ಮಲ್ಲಿಕಾರ್ಜುನ

ವಿಕಿಪೀಡಿಯ ಇಂದ
Jump to navigation Jump to search

ಕಾಲ ಸು. ೧೨೪೦ .ಕೃತಿ:-ಸೂಕ್ತಿಸುಧಾರ್ಣವ ಎಂಬ ಸಂಕಲನ ಗ್ರಂಥದ ಸಂಯೋಜನೆ.೧೯ಆಶ್ವಾಸಗಳು ಇವೆ.ಮಲ್ಲಿಕಾರ್ಜುನ ಈ ಸಂಕಲನದೊಡನೆ ಬಸರಾಳು ಶಾಸನವನ್ನು ರಚಿಸಿದಂತೆ ತಿಳಿದುಬಂದಿದೆ.ಮಗ ಕೇಶಿರಾಜ. ಮಲ್ಲಿಕಾರ್ಜುನ ಹೊಯ್ಸಳರ "ವೀರ ಸೋಮೇಶ್ವರ"ನ ಆಶ್ರಿತ ಕವಿ.

ಬಿರುದು[ಬದಲಾಯಿಸಿ]

ಚಿದಾನಂದ ,ಮಲ್ಲಪ ,ಚಿದಾನಂದ ಮಲ್ಲಿಕಾರ್ಜುನ.

ಸಂಕಲನ ಗ್ರಂಥ[ಬದಲಾಯಿಸಿ]

ಸೂಕ್ತಿಸುಧಾರ್ಣವ[ಬದಲಾಯಿಸಿ]

ಕನ್ನಡ ಸಾಹಿತ್ಯದಿಂದ ಉತ್ತಮ ಪದ್ಯಗಳನ್ನಾಯ್ದುಕೊಂಡು ಈ ಸಂಕಲನ ಗ್ರಂಥವನ್ನು ರಚಿಸಿದ್ದಾನೆ. ಈ ಗ್ರಂಥವು ಕನ್ನಡದ ಮೊಟ್ಟ ಮೊದಲ ಸಂಕಲನ ಕೃತಿ. ಇದಕ್ಕೆ ಕಾವ್ಯಸಾರ ಎಂಬ ಹೆಸರೂ ಇದೆ.ಈ ಗ್ರಂಥ ಕನ್ನಡ ಸಾಹಿತ್ಯದಲ್ಲಿ ಕವಿಗಳ ಕಾಲ ನಿರ್ಣಾಯಕ್ಕೆ ಕರ್ತೃತ್ವ ನಿರ್ಣಯಕ್ಕೆ ಉಪಯುಕ್ತ ಗ್ರಂಥವಾಗಿದೆ.ಈ ಕಾವ್ಯಸಾರದಲ್ಲಿ ಹೊಯ್ಸಳರ ವಂಶದ ಸ್ಥಾಪನೆಯಾದ ವಿಷಯ, ವಂಶವೃಕ್ಷ, ವೀರ ಸೋಮೇಶ್ವರನ ಶೌರ್ಯ ಪ್ರತಾಪಗಳು ವಿವರವಾಗಿ ಚಿತ್ರಿಸಲಾಗಿದೆ.