ಕಾಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಗೆ
hooded crow (Corvus corone cornix)
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
Species

See text.

ಟಾವರ್ ಆಫ್ ಲಂಡನ್ ನ ಕೆಳಭಾಗದಲ್ಲಿರುವ ಕಾಗೆಗಳು

ಕೋರ್ವಿಡೇ ಪಕ್ಷಿ ಸಂತತಿ ಕುಲಕ್ಕೆ ಸೇರಿದ ಒಂದು ಹಕ್ಕಿ. ಈ ಹಕ್ಕಿಗಳು ದಕ್ಷಿಣ ಅಮೇರಿಕಾದ ದಕ್ಷಿಣದ ಭಾಗ ] ಬಿಟ್ಟರೆ, ಜಗತ್ತಿನ ಮತ್ತೆಲ್ಲ ಕಡೆಗಳಲ್ಲೂ ಕಾಣಸಿಗುತ್ತವೆ. ಅದರಲ್ಲಿಯೂ ದಕ್ಷಿಣ ಅಮೇರಿಕಾ, ಮಧ್ಯ ಅಮೇರಿಕಾ, ಯೂರೋಪ್ ಮತ್ತು ಏಷಿಯಾಗಳಲ್ಲಿ ಇವು ಪ್ರಧಾನವಾಗಿ ಕಂಡು ಬರುತ್ತವೆ. ಕಾಗೆಗಳಲ್ಲಿ ಕ್ರೋ (ಭಾರತದ ಕಾಗೆ), ರೂಕ್, ಜಾಕ್ ಡಾ, ಜೇ, ಮ್ಯಾಗ್ ಪೈ, ಟ್ರೀ ಪೈ ಇತ್ಯಾದಿ ಒಟ್ಟು ನೂರಿಪ್ಪತ್ತು ಪ್ರಭೇದಗಳಿವೆ. ಪ್ರತಿ ಖಂಡದಲ್ಲಿ ಸುಮಾರು ಹತ್ತು ಪ್ರಭೇದಗಳು ಕಾಣಸಿಕ್ಕರೆ, ಇಥಿಯೋಪಿಯಾ ದ ಮೇಲ್ಭಾಗದ ಪಕ್ಷಿಗಳ ತಾಣ ರೆವೆನ್ ನಲ್ಲಿ ೪೦ಕ್ಕೂ ಹೆಚ್ಚಿನ ಪ್ರಬೇಧಗಳು ಇಲ್ಲಿ ವಾಸಿಸುತ್ತವೆ. ಕಾಗೆಗಳನ್ನು ಹಕ್ಕಿ ಜಗತ್ತಿನಲ್ಲಿಯೇ ಅತಿ ಬುದ್ಧಿವಂತ ಪಕ್ಷಿ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಇವು ಪ್ರಾಣಿಜಗತ್ತಿನಲ್ಲಿಯೂ ಅತಿ ಬುದ್ಧಿವಂತ ಪ್ರಾಣಿಗಳಲ್ಲಿ ಒಂದು. ಇದು ವರ್ಷವಿಡೀ ಕಾಣಲು ಸಿಗುವ ಪಕ್ಷಿ.

ಹೆಚ್ಚಿನ ವಿವರಗಳು[ಬದಲಾಯಿಸಿ]

ಸಾಧಾರಣವಾಗಿ ಕಾಗೆಗಳ ಬಣ್ಣ ಕಪ್ಪು. ಕನ್ನಡದಲ್ಲಿ ಕಪ್ಪು ಬಣ್ಣಕ್ಕೆ ಕಾಗೆಯ ಉದಾಹರಣೆ ಕೊಡುವುದು ಸಾಮಾನ್ಯ. ಆದರೆ ಕರಿ/ ಬಿಳಿ, ನೀಲಿ/ಹಸಿರು, ಅಥವಾ ಕಂದು ಬಣ್ಣದ ಕಾಗೆಗಳೂ ಇವೆ (ಉದಾ: ಮ್ಯಾಗ್ ಪೈ, ಟ್ರೀ ಪೈ). ಜೇ ಎನ್ನುವ ಪ್ರಭೇದದ ಬಣ್ಣ ನೀಲಿ/ಬಿಳಿ.

ಕಾಗೆಗಳು ಬುದ್ಧಿವಂತ ಪಕ್ಷಿಗಳು. ಇವುಗಳಲ್ಲಿ ಕೆಲವು ಪ್ರಭೇದಗಳು ಕಡ್ಡಿ, ಟೊಂಗೆಗಳಿಂದ ಗೂಡು ಕಟ್ಟಬಲ್ಲವು. ಮ್ಯಾಗ್ ಪೈ ಕಾಗೆ ಕನ್ನಡಿಯಲ್ಲಿನ ತನ್ನ ಚಿತ್ರವನ್ನು ಪ್ರತಿಫಲನ ಎಂದು ಗುರುತಿಸಬಲ್ಲದು. ಬಹುತೇಕ ಕಾಗೆಗಳು ಜನವಸತಿಗೆ ಸಮೀಪವಾಗಿ ವಾಸ ಮಾಡುತ್ತವೆ. ಟ್ರೀ ಪೈ ಇತ್ಯಾದಿ ಕೆಲವು ಪ್ರಭೇದಗಳು ಕಾಡಿನಲ್ಲಿ ವಾಸಿಸುತ್ತವೆ. ಇವು ಸಾಧಾರಣವಾಗಿ ಇದ್ದಲ್ಲೇ ಇರುವ ಹಕ್ಕಿಗಳಾದರೂ, ಬೇಸಿಗೆ ಮತ್ತು ಚಳಿಗಾಲಗಳಲ್ಲಿ ವಲಸೆ ಹೋಗುವ ಪ್ರವೃತ್ತಿ ಯೂರೋಪ್, ಉತ್ತರ ಅಮೇರಿಕಾ ಮತ್ತು ಉತ್ತರ ಏಷಿಯಾದ ಕೆಲ ಪ್ರಭೇದಗಳಲ್ಲಿ ಕಂಡು ಬರುತ್ತದೆ.

ಕಾಗೆಗಳು ಸಮೂಹಜೀವಿಗಳು. ಬೆಳಗಿನ ಹಾಗೂ ಸಂಜೆಯ ಹೊತ್ತು ಸದ್ದು ಮಾಡುತ್ತಾ ಗುಂಪುಗೂಡುವುದು ನಮ್ಮ ಪರಿಸರದಲ್ಲಿ ಸಾಧಾರಣವಾಗಿ ಕಾಣಸಿಗುತ್ತದೆ.

ಆಹಾರ ಪದ್ಧತಿ[ಬದಲಾಯಿಸಿ]

ಕಾಗೆಗಳ ಆಹಾರ ವೈವಿಧ್ಯಮಯವಾದದ್ದು. ಹಕ್ಕಿಗೂಡುಗಳಿಂದ ಹಕ್ಕಿ ಮರಿಗಳು, ಮೊಟ್ಟೆಗಳು, ಇಲಿಗಳೇ ಮೊದಲಾದ ಸಣ್ಣ ಪ್ರಾಣಿಗಳು ಹಾಗೂ ಇತರ ಸತ್ತ ಪ್ರಾಣಿಗಳು, ತರಕಾರಿಗಳು, ತ್ಯಾಜ್ಯವಸ್ತುಗಳು ಇವುಗಳ ಆಹಾರದಲ್ಲಿ ಸೇರುತ್ತವೆ. ಇವು ಹಕ್ಕಿ ಮರಿಗಳನ್ನು, ಮೊಟ್ಟೆಗಳನ್ನು ತಿನ್ನುವುದರಿಂದ ಇತರೆ ಹಕ್ಕಿಗಳು ಗುಂಪುಗೂಡಿ ಕಾಗೆಗಳನ್ನು ಓಡಿಸುವುದನ್ನು ಕಾಣಬಹುದು. ಹೊಲಗಳಲ್ಲಿ ಇವು ತರಕಾರಿ ಮತ್ತು ಧಾನ್ಯಗಳನ್ನು ತಿನ್ನುವುದನ್ನು ತಪ್ಪಿಸಲು ರೈತರು ಹುಲ್ಲಿನಿಂದ ಮಾಡಿದ ಮನುಷ್ಯ ರೂಪದ ಬೆರ್ಚಪ್ಪಗಳನ್ನು ನಿಲ್ಲಿಸುತ್ತಾರೆ. ಇಂಗ್ಲೀಷಿನಲ್ಲಿ ಇದಕ್ಕೆ scarecrow ಎಂದೇ ಹೆಸರಿದೆ.

ಹೂಡೆಡ್ ಕಾಗೆ ಕಸದ ಒಡೆದ ಚೀಲದಲ್ಲಿ ಆಹಾರ ಅರಸುತ್ತಿರುವುದು

ಕುಟುಂಬ ಪದ್ಧತಿ[ಬದಲಾಯಿಸಿ]

ಕಾಗೆಗಳು ಎಲ್ಲಾ ತರಹದ ಮರಗಳಲ್ಲಿಯೂ ಗೂಡು ಕಟ್ಟುತ್ತವೆ. ಟೊಂಗೆಗಳನ್ನು ಉಪಯೋಗಿಸಿ ಗೂಡು ತಯಾರಿಸುತ್ತವೆ. ಕಾಗೆ ೩-೮ ಮೊಟ್ಟೆಗಳನ್ನು ಇಡುತ್ತದೆ. ಮರಿಗಳನ್ನು ತಂದೆ ಹಾಗೂ ತಾಯಿ ಕಾಗೆ ಎರಡೂ ಸಲಹುತ್ತವೆ.

ಬುದ್ಧಿಶಕ್ತಿ[ಬದಲಾಯಿಸಿ]

ಡೌರಿಯನ್ ಜಾಕ್ ಡಾವ್ಸ್
 • ಗುಂಪಿನಲ್ಲಿದ್ದಾಗ ಕಾಗೆಗಳು ಅತ್ಯಂತ ಹೆಚ್ಚು ಜಾಣ್ಮೆಯನ್ನು ಪ್ರದರ್ಶಿಸುತ್ತವೆ ಎನ್ನಲಾಗುತ್ತದೆ.(ಉದಾಹರಣೆಗೆ ಈಸೋಪನ ಕಥೆಗಳಲ್ಲಿ ಬರುವ ಕಾಗೆ ಮತ್ತು ಗಡಿಗೆ(ಹೂಜಿ) ಕಥೆ). ಕಾಗೆಗಳು ಮತ್ತು ರಾವೆನ್ ಗಳು ಜಾಣ್ಮೆಯ ಪರೀಕ್ಷೆಯಲ್ಲಿ ಮೊದಲ ಶ್ರೇಣಿಯಲ್ಲಿ ನಿಲ್ಲುತ್ತವೆ.
 • ಇಸ್ರೇಲಿನ ಕಾಡು ಕಾಗೆಗಳು ಮೀನುಗಳ ಬೇಟೆಯಾಡಲು ಕೆಲವು ಬಾರಿ ರೊಟ್ಟಿ ತುಣುಕುಗಳನ್ನು ಬಳಸುತ್ತವೆ. ಕಾಗೆಗಳು ವಾಯುಮಂಡಲದ ಮಧ್ಯೆ ಹಾರುವಾಗ ಸಹ ತಮ್ಮ ಸಮತೋಲನ ಕಳೆದುಕೊಳ್ಳುವುದಿಲ್ಲ.
 • ಕಾಗೆಯ ಒಂದು ಪ್ರಭೇದ ನಿವ್ ಕ್ಯಾಲೆಡೊನಿಯನ್ ಕಾಗೆಯ ಬಗ್ಗೆ ತೀವ್ರವಾಗಿ ಅಧ್ಯಯನ ನಡೆಯುತ್ತಿದ್ದು ಅದು ತನ್ನ ಪ್ರತಿನಿತ್ಯದ ಆಹಾರ ಹುಡುಕಲು ಉಪಯೋಗಿಸುವ ಸಲಕರಣೆ ಸಾಧನಗಳ ಬಗ್ಗೆ ಕುತೂಹಲಕಾರಿ ಅಂಶಗಳನ್ನು ಪರೀಕ್ಷಿಸಲಾಗುತ್ತಿದೆ. ಈ ಕಾಗೆಗಳು "ಚೂರಿಗಳ "ರೂಪದ ಒರಟು ಎಲೆಗಳು ಹಾಗೂ ಬಿರುಸು ಹುಲ್ಲುಗಳನ್ನು ಬಳಸುವುದು ಕಂಡು ಬಂದಿದೆ. ಇನ್ನೊಂದು ಇವುಗಳ ಜಾಣ್ಮೆ ಎಂದರೆ ಗಡುಸಾದ ಕಾಯಿಗಳನ್ನು ರಸ್ತೆಯ ಮೇಲೆ ಬೀಳಿಸಿ, ಅದು ಕಾರು ಅಥವಾ ಇನ್ನ್ಯಾವುದೇ ವಾಹನ ಹಾಯ್ದು ಪುಡಿ ಮಾಡುವುದನ್ನು ಕಾಯುವುದು. ನಂತರ ಪಾದಚಾರಿಗಳ ಹಸಿರು ಲೈಟ್ ಹತ್ತಿದ ನಂತರ ಅದನ್ನು ತನ್ನ ಸ್ಥಾನಕ್ಕೆ ಕೊಂಡೊಯ್ಯುವುದು.
 • ಇಂಗ್ಲೆಂಡಿನ ಯುನಿವರ್ಸಿಟಿ ಆಫ್ ಆಕ್ಸ್ ಫರ್ಡ್ ನ ಸಂಶೋಧಕರು ಅಕ್ಟೋಬರ್ ೫, ೨೦೦೭ ರಲ್ಲಿ ನಿವ್ ಕ್ಯಾಲೆಡೊನಿಯನ್ ಕಾಗೆಗಳ ಬಾಲದಲ್ಲಿ ಸಣ್ಣ ವಿಡಿಯೊ ಕ್ಯಾಮರಾವೊಂದನ್ನು ಅಳವಡಿಸಿ ಮಾಡಿದ ಪ್ರಯೋಗದ ಪ್ರಕಾರ, ಈ ಕಾಗೆಗಳು ಹಳೆಯ ಕಾಲದ್ದಕ್ಕಿಂತ ವಿಶಾಲ ವಿಧದ ಸಲಕರಣೆಗಳನ್ನು ಕಿತ್ತುಕೊಳ್ಳಲು, ಮೆದುಗೊಳಿಸಲು ಮತ್ತು ಟೊಂಗೆಗಳನ್ನು ಮಣಿಸಲು ಉಪಯೋಗಿಸುತ್ತವೆ. ಇದರಿಂದ ವಿವಿಧ ಆಹಾರ ಪಡೆಯಲು ಅನುಕೂಲವಾಗುತ್ತದೆ.
 • ಕ್ವೀನ್ಸ್ ಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿನ ಕಾಗೆಗಳಿಗೆ ವಿಷಕಾರಿಯಾದ ನೆಲಗಪ್ಪೆಯನ್ನು ಹೇಗೆ ತಿನ್ನಬೇಕೆಂಬ ಸಂಪೂರ್ಣ ಅರಿವಿದೆ. ನೆಲಗಪ್ಪೆಯ ಗಂಟಲಿನ ತೆಳುಚರ್ಮವನ್ನು ಹುಷಾರಾಗಿ ಬಗೆದು, ಅದರಲ್ಲಿನ ವಿಷಕಾರಿಯಲ್ಲದ ಕರುಳನ್ನು ತಿನ್ನುತ್ತವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಯ ನಡುವಿನ ಭಿನ್ನತೆ, ಅಂತರವನ್ನು ಕಂಡು ಹಿಡಿಯಲು ಕಾಗೆಗಳು ಸಮರ್ಥವಾಗಿವೆ.

