ನವ್ಯ

ವಿಕಿಪೀಡಿಯ ಇಂದ
Jump to navigation Jump to search
 • ನವ್ಯ ಕಾವ್ಯ ಪ್ರಕಾರವು ಕನ್ನಡ ಭಾಷೆಯ ಸಾಮರ್ಥ್ಯವನ್ನೂ ಅಭಿವ್ಯಕ್ತಿಯ ಮಟ್ಟವನ್ನೂ ಹೆಚ್ಚಿಸಿತು. ಅತಿ ಸೂಕ್ಷ್ಮವಾದ, ಅಂತರಂಗ ವೇದ್ಯವಾದ ಅಥವಾ ಗುಹ್ಯವಾದ ಅನುಭವಗಳನ್ನು ಹೊರಹಾಕಲು ಮಾದ್ಯಮವಾಯಿತು. [೧]
 • ಅದರ ಕೆಲವು ಉದಾಹರಣೆಯ ಕವನಗಳನ್ನು ಕೆಳಗೆ ಕೊಟ್ಟಿದೆ '; ಇದು ನವ್ಯದ ಶೈಲಿಯನ್ನು ನೋಡಲು ಮಾತ್ರಾ ಆಗಿದೆ :

ನವ್ಯ ಕವನ[ಬದಲಾಯಿಸಿ]


 • ಮೊದಲ ಕವನ ಶ್ರೀ ಶಂಕರರ ಜೀವನ- ಅವರು ಮಂಡನ ಮಿಶ್ರರ ಜೊತೆ ಮಾಡಿದ ವಾದ , ಕರ್ಮಠ ಮಿಶ್ರ ರನ್ನು ಸೋಲಿಸಿ ಅದ್ವೈತ ತತ್ವ ವನ್ನು ಎತ್ತಿಹಿಡಿದುದು; ಕಾಲಾನುಕ್ರಮದಲ್ಲಿ ಕರ್ಮಠ ಪದ್ಧತಿ ಪುನಃ ವಿಜ್ರಂಭಿಸಿದುದು -ಇದರ ನೋವಿನ ದುರಂತದ ಪರಿಚಯವಿದೆ. [೨]

-

 • ಎರಡನೆಯ ಕವನದಲ್ಲಿ ವೇದಕಾಲದಿಂದ ಬೆಳೆದು ಬಂದ ಧಾರ್ಮಿಕ ನಂಬುಗೆ ಹೋಮ ಹವನಗಳ ಕಾಲ; ನಂತರ ಧಾರ್ಮಿಕ ಚಿಂತನೆಯಿಂದ ಏಕ - ಬ್ರಹ್ಮ ವಾದ ; ನಿರಾಕಾರದ ಏಕ ದೇವೋಪಾಸನೆ, ಆತ್ಮ ವಿಚಾರ ಚಿಂತನೆ ಹೀಗೆ ಸುಧಾರಣೆ ಹೊಂದುತ್ತಾ ಬೆಳೆದು ಬಂದ ವೈದಿಕ ಧರ್ಮ - ಪುನಃ ಈ ಸಾವಿರ ವರ್ಷದಿಂಧ ಈಚೆಗೆ ಕೆಳಮುಖವಾಗಿ ಸಾಗುತ್ತಿರುವುದು ದುರಂತ. ಭಗವದ್ಗೀತೆಯಲ್ಲಿ ಸಾರಿ ಸಾರಿ ಕರ್ಮಯೋಗ ಜ್ಞಾನಯೋಗವನ್ನು ಹೇಳಿದ್ದರೂ, ಮೂರ್ತಿಪೂಜೆ; ಆಡಂಬರದ ಧರ್ಮಾಚರಣೆಗೆ ಜನಮನ ತಿರುಗಿದುದು. ವಿಚಿತ್ರ, ಹಾಗೂ ದುರಂತವಾಗಿದೆ ಎಂಬ ನೋವನ್ನು ಹೇಳುತ್ತದೆ.[೩]

