ವಿಷಯಕ್ಕೆ ಹೋಗು

ಮುಹೂರ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಹೂರ್ತ ಹಿಂದೂ ಪಂಚಾಂಗದಲ್ಲಿ ಸಮಯದ ಅಳತೆಯ ಒಂದು ಏಕಮಾನ.

ಬ್ರಾಹ್ಮಣಗಳಲ್ಲಿ, ಮುಹೂರ್ತ ಪದವು ಕಾಲದ ಒಂದು ವಿಭಾಗವನ್ನು ಸೂಚಿಸುತ್ತದೆ: ಒಂದು ದಿನದ ಮೂವತ್ತರಲ್ಲಿ ಒಂದು ಭಾಗ, ಅಥವಾ ನಲವತ್ತೆಂಟು ನಿಮಿಷಗಳ ಅವಧಿ.[] "ಕ್ಷಣ" ಅರ್ಥವೂ ಬ್ರಾಹ್ಮಣಗಳಲ್ಲಿ ಸಾಮಾನ್ಯವಾಗಿದೆ.[] ಋಗ್ವೇದದಲ್ಲಿ ಕೇವಲ "ಕ್ಷಣ" ಅರ್ಥ ಕಾಣಸಿಗುತ್ತದೆ.

ಇದಲ್ಲದೆ ಪ್ರತಿ ಮುಹೂರ್ತವನ್ನು ೩೦ ಕಲಾಗಳಾಗಿ (ಭಾರತೀಯ ನಿಮಿಷ) ವಿಭಜಿಸಲಾಗುತ್ತದೆ (ಹಾಗಾಗಿ ೩೦ ಕಲಾ ≈ ೪೮ ಪಾಶ್ಚಾತ್ಯ ನಿಮಿಷಗಳು). ಇದಲ್ಲದೆ ಪ್ರತಿ ಕಲಾವನ್ನು ೩೦ ಕಾಷ್ಠಾಗಳಾಗಿ (ಭಾರತೀಯ ಸೆಕೆಂಡು) ವಿಭಜಿಸಲಾಗುತ್ತದೆ, ಹೀಗೆ ೩೦ ಕಾಷ್ಠಾ ≈ ೧.೬ ಪಾಶ್ಚಾತ್ಯ ನಿಮಿಷ.

ಮುಹೂರ್ತ ಪದದ ಸಂಧಿ ವಿಚ್ಛೇದ ಹೀಗಿದೆ: ಮುಹೂರ್ತ = ಮುಹು + ಋತ. ಋತ ಪದವು ಋತುಗಳ ಸಹಜ, ವಾರ್ಷಿಕ ಕ್ರಮವನ್ನು ಸೂಚಿಸುತ್ತದೆ, ಹಾಗಾಗಿ ಮುಹೂರ್ತ ಪದವು ಇವುಗಳ ದೈನಂದಿನ ಪ್ರತಿಬಿಂಬವನ್ನು ಸೂಚಿಸುತ್ತದೆ.

ಈ ಪದ ಋಗ್ವೇದದಷ್ಟು ಮುಂಚಿನ ಗ್ರಂಥದಲ್ಲಿ ಕಾಣಬರುತ್ತದೆ, ಮತ್ತು ಇದರಲ್ಲಿ ಇದರರ್ಥ "ಕ್ಷಣ". ಆದರೆ ಇದರಲ್ಲಿ ಇದು ನಿಖರ ನಿಯತಕಾಲಿಕತೆಯ ಯಾವುದೇ ನಿರ್ದಿಷ್ಟ ವಿವರಣೆಯನ್ನು ಸೂಚಿಸುವುದಿಲ್ಲ. ಇದು ಶತಪಥ ಬ್ರಾಹ್ಮಣ ಹಾಗೂ ತೈತ್ತಿರೀಯ ಬ್ರಾಹ್ಮಣಗಳಂತಹ ನಂತರದ ಕೃತಿಗಳಲ್ಲಿ ಬರುತ್ತದೆ.