ಸಿಸ್ಟಮ್ಯಾಟಿಕ್ಸ್(ವಿಭಿನ್ನತೆಯ ವಿಧಾನಗಳು)[ಬದಲಾಯಿಸಿ]

 • ಇದರ ವಂಶವಾಹಿನಿಯನ್ನು ಲಿನ್ನಾಯುಸ್ ಎಂಬಾತ ತನ್ನ ೧೮ ನೆಯ ಶತಮಾನದ ಕೃತಿ ಸಿಸ್ಟೆಮಾ ನೇಚರಾ ಎಂಬುದರಲ್ಲಿ [೧] ವಿವರಿಸಿದ್ದಾನೆ. ಈ ಹೆಸರನ್ನು ಲ್ಯಾಟಿನ್ಕೊರ್ವಸ್ ಅಂದರೆ "ದೊಡ್ಡ ಕಾಗೆ" ಎಂಬುದರಿಂದ [೨] ಪಡೆಯಲಾಗಿದೆ.
 • ಇದರ ವಿವಿಧ ಜೀವಿಗಳು ಅಂದರೆ ಸಾಮಾನ್ಯ ದೊಡ್ಡ ಕಾಗೆ (ಕೊರ್ವಸ್ ಕೊರಾಕ್ಸ್ ); ಇವುಗಳಲ್ಲದೇ ಇನ್ನು ಕೆಲವನ್ನು ಇದರಲ್ಲಿ ಅಳವಡಿಸಲಾಗಿದೆ. ಕ್ಯಾರಿಯಾನ್ ಕ್ರೌ ( ಸಿ .ಕೊರೊನೆ), ದಿ ಹೂಡೆಡ್ ಕ್ರೌ(C. ಕೊರ್ನಿಕ್ಸ್), ಚಿಲಿಪಿಲಿಗುಟ್ಟವ ರುಕ್(C. ಫ್ರುಜಿಲೆಗಸ್ ) ಮತ್ತು ಜಾಕ್ ಡಾವ್ (C. ಮೊನೆಡುಲಾ ) ಇತ್ಯಾದಿ.
 • ಸದ್ಯ ಈ ಜಾತಿಯ ಪಕ್ಷಿ ಉತ್ತಮ ಪದ್ದತಿಯ ಅಧ್ಯಯನಗಳು ಈ ನಿಟ್ಟಿನಲ್ಲಿ ನಡೆದಿಲ್ಲ. ವ್ಯಾವಹಾರಿಕವಾಗಿ ಹತ್ತಿರದ ಪ್ರದೇಶಗಳಲ್ಲಿನ ಕಾಗೆ ಜಾತಿಯ ಪಕ್ಷಿಗಳು ಒಂದೇ ತೆರನಾಗಿರುತ್ತವೆ. ಆದರೆ ಆಯಾ ಪ್ರದೇಶಗಳ ಬಗ್ಗೆ ಕೂಲಂಕಷವಾಗಿ ನೋಡಿದಾಗ ಹಾಗು ಕಾಣುವುದು ಅಪರೂಪ. ಇದು ಸಮಂಜಸವಾಗಿಲ್ಲ ಎನ್ನಬಹುದು. ಉದಾಹರಣೆಗೆ ಕಾರಿಯನ್ /ಕೊಲಾರ್ಡ್ /ಹೌಸ್ ಕ್ರೊ ಕಾಂಪ್ಲೆಕ್ಸ್ ಒಂದೊಕ್ಕೊಂದು ಸಂಬಂಧಿಸಿದೆಯಾದರೂ ಯಾವಾಗಲೂ ಇದೇ ಪರಿಸ್ಥಿತಿಯನ್ನು ಆಸ್ಟ್ರ್ತ್ಫೇಲಿಯನ್ /ಮೆಲಾನಿಸಿಯನ್ ಬಗೆಗೆ ನಾವು ಕಾಣಲು ಸಾಧ್ಯವಿಲ್ಲದಾಗಿದೆ. ಇದಲ್ಲದೇ ಕೆಲವು ಪಕ್ಷಿಗಳು ಒಂದೇ ತೆರನಾಗಿ ಕಂಡರೂ ಅವುಗಳ ಗೋಚರತೆ ಮತ್ತು ಆಕಾರ ಗುಣಲಕ್ಷಣ ಮತ್ತು ಅವುಗಳ ಗಾತ್ರದ ಶ್ರೇಣಿಗಳಲ್ಲಿ ವ್ಯತ್ಯಾಸ ಕಾಣುತ್ತದೆ. ಆಸ್ಟ್ರೇಲಿಯಾದಲ್ಲಿ ಇಂತಹ ಒಟ್ಟು ಐದು ಪ್ರಭೇದಗಳನ್ನು ಕಾಣಬಹುದಾಗಿದೆ.(ಬಹುಶಃ ಆರಿರಬಹುದು)
 • ಇವುಗಳ ಪಳೆಯುಳೆಕೆಗಳ ದಾಖಲೆ ಗಮನಿಸಿದರೆ ಯುರೋಪಿನಲ್ಲಿ ಇವುಗಳ ಸಂಖ್ಯೆ ದೊಡ್ಡದಿದೆ. ಆದರೆ ಇನ್ನುಳಿದ ಜೀವ ಸಂಕುಲಗಳಿಗೆ ಹೋಲಿಸಿದರೆ ಸಂಬಂಧ ಕಡಿಮೆ. ಜಾಕ್ ಡೊವ್, ಕಾಗೆ-ಮತ್ತು ದೊಡ್ಡ ರಾವೆನ್ ಗಾತ್ರದ ಪಕ್ಷಿಗಳು ಬಹುಕಾಲದಿಂದಲೂ ಇಲ್ಲಿವೆ.ಶಿಲಾಯುಗದ ಕಾಲದಿಂದಲೂ ಮನುಷ್ಯರ ಬೇಟೆಗೆ ಇವು ತುತ್ತಾಗುತ್ತಾ ಬಂದಿವೆ. ಇವುಗಳ ದಾಖಲಿಸುವಿಕೆ ಮತ್ತು ಆಧುನಿಕ ಟಾಕ್ಸಾ ಬದಲಾವಣೆಯು ನಡೆದುಕೊಂಡು ಬರುತ್ತಿದೆ. ಅಮೆರಿಕನ್ ಕಾಗೆಗಳು ಅಷ್ಟು ಸುವ್ಯವಸ್ಥಿತವಾಗಿ ದಾಖಲಾಗಿಲ್ಲ.
 • ಆಶ್ಚರ್ಯವೆಂದರೆ ಮನುಷ್ಯರ ವಸಾಹತುಕರಣದಿಂದಾಗಿ ಇವುಗಳ ಸಂಖ್ಯೆ ಕ್ಷೀಣಿಸುತ್ತಾ ಅವನತಿಗೆ ಬಂದಿದೆ. ಅದರಲ್ಲೂ ದ್ವೀಪಗಳಾದ ನಿವ್ಜಿಲ್ಯಾಂಡ್ ಹವಾಯಿ ಮತ್ತು ಗ್ರೀನ್ ಲ್ಯಾಂಡ್ ಇತ್ಯಾದಿ.

ವಿಭಿನ್ನ ಜೀವಸಂಕುಲ[ಬದಲಾಯಿಸಿ]

