ಚಾಮರಸ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಚಾಮರಸನು ಹದಿನೈದನೆಯ ಶತಮಾನದ ಆದಿಭಾಗದಲ್ಲಿ ಜೀವಿಸಿರಬಹುದಾದ ಕವಿ. ಪ್ರಭುಲಿಂಗ ಲೀಲೆಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯ. ಈ ಕಾವ್ಯವು ನಾಲ್ಕು ಭಾಷೆಗಳಿಗೆ ಅನುವಾದವಾಗಿದೆಯೆಂದರೆ ಇದರ ಮಹತ್ವವನ್ನು ಅರಿಯಬಹುದು.ಪಿಡುಪರ್ತಿ ಬಸವ ಕವಿಯು ಇದನ್ನು ಚಂಪೂ ರೂಪದಲ್ಲಿ , ಪಿಡುಪರ್ತಿ ಸೋಮನಾಥನು ದ್ವಿಪದಿಯಲ್ಲಿ ತೆಲುಗಿಗೆ ಅನುವಾದಿಸಿದ್ದಾರೆ. ತಿರುವಣ್ನಾಮಲೈಯ ಶಿವಪ್ರಕಾಶ ಸ್ವಾಮಿಯು ತಮಿಳಿಗೆ, ಬ್ರಹ್ಮದಾಸನು ಮರಾಠಿಗೆ ಅನುವಾದಿಸಿದ್ದಾರೆ. ಈ ಕಾವ್ಯವು ಸಂಸ್ಕೃತ ಭಾಷೆಗೂ ಸಹ ಭಾಷಾಂತರವಾಗಿದೆ.


"https://kn.wikipedia.org/w/index.php?title=ಚಾಮರಸ&oldid=426318" ಇಂದ ಪಡೆಯಲ್ಪಟ್ಟಿದೆ