ಸುಶ್ರುತರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರಿ.ಪೂ.೨,೫೬೦- ೨,೪೮೭)

ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶ್ರುತಾಚಾರ್ಯರು, ಸುಮಾರು ೪,೦೦೦ ವರ್ಷಗಳ ಹಿಂದೆ ಅಂದರೆ, ಕ್ರಿ. ಪೂ. ೨,೫೬೦ ಹಾಗೂ ೨,೪೮೭ ರ ಕಾಲಘಟ್ಟದಲ್ಲಿ ಇದ್ದರೆಂದು ಊಹಿಸಬಹುದಾಗಿದೆ. ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಅದರಲ್ಲೇ ತಮ್ಮ ಅಮೋಘ ಕಾಣಿಕೆಯನ್ನು ಇತ್ತವರು. ಅವರು ಬರೆದ "ಸುಶ್ರುತ ಸಂಹಿತೆ", ವೈದ್ಯನೆರವಿನ ಬಹು ಉಪಯುಕ್ತವಾದ, ಆರೋಗ್ಯ ಸಂಬಂಧದ ವಿಚಾರಗಳಿಗೆ ಸಲಹೆ, ಪರಿಹಾರ ನೀಡುವ ಒಂದು 'ಖಣಿ' ಎಂಬುದು  ಆಪುಸ್ತಕವನ್ನು ಓದಿದವರೆಲ್ಲರ ಅಭಿಪ್ರಾಯ.

ಸುಶ್ರುತರ ಬಾಲ್ಯ ಮತ್ತು ವಿದ್ಯಾಭ್ಯಾಸ[ಬದಲಾಯಿಸಿ]

ಚಿತ್ರ:Images (5).jpg
'ಸುಶ್ರುತ'

ವಿಶ್ವಾಮಿತ್ರನೆಂಬ ಋಷಿಯೋ ಅಥವಾ, ರಾಜನೋ, ಗಾಂಧಾರದೇಶದಲ್ಲಿ ವಾಸಿಸುತ್ತಿದ್ದ ಅತ್ಯಂತ ಜನಪ್ರಿಯ ವ್ಯಕ್ತಿಯ ಮಗನೆಂದು ಗ್ರಂಥಗಳಿಂದ ತಿಳಿದುಬರುವ ವಿಚಾರ. ಸುಶ್ರುತ ಎಂಬ ಪದದ ಹತ್ತಿರವಾಗಿ ಅನೇಕ ಹೆಸರುಗಳನ್ನು ಈಗಿನ್ ಆಫ್ಘಾನಿಸ್ಥಾನದಲ್ಲಿ ನಾವು ಪತ್ತೆಹಚ್ಚಬಹುದು. ಅಲ್ಲಿನ ಬುಡಕಟ್ಟಿನ ಅನೇಕ ಜನರ ಹೆಸರು, ಸುಶ್ರುತ್, ಸುರಾಟ್, ಸೌರುಟಿ, ಸುಹ್ರಾದಿ, ಇತ್ಯಾದಿಗಳಿವೆ. ಬಹುಶಃ ಈ ನಾಮಧೇಯಗಳು, 'ಸುಶ್ರುತ ನಾಮ'ದ ಬೇರೆಬೇರೆ ರೂಪಗಳೆಂದು ಕೆಲವು ವಿದ್ವಾಂಸರ ಅಂಬೋಣ.

ಸುಶ್ರುತರ ವ್ಯಕ್ತಿತ್ವ[ಬದಲಾಯಿಸಿ]

ಸುಶ್ರುತಾಚಾರ್ಯರು ಒಳ್ಳೆಯ ಅಜಾನುಬಾಹು. ಉದ್ದ ಕಿವಿಗಳು, ತೆಳುವಾದ ನಾಲಗೆ, ಸಮರ್ಪಕವಾದ ತುಟಿ, ಹೊಳೆಯುವ ದಂತಪಂಕ್ತಿಗಳು, ಮುಖ, ತೆಜಃಪುಂಜವಾದ ಕಣ್ಣುಗಳು, ಸುಂದರವಾದ ನಾಸಿಕ, ನೋಡಿದ ಕೂಡಲೆ ಗೌರವ, ಸಂತೋಷನೀಡುವ, ಒಟ್ಟಾರೆ ವ್ಯಕ್ತಿತ್ವ. ಅದಕ್ಕೆ ಪೂರಕವಾದ, ಮೃದು ಮಾತು, ಕಷ್ಟಸಹಿಷ್ಣುತೆ, ಕೆಲಸದಲ್ಲಿ ಉತ್ಸಾಹ, ಮಾತಿನಲ್ಲಿ ವಿನಯ, ಅಸಾಧಾರಣವಾದ ಜ್ಞಾಪಕಶಕ್ತಿ, ಎದ್ದು ಕಾಣುತ್ತಿತ್ತು.

