ಸರಸ್ವತಿ ಸಮ್ಮಾನ್‌ ಪುರಸ್ಕಾರ

ವಿಕಿಪೀಡಿಯ ಇಂದ
Jump to navigation Jump to search

ಸರಸ್ವತಿ ಸಮ್ಮಾನ್‌ ಪುರಸ್ಕಾರ-೨೦೧೪[ಬದಲಾಯಿಸಿ]

ಸರಸ್ವತಿ ಸಮ್ಮಾನ್‌ ಪುರಸ್ಕಾರ
‘ರಾಮಾಯಣ ಮಹಾ­ನ್ವೇಷಣಂ’ ಮಹಾಕಾವ್ಯಕ್ಕಾಗಿ ಕಾಂಗ್ರೆಸ್‌ ಸಂಸದ ಎಂ. ವೀರಪ್ಪ ಮೊಯಿಲಿ ಅವರು ೨೦೧೪ನೇ ಸಾಲಿನ ಸರಸ್ವತಿ ಸಮ್ಮಾನ್‌ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಎರಡನೇ ಕನ್ನಡಿಗ
ಹಿರಿಯ ಸಾಹಿತಿ ಎಸ್.ಎಲ್‌.ಭೈರಪ್ಪ ಅವರ ಬಳಿಕ ಮೊಯಿಲಿ ಅವರು ಸರಸ್ವತಿ ಸಮ್ಮಾನ್‌ಗೆ ಪಾತ್ರರಾಗುತ್ತಿರುವ ಎರಡನೇ ಕನ್ನಡಿಗ. ಭೈರಪ್ಪ ೨೦೧೦ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದರು. ಕೆ.ಕೆ.ಬಿರ್ಲಾ ಪ್ರತಿಷ್ಠಾನ ೧೯೯೧ರಲ್ಲಿ ಸ್ಥಾಪಿಸಿದ ಈ ಪ್ರಶಸ್ತಿಯು ರೂ 10 ಲಕ್ಷ ನಗದು ಒಳಗೊಂಡಿದೆ.
ಐದು ಸಂಪುಟಗಳ ಮಹಾಕಾವ್ಯ
ಸಂಸದ ಎಂ. ವೀರಪ್ಪ ಮೊಯಿಲಿ ಅವರ ‘ರಾಮಾಯಣ ಮಹಾನ್ವೇಷಣಂ’ ಐದು ಸಂಪುಟಗಳ ಮಹಾಕಾವ್ಯ. ಇದು ೨೦೦೭ರಲ್ಲಿ ಬಿಡುಗಡೆಯಾಗಿತ್ತು.
ಈ ಮಹಾಕಾವ್ಯ ಇಂಗ್ಲಿಷ್‌, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಿಗೆ ಅನುವಾದಗೊಂಡಿದೆ.
ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಪ್ರಸ್ತಾಪಿಸಲಾಗಿರುವ ಭಾರತೀಯ ಭಾಷೆಯ ಶ್ರೇಷ್ಠ ಸಾಹಿತ್ಯ ಕೃತಿಗೆ ವಾರ್ಷಿಕವಾಗಿ ಸರಸ್ವತಿ ಸಮ್ಮಾನ್‌ ಪುರಸ್ಕಾರ ನೀಡಲಾಗುತ್ತಿದ್ದು, ಈ ಸಲ ‘ರಾಮಾಯಣ ಮಹಾನ್ವೇಷಣಂ’ ಕೃತಿಗೆ ದೊರೆತಿದೆ.
ಕಾವ್ಯದಲ್ಲಿ ಏನಿದೆ 
'ರಾಮಾಯಣ ಮಹಾನ್ವೇಷಣಂ' ಕಾವ್ಯದಲ್ಲಿ ರಾಮರಾಜ್ಯದ ಕುರಿತು ವರ್ಣನೆ ಇದೆ. ಕಲ್ಯಾಣ ರಾಜ್ಯದ ಆದರ್ಶ ಸಿದ್ಧಾಂತಗಳನ್ನು ಮತ್ತು ಆಧುನಿಕ ದೃಷ್ಟಿಕೋನಗಳನ್ನು ತೆರೆದಿಡಲಾಗಿದೆ ಎಂದು ಕೆ.ಕೆ.ಬಿರ್ಲಾ ಪ್ರತಿಷ್ಠಾನ ಹೇಳಿದೆ. ಸುಪ್ರೀಂಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಆರ್‌.ಸಿ.ಲಹೋಟಿ ನೇತೃತ್ವದ 13 ಸದಸ್ಯರ ಸಮಿತಿ ವೀರಪ್ಪ ಮೊಯ್ಲಿ ಅವರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ವೀರಪ್ಪ ಮೊಯ್ಲಿ ಅವರು ನಾಲ್ಕು ಕಾದಂಬರಿ, ಮೂರು ಕಾವ್ಯ ಸಂಗ್ರಹ, ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಅವರ ಕಾದಂಬರಿಗಳಾದ 'ಕೊಟ್ಟ' ಮತ್ತು 'ತೆಂಬರೆ' ಹಿಂದಿ, ಇಂಗ್ಲಿಷ್‌ಗೆ ಭಾಷಾಂತರಗೊಂಡಿವೆ.
ಕೃತಿಗಳು: ಮೊಯಿಲಿ ಅವರು ನಾಲ್ಕು ಕಾದಂಬರಿಗಳು, ಮೂರು ಕವನ ಸಂಕಲನಗಳು, ಹಲವು ನಾಟಕಗಳು ಹಾಗೂ ಪ್ರಬಂಧಗಳನ್ನು ಬರೆದಿದ್ದಾರೆ.
ಅವರ ಕನ್ನಡ ಕಾದಂಬರಿ ‘ಕೊಟ್ಟ’ ಹಾಗೂ ತುಳು ಕಾದಂಬರಿ ‘ತೆಂಬರೆ’ ಹಿಂದಿ, ಇಂಗ್ಲಿಷ್‌ ಹಾಗೂ ಇನ್ನಿತರ ಭಾಷೆಗಳಿಗೆ ಅನುವಾದಗೊಂಡಿವೆ.

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  • prajavani/೧೦-೩-೨೦೧೫-[೧]
  • kannada.oneindia.com