ಬದುಕಿರುವ ಮತ್ತು ಅಳಿವಿನಂಚಿನ ಜೀವಿಗಳು

ವಿಮಾನದಲ್ಲಿರುವ ಕ್ಯಾರಿಯಾನ್ ಕಾಗೆ
 • ಪಕ್ಷಿ ಸಂಕುಲದ ಹೆಸರು - ಸಾಮಾನ್ಯ ಹೆಸರುಗಳು(ಶ್ರೇಣಿ)
 • ಉಪಜೀವಿ ಸಂಕುಲದ ಜೀವಿಗಳು.
 • ಕೊರ್ವಸ್ ಅಲ್ಬೆರಿಕುಲಸ್ - ವ್ಹೈಟ್ -ನೆಕ್ಡ್ ರಾವೆನ್ ಅಥವಾ ಕೇಪ್ ರಾವೆನ್ (ದಕ್ಷಿಣ ಕೇಂದ್ರ ಮತ್ತು ಉತ್ತರ ಆಫ್ರಿಕಾ)
 • ಕೊರ್ವಸ್ ಅಲ್ಬಸ್ - ಪೈಡ್ ಕ್ರೌ (ಸೆಂತ್ರಲ್ ಆಫ್ರಿಕನ್ ಕೋಸ್ಟ್ಸ್ ದಿಂದ ದಕ್ಷಿಣ ಆಫ್ರಿಕಾ) ಕೊರ್ವಸ್ ಅಲ್ಬಸ್ -ಪೈಡ್
 • ಕೊರ್ವುಸ್ ಬೆನ್ನೆಟ್ಟಿ - ಲಿಟಲ್ ಕ್ರೌ (ಆಸ್ಟ್ರೇಲಿಯಾ)
 • ಕೊರ್ವುಸ್ ಬ್ಫ್ರಾಚಿಂಚೊಸ್ - ಅಮೆರಿಕನ್ ಕ್ರೌ (ಯುನೈಟೆಡ್ ಸ್ಟೇಟ್ಸ್, ಸದರ್ನ್ ಕೆನಡಾ, ನಾರ್ದರ್ನ್ ಮೆಕ್ಸಿಕೊ)
 • ಕೊರ್ವುಸ್ ಕೆಪೆನ್ಸಿಸ್ - ಕೇಪ್ ಕ್ರೌ ಅಥವಾ ಬ್ಲ್ಯಾಕ್ ಕ್ರೌ ಅಥವಾ ಕೇಪ್ ರುಕ್ (ಪೂರ್ವ ಮತ್ತು ಸದರ್ನ್ ಆಫ್ರಿಕಾ)
 • ಕೊರ್ವುಸ್ ಕೌರಿನಸ್ - ನರ್ಥ್ ವೆಸ್ಟರ್ನ್ ಕ್ರೌ (ಒಲಿಂಪಿಕ್ ಪಿನುಸುಲಾದಿಂದ ಸೌತ್ ವೆಸ್ಟರ್ನ್ ಅಲಾಸ್ಕಾ )
 • ಕೊರ್ವುಕ್ಸ್ ಕೊರಾಕ್ಸ್ - ಕಾಮಾನ್ ರಾವೆನ್ ಅಥವಾ ನಾರ್ದರ್ನ್ ರಾವೆನ್ (ದಿ ಹೊಲಾರ್ಕಿಕ್ಟ್ ಸೌತ್ ಥ್ರೊಔಟ್ ಮಿಡಲ್ ಯುರೊಪ್, ಏಷಿಯಾ ಮತ್ತು ನಾರ್ತ್ ಅಮೆರಿಕಾದಿಂದ ನಿಕಾರ್ಗುವಾ )
  • ಕೊರ್ವುಸ್ (ಕೊರಾಕ್ಸ್) ಸೈನುಟಸ್ - ವೆಸ್ಟರ್ನ್ ರಾವೆನ್ (ಹೊಲಾರ್ಕ್ಟಿಕ್; ಆರ್ಕ್ಟಿಕ್, ನಾರ್ತ್ ಅಮೆರಿಕಾ , ಯುರೆಸಿಯಾ, ನಾರ್ದರ್ನ್ ಆಫ್ರಿಕಾ, ಪ್ಯಾಸಿಸ್ಫಿಕ್ ಐಲೆಂಡ್ಸ್ ಮತ್ತು ಬ್ರಿಟ್ಶ್ ಐಸ್ಲೇಸ್)
  • ಕೊರ್ವುಸ್ಸ್(ಕೊರಾಕ್ಸ್) ವಿವಿಧ ಮೊರ್ಫಾಲುಕೊಫೆಯಸ್ - ಪೈಡ್ ರಾವೆನ್ ಒಂದು ಅಳಿವಿನಂಚಿನ ವಿವಿಧ ಪಕ್ಷಿಗಳು (ಹೊಲಾರ್ಕ್ಟಿಕ್)
 • ಕೊರ್ವಸ್ ಕೊರೊನ್ - ಕಾರಿಯೊನ್ ಕ್ರೌ ಅಥವಾ ಯುರೇಸಿಯನ್ ಕ್ರೌ (ವೆಸ್ಟರ್ನ್ ಯುರೊಪ್ ಫ್ರಾಮ್ ಬ್ರಿಟೀಷ್ ಐಸ್ಲೆಸ್ to ಜರ್ಮನಿಗೆ, ಈಸ್ಟರ್ನ್ ಏಷಿಯಾ )
  • ಕೊರ್ವುಸ್(ಕೊರೊನೆ) ಕೇಪಲ್ ನೆಸ್ - ಮೆಸೊಪೊಟಿಯಮನ್ ಕ್ರೌ ಅಥವಾ ಇರಾಕ್ ಪೈಡ್ ಕ್ರೌ (ಸದರ್ನ್ ಇರಾಕ್ ಗೆ ಕೊನೆಯ ಸೌಟ್ ವೆಸ್ಟ್ ಇರಾನ್)
  • ಕೊರ್ವುಸ್(ಕೊರೊನೆ) ಕೊರೊನಿಕ್ಸ್ - ಹೂಡೈಡ್ ಕ್ರೌ (ನಾರ್ದರ್ನ್ ಮತ್ತು ವೆಸ್ಟರ್ನ್ ಯುರೊಪಿಯನ್ ಮೂಲಕ through ಟರ್ಕಿ ಮತ್ತು ಸ್ಕಾಟ್ ಲ್ಯಾಂಡ್ ನ ವಾಯುವ್ಯ ಮತ್ತು ಇಂಗ್ಲೆಂಡನ್ ಉತ್ತರ ಐರ್ಲೆಂಡ್ ಭಾಗದಲ್ಲಿ ಈ ದೊಡ್ಡ ಕಾಗೆ ಸಾಮಾನ್ಯವಾಗಿದೆ. ಇದು ಬ್ರಿಟೀಷ್ ರ ಪ್ರಮುಖ ಭೂ ಪ್ರದೇಶದಲ್ಲಿ ದೊರೆಯುತ್ತದೆ. ಇರಾನ್, ಸಿರುಯಾ, ಇರಾನ್ ಮತ್ತು ಇರಾಕ್)
  • ಕೊರ್ವುಸ್ಸ್ (ಕೊರೊನೆ) ಮೂಲದ - ಈಸ್ಟರ್ನ್ ಕಾರಿಯೊನ್ ಕ್ರೌ (ಯುರೆಸಿಯಾ ಮತ್ತು ನಾರ್ದರ್ನ್ ಆಫ್ರಿಕಾ)
 • ಕೊರ್ವುಸ್ ಕೊರೊನೈಡ್ಸ್ - ಆಸ್ಟ್ರೇಲಿಯನ್ ರಾವೆನ್ (ಈಸ್ಟರ್ನ್ ಮತ್ತು ಸದರ್ನ್ ಆಸ್ಟ್ರೇಲಿಯಾ)
 • ಕೊರ್ವುಸ್ ಕ್ರಾಸಿರೊಸ್ಟ್ರಿಯಸ್ - ದಪ್ಪ-ಚೊಂಚಿನ ರಾವೆನ್ (ಎತಿಯೊಪಿಯಾ)
 • ಕೊರ್ವುಸ್ ಕ್ರಿಸ್ಟೊಲಿಕಸ್ - ಚಿಹೊ ಹೌ ರಾವೆನ್ (ವಾಯು ವ್ಯU.S., ನೈಋತ್ಯ ಮೆಕ್ಸಿಕೊ)
 • ಕೊರ್ವುಸ್ ದೌರಿಕಸ್ - ಡೌರಿಯನ್ ಜಾಕ್ ಡಾವ್ (ಪೂರ್ವ ಯುರೊಪ್ to ಪೂರ್ವ ಜಪಾನ್, ಆಗಾಗ ಸ್ಕ್ಯಾಂಡೇವಿನಿಯಾ)
 • ಕೊರ್ವುಸ್ ಎನಕಾ - ಉದ್ದ-ಚೊಂಚಿನ ಕಾಗೆ (ಮಲೆಸಿಯಾ, ಬೊರ್ನಿಯೊ, ಇಂಡೊನೇಶಿಯಾ)
  • ಕೊರ್ವುಸ್ (ಎನಕಾ) ವಯೊಲಿಸಿಯಸ್ - ವಯೊಲಿಸಿಯಸ್ ಕಾಗೆ(ಫಿಲಿಪೈನ್ಸ್, ಸೆರೆಮ್, ಮೊಲುಕುಎಸ್)
 • ಕೊರ್ವುಸ್ ಫ್ಲೊರೆನ್ಸಿಸ್ - ಫ್ಲೊಸ್ರ್ಸ್ ಕಾಗೆ (ಫ್ಲೊರೆಸ್ ದ್ವೀಪ)
 • ಕೊರ್ವುಸ್ ಫ್ರಾಗುಲಿಗಸ್ - ರುಕ್ (ಯುರೊಪ್, ಏಷಿಯಾ, ನಿವ್ಜಿಲ್ಯಾಂಡ್ )
 • ಕೊವುಸ್ ಫುಸಿಕ್ಯಾಪಿಲಿಯಸ್ - ಕಂದು-ತಲೆಯ ಕಾಗೆ (ನಿವ್ ಗೈನಾ)
 • ಕೊರ್ವುಸ್ ಹವಾಯೈನಿಸಿಸ್ (ಸಾಮಾನ್ಯವಾಗಿ C. ಟ್ರೊಪಿಕಸ್ ) - 'ಅಲಾಲಾ' or ಹವೆಯಿನ್ ಕಾಗೆ(ಹವಾಯಿ ದ್ವೀಪ )
 • ಕೊರ್ವುಸ್ ಇಂಪರೇಟಸ್ - ತಮೌಲಿಪಾಸ್ ಕಾಗೆ (ಮಿಕ್ಸಿಕೊ ಕೊಲ್ಲಿ ಕರಾವಳಿ ನಿವೊದಿಂದ ಲಿಯಾನ್ ಪೂರ್ವಕ್ಕೆ ಅದರಿಂದ ರಿಯೊ ಗ್ರಾಂಡೆ ಡೆಲ್ಟಾ ದಕ್ಷಿಣಕ್ಕೆ ಟ್ಯಾಂಪಿಕೊ ಟ್ಯಮೊಲಿಪಸ್ )
 • ಕೊರ್ವುಸ್ ಜಮೈಕೆನಿಸಿಸ್ - ಜಮೈಕಿನ್ ಕಾಗೆ (ಜಮೈಕಾ)
 • ಕೊರ್ವುಸ್ ಕುಬಾರಿಯೊ - ಮರಿಯಾನಾ ಕಾಗೆ ಅಥವಾ ಅಗಾ(ಗೌಮ್, ರೊಟಾ)
 • ಕೊರ್ವುಸ್ ಲಿಕೊಘ್ನಾಪಾಲ್ಸಸ್ - ಬಿಳಿ-ಕತ್ತಿನ ಕಾಗೆ (ಹೈಟಿ, ಡೊಮೆನಿಕನ್ ರಿಪಬ್ಲಿಕನ್, ಪುರುಟೊ ರಿಕೊ)
 • ಕೊರ್ವುಸ್ ಮ್ಯಾಕ್ರೊರಿಚಂಚೊಸ್ - ದೊಡ್ಡ -ಚೊಂಚಿನ ಕಾಗೆ (ಪೂರ್ವ ಏಷಿಯಾ, ಹಿಮಾಲಯಾಸ್, ಫಿಲಿಪೈನ್ಸ್)
  • ಕೊರ್ವುಸ್ (ಮ್ಯಾಕ್ರೊರಿಂಚೊಸ್) ಲೆವಿಲ್ಲಂಟಿಲ್ - ಕಾಡು ಕಾಗೆ (ಭಾರತ, ಬರ್ಮಾ)
 • ಕೊರ್ವುಸ್ ಮೀಕಿ - ಬೌಗಿನ್ ವಿಲ್ಲೆ ಕಾಗೆ ಅಥವಾ ಸೊಲೊಮನ್ ದ್ವೀಪಗಳ ಕಾಗೆ(ಉತ್ತರ ಸೊಲೊಮನ್ ದ್ವೀಪಗಳು)[೩]
 • ಕೊರ್ವುಸ್ ಮೆಲ್ಲೊರಿ - ಲಿಟಲ್ ರಾವೆನ್ (ವಾಯುವ್ಯ ಆಸ್ಟ್ರೇಲಿಯಾ)
 • ಕೊರ್ವುಸ್ ಮೊನೆಡುಲಾ - ಜಾಕ್ ಡಾವ್ ಅಥವಾ ಪಸ್ಗ್ಚಿಮ ಜಾಕ್ ಡಾವ್ (ಬ್ರಿಟಿಶ್ ಐಸ್ಲೆ ಮತ್ತು ಪಶ್ಚಿಮ ಯುರೊಪ್, ಸ್ಕ್ಯಾಂಡೇವಿನಿಯಾ, ನಾರ್ದರ್ನ್ ಏಷಿಯಾ, ನಾರ್ದರ್ನ್ ಆಫ್ರಿಕಾ)
 • ಕೊರ್ವುಸ್ ಮೊನೊಡುಡ್ಲೆಸ್ - ನಿವ್ ಕ್ಯಾಲೆಡೊನಿಯನ್ ಕಾಗೆ (ನಿವ್ ಕ್ಯಾಲೆಡೊನಿಯಾ, ಲಾಯಲ್ಟಿ ದ್ವೀಪಗಳು)
 • ಕೊರ್ವುಸ್ ನಾಸಿಕಸ್ - ಕುಬನ್ ಕಾಗೆ (ಕ್ಯುಬಾ, ಐಸ್ಲಾ ಡೆ ಲಾ ಜುವೆಂಟುಡ್, ಗ್ರಾಂಡ್ ಕೈಕೊಸ್ ದ್ವೀಪ)
 • ಕೊರ್ವುಸ್ ಒರು - ಟ್ರೆಸಿಯನ್ ಕಾಗೆ ಅಥವಾ ಆಸ್ಟ್ಯ್ರೇಲಿಯನ್ ಕಾಗೆ (ಆಸ್ಟ್ರೇಲಿಯಾ, ನಿವ್ ಗೈನಾ ಮತ್ತು ಹತ್ತಿರದ ದ್ವೀಪಗಳು)
 • ಕೊರ್ವುಸ್ ಒಸಿಫ್ರಾಗಸ್ - ಮೀನು ಕಾಗೆ (ಪೂರ್ವ U.S. ಕರಾವಳಿ, ಈಶಾನ್ಯ U.S. ಫ್ಲೊರಿಡಾ, ಮೂಲಕ ಪಶ್ಚಿಮದ ಪ್ರಮುಖ ನದಿಗಳು ಒಕ್ಲೊಮಾ ಮತ್ತು ಟೆಕ್ಸಾಸ್ )
 • ಕೊರ್ವುಸ್ ಪಾಮಾರಮ್ - ಪಾಮ್ ಕಾಗೆ (ಕ್ಯುಬಾ, ಹೈಟಿ, ಡೊಮೊನಿಕನ್ ರಿಪಬ್ಲಿಕನ್)
 • ಕೊರ್ವುಸ್ ರಿಪಿಡ್ಸುರಸ್ - ರೆಕ್ಕೆ-ಬಾಲದ ರಾವೆನ್ (ನೈಋತ್ಯ ಆಫ್ರಿಕಾ, ಮಧ್ಯ ಪೂರ್ವ)
 • ಕೊರ್ವುಸ್ ರಫಿಕೊಲಿಸ್ - ಕಂದು-ಕೊರಳಿನ ರಾವೆನ್ ಅಥವಾ ಮರಭೂಮಿ ರಾವೆನ್ (ಉತ್ತರ ಅಫ್ರಿಕಾ, ಅರೇಬಿಯಾ, ಆಗ್ನೇಯದಿಂದ ಪೂರ್ವದ ಏಷಿಯಾ)
  • ಕೊರ್ವುಸ್ (ರಫಿಕೊಲಸ್) ಎಡಿಥೆಯ್ - ಸೊಮಾಲಿ ಕಾಗೆ ಅಥವಾ ಗಿಡ್ಡ ರಾವೆನ್ (ಆಗ್ನೇಯ ಆಫ್ರಿಕಾ)
 • ಕೊರ್ವುಸ್ ಸಿನಾಲೊಯ್ - ಸಿನಾಲೊಯನ್ ಕಾಗೆ (ಪ್ಯಾಸಿಫಿಕ್ ಕರಾವಳಿ ಸೊನೊರಾದಿಂದ ಕೊಲಿಮಾ )
 • ಕೊರ್ವುಸ್ ಸ್ಪ್ಲೆಂಡೆನ್ಸ್ - ಮನೆ ಕಾಗೆ ಅಥವಾ ಭಾರತೀಯ ಮನೆ ಕಾಗೆ(ಭಾರತ ಉಪಖಂಡ, ಮಧ್ಯಪೂರ್ವ, ಪೂರ್ವ ಆಫ್ರಿಕಾ)
 • ಕೊರ್ವುಸ್ ಟ್ಯಾಸ್ ಮಎನಿಕಸ್ - ಅರಣ್ಯದ ರಾವೆನ್ ಅಥವಾ ಟ್ಯಾ ಮೆನಿಯನ್ ರಾವೆನ್ (ಟಾಸ್ಮೆನಿಯಾ ಮತ್ತು ಹತ್ತಿರದ ದಕ್ಷಿಣ ಆಸ್ಟ್ರೇಲಿಯಾ ಕರಾವಳಿ)
 • ಕೊರ್ವುಸ್ ಟೊರ್ಕ್ವ್ಟಸ್ - ಕ್ಲೆರ್ಡ್ ಕಾಗೆ (ಪೂರ್ವ ಚೀನಾ, ದಕ್ಷಿಣದೊಳಗಿನ ವಿಯಟ್ನಾಮ್)
 • ಕೊರ್ವುಸ್ ಟ್ರಿಸ್ಟಿಸ್ - ನೇರಳೆ ಕಾಗೆ ಅಥವ ಬರಿ-ಮುಖದ ಕಾಗೆ(ನಿವ್ ಗಯನಾ ಮತ್ತು ನೆರೆಯ ದ್ವೀಪಗಳು )
 • ಕೊರ್ವುಸ್ ಟಿಪಿಕಸ್ - ಉದ್ದದ ಕಾಗೆ ಅಥವಾ ಸೆಲೆಬೆಯ ಪೈಡ್ ಕಾಗೆ (ಉದ್ದ ಮೂತಿಯ)(ಸಲ್ವೆಸಿ, ಮುನಾ, ಬುಟುಂಗ್)
 • ಕೊರ್ವುಸ್ ಯುನಿಕಲರ್ - ಬಾಂಗೈ ಕಾಗೆ (ಬಾಂಗೈ ದ್ವೀಪ) - ಸುಮಾರಾಗಿ ಅಳಿವಿನಂಚಿನ)
 • ಕೊರ್ವುಸ್ ವ್ಯಾಳಿಡಸ್ - ಉದ್ದ-ಚೊಂಚಿನ ಕಾಗೆ (ನಾರ್ದರ್ನ್ ಮೊಲುಕ್ಕೆಸ್)
 • ಕೊರ್ವುಸ್ ವುಡ್ ಫೊರ್ಡಿ - ಬಿಳಿ-ಚೊಂಚಿನ ಕಾಗೆ ಅಥವಾ ಸೊಲೊಮನ್ ದ್ವೀಪಗಳ ಕಾಗೆ(ದಕ್ಷಿಣ ಸೊಲೊಮನ್ ದ್ವೀಪಗಳು)[೩]ಪಟ್ಟಿ ಮೂಲಗಳು [೪]