'ಭಗವಾನ್ ದಿವೋದಾಸ' ರು ಸುಶ್ರುತರ ಗುರುಗಳು :[ಬದಲಾಯಿಸಿ]

ಆಯುರ್ವೇದ, ಶಲ್ಯ, ಶಾಲಾಕ್ಯ-ಚಿಕಿತ್ಸೆಗಳಲ್ಲಿ ಶಿಕ್ಷಣಪಡೆಯಲು ಬೇರೆಬೇರೆಕಡೆಗಳಿಂದ ವಿದ್ಯಾರ್ಥಿಗಳು ಅವರಬಳಿಗೆ ಬರುತ್ತಿದ್ದರು. ಅವರಲ್ಲಿ 'ಔಷಧಸೇನವ', 'ಔತರಣ', 'ಔರಭ್ಯ', 'ಪೌಷ್ಕಲಾವತ', 'ಕರವೀರ', ಮತ್ತು 'ಗೋಪುರರಕ್ಷಕ' ರಿದ್ದರು. ಅವರೆಲ್ಲಾ ಸುಶ್ರುತರ ಸಹಪಾಠಿಗಳು. ಕರುಣಾಳು ದಿವೋದ್ಯಾಸರು, ಶಕರಾನ ವಂಶಸ್ಥರು. ಅಬ್ಜದೇವತೆಯ ವರಪ್ರಸಾದದಿಂದ ಕಾಶೀರಾಜನ ಪರಂಪರೆಯಲ್ಲಿ ಜನ್ಮತಾಳಿದ ವಿಚಾರಧಾರೆಗಳನ್ನು ಮಂಡಿಸಿದ್ದಾರೆ. "ಮುದಿತನ, ರೋಗರುಜಿನ, ಮರಣಗಳನ್ನು ನಿವಾರಿಸಿದ ಧನ್ವಂತರಿಯಾದ ನಾನು 'ಶಲ್ಯ ಚಿಕಿತ್ಸೆ,' ಪ್ರಧಾನವಾದ ಸಿದ್ಧಾಂತಗಳನ್ನೂ, ಪರಿಕರಗಳನ್ನೂ, ಹಾಗೂ ವಿಶೇಷ ಮಾಹಿತಿಗಳನ್ನು ಉಪದೇಶಕೊಡಲು, ಪುನಃ ಕಾಶೀರಾಜನ ಮಗನಾಗಿ ಜನಿಸಿ, ಈ ಲೋಕಕ್ಕೆ ಬಂದಿದ್ದೇನೆ," ಎಂದು ಒಂದು ಕಡೆ ಹೇಳಿಕೊಂಡಿದ್ದಾರೆ.

'ಸುಶ್ರುತಸಂಹಿತ'[ಬದಲಾಯಿಸಿ]

ಚಿತ್ರ'ಸುಶೃಶ ಸಂಹಿತ ರಚನೆ' 'ನಾಗಾರ್ಜುನ,' ಸುಶ್ರುತರನ್ನು ತನ್ನ ಪರಮಪೂಜ್ಯ ಆಚಾರ್ಯರೆಂದು ಗೌರವಿಸಿ ನಮಿಸಿದ್ದಾರೆ. 'ಬೋಟಾಂಗಿನಿ', ಯಲ್ಲಿ ಸಿಕ್ಕ ತಾಳೆಗರಿಯ ಸಂಗ್ರಹಗಳಿಂದ, ತಯಾರಿಸಲ್ಪಟ್ಟ ಔಷಧಿಗಳ ಹೆಸರು, ಹಾಗೂ ವಿವರಗಳನ್ನು, ನಾವು ಕಂಡುಕೊಳ್ಳಬಹುದು. ಸಂಹಿತೆಯನ್ನು ಅರಬ್ಬಿ, ಲ್ಯಾಟಿನ್, ಇಂಗ್ಲೀಷ್, ಫ್ರೆಂಚ್, ಭಾಷೆಗಳಲ್ಲಿ ತರ್ಜುಮೆಮಾಡಿದ್ದಾರೆ. ವಿಜ್ಞಾನಿಗಳ ಮಾನ್ಯತೆ ಪಡೆದಿದೆ. ಆಧುನಿಕ ಶಸ್ತ್ರ ಚಿಕಿತ್ಸಕರಿಗೂ ಮಾರ್ಗದರ್ಶಿಯಾಗಿದೆ. ಔಷಧಿ ಸೇವನೆ ಮುಂತಾದ ವಿವರಗಳು ಅರೆದ ಗ್ರಂಥಗಳು ಕ್ರಮೆಣ ಕಾಲಗರ್ಭದಲ್ಲಿ ಕಳೆದುಹೋದವು. ಇದು ಮಾತ್ರ ಇಂದಿಗೂ ಲಭ್ಯವಾಗಿರುವುದು ನಮ್ಮ ಸುಕೃತ. ೫,೦೦೦ ವರ್ಷಗಳ ಹಿಂದಿನ ಭಾರತದ ಉತ್ತಮ ಆಯುಧಗಳನ್ನು ಉಪಯೋಗಿಸುತ್ತಿದ್ದರು. ಪ್ರಾಜ್ಞತೆ ಇತ್ತು.

