ಗಂಗಾಧರ ಶಾಸನ

ವಿಕಿಪೀಡಿಯ ಇಂದ
Jump to navigation Jump to search

ಗಂಗಾಧರ ಶಾಸನ[೧] ಅಥವಾ ಜಿನವಲ್ಲಭ ಶಾಸನ[೨], ಕುರಿಕ್ಯಾಲ ಶಾಸನ ಇತ್ಯಾದಿ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ.

ಶಾಸನ ಇರುವ ಪ್ರದೇಶ[ಬದಲಾಯಿಸಿ]

ಆಂದ್ರದ್ರಪ್ರದೇಶ ರಾಜ್ಯದ ಕರಿಂನಗರ ಜಿಲ್ಲೆಯ ಗಂಗಾಧರ ಎಂಬ ಗ್ರಾಮದ ಬೊಮ್ಮಲಗುಡ್ಡ ಎಂಬಲ್ಲಿ ಈ ಶಾಸನ ಇದೆ. ಬೊಮ್ಮಲಗುಡ್ಡದ ದಕ್ಷಿಣಕ್ಕೆ ಕುರಿಕ್ಯಾಲ ಎಂಬ ಇನ್ನೊಂದು ಗ್ರಾಮವಿದೆ. ಹೀಗಾಗಿ ಈ ಶಾಸನಕ್ಕೆ ಗಂಗಾಧರ ಶಾಸನ ಎಂಬ ಹೆಸರು ಬಂತು.ಇದನ್ನು ಜಿನವಲ್ಲಭ ಶಾಸನ ಎಂದು ಕರೆಯಲಾಗುತ್ತದೆ.ಇದು ಬಂಡೆಗಲ್ಲಿನ ಶಾಸನ.

ಶಾಸನದ ಮಹತ್ವ[ಬದಲಾಯಿಸಿ]

 • ಕನ್ನಡ ಸಾಹಿತ್ಯದ ಕವಿಯಾದ ಪಂಪನ ಜೀವನ ವೃತ್ತಾಂತವನ್ನು ತಿಳಿಸುತ್ತದೆ.
 • ಪಂಪನಿಗೂ ಬನವಾಸಿಗೂ ಇರುವ ಸಂಬಂಧವನ್ನು ಸಹ ತಿಳಿಸುತ್ತದೆ.
 • ಕನ್ನಡ ಸಾಹಿತ್ಯ ಮತ್ತು ತೆಲುಗು ಸಾಹಿತ್ಯಕ್ಕೂ ಹೆಚ್ಚು ಪ್ರಯೋಜನಕಾರಿಯಾಗಿದೆ.

ಶಾಸನದ ಕಾಲ[ಬದಲಾಯಿಸಿ]

 • ಪಂಪನೂ ಗತಿಸಿದ ಕಾಲವೆಂದು ವಿದ್ವಾಂಸರು ಹೇಳುತ್ತಾರೆ[೩].
 • ಶಾಸನದ ಕಾಲವನ್ನು ೯೫೦ - ೬೦ ಎಂದು ತಿಳಿದುಬರುತ್ತದೆ.

ಶಾಸನದ ವಿಷಯ[ಬದಲಾಯಿಸಿ]

 • ಈ ಶಾಸನವನ್ನು ಜಿನವಲ್ಲಭನೇ ಬರೆಸಿದ್ದಾನೆ ಎಂಬುದು ತಿಳಿಯುತ್ತದೆ. ಅವನ ಅಣ್ಣನಾದ ಕವಿತಾಗುಣಾರ್ಣವ ಪಂಪನಿಗೆ ಅಶ್ರಯದಾತ ಅರಿಕೇಸರಿಯ ಧರ್ಮಪುರಿ ಎಂಬ ಗ್ರಾಮವನ್ನು ದತ್ತಿಕೊಟ್ಟದ್ದು ದಾಖಲೆಯಾಗಿದೆ.ಪಂಪನು ಬರೆದ ವಿಕ್ರಮಾರ್ಜುನ ವಿಜಯ ಕೃತಿಯನ್ನು ಮೆಚ್ಚಿ ದತ್ತಿ ನೀಡಿದ್ದಾನೆ ಎಂಬುದನ್ನು ಜಿನವಲ್ಲಭ ಬರೆಸಿದ್ದಾನೆ. ಚನ್ನವೃಷಭಾದ್ರಿಯ ಪರಿಸರದಲ್ಲಿ ಪ್ರಥಮ ತೀರ್ಥಂಕರನಾದ ಆದಿನಾಥನ ಬಿಂಬಗಳು, ಚಕ್ರೇಶ್ವರ ವಿಗ್ರಹ,ಅಕ್ಕಪಕ್ಕದಲ್ಲಿ ಇತರ ಪ್ರತಿಮೆಗಳು. ಸಿದ್ಧ ಶಿಲೆಯ ಹಿಂಭಾಗದ ಬೆಟ್ಟದಲ್ಲಿ ತ್ರಿಭುವನ ತಿಲಕ ಹೆಸರಿನ ಬಸದಿ ಇದೆ.ತನ್ನ ಅಣ್ಣನಾದ ಕವಿತಾಗುಣಾರ್ಣವ ವಿಲಾಸ ಎಂಬ ಉದ್ಯಾನವನ ಇತ್ತು ಎಂಬುದನ್ನು ಹೇಳಿಕೊಂಡಿದ್ದಾನೆ. ಶಾಸನವು ನಮಃ ಸಿದ್ದಭ್ಯ ಎಂಬ ಉವಾಚದಿಂದ ಆರಂಭಗೊಳ್ಳುತ್ತದೆ. ಜಿನವಲ್ಲಭನ ಗುಣಾಪೇಕ್ಷೆಯನ್ನು ಮಾಡುತ್ತಾ ತೆಲುಗು ಭಾಷೆಯಲ್ಲಿ ಶಾಸನ ಮುಗಿಯುತ್ತದೆ.