-

 • ಮೂರನೆಯ ಕವನದಲ್ಲಿ ಕಟ್ಟೆ ಎಂಬಲ್ಲಿ ೨೦೦೦ ನೇ ಇಸವಿಯಲ್ಲಿ ನೆಡೆದ ಸೋಮಯಾಗದ ಬಗ್ಗೆ ವಿಷಾದ ನೋವು . ಅದರಲ್ಲಿ ಮೇಕೆ ಗಳನ್ನು ಗುದ್ದಿ ಕೊಂದು ಅದರ ಮಾಂಸವನ್ನು ಹೋಮದಲ್ಲಿ ಅರ್ಪಿಸಿ ನಂತರ ಹೋಮಕುಂಡದಲ್ಲಿ ಉಳಿದ ಮಾಂಸವನ್ನು ತೆಗೆದು ಋತ್ವಿಜರು ಆದಿಯಾಗಿ ಎಲ್ಲರೂ ಪ್ರಸಾದವೆಂದು ಸೇವಿಸಿದುದನ್ನು ಕೇಳಿ ಆಕ್ರೋಶ ಗೊಂಡ ಮನಸ್ಸಿನ ಭಾವನೆ ಇದೆ ಈ ಮೂರರಲ್ಲೂ ಧಾರ್ಮಿಕ ಆಚರಣೆ ವಿರುದ್ಧ ಬಂಡಾಯದ ದ್ವನಿ ಇದೆ. ಹೀಗೆ ಬಂಡಾಯ ಮತ್ತು ನವ್ಯ ಒಟ್ಟಿಗೆ ಸಾಗುತ್ತದೆ. [೪]

-

ಒಂದು ಹಳೆಯ ಕಥೆ[ಬದಲಾಯಿಸಿ]


 • ಶ್ರಾದ್ಧದ ಮನೆಯೂಟಕ್ಕೆ ಸಂನ್ಯಾಸಿ ಬರಬಹುದೆ?
 • ಹಿಂಬಾಗಿಲಿನಿಂದ ಬಂದದ್ದು - ಶಂಕರರು !
 • ಮಂಡನಮಿಶ್ರ ಕೆಂಡಾಮಂಡಲ, ಪಾಪ ! ಸಂಪ್ರದಾಯಸ್ಥ:
 • ವೈದಿಕರೂಟವಾಗದೆ ಭಿಕ್ಷವಿಲ್ಲ.ಶಂಕರರು ಕೇಳಿದ್ದು ವಾದ ಭಿಕ್ಷೆ !
 • ಯತಿ ಭಂಗ ಬೇಡ, ಪಿತೃ ಯಜ್ಞ ವಾಗಲಿ. ಅತಿಥಿಗಳು. ||೧||

-

 • ಕರ್ಮಠ, ಮೀಮಾಂಸಕ, ಯಜ್ಞ ,ಕರ್ಮವೇ, ಜೀವನಧರ್ಮ,
 • ವೇದ ಪಂಡಿತ - ಸಂಸಾರಿ ಮಿಶ್ರನ ವಾದ; ಆದರೆ-
 • ಜ್ಞಾನ- ವೈ ರಾಗ್ಯ, ಮೋಕ್ಷಧರ್ಮವೇ ಜೀವನದರ್ಥ,
 • ಶಂಕರರ ವಾದ, ಅದೂ ವೇದಾಧಾರ, ಅದ್ವೈತ ಸಿದ್ಧಾಂತ.
 • ಹದಿನಾರರ ಶಂಕರರು><ಅರವತ್ತರ ಮಿಶ್ರ. ||೨||

-

 • ಇಪ್ಪತ್ತೊಂದು ದಿನ; ಕರ್ಮವೋ -ತ್ಯಾಗವೋ(ಓ)?
 • ತರ್ಕ-ಯುದ್ಧ , ಕರ್ಮಕಾಂಡಕ್ಕೆ - ಜ್ಞಾನಕಾಂಡಕ್ಕೆ;
 • ದಕ್ಷಿಣೋತ್ತರದ ವೇದ-ಪಂಡಿತ ದಿಗ್ಗಜಗಳು; ಶಾರದೆ-
 • ಮಂಡನನ ಪತ್ನಿಯೇ ನಿರ್ಣಾಯಕಿ !
 • ಸೋತರೆ - ಶಂಕರ ಸಂಸಾರಿ; ಇಲ್ಲ; ಮಿಶ್ರ ಸಂನ್ಯಾಸಿ. ||೩||