'ಶಲ್ಯ ತಂತ್ರ', 'ಶಾಲಾಕ್ಯ ಪದ್ಧತಿ,'ಗಳಿಂದ, ವ್ರಣಗಳ ಚಿಕಿತ್ಸೆಯಲ್ಲಿ ಗಮನಾರ್ಹ ಪ್ರಗತಿ :[ಬದಲಾಯಿಸಿ]

ಶಲ್ಯ ತಂತ್ರವೆಂದರೆ, ಕಂಠದ ಕೆಳಗಿರುವ ದೇಹದ ಭಾಗದಲ್ಲಿ, ಉತ್ಪನ್ನವಾದ, ವ್ರಣಗಳ ಚಿಕಿತ್ಸಾಕ್ರಮ.ಶಾಲಾಕ್ಯ ಪದ್ಧತಿಯಲ್ಲಿ, ಕತ್ತಿನ ಬುಡದಿಂದ,ಕಿವಿ, ಮೂಗು, ಕಣ್ಣು, ಬಾಯಿ, ಮುಂತಾದ ಅವಯವಗಳಲ್ಲಿ,ಉತ್ಪನ್ನವಾದ ವ್ರಣವನ್ನು, ಶಾಲಾಕ್ಯ ಯಂತ್ರಪದ್ಧತಿಯಿಂದ,ನಿವಾರಣೆ ಮಾಡಲಾಗುತ್ತಿತ್ತು. ಕಾಲದಲ್ಲಿ ಒಟ್ಟು ೧೦೧ ಯಂತ್ರಗಳು, ಉಪಯೋಗದಲ್ಲಿ ಶರೀರದಲ್ಲಿನ ಶಲ್ಯಗಳನ್ನು ಹೊರಗೆ ತೆಗೆಯಲು, ಪಶುಪಕ್ಷಿ, ಮುಖಾಕಾರವಾಗಿರುವ ತುಕ್ಕು ಹಿಡಿಯದಂತಹ ಸುವರ್ಣಾದಿ ಪಂಚಲೋಹಗಳಿಂದ ನಿರ್ಮಾಣವಾದ ಯಂತ್ರಗಳಿದ್ದವು. ಆಚಾರ್ಯ ಸುಶೃತರು 'ಪುನರ್ ನಾಸಾಂಗ ರಚನೆ', 'ಅಂಗೋಸ್ಥಿ', 'ವಿಚ್ಛೇದನ', 'ಗುಲ್ಮೋನ್ಮೂಲನ', ಗರ್ಭಾಶಯದಿಂದ ಮೃತಗರ್ಭದ ಶಿಶುವನ್ನು ಚಿರಂತನವಾಗಿ ಹೊರಗೆ ತೆಗೆಯುವುದು, 'ಮೂತ್ರಾಶಯದಲ್ಲಿ ಅಶ್ಮರಿ', 'ಭಗಂಧರ', 'ರಕ್ತಾರ್ಶಸ್', 'ಅಂತ್ರವೃದ್ಧಿ', ಮುಂತಾದ ರೋಗಗಳ ಮೇಲೆ ನಡೆಸಿದ ಪ್ರಯೋಗ ಮತ್ತು ಶಸ್ತ್ರಚಿಕಿತ್ಸೆ ಗಳನ್ನು ಓದಿ ಅಭ್ಯಸಿಸಿದ ಇಂದಿನ 'ಪಾಶ್ಚಾತ್ಯಶಾಸ್ತ್ರಜ್ಞರು,' ಹೊಗಳಿದ್ದಾರೆ. 'ಪುನರ್ನಾಸಾಂಗ ರಚನೆ', ಎಂದರೆ, ವಿಕಾರವಾದ ಮನುಷ್ಯನ ಅಂಗಾಂಗಗಳನ್ನು ತಿದ್ದಿ ಮೊದಲಿನ ರೂಪಕ್ಕೆ ತರುವ ಪರಿಕ್ರಮ. ಉದಾಹರಣೆಗಾಗಿ, ಆಕಾರಕೆಟ್ಟ ಮೂಗಿನ ಆಕಾರವನ್ನು ತಿದ್ದುವುದು. 'ಅಂಗೋಸ್ಥಿ', 'ವಿಚ್ಛೇದನ.' ಮೂಳೆಗಳು ಮತ್ತು ಅಂಗಾಂಗಗಳನ್ನು ಕತ್ತರಿಸಿ ತೆಗೆಯುವುದು. 'ಗುಲ್ಮೋಸ್ತೂಲನ ಗೆಡ್ಡೆ' ಗಳನ್ನು ತೆಗೆದು ಭಗಂಧರ -ತುಂಬಾ ನೋವನ್ನುಂಟು ಮಾಡುವ ಒಂದು ಕಾಯಿಲೆ. -ರಕ್ತಹೊರಬೀಳುವ 'ರಕ್ತಾರ್ಶಸ್ ಮೂಲವ್ಯಧಿ', ನೋವಿನ ಕಾಯಿಲೆ. ಅಂತ್ರವೃದ್ಧಿಗೆ ಇಂಗ್ಲೀಷ್ ನಲ್ಲಿ 'ಹರ್ನಿಯ', ಅಂಗದ ಭಾಗ, ಯಾವುದಾದರೂ ಕಾರಣದಿಂದ ತನ್ನ ಸ್ಥಾನದಿಂದ ಆಚೆಗೆ ಚಾಚಿಕೊಂಡಿರುವುದು 'ಅಂತ್ರವೃದ್ಧಿ'. 'ಭೇಷಜಗ್ರಂಥ'ದಲ್ಲಿ ಸುವೈದ್ಯನು, 'ಭೇಷಜಕುಶಲ' ನಾಗಿ, ಮಿತ್ರನಾಗಿ, ಸುಶ್ರುತನಂತೆ ಸುಶಿಕ್ಷಿತನಾಗಿ ಇರಬೇಕೆಂದು ಹೊಗಳಿದ್ದಾನೆ. 'ಭೈಷಜವಿದ್ಯಯ ಪರಮಾಚಾರ್ಯ' ರೆಂದು ಹೆಸರಾಗಿದ್ದವರೆಂದು, ಚೀನದ ವಿಜ್ಞಾನಿ, 'ತುಚ್ಛಿ,' ಯವರು ತಮ್ಮ ಗ್ರಂಥವೊಂದರಲ್ಲಿ ತಿಳಿಸಿದ್ದಾರೆ. ವಿಸ್ತಾರವಾಗಿದ್ದು , ಅನೇಕ ವಿಷಯಗಳನ್ನು ಒಳಗೊಂಡಿದೆ. ಇಂದಿಗೂ ಔಷಧೋಪಚಾರಗಳ ಮಾಹಿತಿಯಬಗ್ಗೆ, ಶಲ್ಯಚಿಕಿತ್ಸೆಗಳಬಗ್ಗೆ, ಅತ್ಯುತ್ತಮ ವಿಚಾರಗಳನ್ನು ಧಾಕಲಿಸಿರುವುದರಿಂದ ಮಾನ್ಯತೆಯನ್ನು ಪಡೆದಿದೆ.

