ಸೋಯಾ ಎಣ್ಣೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಸೋಯಾ ಗಿಡ
ಸೋಯಾ ಹೂ
ಸೋಯಾ ಕಾಯಿ
ಸೋಯಾ ಬಿತ್ತನೆಗಳು

ಸೋಯಾ ಎಣ್ಣೆ[ಬದಲಾಯಿಸಿ]

ಸೋಯಾ ಎಣ್ಣೆ ಅಥವಾ ಸೋಯಾಬೀನ್ ಎಣ್ಣೆಯನ್ನು ಸೋಯಾ ಬೀಜದಿಂದ ತೆಗೆಯುತ್ತಾರೆ. ಸೋಯಾಗಿಡ ಗ್ಲೇಸಿನ್ ಪ್ರಜಾತಿ, ಮತ್ತು ಫಾಬೇಸಿ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯಶಾಸ್ತ್ರ ಹೆಸರು'ಗ್ಲೆಸೀನ್ ಮಾಕ್ಸು'. ಸೋಯಾದ ಸಾಗುವಳಿ ಭಾರತ ದೇಶದಲ್ಲಿ ಕ್ರಿ.ಶ. ೧೯೭೭ರಲ್ಲಿ ಮೊದಲಾಗಿದೆ. ಮೊದಲು ಪ್ರಯೋಗಾತ್ಮಕವಾಗಿ ಮಧ್ಯಪ್ರದೇಶದಲ್ಲಿ ಸಾಗುವಳಿ ಮಾಡಿ ನೋಡಲಾಗಿದೆ. ಇಳುವರಿ ಚೆನ್ನಾಗಿ ಬಂದದ್ದು ನೊಡಿ, ಆಮೇಲೆ ಉತ್ತರಪ್ರದೇಶ ಹಾಗೂ ಗುಜರಾತ್ರಾಜ್ಯಗಳಲ್ಲಿ ಸೋಯಾ ಸಾಗುವಳಿ ಮುಂದುವರಿಸಿದ್ದಾರೆ.

ಬೇರೆ ಭಾಷೆಗಳಲ್ಲಿ ಸೋಯಾ ಹೆಸರು[ಬದಲಾಯಿಸಿ]

ಭಾರತದಲ್ಲಿ ಸಾಗುವಳಿ ಮಾಡುತಿದ್ದ ರಾಜ್ಯಗಳು[ಬದಲಾಯಿಸಿ]

ಬೀಜದಿಂದ ಎಣ್ಣೆಯನ್ನು ತೆಗೆಯುವ ವಿಧಾನ[ಬದಲಾಯಿಸಿ]

ಸೋಯಾಬೀಜದಲ್ಲಿ ಪ್ರತಿಶತ ೧೮-೨೪% ಎಣ್ಣೆ ಇರುತ್ತದೆ. ಸಾಧಾರಣವಾಗಿ ಎಣ್ಣೆ ಬೀಜದಲ್ಲಿ ೩೫-೫೦% ವರಕು ಎಣ್ಣೆ ಇರುವುದರಿಂದ, ಅಂತಹ ಬೀಜಗಳನ್ನು ಎಕ್ಸುಪೆಲ್ಲರು ಎನ್ನುವ ಎಣ್ಣೆತೆಗೆಯುವ ಯಂತ್ರಗಳಿಂದ ತೆಗೆಯುತ್ತಾರೆ. ಯಾಕೆಂದರೆ,ಬೀಜಗಳಿಂದ ಎಣ್ಣೆಯನ್ನು ತೆಗೆದ ಮೇಲೆ ಉಳಿಯುವ /ಬರುವ ಹಿಂಡಿಯಲ್ಲಿ(oil cake)ಇನ್ನು ೬-೧೦% ಎಣ್ಣೆಯುಳಿದರೂ, ಇನ್ನು ೩೦-೩೫% ವರೆಗೆ ಎಣ್ಣೆ ಉತ್ಪತ್ತಿ ಆಗುತ್ತದೆ. ಆದರೆ ಸೋಯಾ ಬೀಜದಲ್ಲಿ ಕೇವಲ ೧೮-೨೪% ಎಣ್ಣೆ ಇರುವುದರಿಂದ, ಸೋಯಾಬೀಜವನ್ನು ಎಕ್ಸುಪೆಲ್ಲರು ಯಂತ್ರಗಳ ಸಹಾಯದಿಂದ ಎಣ್ಣೆ ತೆಗೆಯುವುದಕ್ಕೆ ಪ್ರಯತ್ನ ಮಾಡಿದ್ದಾರೆ. ೧೦-೧೪%ಮಾತ್ರ ಎಣ್ಣೆ ಬರುತ್ತದೆ, ಉಳಿದಿದ್ದು ಹಿಂಡಿಯಲ್ಲಿರುತ್ತದೆ. ಅದಕ್ಕೆ ಸೋಯಾ ಬೀಜದಿಂದ ಎಣ್ಣೆ ಯನ್ನು ಸಾಲ್ವೆಂಟ್ ಪ್ಲಾಂಟ್ ಸಹಾಯದಿಂದ ಉತ್ಪನ್ನ ಮಾಡುತ್ತಾರೆ. ಸಾಲ್ವೆಂಟ್ ಪ್ಲಾಂಟ್‌ನಲ್ಲಿ ಹೆಕ್ಸೆನ್ಎನ್ನುವ ಒಂದು ಪೆಟ್ರೊಲಿಯಂ ದ್ರಾವಣವನ್ನು ಉಪಯೋಗಿಸಿ, ಬೀಜದಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಹೆಕ್ಸೆನನ್ನಿನಲ್ಲಿ ಎಲ್ಲಾ ತರಹ ಎಣ್ಣೆಗಳು ಕರಗುತ್ತವೆ. ಅದರಿಂದ ಸಾಲ್ವೆಂಟ್‌ಪ್ಲಾಂಟ್ಯಲ್ಲಿ ಹೆಕ್ಸೆನು ದ್ರಾವಣ(solvent)ವನ್ನು ಉಪಯೋಗಿಸಿ ಎಣ್ಣೆಯನ್ನು ತೆಗೆಯುವರು. ಆದರೆ ಬೀಜದಿಂದ ನೇರವಾಗಿ ಹೆಕ್ಸುನನ್ನು ಉಪ ಸಾಲ್ವೆಂಟ್ ಪ್ಲಾಂಟ್ಕೆ ಕಳುಹಿಸಿ ಎಣ್ಣೆಯನ್ನು ತೆಗೆಯಲಾಗುತ್ತದೆ.

