ಕುಸುಮಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೂವಿನ ವಿನ್ಯಾಸ ಪುಟ
ಕುಸುಮೆ-ಹೂವು
ಕುಸುಂಬಿ ಹೂವು
ಕುಸುಂಬಿ ಬೀಜ

ಕುಸುಮೆ ಎಣ್ಣೆ ಯನ್ನು ಕುಸುಮೆ ಅಥವಾ ಕುಸುಂಬಿ ಅಥವಾ ಕುಸುಬಿ ಗಿಡಗಳ ಬೀಜಗಳಿಂದ ತೆಗೆಯುತ್ತಾರೆ. ಕುಸುಮೆ ಗಿಡ ಕಂಪೋಸಿಟೇ ಅಥವಾ ಅಸ್ಟರೇಸಿ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರೀಯ ಹೆಸರು ಕಾರ್ಥಮಸ್^ಕೋರಿಯಮ್ .ಕುಸುಮೆ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು (unsaturated fatty acids)ಹೆಚ್ಚು ಶೇಕಡಾದಲ್ಲಿ ಇರುತ್ತವೆ.

ಇತಿಹಾಸ[ಬದಲಾಯಿಸಿ]

ಕುಸುಮೆ ಗಿಡದ ಜನ್ಮಸ್ಥಾನ ದಕ್ಷಿಣ ಏಷಿಯಾವೆಂದು ತಿಳಿಯಲಾಗಿದೆ. ಇತಿಹಾಸ ಪೂರ್ವದ ಹಿಂದೆ ಇದನ್ನು ಚೀನಾ, ಇಂಡಿಯಾ, ಪರ್ಷಿಯಾ ಮತ್ತು ಈಜಿಪ್ಟ್ ದೇಶಗಳಲ್ಲಿ ಸಾಗುವಳಿ ಮಾಡಿದರೆಂದು ತಿಳಿದುಬಂದಿದೆ. ಮಧ್ಯಯುಗದ ಕಾಲಕ್ಕೆ ಇದು ಇಟಲಿ ಮತ್ತು ಉಳಿದ ಪ್ರಾಂತ್ಯಗಳಿಗೆ ವ್ಯಾಪಿಸಿದೆ. ೪ ಸಾವಿರ ಸಂವತ್ಸರ ಹಿಂದಿನ ಪುರಾತನ ಈಜಿಪ್ಟಿಯನ್ ಸಮಾಧಿಯಲ್ಲಿ ಕುಸುಮೆ ಹೂವಿನ ಅವಶೇಷಗಳನ್ನು ಪುರಾತತ್ವ ಇಲಾಖೆಯವರು ಕಂಡು ಹಿಡಿದಿದ್ದಾರೆ. ಕ್ರಿ.ಪೂ.೧೬೦೦ಸಂವತ್ಸರ ಕಾಲದ ಈಜಿಪ್ಟಿಯನ್ ೧೮ರರಾಜವಂಶಸ್ಥನ ಸಮಾಧಿಯಲ್ಲಿ ಮಮ್ಮಿಜೊತೆ ವೀಲೀ ಹೂವುಗಳು ಹಾಗೂ ಕುಸುಮೆ ಹೂವುಗಳ ಅವಶೇಷಗಳನ್ನು ಗಮನಿಸಲಾಗಿದೆ. ೧೨ರ ರಾಜವಂಶಸ್ಥನ ಮಮ್ಮಿ ಜೊತೆಗೆ ಕುಸುಮೆ ಹೂವು ಬಣ್ಣದಿಂದ ಮಾಡಿದ ವಸ್ತುವನ್ನು ಕಂಡು ಹಿಡಿಯಲಾಗಿದೆ. ಈಜಿಪ್ಟಿಯನ್ ಚಕ್ರವರ್ತಿ(pharaoh)'ತುತ್ಖ್ಹಾಮುನ್' ಸಮಾಧಿಯಲ್ಲಿ ಕುಸುಮ ಹೂಮಾಲೆಯ ಅವಶೇಷಗಳು ಸಿಕ್ಕಿವೆ.

ಕುಸುಮೆ ಗಿಡ[ಬದಲಾಯಿಸಿ]