ಸುಶ್ರುತ

ಅಂದು ಉಪಯೋಗಿಸುತ್ತಿದ್ದ, ಯಂತ್ರಗಳು ಶಸ್ತ್ರಗಳು :[ಬದಲಾಯಿಸಿ]

ತುಕ್ಕು ಹಿಡಿಯದಂತಹ, ಸುವರ್ಣಾವಿ ಪಂಚ ಲೋಹಗಳಿಂದ ನಿರ್ಮಾಣವಾದ ಯಂತ್ರಗಳು, ಬಳಕೆಯಲ್ಲಿದ್ದವು. ಬಿದಿರು, ದಾರ. ಕೊಂಬು, ನರಗಳು, ಕಡೆಗೆ, ಹುಲ್ಲು [ದರ್ಭೆ], ಕತ್ತರಿಸುವುದಕ್ಕೆ, ಕೊಯ್ಯುವುದಕ್ಕೆ, ೨೦ ಬಗೆಯ, ಶಸ್ತ್ರಗಳ ಉಪಯೊಗವನ್ನು ಮಾಡುತ್ತಿದ್ದರು ; ಉದಾಹರಣೆಗೆ, 'ಮಂಡಲಾಗ್ರ', 'ಕರಪತ್ರ', 'ವೃದ್ಧಿಪತ್ರ', 'ನಖಶಸ್ತ್ರ', 'ಮುದ್ರಿಕ', 'ಉತ್ಪಲಪತ್ರಿಕಾ', 'ಅರ್ಧಧರಾಸೂಚಿ', 'ಕಶಪತ್ರ', ಮುಂತಾದವುಗಳು.

'ಸುಶ್ರುತಾಚಾರ್ಯರ ಪ್ರಯೋಗಶಾಲೆ' :[ಬದಲಾಯಿಸಿ]

ಸುಶ್ರುತರು ಮತ್ತು ಅವರ ಸಂಗಡಿಗರು, ತಾವು ಸೇರಿದ ದೇಶಗಳನ್ನೇ ಕಾರ್ಯ ಕ್ಷೇತ್ರವಾಗಿ ಆರಿಸಿಕೊಂಡರು. ಶಸ್ತ್ರಚಿಕಿತ್ಸಾಲಯಗಳು, ಸಿಂಧುಪ್ರಾಂತ್ಯದ 'ತಕ್ಷಶಿಲ', ಪರಿಸರದಲ್ಲಿತ್ತು. ತಮ್ಮ ಗ್ರಂಥ, 'ಸುಶ್ರುತಸಂಹಿತ,' ದಲ್ಲಿ ಕೆಲವಾರು ಉದಾಹರಣೆಗಳನ್ನು ವಿವರಿಸಿದ್ದಾರೆ. ಅವರ ಬಳಿ ಇದ್ದ ಕೆಲವುಶಿಷ್ಯರು, ಉತ್ತರಭಾರತದ ರಾಜರ ಆಶ್ರಯಕ್ಕೆ ಹೋಗಿ ನೆಲಸಿ, ಹಲವು ಗ್ರಂಥಗಳನ್ನು ರಚಿಸಿದರು. ರಾಜರು ತಮ್ಮ ಸೈನಿಕರ ಮತ್ತು ಪ್ರಜೆಗಳ ಆರೋಗ್ಯರಕ್ಷಣೆಗೆ ವೈದ್ಯರನ್ನು ನೇಮಕಮಾಡಿದರು.