ಶಾಸನದಲ್ಲಿರುವ ಅಂಶಗಳು[ಬದಲಾಯಿಸಿ]

ಚರಿತ್ರೆಯ ಅಂಶ[ಬದಲಾಯಿಸಿ]

 • ಮಹಾಕವಿ ಪಂಪನ ತಂದೆಯ ಹೆಸರು ಅಭಿರಾಮದೇವರಾಯ ಎಂಬುದು ತಿಳಿಯುತ್ತದೆ. ಪಂಪ ಭಾರತದಲ್ಲಿ ಬರುವ 'ರತ್ನಾಕರಜ್ಞಾನ ತಮೋನಿರದನಭಿರಾಮದೇವರಾಯಂ'ಪಂಪನ ತಂದೆಯ ಹೆಸರು ಬೀಮಪಯ್ಯ ಎಂಬುದು ಖಚಿತವಾಗುತ್ತದೆ.
 • ಪಂಪನ ತಾಯಿ ಅಬ್ಬಣಬ್ಬೆ- ಶಾಸನದಲ್ಲಿ ಬರುವ ಸಾಲು 'ಬೆಳ್ವೊಲಲದ ಅಣ್ಣಗೆರೆಯ ಜೋಯಿದ ಸಿಂಘದ ಮರ್ಮಳ್ ಅಬ್ಬಣಬ್ಬೆ'.
 • ಆ ಕಾಲದಲ್ಲಿ ರಾಷ್ಟ್ರಕೂಟರ ಮಾಂಡಳಿಕ ಅಳ್ವಿಕೆ ಮಾಡುತ್ತಿದ್ದ.
 • ಪಂಪನ ಹಿರಿಯರು ವೆಂಗಿಪಳುವಿನಲ್ಲಿ ವಾಸಮಾಡುತ್ತಿದ್ದರು. ಶಾಸನದಲ್ಲಿ ಬರುವ ಸಾಲು 'ಬಾಪಡ್ಲಾಡ್'. ಈಗಿನ ಆಂಧ್ರದ ಗುಂಟೂರು ಜಲ್ಲೆಯಲ್ಲಿ ಬರುವ ಊರು.
 • ಪಂಪನ ಗುರುಗಳು 'ಜಿನನಂದಿ' ಭಟ್ಟಾರಕ ವಂಶದವರು.

ಸಾಂಸ್ಕೃತಿಕ ಅಂಶ[ಬದಲಾಯಿಸಿ]

 • ಜೈವ ಧರ್ಮದ ಮಂಗಳ ಶ್ಲೋಕದಿಂದ ಆರಂಭವಾಗುತ್ತದೆ ಶಾಸನದ ಸಾಲುಗಳು.
 • ಪಂಪನ ಪೂರ್ವಜರು ಕೆಮ್ಮೆ ಬ್ರಾಹ್ಮಣರು ಆಗಿದ್ದರು. ಶಾಸನದಲ್ಲಿ ಬರುವ ಸಾಲು'ಕೆಮ್ಮೆ ಬ್ರಾಹ್ಮಣರು ಜಮದಗ್ನಿ ಪಂಚಾಶ್ತವ ಶ್ರೀ ಪಂಚನೇತ್ರಂ'
 • ಜೈನಧರ್ಮದ ತೀರ್ಥಂಕರನಾದ ವೃಷಭನಾಥನ ಹೆಸರಿನ ಸ್ಮರಣೆ ಇದೆ.

ಸಾಹಿತ್ಯಿಕ ಅಂಶ[ಬದಲಾಯಿಸಿ]

ಭಾಷಿಕ ಅಂಶ[ಬದಲಾಯಿಸಿ]

 • ಇಲ್ಲಿ ಜಿನವಲ್ಲಭನ ತ್ರಿಭಾಷಾ ಸಾಮರ್ಥವನ್ನು ಪ್ರಸುತ್ತಿಗೊಳಿಸಿದ್ದಾನೆ.
 • ಇಲ್ಲಿ ಕನ್ನಡ ಭಾಷೆಯ ಅಪಭ್ರಂಶ, ದೋಷಗಳಿಂದ ಮುಕ್ತವಾಗಿದೆ[೪].

ಹೆಚ್ಚಿನ ಓದಿಗೆ[ಬದಲಾಯಿಸಿ]

 1. ಇಆರ್‌ಸಿಯನ್ನು ನೋಡಿ
 2. ಭಾರತದ ಶಾಸನಗಳು
 3. ವಿಕಿದೃಶ್ಯ ನೋಡಿ

ಉಲ್ಲೇಖ[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
 1. Lua error in ಮಾಡ್ಯೂಲ್:Citation/CS1/Date_validation at line 355: attempt to compare nil with number.}
 2. http://www.shastriyakannada.org/DataBase/KannwordHTMLS/CLASSICAL%20KANNADA%20INSCRIPTIONS%20HTML/GANGADHARAM%20INSCRIPTION%20HTML.htm
 3. http://kanaja.in/?p=10551
 4. http://kanaja.in/?p=102707