ತಿಥಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈದಿಕ ಕಾಲಸೂಚನೆಯಲ್ಲಿ, ತಿಥಿಯು ಒಂದು ಚಾಂದ್ರದಿನ, ಅಥವಾ ಚಂದ್ರ ಮತ್ತು ಸೂರ್ಯರ ನಡುವಿನ ರೇಖಾಂಶ ಕೋನವು 12°ಯಷ್ಟು ಹೆಚ್ಚಲು ತೆಗೆದುಕೊಳ್ಳುವ ಸಮಯ. ಬೇರೆ ರೀತಿಯಲ್ಲಿ ಹೇಳುವುದಾದರೆ, ತಿಥಿಯು ಸೂರ್ಯ ಮತ್ತು ಚಂದ್ರರ ನಡುವಿನ ರೇಖಾಂಶ ಕೋನವು 12° ಯ ಪೂರ್ಣಾಂಕ ಅಪವರ್ತನವಾಗಿ ಇರುವ ಸ್ಥಿತಿಗೆ ಅನುರೂಪವಾಗಿರುವ ಕ್ರಮಾನುಗತ ಅವಧಿಗಳ ನಡುವಿನ ಸಮಯ. ತಿಥಿಗಳು ದಿನದ ಬದಲಾಗುವ ಸಮಯಗಳಲ್ಲಿ ಆರಂಭವಾಗುತ್ತವೆ ಮತ್ತು ಅವಧಿಯಲ್ಲಿ ಸರಿಸುಮಾರು ೧೯ ರಿಂದ ಸುಮಾರು ೨೬ ಗಂಟೆಗಳವರೆಗೆ ಬದಲಾಗುತ್ತವೆ.[೧]

ಒಂದು ಹಿಂದೂ ಮುಹೂರ್ತವನ್ನು (ನಲವತ್ತೆಂಟು ನಿಮಿಷಗಳ ಅವಧಿ) ಹಿಂದೂ ಖಗೋಳಶಾಸ್ತ್ರದ ಐದು ಲಕ್ಷಣಗಳನ್ನು ಬಳಸಿ ನಿರೂಪಿಸಬಹುದು. ಅವುಗಳೆಂದರೆ, ವಾರ, ತಿಥಿ, ನಕ್ಷತ್ರ (ಚಂದ್ರನ ತಾರಾಪುಂಜ), ಯೋಗ (ಸೂರ್ಯ ಹಾಗೂ ಚಂದ್ರರ ನಡುವಿನ ಕೋನೀಯ ಸಂಬಂಧ) ಮತ್ತು ಕರಣ (ತಿಥಿಯ ಅರ್ಧ).

ಉಲ್ಲೇಖಗಳು[ಬದಲಾಯಿಸಿ]

  1. Defouw, Hart; Robert Svoboda (2003). Light on Life: An Introduction to the Astrology of India. Lotus Press. p. 186. ISBN 0-940985-69-1.
"https://kn.wikipedia.org/w/index.php?title=ತಿಥಿ&oldid=910184" ಇಂದ ಪಡೆಯಲ್ಪಟ್ಟಿದೆ