'ಶಸ್ತ್ರಚಿಕಿತ್ಸೆ,' ಗೆ ಮೊದಲು, ಸಿದ್ಧಪಡಿಸಿಕೊಳ್ಳಬೇಕಾದ, 'ವೈದ್ಯಕೀಯ, ಉಪಕರಣಗಳು,' :[ಬದಲಾಯಿಸಿ]

ಶಸ್ತ್ರಚಿಕಿತ್ಸೆ ಮಾಡಿವ ಸಮಯದಲ್ಲಿ ರೋಗಿಯ ಮನಃಸ್ಥಿತಿ, ಮತ್ತು ವೈದ್ಯರ ಮಾನಸಿಕ ಸ್ಥಿತಿಹೇಗಿರಬೇಕೆಂಬುದನ್ನು ತಿಳಿಸಿದ್ದಾರೆ. ವೈದ್ಯರು ಒಳ್ಳೆಯ ಭಾಷೆ ಮತ್ತು ಶಬ್ದಗಳ ಬಳಕೆಯನ್ನು ಮಾಡಬೇಕು. ಋತುಗಳು, ಅನುಕೂಲಕರವಾಗಿರಬೇಕು. ನೆಲ ಸ್ವಚ್ಛವಾಗಿರಬೇಕು. ಶಸ್ತ್ರಚಿಕಿತ್ಸೆಗೆ ಬೇಕಾಗಬಹುದಾದ ಉಪಕರಣಗಳನ್ನು ಮೊದಲೇ ನಿರ್ಧರಿಸಿ ಹತ್ತಿರದಲ್ಲಿ ಸಿಕ್ಕುವಂತೆ, ಇಟ್ಟುಕೊಂಡಿರಬೇಕು. ಯಂತ್ರ, ಶಸ್ತ್ರಗಳು, ಕ್ಷಾರ, ಅಗ್ಗಿಷ್ಟಿಕೆ, ಸಲಾಕೆಗಳು, ಶ್ರುಂಗಯಾತ್ರ, ಸೋರೆಬುರುಡೆ, ನೇರಳೆಹಣ್ಣಿನ ಮುಖಭಾಗದಂತಿರುವ ಬತ್ತಿಗಳು, ರಕ್ತವನ್ನು ದೇಹದಿಂದ ತೆಗೆಯಲು ಜಿಗಣೆಗಳು, ಹತ್ತಿಯ ಉಂಡೆಗಳು, ವ್ರಣಸ್ರಾವ, ಎಲ್ಲವೂ ಶುಭ್ರವಾಗಿರಬೇಕು. ಸುತ್ತಲೂ ಹೊಲಿಗೆ ಬಟ್ಟೆಯ ತುಂಡುಗಳು, ವ್ರಣಸ್ರಾವ ಮತ್ತು ವ್ರಣಬಂಧನ ಮಾಡಲು ದಪ್ಪವಾದ ಮತ್ತು ಉದ್ದನೆಯ ಬಿಳಿಯ ಅಥವಾ ಹಳದಿ ಬಟ್ಟೆಯ ಸುರಳಿಗಳು, ಗಟ್ಟಿಯಾಗಿ ತುಂಡಾಗದಿರುವಂತಹ ದಾರದ ಉಂಡೆ, ಮತ್ತು ವ್ರಣಹಾರೀ ಎಲೆಗಳು. ಶುದ್ಧಜೇನುತುಪ್ಪ, ತುಪ್ಪ, ಮೇದಸ್ಸು, ಕೊಬ್ಬು, ನವಿಲು, ಉಡ, ಪಾರಿವಾಳಗಳ ಕೊಬ್ಬು, ಹಾಲು, ಸೀಪಡಿಸಿದ ತೈಲಗಳು, ತಣ್ಣೀರು, ಮತ್ತು ಬಿಸಿನೀರು, ನೀರುತುಂಬಿದ ಪಾತ್ರೆಗಳು, ಹಾಲಿನಲ್ಲಿ ಕದಡಿಗಟ್ಟಿಯಾದ ಹಿಟ್ಟುಗಳು, ಕಷಾಯಗಳು, ವ್ರಣಗಳಮೇಲೆ ಮತ್ತು ಸುತ್ತಲಿನ ಭಾಗದ ಮೇಲೆ ಹಚ್ಚಲು ಲೇಪಗಳು, 'ಗಂಡೂಷ,' (ಬಾಯಿಮುಕ್ಕಳಿಸಲು) ಬೇಕಾದ ಲೋಟ-ಚಂಬು, ಸಣ್ಣಮೂತಿಯಿರುವ ಹೂಜಿ, ಮೆತ್ತನೆಯ ಹಾಸಿಗೆ, ಬೆಚ್ಚನೆಯ ಹೊದಿಕೆ, ಸಿದ್ಧವಾಗಿರಬೇಕು. ಅವುಗಳೆಲ್ಲಾ ಶುಭ್ರವಾಗಿರಬೇಕು. ಶಸ್ತ್ರಚಿಕಿತ್ಸೆಗೆ, ತೊಡಗುವ ಚಿಕಿತ್ಸಕ, (ಧನ್ವಂತರಿ) ಪ್ರಾರ್ಥನಾದಿಗಳನ್ನು ಪೂರೈಸಿ, ಶುಭ್ರವಾದ ಬಿಗಿ ಉಡುಪನ್ನು ಧರಿಸಬೇಕು. ಪಾದರಕ್ಷೆ, ಧರಿಸಬೇಕು. ತಲೆಯಕೂದಲು, ಉಗುರುಗಳನ್ನು ಮೋಟಾಗಿ ಕತ್ತರಿಸಬೇಕು. ಈಶಾನ್ಯಬಾಗಿಲಿನಲ್ಲಿ ಶಸ್ತ್ರಾಗಾರವನ್ನು ಪ್ರವೇಶಮಾಡಬೇಕು. ನಿರ್ಭಯವಾಗಿರಬೇಕು. ಶಸ್ತ್ರಚಿಕಿತ್ಸೆಯಲ್ಲಿ ಹಸ್ತಕೌಶಲ, ಚೆನ್ನಾಗಿರಬೇಕು. ವ್ರಣಶಲ್ಯಗಳ ತಿಳುವಳಿಕೆ, ಸ್ಥಾನಭೇದ ತಿಳಿವಳಿಕೆಪರಿಹಾರ ಉಪಯುಕ್ತತೆ, ಶುದ್ಧವೂ ಹರಿತವೂ, ಶಸ್ತ್ರಗಳನ್ನು ಕೈಗೆ ನಿಲುಕುವಂತೆ ಜಾಗ್ರತೆವಹಿಸೇಕು. ವ್ರಣ ಛೇದಾದಿಗಳಲ್ಲಿ ರಕ್ತ, ಕೀವು, ರೋಗಿ (ಹುಣ್ಣನ್ನು ತೆರೆದಾಗ, ನೋಡದಂತೆ ಜಾಗ್ರತೆವಹಿಸಬೇಕು). ಸುಶ್ರುತರು ಪ್ರಕಾರ, ಜನರು ಪೂರ್ಣಚಿಕಿತ್ಸೆಹೊಂದಿ, ರೋಗಗಳು ಬಾರದಂತೆದೇಹವನ್ನು ಉತ್ತಮವಾಗಿ ಇಟ್ಟುಕೊಳ್ಳುವುದು ಅತ್ಯಾವಶ್ಯಕ.