ಇತಿಹಾಸಪೂರ್ವ ಮತ್ತು ಪಳೆಯುಳಿಕೆಯ ಜಾತಿಗಳು[ಬದಲಾಯಿಸಿ]

ಇನ್ನು ಹೆಚ್ಚೆಂದರೆ ಇತಿಹಾಸ ಪೂರ್ವದ ರೂಪಗಳನ್ನು ಪಟ್ಟಿ ಮಾಡಲಾಗಿದೆ. ಬಹಳಷ್ಟು ಬಾರಿ ಕ್ರೊನೊಸುಬಸ್ಪೀಸಿಸ್ ಎಂದು ವರ್ಣಿಸಲಾಯಿತು. ಇವುಗಳು ಆಯಾ ಪಕ್ಷಿ ಜೀವಸಂಕುಲದ ಜೊತೆಗೆ ಅನುಕ್ರಮವಾಗಿರುತ್ತವೆ.

ಕಾಗೆಗಳು ಮತ್ತು ಮನುಷ್ಯರು[ಬದಲಾಯಿಸಿ]

 • ವಿಶೇಷವಾಗಿ ಕಾಮನ್ ರಾವೆನ್, ಆಸ್ಟ್ರೇಲಿಯನ್ ರಾವೆನ್ ಮತ್ತು ಕ್ಯಾರಿಯೊನ್ ಕ್ರೌ ಜಾತಿಯವುಗಳೆಲ್ಲಾ ದುರ್ಬಲ ಕುರಿಮರಿ ಜಾತಿಯ ಪ್ರಾಣಿಗಳನ್ನು ಮತ್ತು ತಾಜಾ ಎನ್ನುವ ಪ್ರಾಣಿಗಳ ಸತ್ತ ದೇಹಗಳನ್ನು ತಿನ್ನುತ್ತವೆ. ಅಂದರೆ ಬಹುತೇಕವಾಗಿ ಬೇರೆ ಪ್ರಾಣಿಗಳು ಕೊಂದು ಹಾಕಿದ ಪ್ರಾಣಿಗಳ ಅವಶೇಷಗಳನ್ನು ಅವು ತಿನ್ನುತ್ತವೆ.
 • ಒರಟು ದನಿಯ ಕಾಗೆ ಜಾತಿಯ ರೂಕ್ಸ್ ಗಳು UK ನಲ್ಲಿ ಧಾನ್ಯಗಳನ್ನು ತಿಂದು ನಾಶ ಮಾಡಿದರೆ,ಕಂದು-ಕತ್ತಿನ ರಾವೆನ್ ಗಳು ಮರಳುಗಾಡಿನ ದೇಶಗಳಲ್ಲಿನ ಖರ್ಜೂರದ ಬೆಳೆಗೆ ದಾಳಿ ಇಟ್ಟು ನಾಶ ಪಡಿಸುತ್ತವೆ ಎಂಬ [೫] ದೂರುಗಳಿವೆ.
 • ನ್ಯೂಯಾರ್ಕ್ ನ ಔಬುರ್ನ್ (USA), ನಲ್ಲಿ ಸುಮಾರು ೨೫,೦೦೦ ದಿಂದ ೫೦,೦೦೦ ಅಮೆರಿಕನ್ ಕಾಗೆಗಳು (C. ಬ್ರ್ಯಾಚಿ ರಿಕೊಸ್)ಆ ಪುಟ್ಟ ನಗರದಲ್ಲಿನ ವಿಶಾಲ ಮರಗಳಲ್ಲಿ ಸುಮಾರು ೧೯೯೩ ರಿಂದಲೂ ತಮ್ಮ ವಾಸಸ್ಥಾನ [೬] ಕಂಡು ಕೊಂಡಿವೆ. ಆದರೆ ಇವುಗಳಿಂದ ಶಬ್ದ ಮಾಲಿನ್ಯ ತಡೆಯಲು ಇವುಗಳ ಸಂಖ್ಯೆ ಕಡಿಮೆ ಮಾಡುವ ಒಂದು ಸಂಘಟಿತ ಕಾಗೆ ಬೇಟೆಯ ವಿಷಯವು ೨೦೦೩ ರಲ್ಲಿ ವಿವಾದ [೭] ಸೃಷ್ಟಿಸಿತು.(ಸಾರ್ವಜನಿಕಮ್ ಆರೋಗ್ಯ ಸ್ಥಿತಿ ಹಾಗು ಕರ್ಕಶವಾದ ಕಾಗೆಗಳ ಕೂಗು)
 • ಸುಮಾರು 2008 ಮಾರ್ಚ್ ನಲ್ಲಿ ನಡೆದ ಟೆಕ್ನಾಲಾಜಿ ಎಂಟರ್ ಟೇನ್ಮೆಂಟ್ ಡಿಸೈನ್ ಕಾನ್ ಫೆರೆನ್ಸಲ್ಲಿಜೊಶುವಾ ಕ್ಲೆನ್ ಎಂಬಾತ ಇವುಗಳ ಸಮರ್ಪಕ ಬಳಕೆಗಾಗಿ ವೆಂಡಿಂಗ್ ಮಶಿನ್ ವಿಧಾನವನ್ನು ಸೂಚಿಸಿದ. ಕಾಗೆಗಳಿಗೆ ಕಚಡಾವಸ್ತುಗಳನ್ನು ಸಾಗಿಸುವ ತರಬೇತಿ ನೀಡಿ ಈ ವೆಂಡಿಂಗ್ ಮಶಿನ್ ನ್ನು ಕಸದ ವಿಲೇವಾರಿಯ ಪರ್ಯಾಯಕ್ಕೆ [೮] ಬಳಸಬಹುದಾಗಿದೆ.
 • ಕಾಗೆಗಳು ಸಹ ಮನುಷ್ಯರ ಧ್ವನಿಯನ್ನು ಗಿಳಿಗಳಂತೆ ಅನುಕರಿಸಿ ಅನುಸರಿಸುತ್ತವೆ. ಪೂರ್ವ ಏಷ್ಯಾದಲ್ಲಿ "ಮಾತನಾಡುವ" ತರಬೇತು ಪಡೆದ ಕಾಗೆಗಳಿಗೆ ಹೆಚ್ಚು ಬೇಡಿಕೆ ಇದ್ದು, ಇಲ್ಲಿ ಕಾಗೆಗಳನ್ನು ಅದೃಷ್ಟ ಎಂದೂ ಪರಿಗಣಿಸಲಾಗುತ್ತದೆ. ಕೆಲವರು ಕಾಗೆಗಳನ್ನು ಸಾಕು ಪಕ್ಷಿ-ಪ್ರಾಣಿಗಳಂತೆ ಪರಿಗಣಿಸುತ್ತಾರೆ.
 • ಮನುಷ್ಯರು ಸಾಮಾನ್ಯವಾಗಿ ಕಾಗೆಗಳನ್ನು ವೈಯಕ್ತಿಕ ನೆಲೆಯಲ್ಲಿ ನೋಡದಿದ್ದರೂ ಅವುಗಳಲ್ಲಿ "ಕೆಟ್ಟ" ಮನುಷ್ಯರನ್ನು ಪತ್ತೆಹಚ್ಚುವ ಸಾಮರ್ಥ್ಯವಿದೆ. ಅವು ತಮ್ಮ ಕರ್ಕಶ ಕೂಗಿನಿಂದ ಕೆಟ್ಟದ್ದನ್ನು [೯] ಕಂಡು ಹಿಡಿಯಬಲ್ಲವು.

ಬೇಟೆ[ಬದಲಾಯಿಸಿ]

 • ಯುನೈಟೆಡ್ ಸ್ಟೇಟ್ಸನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಕಾಗೆಗಳನ್ನು ಎಲ್ಲಾ ರಾಜ್ಯಗಳಲ್ಲಿ ಬೇಟೆಯಾಡಲು ಕಾನೂನು ರೀತ್ಯ ಅನುಮತಿ ಇದ್ದು, ಇದು ಸಾಮಾನ್ಯವಾಗಿ ಆಗಸ್ಟ್ ನಿಂದ ಮಾರ್ಚ್ ವರೆಗೆ ನಡೆಯುತ್ತದೆ.
 • "ಕಾಗೆಗಳ ಬೇಟೆ ಋತುವಿನಲ್ಲಿ" ಇವುಗಳ ಪ್ರಮಾಣದ ಮಿತಿ ಇಲ್ಲ. US ನ ಕೋಡ್ ಆಫ್ ಫೆಡರಲ್ ರೆಗ್ಯುಲೇಶನ್ಸ್ ಪ್ರಕಾರ ಯಾವುದೇ ಸಂದರ್ಭದಲ್ಲಿ ಕಾಗೆಗಳನ್ನು ಯಾವುದೇ ಅನುಮತಿ ಇಲ್ಲದೇ ಪಡೆಯಬಹುದು. USFWS 50 CFR ೨೧.೪೩ (ಸಾರ್ವಜನಿಕ ವಸ್ತು ನಾಶ ಮಾಡುವ ಕಪ್ಪು ಪಕ್ಷಿಗಳು, ಗೋಕಾಗೆಗಳು, ದೊಂಬ ಕಾಗೆಗಳು ಮತ್ತು ಅಮೆರಿಕನ್ ಕಾಗೆಗಳು)ಇಂತಹ ಕಾಗೆಗಳೋ ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಇವುಗಳನ್ನು ಕೊಲ್ಲಲು ಯಾವುದೇ ಪರವಾನಿಗೆ ಬೇಡ. ಒಂದು ವೇಳೆ ಧ್ವಂಸ ಕಾರ್ಯದಲ್ಲಿ ತೊಡಗೊಡಗಿದರೆ" ಅಂದರೆ ಅಲಂಕಾರಿಕ ಅಥವಾ ನೆರಳಿನ ಗಿಡಗಳು, ಕೃಷಿ ಬೆಳೆಗಳು, ಪಶು-ಪ್ರಾಣಿಗಳು ಅಥವಾ ವನ್ಯ ಜೀವಿಗಳಿಗೆ ತೊಂದರೆ ನೀಡಿದರೆ ಅಥವಾ ಆರೋಗ್ಯಕ್ಕೆ ಹಾನಿ ಮಾಡುವ ಇಲ್ಲವೆ ಗದ್ದಲ ಎಬ್ಬಿಸುವ" ಕಾಗೆಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲಬಹುದಾಗಿದೆ.
 • ಆದರೆ ಇಂತಹ ಕಾಗೆಗಳ ಅಂಗಗಳ ಅಥವಾ ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡುವುದು ನಿಷಿದ್ದವಾಗಿದೆ.
 • ಈ ಹಕ್ಕುಗಳನ್ನು ಯಾವುದೇ ರಾಜ್ಯವು ಫೆಡರಲ್ ಅನುಮತಿ ಪಡೆದೇ ಕಾಗೆಗಳ ಕ್ರೀಡೆಗಳ ಬಗ್ಗೆ ಯಾವುದೇ ಕಟ್ಟು ಪಾಡುಗಳಿಲ್ಲ. ಆಯಾ ಕಟ್ಟಡ ಅಥವಾ ದೊಡ್ಡ ಇಮಾರತುಗಳ ಮೇಲೆ ಅವು ತಮ್ಮ ಜಾಗೆಗಳನ್ನು ಹುಡುಕುತ್ತವೆ. ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಆಯಾ ವಿಭಾಗದ ಅಧಿಕಾರಿಗಳ ಆದೇಶದ ಮೇರೆಗೆ ನಡೆಯುತ್ತದೆ ಮತ್ತು
 • ಹೀಗೆ ಇವುಗಳ ಗದ್ದಲ ಕಡಿಮೆ ಮಾಡಲು ರಾಜ್ಯವು ತನ್ನ ಫೆಡರಲ್ ಕಾನೂನುಗಳನ್ನು ಆಯಾ ರಾಜ್ಯಗಳಿಗೆ ಸಮಯ ಸಂದರ್ಭಗಳಿಗೆ ಅನುಗುಣವಾಗಿ ಕಾನೂನುಗಳನ್ನು ಪಾಲಿಸಿ ಅಲ್ಲಿನ ರಾಜ್ಯಗಳಲ್ಲಿನ ಅನುಮತಿ ಮೇರೆಗೆ ಈ ಪಕ್ಷಿಗಳ ಕಾಟವನ್ನು ತಪ್ಪಿಸಬಹುದಾಗಿದೆ.
  • ಬ್ರಿಟನ್ ನಲ್ಲಿ ಕಾಗೆಯನ್ನು ಒಂದು ಉಪಟಳದ ಪಕ್ಷಿ ಎಂದು(ಬೆಳೆ ನಾಶಕ) ಪರಿಗಣಿಸಲಾಗುತ್ತದೆ. ಅಲ್ಲದೇ ಕೆಲವು ಬಾರಿ ಸಾಮಾನ್ಯ ಕಾನೂನಡಿ ಇದನ್ನು ಅನುಮತಿ ಪಡೆದು ಕೊಲ್ಲಬಹುದಾಗಿದೆ