ಮೃದುವಾದ ಕಾಂಡ ಇರುವ, ಏಕವಾರ್ಷಿಕ ಗಿಡ. ಒತ್ತಾದ ಕವುಲುಗಳನ್ನು ಹೊಂದಿರುತ್ತದೆ. ಕಾಂಡ ಮತ್ತು ಪತ್ರಗಳ(ಎಲೆ)ಮೇಲೆ ಮುಳ್ಳು ತರಹ ನಿರ್ಮಾಣವನ್ನು ಹೊಂದಿರುತ್ತದೆ. ಗಿಡದ ಎತ್ತರ ೧೩೫-೧೫೦ ಸೆಂ.ಮೀ. ಗೋಳಾಕಾರ ಹೂವಿನ ಗುಚ್ಛ ಹೊಂದಿರುತ್ತದೆ. ಒಂದು ಹೂವಿನ ಗುಚ್ಚದಲ್ಲಿ ೨-೫ ಹೂಗಳು ಇರುತ್ತವೆ. ಒಂದು ಗುಚ್ಚದಲ್ಲಿ ೧೫-೨೫ ಬೀಜಗಳು ಉತ್ಪನ್ನವಾಗುತ್ತವೆ. ಹೂವು ಆರೆಂಜ್-ಅರುಣ ವರ್ಣದಲ್ಲಿ ಕಾಣಿಸುತ್ತವೆ. ಕುಸುಮೆ ಹೂಗಳನ್ನು ,ಕುಂಕುಮೆ ಹೂಗಳಿಗೆ ಬದಲಾಗಿ ಉಪಯೋಗಿಸುತ್ತಾರೆ. ಕುಸುಮೆ ಹೂಗಳನ್ನು ಆಹಾರ ಪದಾರ್ಥಗಳಿಗೆ ಬಣ್ಣ ನೀಡುವುದಕ್ಕೆ ಉಪಯೋಗ ಮಾಡುತ್ತಾರೆ. ಕುಸುಮೆ ಹೂಗಳಿಂದ ತಯಾರು ಮಾಡಿದ ಬಣ್ಣವನ್ನು ಬಟ್ಟೆಗಳಿಗೆ ಹಚ್ಚುತ್ತಾರೆ. ಕುಸುಮೆ ತುಪ್ಪಳದಲ್ಲಿ ಮತ್ತು ಕವುಲಗಳ ಶಿಖರದ ಭಾಗದಲ್ಲಿ ವಿಟಮಿನ್ 'A' ಇರುತ್ತದೆ. ಕುಸುಮೆ ಬೀಜದಲ್ಲಿ ೩೦-೩೨% ಎಣ್ಣೆ ಇರುತ್ತದೆ. ಒಂದು ಹೆಕ್ಟೇರಿಗೆ ೬೦೦-೭೦೦ ಕೇ.ಜಿ. ಬೀಜ ಉತ್ಪತ್ತಿ ಆಗುತ್ತದೆ.

ಕುಸುಮೆ ಎಣ್ಣೆ[ಬದಲಾಯಿಸಿ]

ಕುಸುಮೆ ಎಣ್ಣೆ ಕಡಿಮೆ ಬಣ್ಣ ಹೊಂದಿರುತ್ತದೆ, ಕಡಿಮೆ ವಾಸನೆ ಇರುತ್ತದೆ. ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. ರಿಫೈಂಡು ಮಾಡಿದ ಎಣ್ಣೆ ಪಾರದರ್ಶಕವಾಗಿರುತ್ತದೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚಾಗಿರುತ್ತವೆ. ಕುಸುಮೆ ಎಣ್ಣೆಯಲ್ಲಿ ಲಿನೊಲಿಕ್ ಕೊಬ್ಬಿನ ಆಮ್ಲ ಮತ್ತು ಒಲಿಕ್ ಕೊಬ್ಬಿನ ಆಮ್ಲ ಅಧಿಕ ಶೇಕಡದಲ್ಲಿರುತ್ತದೆ. ಕುಸುಮೆ ಎಣ್ಣೆಯಲ್ಲಿರುವ ಫ್ಯಾಟಿ/ಕೊಬ್ಬಿನ ಆಮ್ಲಗಳು,ಶೇಕಡ

ಸಂತೃಪ್ತ ಕೊಬ್ಬಿನ ಆಮ್ಲಗಳು %
ಮಿರಿಸ್ಟಿಕ್ ಆಸಿಡ್ 1.0%
ಪಾಮಿಟಿಕ್ ಆಸಿಡ್ 2-10%
ಸ್ಟಿಯರಿಕ್ ಆಸಿಡ್ -10%
ಅಸಂತೃಪ್ತ ಕೊಬ್ಬಿನ ಆಮ್ಲಗಳು
ಪಾಮಿಟೊಲಿಕ್ ಆಸಿಡ್ 0.5-1.0%
ಒಲಿಕ್ ಆಸಿಡ್ 10-40%
ಲಿನೊಲಿಕ್ ಆಸಿಡ್ 55-80%
ಲಿನೊಲೆನಿಕ್ ಆಸಿಡ್ 1.0%

ಕುಸುಮೆ ಎಣ್ಣೆಯ ಭೌತಿಕ ಲಕ್ಷಣಗಳು

ಲಕ್ಷಣ ಮಿತಿ
ಸಾಂದ್ರತೆ 0.915.0920 ಕೇ.ಜಿ/ಲೀಟರುಕ್ಕೆ
ಸಪೋನಿಫಿಕೆಸನ್ ಬೆಲೆ 186-196
ಐಯೋಡಿನ್ ಬೆಲೆ 135-148
ಅನ್ ಸಪೋಣಿಫಿಯಬುಲ್ ಮೇಟರು 1.0%

ಉಪಯೋಗಗಳು[ಬದಲಾಯಿಸಿ]

  • ಕುಸುಮೆ ಎಣ್ಣೆ ಶ್ರೇಷ್ಠವಾದ ಅಡುಗೆ ಎಣ್ಣೆ
  • ಕುಸುಮೆ ಎಣ್ಣೆಯನ್ನು ಸಾಲಡ್(salads)ಮತ್ತು ಮಾರ್ಗರೈನ್(Margarine)ಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.
  • ಕುಸುಮೆ ಹೂಗಳಿಂದ ಹರ್ಬಲ್(herbal)ಟೀ ತಯಾರಿಸುತ್ತಾರೆ.

ಒಳಗಿನ ಕೊಂಡಿಗಳು[ಬದಲಾಯಿಸಿ]