ವಿಷಯಕ್ಕೆ ಹೋಗು

ಅಪ್ರಿಕಾಟ್ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಪ್ರಿಕಾಟ್ ಎಣ್ಣೆ
ಅಪ್ರಿಕಾಟ್ ಹಣ್ಣು
Conservation status
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Subgenus:
Section:
Armeniaca
ಪ್ರಜಾತಿ:
P. armeniaca
Binomial name
ಪ್ರುನಸ್ ಅರ್ಮೆನಿಯಕ
Synonyms

Armeniaca vulgaris Lam.[] Amygdalus armeniaca (L.) Dumort.[]

ಅಪ್ರಿಕಾಟ್ ಮರ(ಟರ್ಕಿ)
ಅಪ್ರಿಕಾಟ್ ಹೂವು(ಬೆನಹಮ್,ಕಾಶ್ಮೀರು)(
ಹಣ್ಣು ಮಧ್ಯಚ್ಛೆದ

ಅಪ್ರಿಕಾಟ್ ಎಣ್ಣೆಯನ್ನು ಅಪ್ರಿಕಾಟ್ ಬೀಜದಿಂದ ತೆಗೆಯಲಾಗುತ್ತದೆ. ಅಪ್ರಿಕಾಟ್ ಮರ ರೋಜೇಸೆಕುಟುಂಬಕ್ಕೆ ಸೇರಿದ ಮರ. (rosaceae). ಇದರ ಜಾತಿ ಮತ್ತು ಉಪಜಾತಿ ಪ್ರುನಸ್ಆಗಿದೆ. ಈ ಮರದ ಸಸ್ಯಶಾಸ್ತ್ರ ಹೆಸರುಪ್ರುನಸ್ ಅರ್ಮೆನಿಯಕ(prunus armeniaca). ಅಪ್ರಿಕಾಟ್ ಜೊತೆ ಅತಿಪುರಾತನ ಕಾಲದಿಂದ(ಸಾವಿರಾರು ವರ್ಷದಿಂದ) ಮನುಜನಿಗೆ ಪರಿಚಯವಿದೆ. ಇದರ ಮೂಲಸ್ಥಾನ ಏಷಿಯಾದಲ್ಲಿರುವ ಅರ್ಮೆನಿಯ(armenia)ಎಂದು ಭಾವಿಸಲಾಗುತ್ತದೆ[]. ಅದರಿಂದನೆ ಇದರ ಸಸ್ಯಶಾಸ್ತ್ರಹೆಸರನ್ನು ಪ್ರುನಸ್ ಅರ್ಮೆನಿಯಕ ಎಂದು ಕರೆಯಲಾಗುತ್ತದೆ. ಕೆಲವರ ಅಭಿಪ್ರಾಯ ಪ್ರಕಾರ ಇದರ ಜನ್ಮಸ್ಥಾನ ರಷ್ಯಾ-ಚೈನಾ ಸರಹದ್ದು ಪ್ರಾಂತ್ಯ, ಅಲ್ಲಿಂದ ಇದುಸಿಲ್ಲ್ಕ್ ರೋಡ್ ದ್ವಾರ ಮಧ್ಯ ತೂರ್ಪು ಯೂರೋಪ್ ದೇಶಗಳಿಗೆ ಕರೆತರಲಾಗಿದೆ. ಕ್ರಿ.ಪೂ ೬೦ ಸಂ. ಪುರಾತನ ಗ್ರೀಸಿನಲ್ಲಿ ಇದರ ಬಗ್ಗೆ ತಿಳಿವಳಿಕೆ ಇದೆ. ಭಾರತ ದೇಶದಲ್ಲಿ ಈ ಮರವನ್ನು ಕ್ರೀ.ಪೂ. ೩೦೦೦ಸಾವಿರ ವರ್ಷಕ್ಕಿಂತ ಮುಂಚಿನಿಂದ ಬೆಳೆಸಲಾಗಿದೆ ಎಂದು ತಿಳಿದು ಬಂದಿದೆ [].

