ಬಟಾಣಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Peas in pods - Studio.jpg

ಬಟಾಣಿ ಅತಿ ಸಾಮಾನ್ಯವಾಗಿ ಚಿಕ್ಕ ಗೋಲಾಕಾರದ ಬೀಜ ಅಥವಾ ಪೀಸಮ್ ಸ್ಯಾಟೀವಮ್ ಬೀಜಕೋಶ ಹಣ್ಣಿನ ಬೀಜ-ಬೀಜಕೋಶ. ಪ್ರತಿ ಬೀಜಕೋಶವು ಹಲವು ಬಟಾಣಿಗಳನ್ನು ಹೊಂದಿರುತ್ತದೆ. ಬಟಾಣಿ ಬೀಜಕೋಶಗಳು ಸಸ್ಯಶಾಸ್ತ್ರೀಯವಾಗಿ ಹಣ್ಣು, ಏಕೆಂದರೆ ಅವು ಬೀಜಗಳನ್ನು ಹೊಂದಿರುತ್ತವೆ ಮತ್ತು ಒಂದು ಹೂವಿನ ಅಂಡಾಶಯದಿಂದ ಅಭಿವೃದ್ಧಿ ಹೊಂದುತ್ತವೆ.ನಮ್ಮ ದೈನಂದಿನ ಆಹಾರದಲ್ಲಿ ಮೊಳಕೆ ಬರಿಸಿದ ಒಂದು ಹಿಡಿ ಹಸಿರು ಬಟಾಣಿ ಕಾಳುಗಳನ್ನು ಸೇರಿಸಿಕೊಳ್ಳುವುದರಿಂದ ಅತ್ಯಧಿಕವಾಗಿ ಪ್ರೊಟೀನ್(೫.೪೨ ಗ್ರಾಂ) ದೇಹಕ್ಕೆ ಲಭಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ವರ್ಧಿಸಬಲ್ಲ ಬಿ೧, ೨, ೨, ೬, ೯ ಜೀವಸತ್ವಗಳಿರುವ ಅದು ದಿನವೂ ನಮ್ಮ ದೇಹವನ್ನು ಸೇರುವುದರಿಂದ ೫೬ ವಿಧದ ಬ್ಯಾಕ್ಟೀರಿಯಾಗಳ ಸೋಂಕಿನ ವಿರುದ್ಧ ಸೆಣಸಲು ಸಮರ್ಥರಾಗುತ್ತೇವೆ ಎನ್ನುತ್ತಾರೆ ಆಹಾರ ತಜ್ಞರು. ಶಿಲಾಯುಗದಿಂದಲೂ ಮಾನವ ಅದನ್ನು ಆಹಾರವಾಗಿ ಬಳಸುತ್ತಿದ್ದುದಕ್ಕೆ ಪುರಾವೆಗಳಿವೆ. ಕ್ರಿಸ್ತಪೂರ್ವ ೧೭೦೦ ವರ್ಷಗಳ ಹಿಂದೆಯೇ ಗಂಗಾನದಿಯ ಜಲಾನಯನ ಪ್ರದೇಶದಲ್ಲಿ ಭಾರತೀಯರು ಅದರ ಕೃಷಿ ಮಾಡಿ ಆಹಾರಕ್ಕೆ ಬಳಸುತ್ತಿದ್ದರೆಂದೂ ಹೇಳಲಾಗುತ್ತಿದೆ.

ಉಲ್ಲೇಖಗಳು[ಬದಲಾಯಿಸಿ]

[೧]

  1. http://www.prajavani.net/news/article/2016/01/06/377663.html
"https://kn.wikipedia.org/w/index.php?title=ಬಟಾಣಿ&oldid=719737" ಇಂದ ಪಡೆಯಲ್ಪಟ್ಟಿದೆ