-

 • ಸಂಸಾರಿ ಮಂಡನ ಮಿಶ್ರ ನಿಗೆ ಕಾವಿಯುಡುಗೆ!
 • ಕರ್ಮವನು ಬಿಟ್ಟು ಜ್ಞಾನ ಮಾರ್ಗವ ಹಿಡಿದು,
 • ಸುರೇಶ್ವರಾಚಾರ್ಯ ರಾದದ್ದು, - ಶಾರದೆ
 • ಶೃಂಗೇರಿಯಲಿ, ಶಂಕರರಿಗೆ ತಾಯಿಯಾಗಿ
 • ಮಾತೃ ಪೂಜೆ ಪಡೆದದ್ದು, ಹಳೆಯ ಕಥೆ. ||೪||

-

 • ಆದರೆ, ಇಂದು ಕಾಲಚಕ್ರದಡಿ ಸಿಲುಕಿದ ಅದ್ವೈತ,
 • ವೈರಾಗ್ಯ-ಜಪ-ತಪ-ಧ್ಯಾನಗಳೆಲ್ಲ ಮತ್ತೆ ವಿಜೃಂಭಿಸಿದ-
 • ಹೋಮ ಹವನಕ್ಕೆ ಅಹುತಿಯಾಗಿ, ಶಂಕರರ ಶಿಷ್ಯ
 • ಜ್ಞಾನಿ-ಸಂನ್ಯಾಸಿ ಸುರೇಶ್ವರಾಚಾರ್ಯರು ಸೋತು, ಒಳಗಿದ್ದ
 • ಕರ್ಮಠ ಮಂಡನಮಿಶ್ರನೇ ಗೆದ್ದದ್ದು , ವಿಪರ್ಯಾಸ! ||೫||

-

 • ಶೃಂಗೇರಿಯಲಿ ನೆಲಸಿರುವ ನಿರ್ಣಾಯಕಿ-
 • ಶಾರದಾಂಬೆಯ ಮೃದು ಮಧುರ ಮಂದಹಾಸಕ್ಕೆ ,
 • ಭಗವತ್ಪಾದ-ಶಂಕರರು, ಶಿಷ್ಯ-ಸುರೇಶ್ವರರು
 • ಒಟ್ಟಿಗೆ ನಮಿಸಿದಾ ಪಾದಂಗಳಿಗೆ ನಮೋ ನಮೋ.
 • ಒಳಗೊಳಗೆ ನಗುತಿರುವ ವಿಧಾತನರಸಿಗೆ, ನಮೋ ನಮೋ! ||೬||

ಕರ್ಮ ಮತ್ತು ಜ್ಞಾನ[ಬದಲಾಯಿಸಿ]


 • ಭೋಗ ಭಾಗ್ಯವ ಬೇಡಿ - ಶತ್ರು ನಾಶವ ಕೊರಿ,
 • ದಾರ್ಶನಿಕ ಮಂತ್ರಗಳು ಸಾವಿರಾರು;
 • ದಿಕ್ಪಾಲಕರು ಸೂರ್ಯಚಂದ್ರರು ಉಷೆ ಸಂದ್ಯೆಯರು
 • ದೇವಗಣ ಮೂವತ್ಮೂರು ಕೋಟಿ. ||೧||

-

 • ಬಯಕೆ ಮುಗಿಲುಗಳು - ಅಲ್ಲಲ್ಲಿ ಸತ್ಯದರಿವಿನ ಮಿಂಚು!
 • ಕಲಸುಮೆಲೋಗರ - ಅವನೆಲ್ಲ ಸಂಕಲಿಸಿ ವಿಂಗಡಿಸಿ,
 • ಋಕ್ ಯಜುಸ್ಸಾಮ ಅಥರ್ವಗಳು ನಾಲ್ಕು ;
 • ಬಾದರಾಯಣ ಆದರು ವೇದವ್ಯಾಸ. ||೨||