  ವಿಕಸನ[ಬದಲಾಯಿಸಿ]

  • ಸಾಮಾನ್ಯವಾಗಿ ಕಾಗೆಗಳು ಕೇಂದ್ರ ಏಷ್ಯಾದಲ್ಲಿ ಬೆಳೆದು ನಂತರ ಉತ್ತರ ಅಮೆರಿಕಾ,ಆಫ್ರಿಕಾ,ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ವಿಕಸನ ಹೊಂದಿದವು. ಇತ್ತೀಚಿನ ಆಸ್ಟ್ರೇಲಿಯಾದಲ್ಲಿನ [೧೦]
  • ಬೆಳವಣಿಗೆ ಅಂದರೆ ಅಲ್ಲಿನ ಕೊರ್ವೈಡ್ (ಕಪ್ಪು ಪಕ್ಷಿ ಜಾತಿ) ವರ್ಗದಿಂದ ಇದು ವಿಕಸನಗೊಂಡದ್ದು ಕಾಣಿಸುತ್ತದೆ. ಹೇಗೆಯಾದರೂ ಇದರ ಸಂಕುಲವು ಆಧುನಿಕ ಜಯ್ಸ್(ಚಿಲಿಪಿಲಿಗುಟ್ಟುವ),ದೊಂಬಕಾಗೆಗಳುಮತ್ತು ದೊಡ್ಡ ಕಪ್ಪು ಕೊರ್ವುಸ್ ಗಳು ಪ್ರಧಾನ ವರ್ಗ ವಾಗಿದ್ದು, ಇದೀಗ ಆಸ್ಟ್ರೇಲೇಸಿಯಾದಿಂದ ತೆರಳಿ ಏಷ್ಯಾದಲ್ಲಿ ತಮ್ಮ ವಿಕಸನ ಕಂಡು ಕೊಂಡಿವೆ. ಕೊರ್ವುಸ್ ಎಂಬ ವರ್ಗವು ಆಸ್ಟ್ರೇಲಿಯಾದಲ್ಲಿ ಮರುಪ್ರವೇಶ ಪಡೆದಿದ್ದು (ಇತ್ತೀಚೆಗಷ್ಟೆ) ಇದೇ ವರ್ಗವು ಐದು ಇತರ ತಳಿಗಳ ಹುಟ್ಟಿಗೆ ಕಾರಣವಾಗಿದ್ದು ಇದನ್ನು ಉಪ-ಜಾತಿ ಎನ್ನಬಹುದಾಗಿದೆ.

  ನಡವಳಿಕೆ[ಬದಲಾಯಿಸಿ]

  ಗಟ್ಟಿಯಾಗದ ಕೂಗು[ಬದಲಾಯಿಸಿ]

  • ಕಾಗೆಗಳು ವಿವಿಧ ಪ್ರಕಾರದ ಕೂಗು ಅಥವಾ ಧ್ವನಿ ಹೊರಡಿಸುತ್ತವೆ. ಸದ್ಯ ಕಾಗೆ ತನ್ನ ಸಂಹನಕ್ಕಾಗಿ ಈ ಉಚ್ಚಾರವನ್ನು ಒಂದು ಭಾಷೆಯಂತೆ ಬಳಸುತ್ತಿರುವ ಬಗ್ಗೆ ಚರ್ಚೆ ಮತ್ತು ಅಧ್ಯಯನ ಕೈಗೊಳ್ಳಲಾಗುತ್ತದೆ. ಕಾಗೆಗಳು ಇನ್ನುಳಿದ ಪಕ್ಷಿಗಳ ಕೂಗಿಗೂ ಸ್ಪಂದಿಸುವ ಗುಣ ಹೊಂದಿವೆ. ಇದು ಆಯಾ ಪ್ರದೇಶಗಳಲ್ಲಿನ ಪಕ್ಷಿ ವರ್ಗದ ನಡವಳಿಕೆ ಮೇಲೆ ಅವಲಂಬಿಸಿದೆ.
  • ಆದರೆ ಕಾಗೆಗಳ' ಉಚ್ಚಾರವು ಸಂಕೀರ್ಣವಾದುದಲ್ಲದೇ ಸರಳವಾಗಿ ತಿಳಿವಿಗೆ ಬಾರದು. ಸಾಮಾನ್ಯವಾಗಿ ಕಾಗೆಗಳು "ಕೊವ್ವ್ " ಎಂದು ಕೂಗುತ್ತವೆ. ಇದು ಸಾಮಾನ್ಯವಾಗಿ ಪ್ರತಿಧ್ವನಿಸಿದ ಪಕ್ಷಿಗಳ ನಡುವುನ ಸಂಹನದಂತೆ ಕಾಣುತ್ತದೆ. ಒಂದು ಸರಣಿಯ "ಕೊವ್ವ್ಸ್ "ಗಾತ್ರದ ಮೇಲೆ ಅದರ ಕೂಗು ನಿಂತಿರುತ್ತದೆ. ಸಣ್ಣ ಕಾಗೆಗಳ ಮತ್ತು ಕೊಂಚ ದೊಡ್ಡದಾದ ಜಾತಿಯ ಕಾಗೆಗಳ ಧ್ವನಿ ಸ್ವಲ್ಪ ಭಿನ್ನವಾಗಿರುತ್ತದೆ.(ಸಾಮಾನ್ಯವಾಗಿ ಪಕ್ಷಿ ತನ್ನ ಗೂಡು ತೊರೆಯುವಾಗ ಇದು ನಡೆಯುತ್ತದೆ)ಇದು ಪ್ರತಿಧ್ವನಿಯಂತೆ ಹಿಂದೆ ಬಂದಂತೆ ಭಾಸವಾಗುತ್ತದೆ. ಈ ಧ್ವನಿ ಉಚ್ಚರಣೆ ಆಯಾ ಜಾತಿಗಳ ಪಕ್ಷಿಗಳ ಹುಟ್ಟಿನ ಮೇಲೆ ಆಲಂಬಿಸಿದೆ.
  • ಇನ್ನು ಕೆಲವು ಪ್ರಭೇದಗಳಲ್ಲಿ ಆಯಾ ಪ್ರದೇಶಗಳಲ್ಲಿನ ಆಚರಣೆ ಮತ್ತು ಸಂಪ್ರದಾಯಗಳ ಮೇಲೆ ಇದನ್ನು ಗಣಿಸಲಾಗುತ್ತದೆ. (ಕಾಗೆಗಳ ಬರುವ ಸಮಯ ಅಥವಾ ಹೊರಹೋಗುವ ಸಮಯ) ಕಾಗೆಗಳು ಮನುಷ್ಯರಿಗಿಂತ ಹೆಚ್ಚು ಗಾಢವಾದ ಶಬ್ದವನ್ನು ಅದು ಆಲಿಸುತ್ತದೆ. ಇದು ಕೆಲವೊಮ್ಮೆ ಇದರ ಕೂಗು ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಯುವಾಗ ಇದು ಸಂಭವಿಸುತ್ತದೆ.
  • ಗಡಸು ಧ್ವನಿಯ "ಕಾ-ಕಾ-ಆಹಾ" ಈ ಉಚ್ಚರಣೆಯು ತನ್ನ ಹಸಿವು ಅಥವಾ ತನ್ನ ವಾಸ ಪ್ರದೇಶವನ್ನು ಪ್ರಸ್ತುತ ಪಡಿಸುತ್ತದೆ. ತಮ್ಮ ವಾಸದ ಗೂಡು ಅಥವಾ ಆಹಾರದ ಉದ್ದೇಶದಿಂದ ಕಾಗೆಗಳು ತಮ್ಮ ರೆಕ್ಕೆಗಳನ್ನು ದೊಡ್ಡದು ಮಾಡಿಕೊಂಡು ತಮ್ಮ ಗಾತ್ರವನ್ನೂ ತೋರುತ್ತವೆ.

  ಕೆಲವೊಮ್ಮೆ ಮೆದು ಮಧುರ ಶಬ್ದಗಳ ಮೆಲ್ಲ ಗುಟುರುಗಳು ತಮ್ಮ ಕರೆಯ ಅಕ್ಕರೆಯನ್ನು ಪ್ರದರ್ಶಿಸುತ್ತವೆ. ಇಂತಹುದು ಅವುಗಳ ಗಂಟಲೊಳಗಿಂದ ಬಂದು ಬೆಕ್ಕೊಂದು ಗುಟುರಿದಂತೆ ಭಾಸವಾಗುತ್ತದೆ.

  ಸಂಸ್ಕೃತಿ ಮತ್ತು ಪುರಾಣಗಳಲ್ಲಿ[ಬದಲಾಯಿಸಿ]