ಅಪ್ರಿಕಾಟ್ ಗಿಡ

[ಬದಲಾಯಿಸಿ]

ಅಪ್ರಿಕಾಟ್ ಎಂಬುವುದು ಆಂಗ್ಲ ಹೆಸರು. ಭಾರತದಲ್ಲಿ ಈ ಮರವನ್ನು ಹಲವಾರು ಹೆಸರುಗಳಲ್ಲಿ ಕರೆಯಲಾಗುತ್ತದೆ. ಹಿಂದಿ ಭಾಷೆಯಲ್ಲಿ ಛುಲ್ಲು(chullu), ಖುಬಾನಿ(khubani),(ಛೊಲchola)ಎಂದು ಕರೆಯುತ್ತಾರೆ. ತೆಲುಗಿನಲ್ಲಿ ಜಲ್ದರು ಎಂದು ಹೇಳುತ್ತಾರೆ. ಕನ್ನಡದಲ್ಲಿ ಕೆಲವು ಕಡೆ ಛುಲ್ಲು ಎಂದು ಕರೆಯುತ್ತಾರೆ. ಈ ಮರ ಉತ್ತರ ಭಾರತದಲ್ಲಿ ಚೆನ್ನಾಗಿ ಬೆಳೆಯುತ್ತದೆ. ಉತ್ತರದ ಶೀತಲ ಉಷ್ಣ ಪ್ರಾಂತ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶಗಳಲ್ಲಿ ಬೆಳೆಯುತ್ತಿವೆ. ಈ ಮರ ಸಮುದ್ರ ಮಟ್ಟದಿಂದ ೧೨೦೦-೨೫೦೦ ಮೀಟರುಗಳ ಎತ್ತರವಾದ ಪ್ರಾಂತ್ಯದಲ್ಲಿಯೂ ಚೆನ್ನಾಗಿ ಬೆಳೆಯುತ್ತದೆ. ಅಪ್ರಿಕಾಟ್ ತೋಟೆಗಳ ಸಾಗುವಳಿ ನೈನಿತಾಲ್, ಅಲ್ಮೊರ, ಫಿಥರ್ ಘರ್ಜಿಲ್ಲೆಗಳಲ್ಲಿ ಹೆಚ್ಚು ವಿಸ್ತೀರ್ಣದಲ್ಲಿದೆ. ಅಪ್ರಿಕಾಟ್ ತೋಟೆಗಳ ಬೆಳವಣಿಗೆ ಹಿಮಾಚಲ್ ಪ್ರದೇಶ,ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರಗಳು ಅನುಕೂಲ ಪ್ರಾಂತ್ಯಗಳು[]. ಮರ ೧೦ ಮೀಟರುಗಳ ಎತ್ತರದವರೆಗೆ ಬೆಳೆಯುತ್ತದೆ. ಕೊಂಬೆಗಳಿರುತ್ತವೆ. ಕಾಂಡದ ಮೇಲೆ ಕೆಂಪು ತೊಗಟೆ ಇರುತ್ತದೆ. ಎಲೆಗಳು ಹಸಿರಾಗಿ ೬ ಸೆಂ.ಮೀ ಉದ್ದ ವಾಗಿರುತ್ತವೆ.ಹೂಗಳುಪಿಂಕು ಬಣ್ಣ ಹೊಂದಿ ಅಂಡಾಕಾರ ರೂಪದಲ್ಲಿ ಇರುತ್ತವೆ. ಏಪ್ರಿಲ್-ಮೇ ತಿಂಗಳಗಳಲ್ಲಿ ಹಣ್ಣಾಗುತ್ತವೆ. ಹಣ್ಣು ಗೋಲಾಕಾರವಾಗಿ ೫ ಸೆಂ.ಮೀ. ಅಡ್ಡಿಳಿತ ಪ್ರಮಾಣದಲ್ಲಿ ಇರುತ್ತದೆ. ಕಾಯಿ/ಹಣ್ಣ ಮೇಲೆ ಬೂದು ತರಹ ಪುಡಿ ಇರುತ್ತದೆ. ಹಣ್ಣು ಹಳದಿ ಇಲ್ಲವೆ ಹಳದಿ, ಕೆಂಪು ವರ್ಣಮಿಶ್ರಣವಾಗಿರುತ್ತದೆ. ರುಚಿ ಹುಳಿ, ಸಿಹಿಗಳ ಸಮ್ಮೇಳನವಾಗಿರುತ್ತದೆ.