ಋಗ್ವೇದದಲ್ಲಿ ಮುಹೂರ್ತ ಪದದ ಎರಡು ಉದಾಹರಣೆಗಳು, III.33.5, ಮತ್ತು III.53.8 ರಲ್ಲಿ ಹೀಗಿವೆ:

ರಮಧ್ವಂ ಮೇ ವಚಸೆ ಸೋಮ್ಯಾಯ ರತಾವರೀರೂಪ ಮುಹೂರ್ತಮೇವೈಃ | ಪರ ಸಿಂಧುಮಛಾ ಬರ್ಹತಿ ಮನೀಷಾವಸ್ಯುರಹ್ವೆ ಕುಶಿಕಸ್ಯ ಸೂನುಃ ||

ಮತ್ತು

ರೂಪಂ-ರೂಪಂ ಮಘವಾ ಬೋಭವೀತಿ ಮಾಯಾಃ ಕರ್ಣ್ವಾನಸ್ತನ್ವಂ ಪರಿ ಸವಾಮ್ | ತರಿರ್ಯದ ದಿವಃ ಪರಿ ಮುಹೂರ್ತಮಾಗಾತ ಸವೈರ್ಮಂತ್ರೈರಂತುಪಾ ರತಾವಾ ||

ತೈತ್ತಿರೀಯ ಬ್ರಾಹ್ಮಣವು ೧೫ ಮುಹೂರ್ತಗಳ ಹೆಸರುಗಳನ್ನು ಉಲ್ಲೇಖಿಸುತ್ತದೆ:

(1) ಸಂಜ್ಞಾನಂ (2) ವಿಜ್ಞಾನಂ (3) ಪ್ರಜ್ಞಾನಂ (4) ಜಾನದ್ (5) ಅಭಿಜಾನತ್ |
(6) ಸಂಕಲ್ಪಮಾನಂ (7) ಪ್ರಕಲ್ಪಮಾನಂ (8) ಉಪಕಲ್ಪಮಾನಂ (9) ಉಪಕ್ಲುಪ್ತಂ (10) ಕ್ಲುಪ್ತಂ |
(11) ಶ್ರೇಯೊ (12) ವಸೀಯ (13) ಆಯತ್ (14) ಸಂಭೂತಂ (15) ಭೂತಂ |

ಇಂದಿನ ಭಾರತದಲ್ಲಿ ಮುಹೂರ್ತವೆಂದರೆ ಹಿಂದೂ ವಿವಾಹ ಸಮಾರಂಭಕ್ಕೆ ಗೊತ್ತು ಮಾಡುವ ಅತ್ಯಂತ ಶುಭ ಘಳಿಗೆ. ಅವು ೪೮ ಮಿನಿಟ್ ಅವಧಿಯ ನಕ್ಷತ್ರಗಳ ಹೆಸರಿನವೇ ಆಗಿವೆ ಅಥವಾ ಮೇಷಾದಿ ಲಗ್ನವನ್ನೂ ಬಳಸಲಾಗುತ್ತದೆ . ಯಾವುದೇ ಸಂಭಾವ್ಯ ದೈವಿಕ ಮೂಲದ ಸಮಸ್ಯೆಗಳನ್ನು ತಪ್ಪಿಸಲು ವಿವಾಹದ ಮುಹೂರ್ತವನ್ನು ಲೆಕ್ಕಹಾಕಲು ಜ್ಯೋತಿಷಿಗಳನ್ನು ಹಲವುವೇಳೆ ಗೊತ್ತುಮಾಡಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Taittirīya Brāhmaṇa, iii. 10, I, I (for the names); 9, 7; 12, 9, 6; Śatapata Brāhmaṇa, x. 4, 2, 18. 25. 27; 3, 20; xii. 3, 2, 5; x. 4, 4, 4, etc.
  2. See Zeitschrift der Deutschen Morgenländischen Gesellschaft, 9, 139 et seq.; Indische Streifen, I, 92, et seq.
"https://kn.wikipedia.org/w/index.php?title=ಮುಹೂರ್ತ&oldid=1230973" ಇಂದ ಪಡೆಯಲ್ಪಟ್ಟಿದೆ