  ಇಲ್ಲಿ ರಾವೆನ್ ನ್ನು ಪುರಾಣ ಕಥೆಗಳಲ್ಲಿ ಮತ್ತು ರಾವೆನ್ ಗಳನ್ನು ಸಂಸ್ಕೃತಿಯ ಪ್ರದರ್ಶನದಲ್ಲಿ ಈ ಕಪ್ಪು ಹಕ್ಕಿಯನ್ನು ಬಳಸಲಾಗಿದೆ.
  ದಿ ತ್ವಾ ಕೊಬಿಸ್ ಆರ್ಥರ್ ರಕಮ್ ಅವರಿಂದ
  ಕ್ರೌ ಆನ್ ಎ ಬ್ರಾಂಚ್, ಮರುಯಾಮಾ Ōkyo (1733–1795)
  • ಕಾಗೆಗಳು ವಿಶೇಷವಾಗಿ ಮಿರುಗಿನ ರಾವೆನ್ ಗಳು ಯುರೊಪಿಪುರಾಣಗಳು ಅಥವಾ ಪ್ರಾಚೀನ ಕಥೆಗಳಲ್ಲಿ ಇದನ್ನು ವಿನಾಶ ಅಥವಾ ಸಾವಿನ ಧೂತ ಎಂದು ಬಿಂಬಿಸಲಾಗಿದೆ. ಯಾಕೆಂದರೆ ಅವುಗಳ ಕಪ್ಪುಬಣ್ಣ, ಕರ್ಕಶ ಧ್ವನಿ ಮತ್ತು ಸತ್ತ ಕೊಳೆತ ಪ್ರಾಣಿಗಳ (ಮನುಷ್ಯರೂ ಕೂಡಾ)ಮಾಂಸ ತಿನ್ನುತ್ತವೆ ಎಂಬ ನಂಬಿಕೆಯಿಂದ ಇದನ್ನು ಈ ರೀತಿ ಪರಿಗಣಿಸಲಾಗುತ್ತದೆ. ಅವು ಸಾಮಾನ್ಯವಾಗಿ ಯುದ್ದದ ರಣರಂಗದ ಮೇಲ್ಭಾಗದಲ್ಲಿ ಹಾರಾಡುತ್ತವೆ. ಅಂದರೆ ಸಾವಿನ ದೃಶ್ಯಗಳಲ್ಲಿ ಅವು ಕಾಣಸಿಗುತ್ತವೆ.
  • ಮಾಂತ್ರಿಕ ಜಗತ್ತಿನಲ್ಲಿ ಕೆಲವು ವೇಳೆ ರಾವೆನ್ ಮತ್ತು ಕಾಗೆಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸಲಾಗುತ್ತದೆ. ಪುರಾಣ ಕಥೆ ಮತ್ತು ಜಾನಪದಗಳಲ್ಲಿ ಕಾಗೆಗಳನ್ನುಸಾಂಕೇತಿಕವಾಗಿ ಸಾವಿನ ಅಧ್ಯಾತ್ಮಿಕ ಅಂಶವಾಗಿ ಪರಿಗಣಿಸಲಾಗುತ್ತದೆ ಅಥವಾ ಸಾವಿನ ನಂತರದ ಬದುಕು ಅಥವಾ ಭೌತಿಕ ಬದುಕಿನ ಬಗ್ಗೆ ರಾವೆನ್ ಗಳು ಸಂಬಂಧ ಹೊಂದಿವೆ ಎಂದು ಹೇಳಲಾಗುತ್ತದೆ. ಇಲ್ಲಿ ಜಾನಪದ ಮತ್ತು ಪುರಾಣಗಳಲ್ಲಿ ಅವುಗಳ ವ್ಯತ್ಯಾಸವನ್ನು ತೋರಿಸಲಾಗುತ್ತದೆ. ಇದರಲ್ಲಿ ಒಂದು ತೆರನಾದ ವಿಫುಲ ಅಪರೂಪಗಳೂ ಇವೆ. ಇನ್ನೊಂದು ಕಾರಣವೆಂದರೆ ಕಾಗೆಗಳು ಸಾಮಾಜಿಕ ಪ್ರಾಣಿಗಳೆನಿಸಿವೆ. ಆದರೆ ರಾವೆನ್ ಗಳು ದೊಡ್ಡ ಪ್ರಮಾಣದಲ್ಲಿರದ ಕಾರಣ ಇವುಗಳನ್ನು ಜಾನಪದದ ಭಾಗವಾಗಿಸಲಾಗಿದೆ:
  1. ಇವು ಕೊಳೆತ ಪ್ರಾಣಿಗಳ ಬಳಿ ಇವುಗಳು ಆಕಸ್ಮಿತವಾಗಿ ಭೇಟಿಯಾಗುತ್ತವೆ.
  1. ಶ್ಮಶಾನಗಳಲ್ಲಿ ಅವು ದೊಡ್ಡ ಪ್ರಮಾಣದಲ್ಲಿ ವಾಸಿಸುತ್ತವೆ. ಅಲ್ಲಿ ಕೊಳೆತ ದೇಹಗಳು ಅಲ್ಲಿ ಸಿಗದೇ ಹೋದರೂ (ಬಹುಶಃ ರಸ್ತೆ ಮತ್ತು ಬಯಲುಗಳಲ್ಲಿಸಿಗುವುದಕ್ಕಿಂತ ಕಡಿಮೆ ಸಿಗಬಹುದು) ಅವುಗಳು ಅಲ್ಲಿಯೇ ಒಟ್ಟಾಗಿ ಜೀವಿಸುತ್ತವೆ.

  ಕಾಂಪೆಂಡಿಯಮ್ ಆಫ್ ಮೆಟಿರಿಯಾ ಮೆಡಿಕಾ ಹೇಳುವಂತೆ ಕಾಗೆಗಳು ತಮ್ಮ ಬಳಗದ ದುರ್ಬಲ ಪೋಷಕರು ಮತ್ತು ವೃದ್ಧ ಕಾಗೆಗಳನ್ನು ಗೂಡಿನಲ್ಲಿಟ್ಟು ಪೋಷಿಸುತ್ತವೆ. ಇದು ಆ ಸಂತತಿಯ ತಳಿಯ ಕಾರ್ಯಕ್ಕೆ ಉತ್ತಮ ಉದಾಹರಣೆಯಾಗಿದೆ.

  ಪುರಾಣ ಕಥೆಯಲ್ಲಿ[ಬದಲಾಯಿಸಿ]

  • ರಾವೆನ್ ಕಾಗೆ ಜಾತಿಯ ಪಕ್ಷಿಗಳು ಹಲವಾರು ದೇವ ದೇವತೆಗಳ ಜೊತೆಗೆ ಹೋಲಿಸಲಾಗುವ ಒಂದು ಅಪೂರ್ಣ ಪಟ್ಟಿಯನ್ನು ಕಾಣಬಹುದು. ಕೆಲವು ಕಾಯಿಲೆಗಳ ವಾಸಿ ಮಾಡುವ ನಾಮಸೂಚಕದೊಂದಿಗೆ ಬಳಸಲಾಗುತ್ತದೆ. ಪ್ಯಾಸಿಫಿಕ್ ನಾರ್ತ್ ವೆಸ್ಟ್ ನ ಸ್ಥಳೀಯ ವಿಗ್ರಹಗಳು ಅಂದರೆ ರಾವೆನ್ ಮತ್ತು ಕಾಗೆ, ಹುಗಿನ್ ಮತ್ತು ಮುನಿನ್ ಗಳ ಜೊತೆಯಾಗಿ ರಾವೆನ್ ಇವುಗಳು ಒಡಿನ್ನೊರ್ಸೆದೇವತೆಯೊಂದಿಗೆ ಕಾಣಿಸುತ್ತವೆ. ಸೆಲ್ಟಿಕ್ ದೇವತೆ,ಮೊರಿಗಾನ್ ಅಥವಾ ಬಾಡ್ಬ್ (ಇಲ್ಲಿ ಮೊರ್ರಿಗಾನ್ ನಿಂದ ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ) ಮತ್ತು ಶನಿ ದೇವರು ಹಿಂದು ದೇವರು ಕಾಗೆ ಯನ್ನೇ ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ.
  • ಗಿಲ್ಗಮಿಶ್ ಪುರಾಣ ದಲ್ಲಿ ಚಲ್ಡಿಯನ್ ಪುರಾಣದಲ್ಲಿನ ಪಾತ್ರ ಉತ್ನಾಪಿಶ್ಟಿಮ್ ಒಂದು ಪಾರಿವಾಳ ಮತ್ತು ರಾವೆನ್ ನನ್ನು ಭೂಮಿ ಹುಡುಕಲು ಬಿಟ್ಟಾಗ ಪಾರಿವಾಳ ಸುಮ್ಮನೆ ಸುತ್ತು ಹಾಕಿ ವಾಪಸಾಗುತ್ತದೆ. ಆಗ ಉತ್ನಾಪಿಶ್ಟಿಮ್ ನಾಲ್ಕನೆಯ ರಾವೆನ್ ನನ್ನು ಕಳಿಸಿದಾಗ ಅದು ವಾಪಸಾಗುತ್ತದೆ. ಉತ್ನಾಪಿಶ್ಟಿಮ್ ದೇವತೆಯು ರಾವೆನ್ ನನ್ನು ಕಳಿಸಿದಾಗ ಅದು ವಾಪಸಾಗದೇ ಭೂಮಿಯನ್ನು ಕಂಡುಕೊಂಡಿತು. ಇದರ್ಥವೆಂದರೆ ಇಲ್ಲಿ ಕಾಗೆಯ ಜಾಣತನವನ್ನು ಎತ್ತಿತೊರಿಸಲಾಯಿತು.
  • ಇದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯವೆಂದು ಹೇಳಬಹುದು. ಇನ್ನುಳಿದ ಪಕ್ಷಿಗಳಿಗೆ ಹೋಲಿಸಿದರೆ ಕಾಗೆಯು ಅತ್ಯಂತ ಚತುರ ಹಕ್ಕಿ ಜಾತಿಯಾಗಿದೆ. ಈಗ ಕೂಡಾ ಅದನ್ನು ನಾವು ಕುಶಲಮತಿ ಎಂದೇ ಪರಿಗಣಿಸುತ್ತೇವೆ.
  • ಬೌದ್ದ ಧರ್ಮದಲ್ಲಿ ಧರ್ಮಪಾಲ (ಧರ್ಮರಕ್ಷಕ)ಮಹಾಕ್ಕಾಲಾನನ್ನು ಕಾಗೆಯ ರೂಪದಲ್ಲಿ ಪ್ರತಿಬಿಂಬಿಸಲಾಗುತ್ತದೆ. ಅವಲೊಕಿತೇಶ್ವರಚೆನ್ರೆಜಿಗ್ ಭೂಮಿ ಮೇಲೆ ದಲಾಯಿ ಲಾಮಾನ ಅವತಾರ ಧರಿಸಿದ. ಯಾಕೆಂದರೆ ಮೊದಲ ಅವತಾರವು ಕಾಗೆಯೊಂದಿಗೆ ಸಂಬಂಧ ಹೊಂದಿದೆ. ಯಾಕೆಂದರೆ ಮೊದಲ ದಲಾಯಿ ಲಾಮಾ ಜನಿಸಿದಾಗ ಅವರ ಮನೆಯು ಡಕಾಯಿತರಿಂದ ಲೂಟಿಯಾಯಿತು.
  • ಆಗ ಪೋಷಕರು ಮನೆ ಬಿಟ್ಟು ಓಡಿಹೋದರಲ್ಲದೇ ಮಗು ಲಾಮಾನನ್ನು ಪತ್ತೆಹಚ್ಚಲು ವಿಫಲರಾದರು. ಅವರು ತಮ್ಮ ಮನೆಗೆ ಹಿಂದಿರುಗಿದಾಗ ಅನಾಹುತವನ್ನು ನಿರೀಕ್ಷಿಸಿದ್ದ ಅವರಿಗೆ ಆಶ್ಚರ್ಯ ಕಾದಿತ್ತು ಅವರ ಮನೆ ಲೂಟಿಯಾಗಿರದೇ ಎರಡು ಕಾಗೆಗಳಿಂದ ಕಾವಲು ಕಾಯುತಿತ್ತು.ಅವು ದಲಾಯಿ ಲಾಮಾನ ಮಗುವನ್ನು ಕಾಳಜಿಯಿ6ದ ರಕ್ಷಣೆ ಮಾಡಿದವು. ಈ ಕಾಗೆಗಳು ಮೊದಲ, ಏಳನೆಯ, ಎಂಟನೆಯ, ಹನ್ನೆರಡನೆಯ ಮತ್ತು ಹದಿನಾಲ್ಕನೆಯ ಲಾಮಾಗಳ ದೇವಧೂತರಂತೆ ಅವರ ಬರವನ್ನು ಸೂಚಿಸಿದ್ದವು. ನಂತರದ ಸದ್ಯದ ದಲಾಯಿ ಲಾಮಾ,ಟೆಂಜಿನ್ ಗ್ಯಾಟೊಸ್ ಎನ್ನಲಾಗುತ್ತದೆ. ಬೌದ್ದ ಮತದಲ್ಲಿ ಕಾಗೆಗಳನ್ನು ಅದರಲ್ಲೂ ಟಿಬೆಟಿಯನ್ ಬುದ್ದರಲ್ಲಿ ಇವುಗಳನ್ನು ಕಾಣಬಹುದು.
  • ಒವಿಡ್ ಅವರ ಪುರಾಣ ಕಥೆಯಲ್ಲಿ ಬರುವಂತೆ ಕಾಗೆಯು; ಪ್ರಿಯತಮ ಕೊರೊನಿಸ್ ತನಗೆ ಮೋಸ ಮಾಡುತ್ತಿದ್ದಾನೆಂದು ಅಪೊಲೊ ದೇವತೆಗೆ ಹೇಳಿದಾಗ, ಆತ ತುಂಬಾ ಕೋಪಗೊಂಡು ತನ್ನ ಕೋಪದ ಫಲದಿಂದಾಗಿ ಕಾಗೆಯ ಬಿಳಿರೆಕ್ಕೆಗಳು ಕಪ್ಪಾಗುವಂತೆ ಶಾಪ ಹಾಕುತ್ತಾನೆ.
  • ಭಾರತೀಯ ಹಿಂದು ತತ್ವದ ಪುರಾಣಗಳಲ್ಲಿ ಕಾಗೆಗಳು ಪುರಾತನರ ರೂಪದಲ್ಲಿ ಸತ್ತವರ ಪರವಾಗಿ ಆಹಾರ ಸೇವಿಸುತ್ತವೆ. ಇವುಗಳನ್ನು "ಬಲಿ ಕಾಕ್ಕಾ" ಎನ್ನುತ್ತಾರೆ. ಪ್ರತಿವರ್ಷ ಜನರು ತಮ್ಮ ಮೃತಪಟ್ಟ ತಂದೆ-ತಾಯಿಗಳು ಬಂಧುಬಳಗದವರಿಗಾಗಿ ಅನ್ನಾಹಾರವನ್ನು ಶ್ರಾದ್ಧದ ದಿನ ಕಾಗೆಗಳು ಮತ್ತು ಗೋವುಗಳಿಗೆ ಅರ್ಪಿಸುತ್ತಾರೆ. ಕಾಗೆಗಳು ಮತ್ತು ಗೂಬೆಗಳ ನಡುವಿನ ಕಾಳಗವು ಮಹಾಭಾರತದ ರಕ್ತಸಿಕ್ತ ಯುದ್ದಕ್ಕೆ ಸ್ಪೂರ್ತಿಯಾಯಿತು ಎನ್ನಲಾಗಿದೆ.
  • ಚೀನಾದ ಪುರಾಣ ಕಥೆಗಳಲ್ಲಿ ಜಗತ್ತು ಹತ್ತು ಸೂರ್ಯರಿಂದ ಮೂಲದಲ್ಲಿ ಆರಂಭವಾಯಿತು,ಅದು ಹತ್ತು ಕಾಗೆಗಳ ರೂಪದಲ್ಲಿ ಧರೆಯಲ್ಲಿ ಉದಿಸಿ ಆಕಾಶಕ್ಕೆ ನೆಗೆಯಿತು ಎನ್ನಲಾಗಿದೆ. ಯಾವಾಗ ಈ ಹತ್ತೂ ಒಮ್ಮೆಲೇ ಬೆಳೆದು ನಿಲ್ಲಲು ಪ್ರಯತ್ನಿಸಿದಾಗ ಆಹಾರ ಬೆಳೆಗಳಿಗೆ ಹಾನಿ ಸಂಭವಿಸಿತು. ಆಗ ಕೂಡಲೇ ದೇವತೆಗಳು ಇವುಗಳ ಬೇಟೆಗೆ ಬಿಲ್ಲುಗಾರ ಹೊಯು ನನ್ನು ಕಳಿಸಿ ಒಂಬತ್ತು ಕಾಗೆಗಳನ್ನು ಕೊಂದು ಒಂದನ್ನು ಮಾತ್ರ ಬದುಕಿಸಿ ಹದ್ದುಬಸ್ತಿಗೆ ತಂದರು. "ಕಾಗೆಯ ಕೊಕ್ಕು" ವನ್ನು ಹೊಂದಿದ್ದರೆ ಅದನ್ನು ಅಪಶಕುನ ಎಂದು ಹೇಳಲಾಗುತ್ತದೆ.
  • ಕೊರಿಯನ್ ಪುರಾಣ, ದಲ್ಲಿ ಇದನ್ನು ಸಮ್ಜಿಕ್ಗೊ(ಹಾಂಗುಲ್: 삼족오; ಹಂಜಾ: 三足烏).ಎನ್ನಲಾಗುತ್ತದೆ. ಗೊಗುರಿಯೊ ರಾಜ್ಯಾಡಳಿತದಲ್ಲಿ ಸಮ್ಜೊಗೊವನ್ನು ಶಕ್ತಿ ಅಧಿಕಾರದ ಸಂಕೇತವೆಂದು ಅಲ್ಲದೇ ಡ್ರ್ಯಾಗನ್ ಮತ್ತು ಕೊರಿಯನ್ ಫೀನಿಕ್ಸ್ ಗಿಂತ ಶ್ರೇಷ್ಟ ಎಂದು ಪರಿಗಣಿಸಲಾಗುತ್ತದೆ.
  • ಸದ್ಯ ಕೊರಿಯನ್ ಮುದ್ರೆಯಲ್ಲಿರುವ ಡ್ರ್ಯಾಗನ್ ನನ್ನು ತೆಗೆದು ಹಾಕಲುಮೂರು ಕಾಲಿನ ಪಕ್ಷಿಯೊಂದನ್ನು ಇನ್ನಿತರ ಪಕ್ಷಿಗಳ ಆಯ್ಕೆಯಲ್ಲಿ ಪರಿಶೀಲಿಸಲಾಗುತ್ತಿದೆ. ೨೦೦೮ [೧೮]ರಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು ಮರುಪರಿಶೀಲನೆ ನಡೆದಿದೆ. ಸಮ್ಜೊಗೊವನ್ನು ಗೊಗುರಿಯೊದ ಸಂಕೇತ ವೆಂದು ಹೇಳಲಾಗುತ್ತದೆ.

