ಕಂದ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕಂದ ಪದ್ಯ ಅಥವಾ ಕಂದ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರದ ಛಂದಸ್ಸಾಗಿದೆ. ಕನ್ನಡದ ಅನೇಕ ಕವಿಗಳು ವಿಪುಲವಾಗಿ ಇದನ್ನು ಬಳಸಿಕೊಂಡಿದ್ದಾರೆ. ಇದು ಚತುರ್ಮಾತ್ರಾಗಣಗಳ ಗತಿಯಲ್ಲಿ ಬರುವ ಪ್ರಕಾರವಾಗಿದೆ. ಇದರಲ್ಲಿ ಮೊದಲ ಸಾಲಿನಲ್ಲಿ ಮೂರು ಗಣಗಳೂ ಎರಡನೇ ಸಾಲಿನಲ್ಲಿ ಐದು ಗಣಗಳೂ ಪುನಃ ಮೂರನೇ ಸಾಲಿನಲ್ಲಿ ಮೂರು ಗಣಗಳೂ ನಾಲ್ಕನೇ ಸಾಲಿನಲ್ಲಿ ಐದು ಗಣಗಳೂ ಇರುತ್ತವೆ. ಎಲ್ಲಾ ಗಣಗಳು ನಾಲ್ಕು ಮಾತ್ರೆಗಳಿಗೆ ವಿಭಾಗಿಸಲ್ಪಟ್ಟಿರುತ್ತವೆ. ಅದನ್ನು ಹೀಗೆ ತೋರಿಸಬಹುದು.

ಕಂದ ಪದ್ಯದ ವಿನ್ಯಾಸ[ಬದಲಾಯಿಸಿ]

೪ + ೪ + ೪ =೧೨
೪ + ೪ + ೪ + ೪ + ೪ =೨೦
೪ + ೪ + ೪ =೧೨
೪ + ೪ + ೪ + ೪ + ೪ =೨೦

ಕಂದದ ನಿಯಮಗಳು[ಬದಲಾಯಿಸಿ]


  1. ಇದರಲ್ಲಿ ವಿಷಮ ಸ್ಥಾನಗಳಲ್ಲಿ ಅಂದರೆ ೧,೩,೫,೭ ಹಾಗೇ ೯,೧೧,೧೩,೧೫ ನೇ ಗಣಗಳಲ್ಲಿ ಜಗಣ ಅಂದರೆ ಮಧ್ಯಗುರು ಇರುವ U_U ವಿನ್ಯಾಸ ಬರಬಾರದು
  2. ಎರಡನೇ ಹಾಗೂ ನಾಲ್ಕನೇ ಸಾಲಿನ ಕೊನೆಯ ಗಣವು ಅಂತ್ಯಗುರುಯುಕ್ತವಾಗಿರಬೇಕು. ಅಂದರೆ UU_ ಅಥವಾ __ ಈ ವಿನ್ಯಾಸಗಳು ಬರಬಹುದು.
  3. ೬ನೇ ಹಾಗೂ ೧೪ನೇ ಗಣಗಳು ಮಾತ್ರ ಮಧ್ಯ ಗುರು ಇರುವ ಜಗಣ ವಿನ್ಯಾಸ (U_U) ಅಥವಾ ಸರ್ವಲಘುಗಳಿರುವ ವಿನ್ಯಾಸ (U,UUU) ಬರಬಹುದು. ಸರ್ವಲಘುಗಳಿರುವ ವಿನ್ಯಾಸ ಬಂದಲ್ಲಿ ಮೊದಲ ಅಕ್ಷರದ ನಂತರ ಯತಿ ಬರಲೇಬೇಕು.
  4. ಉಳಿದ ಗಣಗಳಲ್ಲಿ ಯಾವ ರೀತಿಯ ವಿನ್ಯಾಸ ಬೇಕಾದರೂ ಬರಬಹುದು.

ಕಂದ ಪದ್ಯ - ಪ್ರಸ್ತಾರ ಕ್ರಮ[ಬದಲಾಯಿಸಿ]

ಉದಾಹರಣೆ-
U U U U | _ _ |U U U U |
ಒಡೆಯಲ |ಜಾಂಡಂ | ಕುಲಗಿರಿ |

U U _ | U U_|U _ U|UU_| U U_|
ಕೆಡೆಯಲ್| ಪಿಳಿಯ|ಲ್ಕೆ ಧಾತ್ರಿ|ದಿವಿಜರ್| ನಡುಗ-|

U U U U| U _U | _ U U|
ಲ್ಕೊಡರಿಸು |ವಿನಂ ಜ | ಟಾಸುರ|

U _ U| UU_|U_U | _ _|__|
ಹಿಡಿಂಬ | ಬಕವೈ|ರಿ ಸಿಂಹ|ನಾದಂ| ಗೆಯ್ದಂ||

ಈ ಪದ್ಯ ರಚನೆಯ ಕುರಿತ ವಿಡಿಯೋ ಹಾಗೂ ವಿವರಗಳನ್ನು ಪದ್ಯಪಾನ ಜಾಲದಲ್ಲಿಯೂ ನೋಡಬಹುದು. ಕಂದಪದ್ಯ ರಚನೆಗೆ ಪ್ರಯತ್ನಿಸಲು ಕೂಡ ಈ ವಿಡಿಯೋ ಸಹಕಾರಿಯಾಗಿದೆ.

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ಕಂದ&oldid=639343" ಇಂದ ಪಡೆಯಲ್ಪಟ್ಟಿದೆ