ಸಾಲ್ವೆಂಟ್‌ ಪ್ಲಾಂಟ್ಯಲ್ಲಿ ಸೋಯಾಬೀನ್ ಬೀಜದಿಂದ ಎಣ್ಣೆ ತೆಗೆಯುವ ವಿಧಾನ

 • ಮೊದಲು ಸೋಯಾ ಬೀಜವನ್ನು ದೊಡ್ಡ ಜರಡಿಯಲ್ಲಿ ಜಲ್ಲಿಸಿ, ಬೀಜದಲ್ಲಿರುವ ಮಣ್ಣು,ಸಣ್ಣಕಲ್ಲುಗಳು, ತಾಳು, ಸಣ್ಣಕಂಡಿಗೆ, ದಂಟು ಇತ್ಯಾದಿಗಳನ್ನು ವಿಂಗಡಿಸಲಾಗುತ್ತದೆ.
 • ಜಲ್ಲಿಸಿದ ಸೋಯಾಬೀಜವನ್ನು ಸೀಡ್‌ ಕ್ರೇಕರು(seed cracker)ಎನ್ನುವ ಯಂತ್ರಕ್ಕೆ ಕಳುಹಿಸಲಾಗುತ್ತದೆ. ಸೀಡ್‌ ಕ್ರೇಕರುದಲ್ಲಿ ಎರಡು ರೋಲರು ಮೇಲೆ, ಮತ್ತು ಇನ್ನೊಂದು ಎರಡು ರೋಲರುಗಳು ಕೆಳಗೆ ಇರುತ್ತವೆ. ಈ ರೋಲರುಗಳ ಮಧ್ಯೆ ಸಂದು/ಖಾಲಿ ಬಹಳ ಕಡಿಮೆ ಇರುತ್ತದೆ, ಇದರ ಒಳಗಿನಿಂದ ಬೀಜ ಹೊರಗೆ ಬರುವಾಗ ಸಣ್ಣತುಂಡು/ತುಣಕೆ ಆಗುತ್ತವೆ.
 • ಈಗ ಸಣ್ಣ ಚೂರಾದ ಸೋಯಾಬೀಜವನ್ನು ಬೇಯುವ/ಕುಕರು(cooker) ಯಂತ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಬೀಜದ ಚೂರನ್ನು ಆವಿ(steam)ಯಿಂದ ಬೇಯಿಸಲಾಗುತ್ತದೆ. ಆವಿಯಿಂದ ಬೇಯಿಸಿದ ಬೀಜದ ಚೂರು ಉಷ್ಣೋಗ್ರತೆಯನ್ನು ೮೦-೮೫C ತನಕ ಏರಿಸಲಾಗುತ್ತದೆ ಮತ್ತು ತೇವ ಪ್ರತಿಶತ ೧೪-೧೬%ಆಗುತ್ತದೆ.
 • ಕುಕರಿನಿಂದ ಹೊರಗೆ ಬರುವ ಸೋಯಾ ಬೀಜದ ಬಿಸಿ ತುಣಕುಗಳನ್ನು ಫ್ಲೆಕರು(flaker)ಯಂತ್ರಕ್ಕೆ ಕಳುಹಿಸಲಾಗುತ್ತದೆ. ಫ್ಲೆಕರುನಲ್ಲಿ ಎರಡು ದೊಡ್ದ ದೃಢ ಉಕ್ಕಿನ ರೋಲರುಗಳಿರುತ್ತವೆ . ಎರಡು ರೋಲರುಗಳು ಖಾಲಿ ೦.೩೫ಮಿ.ಮೀ, ಇರುತ್ತದೆ. ರೋಲರುಗಳಿಂದ ಬೀಜ ತುಂಡುಗಳು ಬರುವಾಗ, ರೋಲರುಗಳು ಮಾಡು ಒತ್ತಡದಿಂದ ಬೀಜದ ತುಂಡುಗಳು ತೆಳುವಾದ ಹಲ್ಲೆಯಾಗಿ ಹೊರಗೆ ಬರುತ್ತವೆ.