'ಧಾತ್ರಿ,' ಯ ಲಕ್ಷಣಗಳು :[ಬದಲಾಯಿಸಿ]

ಮಗು ಜನಿಸಿದಾಗ, ಅದಕ್ಕೆ ತಾಯಿಯಹಾಲನ್ನು ಸಾಕಷ್ಟುಪ್ರಮಾಣದಲ್ಲಿ ಒದಗಿಸುವುದು ಪ್ರತಿತಾಯಿಯ ಆದ್ಯಕರ್ತವ್ಯ. ಇದು ಪ್ರತಿಶಿಶುವಿನ ಹಕ್ಕು ಸಹಿತ. ಶಿಶುವಿನ ಮಾನಸಿಕ, ಶಾರೀರಿಕ ಬೆಳವಣಿಗೆಗೆ ತಾಯಿಯಹಾಲಿಗೆ ಸರಿಸಮನಾನದ ಆಹಾರ ಇನ್ನೊಂದಿಲ್ಲ. ಕೆಲವೊಮ್ಮೆ, ತಾಯಂದಿರಿಗೆ, ಮೊಲೆಹಾಲು ಸಾಕಷ್ಟು ಪ್ರಮಾಣದಲ್ಲಿ ಇರದೆ ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಆಗ, ಧಾತ್ರಿಯರ ಅಗತ್ಯವಾಗುತ್ತದೆ. ತನ್ನದಲ್ಲದ ಬೇರೆಮಕ್ಕಳಿಗೂ ಮೊಲೆಯುಣ್ಣಿಸುವಷ್ಟು ಸಮರ್ಥವಾದ ಹೆಣ್ಣುಮಗಳನ್ನು "ಧಾತ್ರಿ, "ಎನ್ನುತ್ತಾರೆ. ಆಕೆ, ಸಾಮಾನ್ಯವಾಗಿ, ಕುರೂಪಿ, ದುಖಿಃ, ಕೆಟ್ಟಹೆಂಗಸು ಆಗಿರಕೂಡದು. ಅವಳಿಗೆ ಹೊಟ್ಟೆಗೆಕುಡಿಯುವ ವಯಸ್ಸಿನ ಮಕ್ಕಳಿರಬಾರದು. ಹೆಚ್ಚು ಎದೆಹಾಲಿರಬೇಕು.