-

 • ಮತ್ತೆ ಹುಟ್ಟಿದುದು ವಿಧಿ ವಿಧಾನ ಕರ್ಮಮಾರ್ಗ,
 • ಬ್ರಾಹ್ಮಣಗಳ ಸೂತ್ರಗಳು - ಋಷಿ ನಿಯಮ;
 • ಕರ್ಮಕ್ರಿಯೆ ನಿತ್ಯವಿಧಿ -ಕರ್ತವ್ಯ ಕಡ್ಡಾಯ,
 • ಭೋಗ ಬಯಕೆಗೆ ಯಜ್ಞ - ಯಾಗ ಮತ್ತೆ ವಿಶೇಷ ಕರ್ಮ. ||೩||

-

 • ಈ ಲೋಕದಲಿ ಸುಖ ಭೋಗ-ಪರದಲಿ ಸ್ವರ್ಗ, ತಪ್ಪಲ್ಲ;
 • ಜೀವನ-ಮರಣ ಚಕ್ರದಲಿ, ಪರಿಶ್ರಮ; ಆಸೆ ಬತ್ತದ ತೊರೆ,
 • ನೂರು ಯಾಗವ ಮಾಡು, ಪಡೆ ಇಂದ್ರ ಪದವಿಯ ಭೋಗ,
 • ಹೋರಾಟ-ದುಃಖ ದುಮ್ಮಾನ-ಕೊನೆಯಿಲ್ಲ. ||೪||

-

 • ಸರ್ವಕಾಲಿಕ ಸತ್ಯ-ಜೀವನದ ಅರ್ಥಕ್ಕೆ ಋಷಿ ಚಿಂತನೆ,
 • ಮತ್ತೆ ದರ್ಶನ - ಉಪನಿಷತ್ ಮಂತ್ರಗಳು. ಕಾಲಚಕ್ರದಲಿ ,
 • ಭೋಗದಮಲಿನಲಿ ಮರೆತದ್ದು -ಮತ್ತೆ ಒರೆದದ್ದು-
 • ಭಗವಂತ ಅರ್ಜುನಗೆ-ಅದೇ ಗೀತೆ -ಕರ್ತವ್ಯ ಮಂತ್ರ. ||೫||

-

 • ಭೋಗವೋ-ಜೀವನದರ್ಥಕ್ಕೆ ಹುಡುಕಾಟವೋ ?
 • ನಿರ್ಣಯವಿಲ್ಲ-ಹಲವರಿಗೆ ಬೇಕಿಲ್ಲ;
 • ಜಗದರ್ಥವದೇನು? ಜೀವನದ ಆದಿ ಅಂತ್ಯವದೆಲ್ಲಿ?
 • ಪ್ರಶ್ನೆಗಳು: ಸತ್ಯವದೊಂದೇ-ಪ್ರಶ್ನೆಗಳು ಹಲವಾರು! ||೬||

-

 • ಕೇಳದಿದ್ದವಗೆ ಕರ್ಮಕಾಂಡ-ಭೋಗ, ಸುಖ ದುಃಖ;
 • ಕೇಳಿದವಗೆ ಜ್ಞಾನಕಾಂಡ -ತ್ಯಾಗ ಹುಡುಕಾಟ:
 • ಸಂಹಿತೆಗಳಲಿ ಕವಲೆರಡು-ಶಂಕರರ ನಿರ್ಣಯ:
 • ಅವರ ಬೋಧೆ ಭಾಷ್ಯಗಳೆಲ್ಲ ಜ್ಞಾನಕಾಂಡಕ್ಕೇ ಮೀಸಲು. ||೭||