  ಸಾಹಿತ್ಯ ಮತ್ತು ಚಲನಚಿತ್ರ[ಬದಲಾಯಿಸಿ]

  • ದಿ ಚೈಲ್ಡ್ ಬ್ಯಾಲಡ್ ದಿ ಥ್ರೀ ರಾವೆನ್ಸ್ ಗಳು ಸೇನಾನುಯಾಯಿಯೊಬ್ಬನ ಶವವನ್ನು ತಿನ್ನಬಹುದೇ ಎಂದು ಚರ್ಚೆಯಲ್ಲಿ ತೊಡಗಿವೆ. ಆದರೆ ಆತನ ಆಕ್ರಮಣಕಾರಿ ಶೈಲಿ, ಆತನ ಬೇಟೆ ಕುಶಲತೆ ಹಾಗು ಆತನ ನಿಜವಾದ ಪ್ರೀತಿ ಅವುಗಳನ್ನು ತಿನ್ನದಂತೆ ಪ್ರೇರೆಪಿಸಿತು.
  • ದಿ ತ್ವಾ ಕೊಬೀಸ್ ಈ ರಕ್ಷಕರು ಈಗಾಗಲೇ ಈ ಸತ್ತ ಮನುಷ್ಯನನ್ನು ಮರೆತಿದ್ದರು. ಹೀಗಾಗಿ ಈ ರಾವೆನ್ ಗಳು ತಮ್ಮ ಪಾಲಿನದನ್ನು ಮಾತ್ರ ಭಕ್ಷಿಸಲು ಅನುವಾದವು. ಅವುಗಳ ಈ ತೆರನಾದ ಪ್ರವೃತ್ತಿಯು ಅವುಗಳ ತಿನ್ನುವ ಬಗೆಗಿನ ವಿಧಾನವನ್ನು ಅತಿರೇಕವೆಂಬಂತೆ ತೋರಿಸಲಾಯಿತು.
  • ಆಧುನಿಕ ಚಲನಚಿತ್ರಗಳಲ್ಲಿ Pirates of the Caribbean: Dead Man's Chest, Damien: Omen II,ದಿ ಕ್ರೌ ಮತ್ತು ಕಾಗೆಗಳು ಜೀವಂತ ಜನರ ಕಣ್ಣು ಕೀಳುವುದನ್ನು Exorcist: The Beginning ತೋರಿಸಲಾಗುತ್ತದೆ. ಆದರೆ ಕಾಗೆಗಳು ಇಂತಹ ಚಿತ್ರಣಗಳಿಗೆ ಒಗ್ಗುವಂತವುಗಳಲ್ಲ. ಅವುಗಳು ಸತ್ತ ಕೊಳೆತ ಪ್ರಾಣಿಗಳನ್ನು ತಿನ್ನಲು ಆದ್ಯತೆ ನೀಡುತ್ತವೆ ಎಂಬುದು ಸತ್ಯ.
  • ಕಾಗೆಗಳನ್ನು ABC TV ಧಾರಾವಾಹಿ ಫ್ಲ್ಯಾಶ್ ಫಾರ್ವರ್ಡ್ ನಲ್ಲಿ ಪತ್ತೆದಾರಿ ಸುಳಿವು ನೀಡುವ ಹಕ್ಕಿಗಳೆಂದು ತೋರಿಸಲಾಗಿದೆ. ಅದೂ ಅಲ್ಲದೇ CW'ಯ TV ಧಾರಾವಾಹಿ ದಿ ವ್ಯಾಂಪೈರ್ ಡೈರೀಸ್ ಮತ್ತು ಪುಸ್ತಕಗಳಲ್ಲಿ ಹಾಗೂ ಇನ್ನುಳಿದ ಪಾತ್ರಗಳನ್ನು ಸೃಷ್ಟಿಸಿದ್ದು ಅಲ್ಲಿ ಕಾಗೆಗಳ ಗುಂಪು ಗಿರಕಿ ಹೊಡೆಯುವುದು ವಿಶೇಷವಾಗಿ ಎಲೆನಾ ಪಾತ್ರ ಕಾಣುತ್ತದೆ.
  • ದಿ ಅಡೆಲೆಡಿ ಫೂಟ್ಬಾಲ್ ಕ್ಲಬ್ (ಆಸ್ಟ್ರೇಲಿಯನ್ ರೂಲ್ಸ್ ಫೂಟ್ಬಾಲ್ )ಚಿನ್ಹೆಯು ಒಂದು ಕಾಗೆ ಒಳಗೊಂಡಿದ್ದಲ್ಲದೇ ಅದನ್ನು 'ದಿ ಕ್ರೌಸ್ 'ಅಥವಾ 'ಅಡೆಲೆಡೆ ಕ್ರೌಸ್ 'ಎಂದು ಕರೆಯುತ್ತಾರೆ.

  ವೈರಸ್‌‌ಗಳು[ಬದಲಾಯಿಸಿ]

  ಅಮೆರಿಕನ್ ಕಾಗೆಗಳು ವೆಸ್ಟ್ ನೈಲ್ ವೈರಸ್ ಗೆ ಬಹುಬೇಗನೆ ಬಲಿಯಾಗುತ್ತವೆ. ಈ ಸೋಂಕು ರೋಗವು ಇತ್ತೀಚಿಗೆ ಉತ್ತರ ಅಮೆರಿಕಾದಲ್ಲಿ ತನ್ನ ಪಾದಾರ್ಪಣೆ ಮಾಡಿದೆ. ಈ ಸೋಂಕಿಗೆ ಬಲಿಯಾದ ಅಮೆರಿಕನ್ ಕಾಗೆಗಳು ಕೇವಲ ಒಂದೇ ವಾರದಲ್ಲಿ ಸತ್ತುಹೋಗುತ್ತವೆ. ಕೆಲವೇ ಕೆಲವು ಮಾತ್ರ ಇದರ ಸೋಂಕಿನಿಂದ ಬದುಕಿಕೊಳ್ಳಬಹುದಾಗಿದೆ. ಸದ್ಯ ಈ ಕಾಗೆಗಳ ಸಾವು ವೆಸ್ಟ್ ನೈಲ್ ವೈರಸ್ ಸೋಂಕು ಕಾಣಿಸಿದ ಸ್ಪಷ್ಟ ಲಕ್ಷಣವನ್ನು ತೋರುತ್ತದೆ. ಇಂತಹ ಪ್ರದೇಶದಲ್ಲಿ ಈ ಕಾಯಿಲೆ ಸಕ್ರಿಯವಾಗಿದೆ ಎಂದೂ ಗೊತ್ತಾಗುತ್ತದೆ.

  ಅಳಿವಿನಂಚಿನ ಪಕ್ಷಿ ಸಂಕುಲದ ಪರಿಧಿಗೆ ಸೇರಿದ್ದು[ಬದಲಾಯಿಸಿ]

  ಕಾಗೆಗಳ ಪಕ್ಷಿ ಗುಂಪಿನ ಎರಡು ಕಾಗೆಗಳು ಅಳಿವಿನಂಚಿಗೆ ತಲುಪಿವೆ ಎಂದು US ನ ಫಿಶ್ ಅಂಡ್ ವೈಲ್ಡ್ ಲೈಫ್ ಸರ್ವಿಸಿಸ್ :ದಿ ಅಲಾಲಾ ಮತ್ತು ದಿ ಮರಿಯಾನಾ ಕ್ರೌ ಇವುಗಳು [೧೧] ಮುಖ್ಯವಾಗಿವೆ.

  ಕಣ್ಮರೆಯಾಗುತ್ತಿರುವ ಕಾಗೆಯ ಬಗೆಗೆ ಅಧ್ಯಯನ[ಬದಲಾಯಿಸಿ]