 • ಫ್ಲೆಕರುವಿನಿಂದ ತೆಳುವಾದ ಹಲ್ಲೆಯಾಗಿ ಬರುವ ಸೋಯಾ ಅವಕುವ ಉಷ್ಣೊಗ್ರತ ೭೫-೮೦C, ಮತ್ತು ತೇವ ೧೪-೧೬% ಇರುವ ಸಂಭವವಿವೆ. ಇದರ ಉಷ್ಣೋಗ್ರತೆಯನ್ನು ೩೫-೪೦Cರಷ್ಟು ಕಡಿಮೆ ಮಾಡಬೇಕು, ಮತ್ತು ತೇವ ಪ್ರತಿಶತವನ್ನು(percent)೧೦.೦% ಆಗುವಂತೆ ಮಾಡಬೇಕು. ಹೆಚ್ಚಿನ ಉಷ್ಣೋಗ್ರತೆ ಇರುವ ಸೋಯಾ ಬೀಜದ ಅವಲನು ಸಾಲ್ವೆಂಟ್ ಪ್ಲಾಂಟ್ಕೆ ಕಳುಹಿಸಬಾರದು. ಏಕಂದರೆ ಹೆಕ್ಸೆನು ದ್ರವೀಭವನ ಉಷ್ಣೋಗ್ರತೆ ೫೮C.ಅದರಿಂದ ೮೦-೮೫C ಇದ್ದ ಸೋಯಾವನ್ನು ಸಾಲ್ವೆಂಟ್‌ಪ್ಲಾಂಟ್ಕೆ ಕಳಿಸಿದರೆ,ಹೆಕ್ಸೆನು ಬೇಗ ಭಾಷ್ಪವಾಗುತ್ತದೆ. ಅದಕ್ಕೆ ಸೋಯಾದ ಫ್ಲೆಕ್ಸು(flakes)ನು ಕೂಲರು(cooler)ಅನ್ನು ಯಂತ್ರಕ್ಕೆ ಕಳುಹಿಸಿ ಅಲ್ಲಿ ಫ್ಲೆಕ್ಸು ಮೇಲೆ ತಣ್ಣಗಿರುವ ಗಾಳಿಯನ್ನು ಬೀಸಿ, ಸೋಯಾ ಫ್ಲೆಕ್ಸುನ್ನು ತಣ್ಣಗೆ ಮಾಡಿ, ಅದರ ತಾಪಮಾನವನ್ನು ೪೦-೪೫C ಮಾಡಲಾಗುತ್ತದೆ.
 • ಕೂಲರುನಲ್ಲಿ ತಣ್ಣಗಾದ ಸೋಯಾಬೀಜ ಫ್ಲೆಕ್ಸುನ್ನು ಒಂದು ಕನ್ವೆಯರು(conveyor)ಸಹಾಯದಿಂದ ಸಾಲ್ವೆಂಟ್‌ಪ್ಲಾಂಟ್‌ಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಎಕ್ಸುಟ್ರಾಕ್ಟರು (Extractor)ಎನ್ನುವ ಯಂತ್ರ ಪರಿಕರದಲ್ಲಿ ಸೋಯಾ ಬೀಜದಿಂದ, ಹೆಕ್ಸುನು ಎನ್ನುವ ದ್ರಾವಣವನ್ನು ಉಪಯೋಗಿಸಿ ಎಣ್ಣೆಯನ್ನು ಸಂಗ್ರಹಣೆ ಮಾಡಲಾಗುತ್ತದೆ.

