ವಿಷಯಕ್ಕೆ ಹೋಗು

ಚೊಗಚೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಗಸೆ ಇಂದ ಪುನರ್ನಿರ್ದೇಶಿತ)
ಚೊಗಚೆ (ಅಗಸೆ)
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
ಸೆಸ್ಬೇನಿಯಾ ಗ್ರಾಂಡಿಫ್ಲೋರ
Binomial name
ಸೆಸ್ಬೇನಿಯಾ ಗ್ರಾಂಡಿಫ್ಲೋರ
(L.) Poiret

ಚೊಗಚೆಅಥವಾ ಅಗಸೆ ಎಂದು ಕರೆಯಲಾಗುವ ಈ ಮರ ಸಣ್ಣಗಾತ್ರದ ಮರ.ಇದು ವೇಗವಾಗಿ ಬೆಳಯುವ ಮರ.ಇದುಫೇಬೇಸಿಕುಟುಂಬಕ್ಕೆ ಸೇರಿದ ಮರ. ಸೆಸ್ಬೇನಿಯಾ ಗ್ರಾಂಡಿಫ್ಲೋರಎನ್ನುವ ಹಸರು ಈ ಮರದ ಸಸ್ಯಶಾಸ್ತ್ರದ ಹೆಸರು.ಇದರ ಕಾಂಡ ನೆಟ್ಟಗಿರುತ್ತದೆ.ಎರಡು ವರ್ಷಗಳಲ್ಲಿ ಸುಮಾರು ೬ ಮೀ. ಬೆಳೆಯುತ್ತದೆ.

ಇದರಮೂಲಸ್ಥಾನ ಉಷ್ಣವಲಯಎಶಿಯಪ್ರಾಂತ್ಯವು ಎಂದು ಭಾವಿಸಲಾಗುತ್ತದೆ.ಈ ಮರ ಭಾರತದೇಶ,ಮಲೇಸಿಯಾ, ಉತ್ತರ ಆಸ್ಟ್ರೇಲಿಯಾ, ಇಂಡೋನೇಶಿಯಾ,ಇನ್ನೂ ಪೀಲೆಪ್ಪೀನ್ಸು ದೇಶಗಳಲ್ಲಿ ವ್ಯಾಪಕವಾಗಿರುವ ಮರ ಆಗಿದೆ[]

ಮರ ೩-೮ ಮೀ.ಗಳಸ್ಟು ಎತ್ತರ ಬೆಳಯುತ್ತದೆ.ಇದು ಶೀಘ್ರವಾಗಿ ಬೆಳಯುವ ಮರ. ಅಲ್ಪ ಸಂಖ್ಯೆಯ ಕೊಂಬೆಗಳನ್ನು ಹೊಂದಿರುತ್ತದೆ.ಎಲೆಗಳು ಗುಂಡಾಗಿ,ಸಕ್ರಮವಾಗಿ ಇರುತ್ತವೆ.ಹಸುರೆಲೆಗಳಿಂದ ಮತ್ತು ದೊಡ್ಡ ಹೂಗಳಿಂದ ಕೂಡಿದ ನೆತ್ತಿಯುಳ್ಳ ಈ ಮರ ಅಂದವಾದದ್ದು.ಎಲೆಗಳು ೧೦-೧೫ ಸೆಂ.ಮೀಮ್ ಉದ್ದವಾಗಿರುತ್ತವೆ.೧೦-೨೦ ಎಳೆ ಎಲೆಗಳು ಜೋಡಿಯಾಗಿರುತ್ತವೆ.ಹಿಮಸುರಿ ವಾತವರಣ ಇದ್ದರೆ ಈ ಮರ ಬೆಳಯುವುದಿಲ್ಲ.ಇದು ಉಷ್ಣವಲಯದ ಮರ.ಇದು ಹೆಚ್ಚು ಕಾಲ ಬಾಳುವ ಮರವಲ್ಲ.ಮೃದುವಾದ ಕಾಂಡವನ್ನು ಹೊಂದಿದ್ದೆ.ತೊಗಟೆ ಬೂದುಬಣ್ಣಲ್ಲಿ ಇರುತ್ತದೆ.

