ಮುತ್ತುಗ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುತ್ತುಗದ ಮರ
ಎಲೆ
ಹೂಗಳು
ಕಾಯಿ

ಮುತ್ತುಗ ಮರ ಬಿತ್ತನೆಯಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ. ಮುತ್ತುಗ ಮರವನ್ನು ಕನ್ನಡದಲ್ಲಿ ಬ್ರಹ್ಮವೃಕ್ಷ ಎಂದು ಕರೆಯಲಾಗುತ್ತದೆ. ಆಂಗ್ಲದಲ್ಲಿ ಈ ಮರವನ್ನು ಫ್ಲೇಮ್ ಆಫ್ ಫಾರೆಸ್ಟ್(Flame of Forest)ಎಂದು ಕರೆದರು. ಆಂಗ್ಲದಲ್ಲಿರುವ ಇನ್ನೊಂದು ಹೆಸರು ಬುಟಿಯ ಗಮ್ ಟ್ರೀ(Butea gum tree). ಈ ಮರ ಬುಟಿಯಾ ಪ್ರಜಾತಿ,ಫಾಬೇಸಿ ಕುಟುಂಬಕ್ಕೆ ಹೊಂದಿಕೊಂಡಿದ್ದ ಮರ. ಇದರ ಸಸ್ಯಶಾಸ್ತ್ರೀಯ ಹೆಸರು 'ಬುಟಿಯ ಮೊನೊಸ್ಪೆರ್ಮ(Butea monosperma).

ಬೇರೆ ಭಾಷೆಗಳಲ್ಲಿ ಇದರ ಸಾಧಾರಣ ಹೆಸರು[ಬದಲಾಯಿಸಿ]

ಮರ-ಹೂವು- ಬಿತ್ತನೆಕಾಳು[ಬದಲಾಯಿಸಿ]

  • ಋಜುವಾದ ಮರ.೧೦-೧೫ ಮೀಟರುಗಳ ಎತ್ತರಕ್ಕೆ ಬೆಳೆಯುತ್ತದೆ. ಎಲೆ ಮೂರು ಭಾಗವಾಗಿ ಕಾಣಿಸುತ್ತದೆ. ಕೊಂಬೆಗಳು ಇರುತ್ತವೆ. ಹೂವು ಕಿತ್ತಳೆ-ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಎಲೆ ಮತ್ತು ತೊಗಟೆ(ಪಟ್ಟೆ)ಯ ಹಾಲನ್ನು ಆಯುರ್ವೇದ ಔಷಧದಲ್ಲಿ ಉಪಯೋಗಿಸುತ್ತಾರೆ. ಪುಷ್ಪದಳದಲ್ಲಿ ಬುಟ್ರಿನ್(butrin)1.5% ಮತ್ತೆ ಬುಟಿನ್(butein)೦.೩೭% ಶೇಕಡಾ ಇರುತ್ತದೆ. ಹೂಗಳು ದಪ್ಪವಾಗಿ,ದೊಡ್ಡದಾಗಿರುತ್ತವೆ. ೧೦-೧೫ ಸೆಂ.ಮೀ.ಉದ್ದವಾಗಿರುತ್ತವೆ.
  • ಫೆಬ್ರುವರಿ-ಜೂನ್ ತಿಂಗಳುಗಳಲ್ಲಿ ಇದರಲ್ಲಿ ಹೂಗಳು ಅರಳಲು ಆರಂಭವಾಗುತ್ತದೆ. ಹಣ್ಣುಗಳು ಏಪ್ರಿಲ್-ಜೂನ್ ತಿಂಗಳ ಮಧ್ಯೆ ಬರುತ್ತವೆ. ಹಣ್ಣು/ಕಾಯಿ(pod) ೧೫-೨೦ಸೆಂ.ಮೀ.ಉದ್ದ,೨-೨.೫ ಸೆಂ.ಮೀ.ಅಗಲ ಇದ್ದು ದಪ್ಪಗೆ ಇರುತ್ತವೆ. ಬೀಜಗಳಲ್ಲಿ ೧೭-೧೯%ತನಕ ಎಣ್ಣೆ ಉಂಟಾಗಿರುತ್ತದೆ. ಬೀಜ ಮೇಲಿರುವ ಹೊಟ್ಟನ್ನು ತೆಗೆದ ಮೇಲೆ ಬೀಜದಿಂದ ಎಣ್ಣೆಯನ್ನು ಉತ್ಪಾದಿಸುತ್ತಾರೆ.

