ವಿಷಯಕ್ಕೆ ಹೋಗು

ಅರ್ಥಾಂತರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಥಾಂತರ

[ಬದಲಾಯಿಸಿ]

ಒಂದು ಪದದ ಅರ್ಥವು ಹಿಗ್ಗದೆ,ಕುಗ್ಗದೆ, ಹೀನಾರ್ಥ ಪಡೆಯದೆ, ಉತ್ತಮವಾದ ಅರ್ಥವನ್ನು ಪಡೆಯದೆ, ಆ ಪದವು ಬೇರೆಯದೆ ಆದ ಅರ್ಥವನ್ನು ಪಡೆದರೆ ಅದನ್ನು ಅರ್ಥಾಂತರ ಎಂದು ಹೇಳುವರು[].[]

  • ವಾಚ್ಯರ್ಥದ ಜೋತೆಗೆ ಸೂಕ್ಷ್ಮ ಅರ್ಥವನ್ನು ಬಿಟ್ಟುಕೊಡುತ್ತದೆ[].

ಈ ರೀತಿಯಲ್ಲಿ ಅರ್ಥ ವ್ಯತ್ಯಾಸವನ್ನು ಹೊಂದಿದೆ.[]

  1. ಸ್ವಭಾವ
  2. ಗುಣ
  3. ಕ್ರಿಯೆ
ಶಬ್ದಮೊದಲಿದ್ದ ಅರ್ಥಈಗಿನ ಅರ್ಥ
ಅಮ್ಮತಂದೆತಾಯಿ
ದಾಹಉರಿಬಾಯಾರಿಕೆ
ನಿಜತನ್ನ ಸ್ವಂತಸತ್ಯ
ಅವಸರಸಮಯಆತುರ
ಖಂಡಿತಕತ್ತರಿಸುಸತ್ಯ
ವಿಪರೀತವಿರುದ್ಧಬಹಳ
ಭದ್ರಮಂಗಳಸುರಕ್ಷಿತ
ಸಂಭ್ರಮಗೊಂದಲಸಡಗರ
ನಿಧಾನರೋಗ ಪರೀಕ್ಷೆಸಾವಕಾಶ

ಉಪಯುಕ್ತತೆ

[ಬದಲಾಯಿಸಿ]

ಹೀಗೆ ಅನೇಕ ಶಬ್ದಗಳು ಕಾಲದಿಂದ ಕಾಲಕ್ಕೆ ಅವು ಹೊಂದಿದ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುತ್ತಾ ಬಂದುದನ್ನು ಲಕ್ಷಿಸುವೆವು. ಇದೂ ಒಂದು ರೀತಿಯಲ್ಲಿ ಭಾಷೆಯಲ್ಲಿ ನಡೆಯುವ ಬೆಳವಣಿಗೆಯನ್ನು ಸೂಚಿಸುವಂಥದ್ದಾಗಿದೆ ಎನ್ನಬಹುದು. ಆದರೆ ಕನ್ನಡ ಭಾಷಾ ಬೆಳವಣಿಗೆಯು ಶಬ್ದಗಳಲ್ಲಿ ಇಂಥ ಧ್ವನಿ ಹಾಗೂ ಅರ್ಥ ವ್ಯತ್ಯಾಸಗಳಂತಹ ಆಂತರಿಕ ಬದಲಾವಣೆಗಳಿಗಿಂತ ಅನ್ಯಭಾಷೆಗಳ ಶಬ್ದಗಳನ್ನು ಸ್ವೀಕರಿಸುವುದರ ಮೂಲಕ; ಹೊಸ- ಹೊಸ ಶಬ್ದಗಳ ಸೇರ್ಪಡೆಯು ಕನ್ನಡದ ನಿಘಂಟಿಗೆ ಆಗುವ ಮೂಲಕ ಘಟಿಸುವುದು.ತನ್ಮೂಲಕ ಕನ್ನಡದಲ್ಲಿ ಶಬ್ದಸಂಪತ್ತು ದ್ವಿಗುಣಗೊಂಡು ಭಾಷೆಯ ಬೆಳವಣಿಗೆಗೆ ಎಡೆಮಾಡಿಕೊಡುವುದು.

ಉಲ್ಲೇಖಗಳು

[ಬದಲಾಯಿಸಿ]
  1. http://shodhganga.inflibnet.ac.in/bitstream/10603/82008/7/07_chapter%203.pdf
  2. https://swaantassukhaaya.blogspot.com/2017/01/blog-post_54.html
  3. http://kanaja.in/?p=114570
  4. ರಾಜಪ್ಪ ದಳವಾಯಿ (೧೯೯೬). ಕನ್ನಡ ಸಾಹಿತ್ಯ ಕೋಶ. ಬೆಂಗಳೂರು: ದಳವಾಯಿ ಪ್ರಕಾಶನ ಬೆಂಗಳೂರು. pp. ೪೩೭–೩೮. {{cite book}}: Check date values in: |year= (help)CS1 maint: year (link)