ವಿತ್ತನ/ಬೀಜ

[ಬದಲಾಯಿಸಿ]

ವಿತ್ತನ/ಬೀಜ ಪರಿಮಾಣವು 1.3-2.5 X 0.8-1.2 ಸೆಂ.ಮೀ. ಇದೊಂದು ಗೊರಟೆ(nut), ಹೊರಗೆ ಮೃದುವಾದ ತಿರುಳು ಇರುತ್ತದೆ. ಮರಕ್ಕೆ ೪-೫ ವರ್ಷ ಬಂದಾಗ ಹೂವನ್ನು ಬಿಡುವುದಕ್ಕೆ ಮೊದಲಾಗುತ್ತದೆ. ೩೦ ಸಂವತ್ಸರ ತನಕ ಇಳುವರಿ ಕೊಡುತ್ತದೆ. ಒಂದು ವರ್ಷಕ್ಕೆ ೮೦-೧೨೦ ಕಿಲೋಗಳ ಹಣ್ಣು ಬರುತ್ತದೆ. ವಿತ್ತನವು ಆದರೆ ೨೫ಕಿಲೋ ತನಕ ಬರುತ್ತದೆ. ಸಿಪ್ಪೆ ತೆಗೆದ ವಿತ್ತನ/ಬೀಜ(kernel)ದಲ್ಲಿದ್ದ ಪದಾರ್ಥಗಳು[]

ಪದಾರ್ಥ ಶೇಕಡ
ತೇವ 4.0-5.0
ಎಣ್ಣೆ 52.0%
ಪ್ರೋಟಿನ್ 20.6%
ನಾರು/ಕೆತ್ತ 4.0-5.0
ಸಕ್ಕರೆ 8.10(ನೇರವಾಗಿ)
ಡೆಕ್ಷ್ಟ್ರೊಸ್(dextrose) 11.60(after conversion)

ಎಣ್ಣೆ -ಉತ್ಪಾದನೆ

[ಬದಲಾಯಿಸಿ]

ಸಿಪ್ಪೆಕೂಡಿದ ವಿತ್ತನ /ಗೊರಟೆಯಲ್ಲಿ ಎಣ್ಣೆ ೧೬-೧೮% ವರೆಗೆ ಇರುತ್ತದೆ. ಗೊರಟೆಯಲ್ಲಿದ್ದ ಸಿಪ್ಪೆಯನ್ನು ತೆಗೆದ ಮೇಲೆ ಬೀಜ ೩೦% ತನಕ ಇರುತ್ತದೆ. ಸಿಪ್ಪೆ ತೆಗೆದ ಬೀಜದಲ್ಲಿ ಎಣ್ಣೆ ಪ್ರತಿಶತ ೫೦-೫೨% ವರೆಗೆ ಇರುತ್ತದೆ. ಸಿಪ್ಪೆ/ಹೊಟ್ಟು ತೆಗೆದ ಬೀಜದಿಂದ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸಿ ಎಣ್ಣೆಯನ್ನು ತೆಗೆಯುತ್ತಾರೆ. ಹಿಂಡಿಯಲ್ಲಿ ಉಳಿದಿರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ನಲ್ಲಿ ತೆಗೆಯಲಾಗುತ್ತದೆ. ಕಚ್ಚಾಎಣ್ಣೆ ಮಸುಕಾದ ಅರಿಶಿನ ಬಣ್ಣದಲ್ಲಿ ಇರುತ್ತದೆ. ರಿಫೈಂಡ್ ಮಾಡಿದ ಮೇಲೆ ವರ್ಣರಹಿತವಾಗಿರುತ್ತದೆ. ಕಚ್ಚಾ ಎಣ್ಣೆಯಲ್ಲಿ ಸೈಯನೊ ಜನೆಟಿಕ್ ಗ್ಲುಕೊಸೈಡ್(cyyanogenetic glucoside)ಇರುತ್ತದೆ. ಎಣ್ಣೆಯನ್ನು ರಿರ್ಫೈಂಡ್ ಮಾಡಿದ್ದಾಗ ಇದು ಕಳಚಿ ಹೊಗುತ್ತದೆ. ಎಣ್ಣೆಯಲ್ಲಿ ಒಲಿಕ್ ಕೊಬ್ಬಿನ ಆಮ್ಲ ೫೩. ೦-೭೧.೦% ವರೆಗೆ, ಲಿನೊಲಿಕ್ ಆಮ್ಲ ೨೧.೩-೩೫.೬% ತನಕ ಇರುತ್ತವೆ. ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦% ವರೆಗೆ ಇರುತ್ತವೆ[] ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ವಿವರಣ ಪಟ್ಟಿ[][]