ಎಣ್ಣೆ ಉತ್ಪತ್ತಿ[ಬದಲಾಯಿಸಿ]

  • ಶೇಖರಣೆ ಮಾಡಿದ ಬಿತ್ತನೆ ಮೇಲೆ ಇರುವ ಹೊಟ್ಟು(ಸಿಪ್ಪೆ)ಯನ್ನು ವೊದಲಾಗಿ ಡಿಕಾರ್ಡಿಕೇಟರು ಎನ್ನುವ ಯಂತ್ರದಲ್ಲಿ ಹಾಕಿ ಮೇಲಿರುವ ಹೊಟ್ಟನ್ನು ತೆಗೆಯುತ್ತಾರೆ. ಹೊಟ್ಟು ತೆಗೆದ ಬಿತ್ತನೆಯಿಂದ ಎರಡು ರೀತಿಯಲ್ಲಿ ಎಣ್ಣೆಯನ್ನು ಉತ್ಪಾದಿಸಲಾಗುತ್ತದೆ. ಒಂದು ತರಹದಲ್ಲಿ ಕೂಟೀರ ಕೈಗಾರಿಕೆಯಲ್ಲಿ ಅಥವಾ ಎಕ್ಸುಪೆಲ್ಲರುಗಳಲ್ಲಿರುವ ದೊಡ್ಡ ಕಾರ್ಖಾನೆಯಲ್ಲಿ ನಡೆಸಿದ ಬಿತ್ತನೆಯಿಂದ ಎಣ್ಣೆಯನ್ನು ಉತ್ಪಾದನೆ ಮಾಡಲಾಗುತ್ತದೆ.
  • ಬಿತ್ತನೆಯಿಂದ ಎಣ್ಣೆ ತೆಗೆದ ಮೇಲೆ ಉಳಿದಿರುವ/ಬಂದ ಹಿಂಡಿಯಲ್ಲಿ ಇನ್ನೂ ಎಣ್ಣೆ ೬-೮% ಇರುತ್ತದೆ. ಇದನ್ನು ಸಾಲ್ವೆಂಟ್ ಪ್ಲಾಂಟ್ ಎನ್ನುವ ಕಾರ್ಖಾನೆಯಲ್ಲಿ ನಡೆಸಿ ಉಳಿದ ಎಣ್ಣೆಯನ್ನು ತೆಗೆಯುತ್ತಾರೆ. ಇಲ್ಲವಾದರೆ ಮೊತ್ತ ಮೊದಲನೆ ಬಿತ್ತನೆಯನ್ನು ಸಾಲ್ವೆಂಟ್ ಪ್ಲಾಂಟ್ನಲ್ಲಿ ನಡೆಸಿ ಒಟ್ಟು ಎಣ್ಣೆಯನ್ನು ತೆಗೆಯಬಹುದು.