'ನವಜಾತ ಶಿಶು,' ವಿನ, ಮಾತೆಯರಿಗೆ, 'ಮೊಲೆಹಾಲುಕುಡಿಸುವ ಬಗ್ಗೆ ಕೆಲವು ಎಚ್ಚರಿಕೆಯ ಮಾತುಗಳು' :[ಬದಲಾಯಿಸಿ]

ಪ್ರತಿತಾಯಿಗೂ ಇದೊಂದು ಅನಿರ್ವಚನೀಯವಾದ ಸಂತಸವನ್ನು ಕೊಡುವ ಕಾಲ. ಒಂದು ಹೊಸಜೀವಕ್ಕೆ ಜನ್ಮಕೊಟ್ಟ ಸಂಭ್ರಮ, ಸಡಗರ, ಹಾಗೂ ಮಗುವಿನ ಲಾಲನೆ-ಪಾಲನೆಯಲ್ಲಿ ಚ್ಯುತಿಬಂದೀತೆಂಬ ಉದ್ವೇಗ, ಅಲ್ಲದೆ, ತಾಯಿಯಾಗಿ ತನ್ನ ಹೊಸ-ಜವಾಬ್ದಾರಿಯ ಅರಿವುಮೂಡುವ ಸಮಯ. ಹೊಸೆ ಮಾತೆಯರಿಗೆ, ಇದೊಂದು ಪರ್ವಕಾಲ. ತಾತಿಯ 'ಸ್ತನ್ಯಪಾನ,' ಮಾಡುವಸಮಯದಲ್ಲಿ, ಮಗು, ತಲೆಹೆಚ್ಚಾಗಿ ಮೇಲೆತ್ತಬಾರದು. 'ಹಲ್ಲುಬ್ಬು,' ಬರುವ ಸಾಧ್ಯತೆಗಳಿವೆ. ಹಾಲು ತಣ್ಣಗೆ, ಕೊಳೆಯಿಲ್ಲದೆ, ತೆಳ್ಳಗೆ, ಬೆಳ್ಳಗೆ ನೀರಿಗೆಸುರಿದರೆ, ಬೆರೆತುನೊರೆಯಿಲ್ಲದೆ, ದಾರದಂತಾಗದೆ, ಮೇಲೆ-ತೇಲದೆಯೂ ಇದ್ದರೆ, ಅದು ಶುದ್ಧವಾದ ಹಾಲು-ಆರೋಗ್ಯಕರವೆಂದು ಭಾವಿಸತಕ್ಕದ್ದು.

'ಚರಕಾಚಾರ್ಯ' 'ಸುಶ್ರುತಾಚಾರ್ಯರ' ರ ಕಾಲ :[ಬದಲಾಯಿಸಿ]

ಇವರು ಜೀವಿಸಿದ್ದ ಸಮಯದಲ್ಲಿ, ಮಾಂಸಾಹಾರ, ರೂಢಿಯಲ್ಲಿತ್ತು. ಮೇಕೆ, ಕಾಡುಹಂದಿ, ಕೋಳಿ, ಪಾರಿವಾಳ, ತಿತ್ತಿರಿ, ಮೊಲ, ಜಿಂಕೆ, ವಿವಿಧಜಾತಿಯ ಮೀನುಗಳು, ಸಾರಂಗ, ಕುರಿಗಳ ಉಪಯೋಗ ; ಉಡ, ಮೊಲ, ನಾಗರಹಾವು, ಪುನುಗಿನ ಬೆಕ್ಕು, ಹದ್ದು, ಕಾಗೆ, ಗೂಬೆ, ಕೆಂಪುಕಾಗೆ, ಕಾಡುಗುಬ್ಬಿ, ಗಿಣಿ, ನವಿಲು, ದನ, ಮುಂತಾದವುಗಳ, ರಕ್ತ-ಮಾಂಸ, ಮೇದಸ್ಸು,ಗಳನ್ನು, ರೋಗಪರಿಹಾರಾರ್ಥವಾಗಿ ವೈದ್ಯರು ಬಳಸುತ್ತಿದ್ದರು.

'ಪ್ರತಿಮನೆಯಲ್ಲೂ ಖಡ್ಡಾಯವಾಗಿ, ಕೆಲವಾರು ವೈದ್ಯಕೀಯ ವಸ್ತುಗಳನ್ನು ಇಟ್ಟುಕೊಳ್ಳಲು,' ಸಲಹೆಮಾಡಿದ್ದರು :[ಬದಲಾಯಿಸಿ]