-

 • ಗೀತೆಯದು ಸಮನ್ವಯ ಪ್ರಯತ್ನ- ಹೊಸ ಅರ್ಥ;
 • ಕರ್ತವ್ಯ-ಯಜ್ಞ ,ದಯೆ, ಭಗವತ್ಪ್ರೇಮ-ನಿಷ್ಕಾಮ ಕರ್ಮ,
 • ಸಚ್ಚರಿತೆಯೇ ತಪ; ಜ್ಞಾನ-ವಿಚಾರ,ಕರ್ಮಕೌಶಲ ಯೋಗ,
 • ಭಗವದರ್ಪಣದಹುತಿಯಲ್ಲಿ ಕಾಯಕವೆಲ್ಲ ಯಜ್ಞ ; ||೮||

-

 • ಶತಶತಮಾನಗಳ ಪರಂಪರೆಯಲ್ಲಿ ಸುತ್ತಿ ಸುತ್ತಿ,
 • ಹೊಸ ಭಾವ ಭಂಗಿಗಳಲಿ ಮೊದಲಿದ್ದಲ್ಲಿಗೇ ಪಯಣ;
 • ಭೋಗ ಪ್ರಪಂಚದಲಿ ಆಡಂಬರದ ಕರ್ಮಕ್ಕೇ ಗೆಲುವು;
 • ಚಿಂತನೆ ಹುಡುಕಾಟ- ಕೇವಲ ಸಂಶೋಧನೆ-ಹವ್ಯಾಸ. ||೯||

ಸೋಮಯಾಗ[ಬದಲಾಯಿಸಿ]


 • ಕಾಲ ಮುಂದೆ ಸರಿವುದ ಕಂಡಿದ್ದೇವೆ,
 • ಹಿಂದೆ ಸರಿಯಿತು ಕಟ್ಟೆ ಯಲಿ -ಐದು ಸಾವಿರ ವರ್ಷ,
 • ಕಾಲಚಕ್ರವ ತಿರುಗಿದರು ಹಿಮ್ಮುಖವಾಗಿ,
 • ಧರ್ಮಾಂಧರು, ಕರ್ಮಠರು, ಎಂಥ ಧೈರ್ಯ-ಅವಿವೇಕ! ||೧||

-(ಕಟ್ಟೆ - ಯಾಗ ನಡೆದ ಊರ ಹೆಸರು)

 • ಅಂದು ಅಜಾತಶತ್ರು ತಂದ ಐನೂರು ಕುರಿಗಳ ದಂಡು,
 • ನೂರು ಅಗ್ನಿ ಕುಂಡ - ಸ್ವರ್ಗಕ್ಕೆ ಮಜ್ಜೆ ಮಾಂಸದ ಏಣಿ,
 • ರಂಭೆ ಊರ‍್ವಶಿಯರ ಅಂಗ ಸುಖದಾಸೆ ! (ವಿಷಯ ಲಂಪಟರು)
 • ಬಂದ ಗೌತಮ ಬುದ್ಧ ಕಾರುಣ್ಯ ಮೂರ್ತಿ. ||೨||

-

 • ನಾಸ್ತಿಕನೆನಿಸಿಕೊಂಡರೂ ಅವತಾರ ಪುರುಷ !
 • ಶತ್ರು ವಿನ ಮಿತ್ರ ಬಿತ್ತಿದನು ಕರುಣೆ-ವೈಚಾರಿಕತೆಯ ಬೀಜ,
 • ಉಳಿದದ್ದು - ಐದು ನೂರು ಕುರಿ? ಅಲ್ಲ ; ಮಾನವತೆ-ಧರ್ಮ.
 • ಕಟ್ಟೆಯಲಿ ಐದು ಕುರಿಗಾಗಿ ಬರಬೇಕಿತ್ತೆ ಮತ್ತೆ ಬುದ್ಧ? ||೪||

-

 • ದಕ್ಷಿಣದಿ ಕರ್ಮಠರ -ಮೀಮಾಂಸಕರ ಯಜ್ಞ ವೈಭವ,
 • ಚಕ್ರದಲಿ ಹಿಂದೆ ಸಾವರದಿನ್ನೂರು ವರ್ಷ,
 • ಬರಬೇಕಾಯಿತು ಶಂಕರ,-ಜ್ಞಾ ನ ವೈರಾಗ್ಯ ಜೀವನದರ್ಥ,
 • ವಿಚಾರದಡಿಗಟ್ಟಿನಲಿ ಅದ್ವೈ ತ ಸರ್ವಾತ್ಮ ಬೋಧೆ. ||೫||