ಎಣ್ಣೆಯ ಲಕ್ಷಣಗಳು[ಬದಲಾಯಿಸಿ]

ಎಣ್ಣೆ ಅರಿಶಿನ ಬಣ್ಣದಲ್ಲಿರುತ್ತದೆ. ಸವಿ ಇರುವುದಿಲ್ಲ. ಇದರ ಭೌತಿಕ ಮತ್ತೆ ರಾಸಾಯನಿಕ ಹೊಂದಾಣಿಕೆ ಎಳ್ಳೆಣ್ಣೆ ಮತ್ತೆಶೆಂಗಾ ಎಣ್ಣೆ ಗಳಂತೆ ಇರುತ್ತದೆ. ಆದರೆ ಈ ಎಣ್ಣೆಯನ್ನು ಅಡಿಗೆ ಎಣ್ಣೆ ಯನ್ನಾಗಿ ಉಪಯೋಗ ಮಾಡುವುದಕ್ಕೆ ಆಗುವುದಿಲ್ಲ.

ಭೌತಿಕ ಗುಣಗಳು ಮಿತಿ
ವಕ್ರೀಭವನದ ಸೂಚಿಕೆ300Cవద్ద 1.460-1.470
ಐಯೋಡಿನ್ ಬೆಲೆ 65-85
ಸಪೋನಿಫಿಕೇಸನ್ ಬೆಲೆ 175-190
ಅನ್ ಸಪೋನಿಫಿಯಬುಲ್ ಮೇಟರ್ 1.9-2.0% ಗರಿಷ್ಟ
ಟೈಟರು ಬೆಲೆ 0C 45.4
ತೇವ 0.5% ಗರಿಷ್ಟ
ಬಣ್ಣ ಆರಿಶನ ವರ್ಣ

ಎಣ್ಣೆಯಲ್ಲಿರುವ ಫ್ಯಾಟಿ ಆಮ್ಲಗಳು(ಕೊಬ್ಬಿನ ಆಮ್ಲಗಳು)[ಬದಲಾಯಿಸಿ]

ಮುತ್ತುಗ ಎಣ್ಣೆಯಲ್ಲಿ ಅಂತೃಪ್ತ ಕೊಬ್ಬಿನ ಆಮ್ಲವಾಗಿದ್ದ ಪಾಮಿಟಿಕ್ ಆಮ್ಲ ೨೦-೨೭ ಶೇಕಡ,ಅಸಂತೃಪ್ತ ಕೊಬ್ಬಿನ ಆಮ್ಲಗಳಾದ ಒಲಿಕ್ ಮತ್ತೆ ಲಿನೊಲಿಕ್ ಕೊಬ್ಬಿನ ಆಮ್ಲಗಳು ವೊಟ್ಟುಗೆ ೫೦% ತನಕ ಉಂಟಾಗಿರುತ್ತವೆ.

ಕೊಬ್ಬಿನ ಆಮ್ಲ ಹೆಸರು ಶೆಕಡ
ಪಾಮಿಟಿಕ್ ಆಸಿಡ್ 21-27
ಸ್ಟಿಯರಿಕ್ ಆಸಿಡ್ 7-9
ಅರಚಿಡಿ ಆಸಿಡ್ 2.5-6
ಬೆಹನಿಕ್ ಆಸಿಡ್ 6-12
ಲಿಗ್ನೊಸೆರಿಕ್ ಆಸಿಡ್ 4.0
ಒಲಿಕ್ ಆಸಿಡ್ 27-28
ಲಿನೊಲಿಕ್ ಆಸಿಡ್ 19-22
ಗಡೊಲಿಕ್ ಆಸಿಡ್ 2.7

ಎಣ್ಣೆಯ ಉಪಯುಕ್ತಗಳು[ಬದಲಾಯಿಸಿ]

  • ಈ ಎಣ್ಣೆಯನ್ನು ಸಾಬೂನುಗಳು ತಯಾರಿಕೆಯಲ್ಲಿ ಬಳಸುತ್ತಾರೆ.
  • ಎಣ್ಣೆ ತೆಗೆದ ಹಿಂಡಿಯನ್ನು ಎರುಬು/ಗೊಬ್ಬರವಾಗಿ ಉಪಯೋಗಿಸಿ ಕೊಳ್ಳುತ್ತಾರೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]