ಸೋಯಾ ಎಣ್ಣೆ[ಬದಲಾಯಿಸಿ]

ಸಾಲ್ವೆಂಟ್‌ ಎಕ್ಸುಟ್ರಾ‍‍ಕ್ಷನು‌ ಪ್ಲಾಂಟ್ ವಿಧಾನದಿಂದ ಉತ್ಪನ್ನ ಮಾಡಲಾದ ಸೋಯಾ ಎಣ್ಣೆಯನ್ನು ಸೀದಾ ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಆಗುವುದಿಲ್ಲ. ಈ ಎಣ್ಣೆಯನ್ನು ರಿಫೈನರಿ(refinery) ಕಾರ್ಖಾನೆಯಲ್ಲಿ ಶುದ್ಧಿಮಾಡಿ, ಆಮೇಲೆ ಉಪಯೋಗಿಸ ಬೇಕಾಗುತ್ತದೆ. ಸಾಲ್ವೆಂಟ್‌ಪ್ಲಾಂಟ್‌ ನಿಂದ ಬಂದ ಎಣ್ಣೆಯನ್ನು ಜಿಡ್ಡೆಣ್ಣೆ(crude oil)ಅಂತಾರೆ. ಇದರಲ್ಲಿ ಗಮ್ಸು(gums), ಕೊಳೆ/ಕಿಣಿ(impurities)ಮತ್ತು ಫ್ರೀಫ್ಯಾಟಿ ಆಮ್ಲಗಳಿರುತ್ತವೆ. ಇವುಗಳನ್ನು ರಿಫೈನರಿಯಲ್ಲಿ ತೆಗಸಲಾಗುತ್ತದೆ.

ಸೋಯಾ ಎಣ್ಣೆಯಲ್ಲಿದ್ದ ಫ್ಯಾಟಿ(ಕೊಬ್ಬಿನ)ಆಮ್ಲಗಳು

ಫ್ಯಾಟಿ(ಕೊಬ್ಬಿನ) ಆಮ್ಲ ಕಾರ್ಬನುಗಳ ಸಂಖ್ಯೆ: ಬಂಧನ ಸಂಖ್ಯೆ ಶೇಕಡ
ಪಾಮಿಟಿಕ್ ಆಮ್ಲ C 16:0 7-12
ಸ್ಟಿಯರಿಕ್ ಆಮ್ಲ C18:0 2-6
ಒಲಿಕ್ ಆಮ್ಲ C18:1 19-30
ಲಿನೊಲಿಕ್ ಆಮ್ಲ C18:2 50-59
ಲಿನೊಲೆನಿಕ್ ಆಮ್ಲ C18:3 5-10

ಸೋಯಾ ಎಣ್ಣೆಯ ಭೌತಿಕ, ರಾಸಾಯನಿಕ ಲಕ್ಷಣಗಳು

ಪದಾರ್ಥ/ಧರ್ಮ ಮೌಲ್ಯದ ಮಿತಿ
ಸಾಂದ್ರತೆ 0.912-.0915
ಐಯೋಡಿನ್ ಮೌಲ್ಯ 120-141
ಸಪೋನಿಫಿಕೆಸನ್ ಮೌಲ್ಯ/ಸಂಖ್ಯೆ 189-195
ಅನ್‌ಸಪೋನಿಫಿಯಮುಲ್‌ ಪದಾರ್ಥ 1.0%
ಗಮ್ಸು 3.0%

ಸೋಯಾ ಎಣ್ಣೆ-ಉಪಯೋಗಗಳು[ಬದಲಾಯಿಸಿ]

 • ಈ ಎಣ್ಣೆಯನ್ನು ಹೆಚ್ಚಾಗಿ ಅಡಿಗೆ/ತಿನ್ನುವ ಎಣ್ಣೆಯಾಗಿ ಉಪಯೋಗಿಸುತ್ತಾರೆ.
 • ಜೈವಿಕ ಡಿಸೇಲ್ ತಯಾರು ಮಾಡುವುದರಲ್ಲಿಯೂ ಬಳಸುತ್ತಾರೆ.
 • ವನಸ್ಪತಿ(ಡಾಲ್ಡಾ)ಮಾಡುವುದರಲ್ಲಿ ಉಪಯೋಗಿಸುತ್ತಾರೆ.

ಇತರೆ[ಬದಲಾಯಿಸಿ]

 • ಸೋಯಾ ಎಣ್ಣೆಯಲ್ಲಿರುವ ಗಮ್ಸು(gums)ನಿಂದ ಲೆಸಿಥಿನ್ಯನ್ನು ಉತ್ಪನ್ನ ಮಾಡಲಾಗುತ್ತದೆ.
 • ಸೋಯಾ ಹಿಂಡಿಯನ್ನು ಪಶುಮೇವಾಗಿ ಉಪಯೋಗಿಸುತ್ತಾರೆ.

ಚಿತ್ರಮಾಲಿಗೆ[ಬದಲಾಯಿಸಿ]

ಬಾಹ್ಯಕೊಂಡಿಗಳು[ಬದಲಾಯಿಸಿ]