-

 • ಇಲ್ಲಿ, ಅದ್ವೈತ ಭಾಷ್ಯಗಳ ಬರೆದಾ ಬೆರಳುಗಳ ಕತ್ತರಿಸಿ,
 • ಕರ್ಮಠರು ಸಮಿತ್ತನು ಮಾಡಿ - ಯಜ್ಞಕಾಹುತಿಯ್ತು,
 • ವಿವೇಕಾನಂದ ಜಗದಿ ಮೆರೆದ ಭಾರತ ಸಂಸ್ಕೃತಿಯೆ ಆಜ್ಯವಾಯ್ತು,
 • ಗೀತೋಪನಿಷತ್ತುಗಳನು ಮುಟ್ಟಿಗೆ ಮಾಡಿ ಅಗ್ನಿ-ಪ್ರಜ್ವಲನ. ||೬||

-

 • ಚಿತ್ರ ಹಿಂಸೆಯಲಿ ಸತ್ತದ್ದು ಕುರಿಯಲ್ಲ -ಮುಗ್ಧ ವೈದಿಕರು
 • ಕುಡಿದು ಮೆರೆದಿದ್ದು ಸೋಮವನಲ್ಲ -ವೈಚಾರಿಕರ ಮಾನ,
 • ಹುರಿದ ಮಾಂಸದ ಆಹುತಿಯಲಿ ಬೆಂದದ್ದು -ಮಾನವಧರ್ಮ,
 • ಆ ಶಂಕರರ ನಿಟ್ಟುಸಿರು ಹೊಗೆಯಾಗಿ - ಜಿಗುಪ್ಸೆ-ಕರಟು ವಾಸನೆ! ||೭||

-

ನೋಡಿ[ಬದಲಾಯಿಸಿ]

ಕನ್ನಡ ಸಾಹಿತ್ಯ ಪ್ರಕಾರಗಳು

ಉಲ್ಲೇಖ[ಬದಲಾಯಿಸಿ]

 • |
 • ಕಾವ್ಯಗರ್ಭ-ವಿಮರ್ಶಾಗ್ರಂಥಉಪನ್ಯಾಸಕರು, ಲೇಖಕರು- ಶ್ರೀ ಬಿ.ಎನ್.ನಾಗರಾಜ ಭಟ್ಟರು
 • ಶಂಕರ ವಿಜಯ ಲೇ: ರಂಗನಾಥ ಶರ್ಮಾ ಬೆಂಗಳೂರು
 • ಬ್ರಹ್ಮಸೂತ್ರ ಭಾಷ್ಯ ನತ್ತು ಭಗವದ್ಗೀತಾ ಭಾಷ್ಯ (ಕನ್ನಡ ಅನುವಾದದಲ್ಲಿ)ಲೇಖಕರು: ಶ್ರೀ ಸಚ್ಚದಾನಂದ ಸರಸ್ವಿತೀ ಸ್ವಾಮಿಯವರು ಮತ್ತು ಪೂರ್ವಾಶ್ರಮ ನಾಮ -ಯಲ್ಲಂಬಳಸೆ ಸುಬ್ರಾಯ ಶರ್ಮಾ;ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕರ್ಯಾಲಯ ಹೊಳೆನರಸೀಪುರ, ಹಾಸನ ಜಿಲ್ಲೆ.
 • ಸೋಮಯಾಗ - f ಮಲೆನಾಡು ಮಲ್ಲಿ ಪತ್ರಿಕೆ ಸಾಗರಗೆ;ದಿ;೨೪-೭-೨೦೦೦
 • "https://kn.wikipedia.org/w/index.php?title=ನವ್ಯ&oldid=893256" ಇಂದ ಪಡೆಯಲ್ಪಟ್ಟಿದೆ