ತಾತ್ಕಾಲಿಕವಾಗಿ ಶುಶ್ರೂಶೆಮಾಡಲು, ಕೆಲವು ಔಶಧಿಗಳನ್ನು ಸಂಗ್ರಹಿಸಿಡಬೇಕು. ಹಿಪ್ಪಲಿ, ಜೀರಿಗೆ, ಶುಂಠಿ, ತುಲಸಿ, ಕರಿತುಳಸಿ, ಕಾಮಕಸ್ತುರಿ, ಮಜ್ಜಿಗೆ, ಹುಲ್ಲು, ಪರಿಮಳಗಂಧಿನೀಹುಲ್ಲು, ಸರಂಬಾಳೆ, ಬಟಾಣಿ, ಇತ್ಯಾದಿ ಸಂಗ್ರಹವಿರಬೇಕು. ಸೊಪ್ಪು, ಆಹಾರವೂ ಹೌದು ಹಾಗೂ ಔಷಧಿಯಾಗಿಯೂ ವರ್ತಿಸುತ್ತದೆ. ಕಿರುಸಾಲೆ, ಬಸಳೆ, ಹರಿವೆ, ಚಕ್ಕೊತ, ದೊಡ್ಡಪತ್ರೆಸೊಪ್ಪು, ಅಗಸೆ, ಗಣಿಕೆ, ಗೋಡಂಬಿ, ಗೋಣಿ, ಚಕ್ಕೋತ, ರೇರಣದ ಸೊಪ್ಪು, ಕರಿಬೇವು, ಅಗಾಳು ಶುಂಠಿ. ಊಟದ ನಂತರ, ರಾತ್ರಿ ಮಲಗುವ ಮುಂಚೆ, 'ಬಾಯಿಮುಕ್ಕಳಿಸಿ ಉಗುಳುವ ಕ್ರಿಯೆ,' ಅತ್ಯಂತ ಮಹತ್ವದ್ದು. ಹಲ್ಲಿನ ಸಂದಿಗಳಲ್ಲಿ, ಒಸಡುಗಳ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಇಲ್ಲವೆ, ಅಲ್ಲೇ ಇದ್ದು ಕೊಳೆಯಲು ಸಾಧ್ಯತೆಯಿರುವ ಅತಿಸೂಕ್ಷ್ಮವಾದ ಆಹಾರದ ಕಣಗಳು , ಬಾಯಿನಿಂದ ಹೊರಗೆಹಾಕುವುದು ಮುಖ್ಯ. ಊಟಕ್ಕೆ ಮೊದಲು ಕೈಕಾಲು, ಮುಖತೊಳೆಯುವುದರ ಜೊತೆಗೆ, ಬಾಯಿಮುಕ್ಕಳಿಸಿ ಉಗುಳುವುದು ಒಳ್ಳೆಯದು.

ಪುರಾತನಕಾಲದ ಜನರ ಸಾಮಾನ್ಯವಾದ 'ದೇಹಧಾರಢ್ಯ' :[ಬದಲಾಯಿಸಿ]

ಆಗಿನಕಾಲದ ಜನರು, ಎತ್ತರವಾಗಿಯೂ ಬಲಿಶ್ಠರಾಗಿಯೂ, ಕಷ್ಟಸಹಿಷ್ಣುಗಳಾಗಿಯೂ ಇದ್ದರು. ಬಿಸಿಲು, ಮಳೆಯೆನ್ನದ ರೈತಾಪಿಕೆಲಸ ಮಾಡುತ್ತಿದ್ದಿದ್ದರಿಂದ, ಆಹಾರವನ್ನೂ ಹೆಚ್ಚಾಗಿಸೇವಿಸುತ್ತಿದ್ದರು. ಮೈಕೈತುಂಬಿಕೊಂಡು, ಆರೋಗ್ಯವಂತರಾಗಿರುತ್ತಿದ್ದರು.

'ಮಲಗಲು, ಉಪಯೋಗಿಸುವ ಹಾಸಿಗೆ ಹೇಗಿರಬೇಕು' :[ಬದಲಾಯಿಸಿ]

ಹಾಸಿಗೆ, ಅತಿಮೆತ್ತಗೂ, ಹೆಚ್ಚು ಗಡಸಾಗಿಯೂ ಇರಬಾರದು. ತಲೆದಿಂಬು ಹೆಚ್ಚು ಎತ್ತರ ಇರಬಾರದು.

'ಅಪಘಾತ ಸಮಯ' ಗಳಲ್ಲಿ :[ಬದಲಾಯಿಸಿ]

ಕೈಕಾಲು ಕೊಳೆತರೆ, ಅಂತಹ ಅಂಗಗಳನು ಕಿತ್ತುಹಾಕಿ, ರೋಗಿಯನ್ನು ಉಳಿಸುತ್ತಾರೆ. ಹುಣ್ಣುಗಳಲ್ಲಿನ ಕೀವು, ಕೆಟ್ಟರಕ್ತ ತೆಗೆದು,ಶುಚಿಮಾಡಿ, ಅದಕ್ಕೆ ಔಷಧ ಲೇಪಿಸಿ, ಶುಭ್ರವಾದ ಬಿಳಿಯ ಬಟ್ಟೆಯನ್ನು ಬಿಗಿಯುತ್ತಿದ್ದರು. ಮೂತ್ರಕೋಶದಲ್ಲಿ 'ಕಲ್ಲಿನಂತಹ ಗಟ್ಟಿ ಪದಾರ್ಥ,' ಕಟ್ಟಿಕೊಳ್ಳುತ್ತದೆ. ಇದನ್ನು, 'ಅಶ್ಮರ,' ವೆಂದು ಕರೆಯುತ್ತಾರೆ. ಈ ನ್ಯೂನತೆಯನ್ನು, ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕುವುದು ಅಗತ್ಯ.

'ಸುಶ್ರುತ'- ಲೇಖಕ : 'ವೈ. ಪಾರ್ಥನಾರಾಯಣ ಪಂಡಿತ್', 'ಭಾರತ ಭಾರತಿ ಪುಸ್ತಕ ಸಂಪದ', ಬೆಂಗಳೂರು-೫೬೦೦೦೧೯. ಮುದ್ರಣ : 'ರಾಷ್ಟ್ರೋತ್ಥಾನ' , ಬೆಂಗಳೂರು-೫೬೦ ೦೧೯.