  • ಮಾನವನ ಬದುಕಿನ ಸಾಮಾನ್ಯ ಪರಿಸರಗಳನ್ನೇ ಪರಿಗಣಿಸಿದರೆ, ಅಲ್ಲಿ ಸಾಮಾನ್ಯವಾಗಿ ಕಂಡುಬರುವ ಕಾಗೆಯಂತಹ ಪಕ್ಷಿಯನ್ನು ಅಧ್ಯಯನದ ವಸ್ತುವಾಗಿ ಆರಿಸಿದಾಗ ನಿರ್ದಿಷ್ಟವಾಗಿ ನಮ್ಮ ನಗರಗಳ ಪರಿಸರದಲ್ಲಾಗುತ್ತಿರುವ ಬದಲಾವಣೆಗಳನ್ನು ಹೇಗೆ ಅರ್ಥೈಸಿಕೊಳ್ಳಬಹುದು?
  • ಇಂತಹ ಅಧ್ಯಯನಕ್ಕೆ ಕಾಗೆ ಸಾಂಸ್ಕೃತಿಕ ಮತ್ತು ನೈಸರ್ಗಿಕ ಕಾರಣಗಳೆರಡರಿಂದಲೂ ಅತ್ಯುತ್ತಮ ವಸ್ತುವೆಂದು ಗ್ರೀನೊ ವಾದಿಸುತ್ತಾರೆ. ದಕ್ಷಿಣ ಏಷ್ಯಾದ ಉದ್ದಗಲಕ್ಕೂ ಹರಡಿರುವ ಭಾರತೀಯ ಕಾಗೆ ಸಾವಿರಾರು ವರ್ಷಗಳಿಂದ ಮನುಷ್ಯರೊಡನೆ ಒಂದು ಅವಶ್ಯಕ ಸಂಬಂಧವನ್ನು ಬೆಳೆಸಿಕೊಂಡು ಬಂದಿದೆ.
  • ಅಂದರೆ ಗಿಣಿ, ಪಾರಿವಾಳದಂಥ ಪಕ್ಷಿಗಳಂತೆ ಕಾಗೆ ಸಾಕುವ ಪಕ್ಷಿಯಾಗಲಿಲ್ಲ. ಕಾಡುಪಕ್ಷಿಯಾಗಿಯೇ ಉಳಿದುಕೊಂಡಿತು. ಆದರೆ ತನ್ನ ಜೀವನಾಧಾರಕ್ಕೆ ಮನುಷ್ಯರ ಹಂಗಿನಲ್ಲಿ ಉಳಿದ ಜೀವಿಯಾಯಿತು. ಹಾಗಾಗಿ ಮನುಷ್ಯರ ಹತ್ತಿರದಲ್ಲಿ, ಅದರಲ್ಲೂ ಹೆಚ್ಚು ಆಹಾರ ತ್ಯಾಜ್ಯಗಳು ಉತ್ಪನ್ನವಾಗುವ ನಗರಗಳಲ್ಲಿ ಕಾಗೆಗಳು ಬದುಕುತ್ತವೆ ಮತ್ತು ಸಂತಾನೋತ್ಪತ್ತಿ ಮಾಡುತ್ತವೆ.
  • ಬಹುಮಟ್ಟಿಗೆ ಕುಟುಂಬದ ಸದಸ್ಯನೇ ಆಗಿಬಿಡುವ ಕಾಗೆಯನ್ನು ‘ಹಂಗಿನ ಒಡನಾಡಿ’ (ಒಬ್ಲಿಗೇಟ್ ಕಂಪಾನಿಯನ್) ಎಂದು ಗ್ರೀನೊ ಕರೆಯುತ್ತಾರೆ. ಹೀಗೆ ಕೃಷಿ ಮತ್ತು ಒಂದೆಡೆ ನೆಲೆಸುವ ಸ್ಥಿರ ಬದುಕು ಪ್ರಾರಂಭವಾದ ಮೇಲೆ ಕಾಗೆಗಳು ತಮ್ಮ ಜೀವವಿಕಾಸದ ಪಥದಲ್ಲಿಯೇ ಬದಲಾವಣೆ ಮಾಡಿಕೊಂಡು ಮನುಷ್ಯರ ಮೇಲೆಯೇ ನಿರ್ಭರವಾಗಿ ಬದುಕಲಾರಂಭಿಸಿದವು. ಈ ಬೆಳವಣಿಗೆಯ ನಂತರ ಕಾಗೆಗಳು ನಮ್ಮ ಭಾರತೀಯ ಸಂಸ್ಕೃತಿಯ, ಆಚಾರವಿಚಾರಗಳ (ಅದರಲ್ಲೂ ಶ್ರಾದ್ಧದ ಆಚರಣೆಗಳಿಗೆ) ಅಂಗವಾಗಿರುವುದು ಓದುಗರಿಗೆ ಪರಿಚಿತ ವಿಚಾರ.
  • ಈ ಸಾಂಸ್ಕೃತಿಕ ಮಹತ್ವ ಒಂದೆಡೆಗಿರಲಿ. ಕಾಗೆ ಮತ್ತು ಅದರ ಕುಟುಂಬಕ್ಕೆ ಸೇರಿದ ಇತರ ಪಕ್ಷಿಗಳು (ಕಾರ್ವಿಡ್ ಎಂದು ಇವುಗಳನ್ನು ಕರೆಯುತ್ತಾರೆ) ಪಕ್ಷಿ-ಪ್ರಾಣಿ ಸಂಕುಲದಲ್ಲಿಯೇ ಅತ್ಯಂತ ಬುದ್ಧಿವಂತವೆಂದು ಪರಿಗಣಿತವಾಗುತ್ತವೆ. ಅವುಗಳ ದೇಹದ ದ್ರವ್ಯರಾಶಿ (ಬಾಡಿ ಮಾಸ್) ಮತ್ತು ಮೆದುಳಿನ ಅನುಪಾತವನ್ನು ಗಮನಿಸಿದಾಗ, ಕಾಗೆಯ ಕುಟುಂಬದ ಪಕ್ಷಿಗಳು ವಾನರನ ಸಮನಾಗಿವೆ. ಅಂದರೆ ಜೀವವಿಕಾಸದ ಪಥದಲ್ಲಿ ಕಾಗೆ ಪಕ್ಷಿಯಾಗಿಯೇ ಉಳಿಯಿತು.
  • ಆದರೆ ಅದರ ಮೆದುಳಿನ ಬೆಳವಣಿಗೆ ಮುಂದುವರೆಯಿತು ಹಾಗೂ ಅದರ ಬುದ್ಧಿಶಕ್ತಿ ಕೂಡ ಹೆಚ್ಚಿತು. ಹಾಗಾಗಿ ಕಾಗೆಯ ಕುಟುಂಬದ ಪಕ್ಷಿಗಳು ಕನ್ನಡಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಸ್ವಪ್ರಜ್ಞೆಯನ್ನು ಮತ್ತು ಸಲಕರಣೆಗಳನ್ನು ತಯಾರಿಸುವ ಶಕ್ತಿಯನ್ನು ಹೊಂದಿವೆ. ಹೀಗೆ ನೈಸರ್ಗಿಕವಾಗಿ ಕೂಡ ಕಾಗೆ ಒಂದು ಮುಖ್ಯವಾದ ಪಕ್ಷಿಯೆನ್ನುವುದು ಸ್ಪಷ್ಟವಾಗುತ್ತದೆ. ಇಷ್ಟೆಲ್ಲ ಪ್ರಾಮುಖ್ಯವಿದ್ದರೂ ಕಾಗೆಯನ್ನು ಪಕ್ಷಿಶಾಸ್ತ್ರಜ್ಞರಾಗಲಿ, ಇತಿಹಾಸಕಾರರಾಗಲಿ ಇದುವರೆಗೆ ಅಧ್ಯಯನ ಮಾಡಿಲ್ಲ.
  • ಕಳೆದ ದಶಕದಲ್ಲಿ ಕಾಗೆಗಳ ಸಂಖ್ಯೆ ಭಾರತದ ನಗರಗಳಲ್ಲಿ ಕಡಿಮೆಯಾಗುತ್ತಿದೆ ಎನ್ನುವುದನ್ನು, ಈ ಬಗ್ಗೆ ವ್ಯಾಪಕವಾಗಿ ಪತ್ರಿಕಾ ವರದಿಗಳು ಪ್ರಕಟವಾಗಿರುವುದನ್ನು ಗ್ರೀನೊ ಗುರುತಿಸುತ್ತಾರೆ. ಅಧ್ಯಯನಗಳ ಕೊರತೆಯ ಹಿನ್ನೆಲೆಯಲ್ಲಿ ನಿರ್ದಿಷ್ಟವಾಗಿ ಕಾಗೆಗಳ ಸಂಖ್ಯೆ ಎಷ್ಟಿತ್ತು ಹಾಗೂ ಈಗ ಎಷ್ಟಿರಬಹುದು ಎನ್ನುವ ನಿಖರ ಅಂದಾಜು ದೊರಕುತ್ತಿಲ್ಲ. ಆದರೆ ಹಲವಾರು ಸಾವಿರ ವರ್ಷಗಳಿಂದ ಭಾರತೀಯ ಬದುಕಿನ ಅಂಗವಾಗಿದ್ದ ಕಾಗೆ ಕಾಣೆಯಾಗುತ್ತಿದೆ ಎನ್ನುವುದರ ಬಗ್ಗೆ ಅನುಮಾನವಿಲ್ಲ. ಪ್ರತಿವರ್ಷವೂ ನೂರಾರು ಸಾವಿರ ಜೀವಿಗಳನ್ನು (ಪ್ರಾಣಿ-ಸಸ್ಯಗಳೆರಡನ್ನೂ) ಕಳೆದುಕೊಳ್ಳುತ್ತಿದ್ದೇವೆ.[೧೨]

  ಈ ಕೆಳಗಿನವುಗಳನ್ನೂ ನೋಡಬಹುದು[ಬದಲಾಯಿಸಿ]

  ಆಕರಗಳು[ಬದಲಾಯಿಸಿ]

  1. (Latin) Linnaeus, C (೧೭೫೮). Systema naturae per regna tria naturae, secundum classes, ordines, genera, species, cum characteribus, differentiis, synonymis, locis. Tomus I. Editio decima, reformata. Holmiae. (Laurentii Salvii). p. ೮೨೪.
  2. Simpson, D.P. (೧೯೭೯). Cassell's Latin Dictionary (೫ ed.). London: Cassell Ltd. p. ೮೮೩. ISBN 0-304-52257-0.
  3. ೩.೦ ೩.೧ ಟಿಪ್ಪಣಿ: ಬೌಗಿನ್ ವಿಲ್ಲೆ ಕಾಗೆ ಮತ್ತು ಬಿಳಿ-ಚೊಂಚಿನ ಕಾಗೆ ಗಳು ಒಂದೇ ತೆರನಾದ ಹೆಸರು "ಸೊಲೊಮ್ಯಾನ್ ಕ್ರೊ" ಇವೆರಡೂ ಸೊಲೊಮ್ಯಾನ್ ಐಲೆಂಡ್ಸ್ ; ಬೌಗೈನ್ ವಿಲ್ಲೆ ಕ್ರೌ ಇನ್ ದಿ ನಾರ್ತ್ ,ಅಂಡ್ ದಕ್ಷಿಣದಲ್ಲಿರುವ ದಿ ಬಿಳಿ-ಚೊಂಚಿನ ಕಾಗೆ ಒಟ್ಟಿಗೆ ಜೀವಿಸುತ್ತವೆ.
  4. John M. Marzluff (2005). In the Company of Crows and Ravens. Yale University Press. pp. ೭೨–೭೯. ISBN 0-300-10076-0. {{cite book}}: Unknown parameter |coauthors= ignored (|author= suggested) (help)
  5. Goodwin D. (1983). Crows of the World. Queensland University Press, St Lucia, Qld. ISBN 0-7022-1015-3.
  6. cnylinks. com/crows/ ಸೆಂಟ್ರಲ್ ನಿವ್ ಯಾರ್ಕ್ ಇನಫರ್ಮೇಶನ್ ಅಂಡ್ ಲಿಂಕ್ಸ್
  7. [http:// www.auburnpub.com/articles/2003/02/03/opinion/our_view/ourview01.txt ದಿ ಸಿಟಿಜನ್, ಅಬುರ್ನ್ NY]
  8. TED ಜೊಶು ಕ್ಲೆನ್: ದಿ ಅಮೇಜಿಂಗ್ ಇಂಟೆಲೆಜೆನ್ಸ್ ಆಫ್ ಕ್ರೌಸ್ TED ಕಾನ್ಫೆರೆನ್ಸ್ ಮಾರ್ಚ್ ನಲ್ಲಿ 2008, ಪಡೆದಿದ್ದು ೯ ಜುಲೈ ೨೦೦೮
  9. ದಿ ಕ್ರೌ ಪ್ಯಾರಾಡೊಕ್ಸ್ ರಾಬರ್ಟ್ ಕ್ರುಲ್ವೆಚ್ ರಿಂದ. ಮಾರ್ನಿಂಗ್ ಎಡಿಶನ್, ನ್ಯಾಶನಲ್ ಪಬ್ಲಿಕ್ ರೇಡಿಯೊ. 27 ಜುಲೈ 2009.
  10. cgi/content /abstract/0401892101v1 ಪ್ರೊಸೀಡಿಂಗ್ಸ್ ಆಫ್ ದಿ ನ್ಯಾಶನಲ್ ಅಕಾಡೆಮಿ ಆಫ್ ಸೈನ್ಸಿಸ್
  11. ecoservices/ endangered/recovery/5yearactive.html ಪ್ಯಸಿಫಿಕ್ ಪ್ರದೇಶದ ಅಳಿವಿನಂಚಿನ ಜೀವಿಗಳು, U.S. ಫಿಶ್ ಅಂಡ್ ವೈಲ್ಡ್ ಲೈಫ್ ಸರ್ವಿಸಿಸ್
  12. "ಪೃಥ್ವಿ ದತ್ತ ಚಂದ್ರ ಶೋಭಿ;ಕಂಡಿರಾ ಕಾಗೆ... ಕಾಣೆಯಾಗುತ್ತಿದೆ ಹೇಗೆ?;24 Mar, 2017". Archived from the original on 2017-03-23. Retrieved 2017-03-24.
  • ಗಿಲ್, ಬಿ. ಜೆ. (2003): ಒಸ್ಟಿಯೊಮೆಟ್ರಿ ಮತ್ತು 1: 43-58. [112] (HTML ಸಂಗ್ರಹ)
  • ವರ್ದಿ, ಟ್ರೆವರ್H. & ಹೊಲ್ಡಾವಾಡ್, ರಿಚರ್ಡ್ ಎನ್. (೨೦೦೨): ದಿ ಲಾಸ್ಟ್ ವರ್ಲ್ಡ್ ಆಫ್ ದಿ ಮೊವಾ:ನಿವ್ ಜಿಲ್ಯಾಂಡ್ ನ ಇತಿಹಾಸಪೂರ್ವದ ಜೀವನ . ಇಂಡಿಯಾನಾ ಯುನ್ವರಸಿಟಿ ಪ್ರೆಸ್, ಬ್ಲೂಮಿಂಗ್ಟನ್. ISBN 0-03-063748-1

  ಬಾಹ್ಯ ಕೊಂಡಿಗಳು[ಬದಲಾಯಿಸಿ]

  "https://kn.wikipedia.org/w/index.php?title=ಕಾಗೆ&oldid=1119740" ಇಂದ ಪಡೆಯಲ್ಪಟ್ಟಿದೆ