[ಬದಲಾಯಿಸಿ]ಬಾದಾಮಿ ಎಣ್ಣೆಯನ್ನು ಚರ್ಮ ಸಂರಕ್ಷಣೆ ತೈಲ(skin protecting oil), ಕೇಶ ಸಂರಕ್ಷಣ ತೈಲ(hair oil)ವನ್ನಾಗಿ ಮತ್ತು ಆಹಾರದಲ್ಲಿ ಬಳಸುತ್ತಾರೆ. ಚರ್ಮ ಸಂರಕ್ಷಣೆಯಾಗಿ ಬಾದಾಮಿ ಎಣ್ಣೆಯನ್ನು ಅಂಗ ಮರ್ದನ ಮಾಡುವುದರಿಂದ...
- ಮೈ ಚರ್ಮಕ್ಕೆ ಮೆರಗು ಬರುತ್ತದೆ.
- ತೇವ ಇಲ್ಲದ ಮೈಗೆ ಈ ಎಣ್ಣೆ ಯನ್ನು ಹಚ್ಚಿದರೆ, ಚರ್ರ್ಮಯಲ್ಲಿ ತೇವಸೇರಿ ಮೈ ಚರ್ಮ ಮೃದುವಾಗುತ್ತದೆ.
- ಮೈ ಸ್ನಾಯು/ನರಕಟ್ಟುಗಳ ನೋವುಗಳು ಕಡಿಮೆ ಆಗುತ್ತವೆ.
- ಕಣ್ಣುಗಳ ಸುತ್ತ ಇರುವ ಕಪ್ಪುಗೀರುಗಳು ಹೋಗುತ್ತವೆ.
- ಮೈ ತೀಟೆ ಕಡಿಮೆ ಆಗುತ್ತದೆ.
- ಮೈಯನ್ನು ಮೃದುವಾಗಿ, ನುಣುಪಾಗಿಡುತ್ತದೆ.
- ತುಟಿಗಳ ಒಡಕು ಕಡಿಮೆ ಆಗುತ್ತದೆ
- ಚಿಕ್ಕ ಮಕ್ಕಳ ಸಾಬೂನ್ನಲ್ಲಿ, ಮರ್ದನ ಎಣ್ಣೆಯಲ್ಲಿ ಉಪಯೋಗಿಸುತ್ತಾರೆ.
ಕೇಶ ಸಂರಕ್ಷಣ ಎಣ್ಣೆಯಾಗಿ[೬]
- ತಲೆ ಕೂದಲು ಉದ್ದವಾಗಿ ಬೆಳೆಯುತ್ತವೆ.
- ಕೇಶಗಳ ಮೂಲ ಗಟ್ಟಿಯಾಗುತ್ತವೆ.
- ಕೇಶಗಳಿಗೆ ಮೆರಗು ಬರುತ್ತದೆ.
- ಕೇಶ ಉದುರುವುದು ಕಡಿಮೆ ಆಗುತ್ತದೆ
ಆಹಾರವಾಗಿ
- ದೇಹದಲ್ಲಿ ಕೊಲೆಸ್ಟ್ರಾಲ್ಯನ್ನು ನಿಯಂತ್ರಣದಲ್ಲಿಡುತ್ತದೆ.
- ಮೆದುಳು ಮತ್ತು ನರಗಳನ್ನು ಉತ್ಸಾಹ ಗೊಳಿಸುತ್ತದೆ.
ಸಾಧಾರಣವಾಗಿ ಬಾದಾಮಿಯನ್ನು ಆಹಾರದಲ್ಲಿ ತೆಗೆದು ಕೊಳ್ಳುವುರಿಂದ, ದೇಹಕ್ಕೆ ಬೇಕಾದ ಎಣ್ಣೆ ಸೇರುತ್ತದೆ.
ಉಲ್ಲೇಖನಗಳು
[ಬದಲಾಯಿಸಿ]- ↑ http://www.catalogs.com/info/nutrition/benefits-of-eating-almonds.html
- ↑ http://www.daleysfruit.com.au/Nuts/Indian%20almond.htm
- ↑ http: //www. nutsforalmonds. com/ nutrition. htm
- ↑ "ಆರ್ಕೈವ್ ನಕಲು". Archived from the original on 2013-05-17. Retrieved 2013-06-11.
- ↑ http://www.drugfuture.com/Pharmacopoeia/USP32/pub/data/v32270/usp32nf27s0_m1510.html
- ↑ http://www.indiaparenting.com/health/324_3379/benefits-of-almond-oil.html