ಶವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶವ (ಹೆಣ, ಕಳೇಬರ, ಕುಣಪ) ಎಂದರೆ ಸತ್ತ ಮನುಷ್ಯನ ದೇಹ. ಇದನ್ನು ವೈದ್ಯರು ಮತ್ತು ಇತರ ವಿಜ್ಞಾನಿಗಳು ಅಂಗರಚನೆಯನ್ನು ಅಧ್ಯಯನ ಮಾಡಲು, ರೋಗದ ತಾಣಗಳನ್ನು ಗುರುತಿಸಲು, ಮರಣದ ಕಾರಣಗಳನ್ನು ನಿರ್ಧರಿಸಲು, ಮತ್ತು ಜೀವಂತ ಮಾನವನಲ್ಲಿನ ದೋಷವನ್ನು ದುರಸ್ತಿ ಮಾಡುವ ಸಲುವಾಗಿ ಅಂಗಾಂಶವನ್ನು ಒದಗಿಸಲು ಬಳಸುತ್ತಾರೆ. ವೈದ್ಯಕೀಯ ಶಾಲೆಯಲ್ಲಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಭಾಗವಾಗಿ ಶವಗಳನ್ನು ಅಧ್ಯಯನ ಮಾಡುತ್ತಾರೆ ಮತ್ತು ಛೇದನ ಮಾಡುತ್ತಾರೆ. ಶವಗಳನ್ನು ಅಧ್ಯಯನಮಾಡುವ ಇತರರಲ್ಲಿ ಪುರಾತತ್ವಶಾಸ್ತ್ರಜ್ಞರು ಮತ್ತು ಕಲಾವಿದರು ಸೇರಿದ್ದಾರೆ.[೧] ಶವಗಳನ್ನು ಅವುಗಳ ವಿಘಟನೆಯ ಹಂತಗಳಿಗಾಗಿ ವೀಕ್ಷಿಸಬಹುದು. ಇದು ದೇಹವು ಎಷ್ಟು ಹೊತ್ತಿನಿಂದ ಮೃತವಾಗಿದೆ ಎಂಬುದನ್ನು ನಿರ್ಧರಿಸಲು ನೆರವಾಗುತ್ತದೆ. ಮಾನವ ಶರೀರವನ್ನು ವರ್ಣಚಿತ್ರಗಳು ಮತ್ತು ರೇಖಾಚಿತ್ರಗಳಲ್ಲಿ ಹೆಚ್ಚು ನಿಖರವಾಗಿ ಚಿತ್ರಿಸಲು ಶವಗಳನ್ನು ಕಲೆಯಲ್ಲಿ ಕೂಡ ಬಳಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Definition of Cadaver". RxList (in ಇಂಗ್ಲಿಷ್). Retrieved 2018-12-03.
"https://kn.wikipedia.org/w/index.php?title=ಶವ&oldid=889481" ಇಂದ ಪಡೆಯಲ್ಪಟ್ಟಿದೆ