ಅರ್ಥಾಂತರ
ಗೋಚರ
ಅರ್ಥಾಂತರ
[ಬದಲಾಯಿಸಿ]ಒಂದು ಪದದ ಅರ್ಥವು ಹಿಗ್ಗದೆ,ಕುಗ್ಗದೆ, ಹೀನಾರ್ಥ ಪಡೆಯದೆ, ಉತ್ತಮವಾದ ಅರ್ಥವನ್ನು ಪಡೆಯದೆ, ಆ ಪದವು ಬೇರೆಯದೆ ಆದ ಅರ್ಥವನ್ನು ಪಡೆದರೆ ಅದನ್ನು ಅರ್ಥಾಂತರ ಎಂದು ಹೇಳುವರು[೧].[೨]
- ವಾಚ್ಯರ್ಥದ ಜೋತೆಗೆ ಸೂಕ್ಷ್ಮ ಅರ್ಥವನ್ನು ಬಿಟ್ಟುಕೊಡುತ್ತದೆ[೩].
ಈ ರೀತಿಯಲ್ಲಿ ಅರ್ಥ ವ್ಯತ್ಯಾಸವನ್ನು ಹೊಂದಿದೆ.[೪]
- ಸ್ವಭಾವ
- ಗುಣ
- ಕ್ರಿಯೆ
ಶಬ್ದ | ಮೊದಲಿದ್ದ ಅರ್ಥ | ಈಗಿನ ಅರ್ಥ |
---|---|---|
ಅಮ್ಮ | ತಂದೆ | ತಾಯಿ |
ದಾಹ | ಉರಿ | ಬಾಯಾರಿಕೆ |
ನಿಜ | ತನ್ನ ಸ್ವಂತ | ಸತ್ಯ |
ಅವಸರ | ಸಮಯ | ಆತುರ |
ಖಂಡಿತ | ಕತ್ತರಿಸು | ಸತ್ಯ |
ವಿಪರೀತ | ವಿರುದ್ಧ | ಬಹಳ |
ಭದ್ರ | ಮಂಗಳ | ಸುರಕ್ಷಿತ |
ಸಂಭ್ರಮ | ಗೊಂದಲ | ಸಡಗರ |
ನಿಧಾನ | ರೋಗ ಪರೀಕ್ಷೆ | ಸಾವಕಾಶ |
ಉಪಯುಕ್ತತೆ
[ಬದಲಾಯಿಸಿ]ಹೀಗೆ ಅನೇಕ ಶಬ್ದಗಳು ಕಾಲದಿಂದ ಕಾಲಕ್ಕೆ ಅವು ಹೊಂದಿದ ಅರ್ಥದಲ್ಲಿ ವ್ಯತ್ಯಾಸವನ್ನು ಹೊಂದುತ್ತಾ ಬಂದುದನ್ನು ಲಕ್ಷಿಸುವೆವು. ಇದೂ ಒಂದು ರೀತಿಯಲ್ಲಿ ಭಾಷೆಯಲ್ಲಿ ನಡೆಯುವ ಬೆಳವಣಿಗೆಯನ್ನು ಸೂಚಿಸುವಂಥದ್ದಾಗಿದೆ ಎನ್ನಬಹುದು. ಆದರೆ ಕನ್ನಡ ಭಾಷಾ ಬೆಳವಣಿಗೆಯು ಶಬ್ದಗಳಲ್ಲಿ ಇಂಥ ಧ್ವನಿ ಹಾಗೂ ಅರ್ಥ ವ್ಯತ್ಯಾಸಗಳಂತಹ ಆಂತರಿಕ ಬದಲಾವಣೆಗಳಿಗಿಂತ ಅನ್ಯಭಾಷೆಗಳ ಶಬ್ದಗಳನ್ನು ಸ್ವೀಕರಿಸುವುದರ ಮೂಲಕ; ಹೊಸ- ಹೊಸ ಶಬ್ದಗಳ ಸೇರ್ಪಡೆಯು ಕನ್ನಡದ ನಿಘಂಟಿಗೆ ಆಗುವ ಮೂಲಕ ಘಟಿಸುವುದು .ತನ್ಮೂಲಕ ಕನ್ನಡದಲ್ಲಿ ಶಬ್ದಸಂಪತ್ತು ದ್ವಿಗುಣಗೊಂಡು ಭಾಷೆಯ ಬೆಳವಣಿಗೆಗೆ ಎಡೆಮಾಡಿಕೊಡುವುದು.
ಉಲ್ಲೇಖ
[ಬದಲಾಯಿಸಿ]- ↑ http://shodhganga.inflibnet.ac.in/bitstream/10603/82008/7/07_chapter%203.pdf
- ↑ https://swaantassukhaaya.blogspot.com/2017/01/blog-post_54.html
- ↑ http://kanaja.in/?p=114570[ಶಾಶ್ವತವಾಗಿ ಮಡಿದ ಕೊಂಡಿ]
- ↑ ರಾಜಪ್ಪ ದಳವಾಯಿ (೧೯೯೬). ಕನ್ನಡ ಸಾಹಿತ್ಯ ಕೋಶ. ಬೆಂಗಳೂರು: ದಳವಾಯಿ ಪ್ರಕಾಶನ ಬೆಂಗಳೂರು. pp. ೪೩೭-೩೮.