ಕೊಬ್ಬಿನ ಆಮ್ಲ ಪರಿವಿಡಿ ಸರಾಸರಿ
ಮಿರಿಸ್ಟಿಕ್ ಆಮ್ಲ(C14:0) 1.1
ಪಾಮಿಟಿಕ್ ಆಮ್ಲ(C16:0) 3.5
ಸ್ಟಿಯರಿಕ್ ಆಮ್ಲ(C18:0) 2.0
ಒಲಿಕ್ ಆಮ್ಲ(C18:1) 53.0-71.0 73.4
ಲಿನೊಲಿಕ್ ಆಮ್ಲ(C18:2) 21.4-35.6 20.0

ಎಣ್ಣೆ ಭೌತಿಕ ಧರ್ಮಗಳು[][]

ಭೌತಿಕ ಗುಣ ಮಿತಿ
ವಕ್ರಿಭವನ ಸೂಚಿಕೆ ೪೦0Cవద్ద 1.4726
ಅಯೋಡಿಮ್ ಮೌಲ್ಯ 100.3
ಸಪೋನಿಫಿಕೆಶನ್ ಸಂಖ್ಯೆ/ಮೌಲ್ಯ 190.6
ಅನ್ ಸಪೋನಿಫಿಯಬುಲ್ ಪದಾರ್ಥ 1.3%
ಆಮ್ಲ ಮೌಲ್ಯ 2-3%
ವಿಶಿಷ್ಟಗುರುತ್ವ 250Cవద్ద 0.914

ಎಣ್ಣೆಯ ಪ್ರಯೋಜನಗಳು[]

[ಬದಲಾಯಿಸಿ]
  • ಕಾಂತಿವರ್ಧಕ, ಅಂಗರಾಗ, ಸೌಂದರ್ಯವರ್ಧಕ ಲೇಪನ, ದ್ರವ್ಯಪದಾರ್ಥಗಳನು ತಯಾರಿಸುವುದರಲ್ಲಿ ಉಪಯೋಗಿಸುತ್ತಾರೆ.
  • ಸಲಾಡ್ ಆಹಾರ ಪದಾರ್ಥಗಳನ್ನು ತಯಾರು ಮಾಡಲಾಗುತ್ತದೆ.
  • ಆಸ್ಥ್ಮಾ ನಿವಾರಣಕ್ಕೆ ಉಪಯೋಗಿಸುತ್ತಾರೆ.
  • ಸೊರಯಸಿಸ್ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ John H. Wiersema. "USDA Germplasm Resources Information Network (GRIN)". Ars-grin.gov. Retrieved 2012-06-22.
  2. CultureGrams 2002 – Page 11 by Culture Grams
  3. https: //www. tytyga. com/ History-of-the-Apricot-Tree-a/378.htm
  4. ೪.೦ ೪.೧ ೪.೨ SEA Hand Book.2009. by The Solvent Extractors' Association of India
  5. http://www.tandfonline.com/doi/abs/10.1080/01140671.1990.10428068#.UldjsNJHK-k
  6. ೬.೦ ೬.೧ http: //www. scirp. org/journal/PaperInformation. aspx?PaperID=3032
  7. http://nopr.niscair.res.in/bitstream/123456789/14818/1/IJNPR%203(3)%20366-370.pdf
  8. http://www.essentialoil.in/apricot-oil.html