ಹೂವುಗಳು ಬೆಳ್ಳಗೆ ಅಥವಾ ಕೆಂಪಾಗಿ ಇರುತ್ತವೆ.೨-೪ ಹುವ್ವುಗಳು ಗೊಂಚೆಲಾಗಿ ಬೆಳಯುತ್ತವೆ.೭.೫-೧೦.೦ ಸೆಂ.ಮೀ. ಉದ್ದವಾಗಿರುತ್ತವೆ. ಸಾಮಾನ್ಯವಾಗಿ ಇದು ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಹೂ ಬಿಡುತ್ತದೆ. ಹೂವಿನ ರಚನೆ ಬಣ್ಣ ಮತ್ತು ಮಕರಂದ-ಇವೆಲ್ಲ ಚಿಟ್ಟೆಗಳಿಂದ ಅನ್ಯಪರಾಗಸ್ಪರ್ಶಕ್ಕೆ ಅನುಕೂಲಿಸುವಂತೆ ಮಾರ್ಪಟ್ಟು ವೈಶಿಷ್ಟ್ಯಪುರ್ಣವಾಗಿವೆ. ಕಾಯಿ ಚಪ್ಪಟವಾಗಿರುತ್ತದೆ.ಹಸಿರುಬಣ್ನದಲ್ಲಿರುತ್ತದೆ.ಬೀಜಗಳು೩-೮ ಮಿ.ಮೀ ಪರಿಮಾಣದಲ್ಲಿ ಇರುತ್ತವೆ.ಕಾಯಿ ೬೦ ಸೆಂ,ಮೀ ಉದ್ದದ ವರೆಗೆ ಬೆಳಯುತ್ತದೆ.ಒಂದು ಕಾಯಿನಲ್ಲಿ ೫೦ ವರೆಗೆ ಬೀಜಗಳು ಇರುತ್ತವೆ.ಹಿಂದುವುರು ಈ ಹೂವುಗಳ್ಳನು ಪವಿತ್ರವಾಗಿ ಭಾವಿಸುತ್ತಾರೆ. ಹೂವುಗಳನ್ನು ಶಿವಪೂಜೆಯಲ್ಲಿ ಉಪಯೋಗಿಸುತ್ತಾರೆ.

ಉಪಯೋಗಗಳು

[ಬದಲಾಯಿಸಿ]

ಇದರ ಹೂವು, ಚಿಗುರೆಲೆ ಮತ್ತು ಕಾಯಿಗಳನ್ನು ತರಕಾರಿಯ ಹಾಗೆ ಉಪಯೋಗಿಸುತ್ತಾರೆ. ಇದರ ಎಲೆ, ತೊಗಟೆ ಮತ್ತು ಹೂವಿನ ರಸವನ್ನು ಔಷಧ ತಯಾರಿಕೆಯಲ್ಲಿ ಬಳಸುತ್ತಾರೆ. ಇದರ ಚೇಗು ಬಿಳುಪು, ಹಗುರ ಮತ್ತು ಮೃದು.ಇದರ ಕಾಂಡವನ್ನು ತಾತ್ಕಾಲಿಕ ಗುಡಿಸಿಲಿನ ಕಂಬವಾಗಿ ಉಪಯೋಗಿಸುತ್ತಾರೆ. ಈ ಮರವನ್ನು ತೋಟಗಳಲ್ಲಿ ಎಲೆಯಬಳ್ಳಿ ಹಬ್ಬಿಸುವ ಸಲುವಾಗಿ ಬೆಳೆಸುತ್ತಾರೆ. ಎಲೆಯನ್ನು ದನಗಳಿಗೆ ಮೇವಾಗಿ ಉಪಯೋಗಿಸುತ್ತಾರೆ. ಇದರ ದಾರುವನ್ನು ಸೌದೆಯಾಗಿ ಉಪಯೋಗಿಸುತ್ತಾರೆ. ವೀಳೆಯದೆಲೆ ತೋಟಗಳಲ್ಲಿ ಆಸರೆ ಮರವಾಗಿ ಈ ಮರ ವನ್ನು ಬೆಳಸುವುದುಂಟು. ಅಗಸೆ ಹೂವು ವಿರೇಚಕ. ತುಪ್ಪದಲ್ಲಿ ಕರಿದ ಹೂಗಳು ಶ್ವೇತಪದರದ ರೋಗ ಹೊಓದಿರುವ ಹೆಂಗಸರಿಗೆ ಒಳ್ಳೆಯದು.[]

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಚಿತ್ರಶಾಲೆ

[ಬದಲಾಯಿಸಿ]

ಉಲ್ಲೇಖನಗಳು

[ಬದಲಾಯಿಸಿ]
  1. Prajapti, Purohit, Sharma, Kumar , A Handbook of medicinal plants, Agro Bios (India), Edition Ist 2003, Page.473
  2. "Meet the plant-Sesbania grandiflora". ntbg.org. Archived from the original on 2013-06-24. Retrieved 2013-11-22.
  3. "ರೈತರಿಗೆ ಬೇಕಾಗುವ ಕೆಲವು ಪ್ರಮುಖ ಮರಗಳು, ಅಗಸೆ (ಚೊಗಚೆ)". kanaja.in. Retrieved 2013-11-22.[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಚೊಗಚೆ&oldid=1055117" ಇಂದ ಪಡೆಯಲ್ಪಟ್ಟಿದೆ