ಪಂಚಲೋಹ
ಪಂಚಲೋಹ (ಸಂಸ್ಕೃತ: पञ्चलोह;) (ಪಂಚಧಾತು ಎಂದೂ ಕರೆಯಲ್ಪಡುತ್ತದೆ - ಸಂಸ್ಕೃತ: पञ्चधातु, ಅಕ್ಷರಶಃ. ಐದು ಲೋಹಗಳು) ಎಂಬುದು ಸಾಂಪ್ರದಾಯಿಕ ಐದು ಲೋಹಗಳ ಮಿಶ್ರ ಲೋಹಕ್ಕೆ ಬಳಸಲಾಗುವ ಪದ. ಇದನ್ನು ಹಿಂದೂ ದೇವಸ್ಥಾನಗಳ ಮೂರ್ತಿಗಳನ್ನು ಹಾಗೂ ಆಭರಣಗಳನ್ನು ತಯಾರಿಸಲು ಬಳಸಲಾಗುತ್ತದೆ.[೧]
ರಚನಾಂಶಗಳು
[ಬದಲಾಯಿಸಿ]ರಚನಾಂಶಗಳನ್ನು ಕಲೆಗಳು, ಕರಕೌಶಲಗಳು, ಮತ್ತು ಅವುಗಳ ವಿನ್ಯಾಸದ ನಿಯಮಗಳು, ತತ್ತ್ವಗಳು ಹಾಗೂ ಮಾನದಂಡಗಳನ್ನು ವಿವರಿಸುವ ಪ್ರಾಚೀನ ಪಠ್ಯಗಳ ಸಂಗ್ರಹವಾದ ಶಿಲ್ಪ ಶಾಸ್ತ್ರಗಳಲ್ಲಿ ದೃಢಪಡಿಸಲಾಗಿದೆ. ಸಾಂಪ್ರದಾಯಿಕವಾಗಿ ಪಂಚಲೋಹವನ್ನು ಚಿನ್ನ, ಬೆಳ್ಳಿ, ತಾಮ್ರ, ಸತುವು ಹಾಗೂ ಕಬ್ಬಿಣದ ಮಿಶ್ರಲೋಹವೆಂದು ವರ್ಣಿಸಲಾಗುತ್ತದೆ. ಇವು ಮುಖ್ಯವಾದ ಘಟಕಗಳಾಗಿವೆ. ಜೊತೆಗೆ, ಕೆಲವು ಸಂದರ್ಭಗಳಲ್ಲಿ, ಸತುವಿನ ಬದಲಾಗಿ ತವರ ಅಥವಾ ಸೀಸವನ್ನು ಬಳಸಲಾಗುತ್ತದೆ. ಇಂತಹ ಮಿಶ್ರಲೋಹದಿಂದ ತಯಾರಿಸಿದ ಆಭರಣಗಳನ್ನು ಧರಿಸಿದರೆ ಜೀವನದಲ್ಲಿ ಸಮತೋಲನ, ಆತ್ಮವಿಶ್ವಾಸ, ಉತ್ತಮ ಆರೋಗ್ಯ, ಅದೃಷ್ಟ, ಸಮೃದ್ಧಿ ಹಾಗೂ ಮನಃಶಾಂತಿ ಬರುತ್ತದೆ ಎಂದು ವ್ಯಾಪಕವಾಗಿ ನಂಬಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "What is Panchaloha idol (murti) – components and percentage used?". www.hindu-blog.com.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- The Lost-Wax Casting of Icons, Utensils, Bells, and Other Items in South India Archived 2008-05-12 ವೇಬ್ಯಾಕ್ ಮೆಷಿನ್ ನಲ್ಲಿ., R.M. Pillai, S.G.K. Pillai, and A.D. Damodaran, October 2002, JOM Archived 2008-11-21 ವೇಬ್ಯಾಕ್ ಮೆಷಿನ್ ನಲ್ಲಿ..