ಉಗುರು
ಉಗುರು ಮಾನವರು, ಬಹುತೇಕ ಮಾನವೇತರ ಪ್ರೈಮೇಟ್‍ಗಳು, ಮತ್ತು ಕೆಲವು ಇತರ ಸಸ್ತನಿಗಳಲ್ಲಿ ಬೆರಳುಗಳು ಹಾಗೂ ಪಾದಾಂಗುಲಿಗಳ ಅಂತ್ಯದ ಫ಼ೇಲ್ಯಾಂಕ್ಸ್ ಮೂಳೆಗಳ ಡಾರ್ಸಮ್ ಹಿಂಬದಿಯ ಅಂಶವನ್ನು ಆವರಿಸುವ ಕೊಂಬಿನಂಥ ಕವಚ. ಉಗುರುಗಳು ಇತರ ಪ್ರಾಣಿಗಳ ಪಂಜಗಳನ್ನು ಹೋಲುತ್ತವೆ. ಉಗುರುಗಳು ಕೆರಟಿನ್ ಎಂದು ಕರೆಯಲ್ಪಡುವ ಗಟ್ಟಿ ರಕ್ಷಣಾತ್ಮಕ ಪ್ರೋಟೀನ್‍ನಿಂದ ಮಾಡಲ್ಪಟ್ಟಿರುತ್ತವೆ. ಬೆರಳ ತುದಿಗಳನ್ನ ರಕ್ಷಣೆ ಮಾಡಲು ಇರುವ ಭಾಗವೇ ಉಗುರು. ಬೆರಳಿನ ತುದಿ ತುಂಬಾನೆ ಸೂಕ್ಷ್ಮಮವಾಗಿರುತ್ತದೆ. ಅದನ್ನು ರಕ್ಷಣೆ ಮಾಡಲು ಉಗುರು ಬೆಳೆಯುತ್ತದೆ. ನರಗಳ ತುದಿ ಇರೋದು ಅಲ್ಲಿಯೇ. ನಮ್ಮ ದೇಹದಲ್ಲಿ ಅತಿ ಹೆಚ್ಚು ಸ್ಪರ್ಶ ನೀಡುವ ಭಾಗ ಬೆರಳ ತುದಿ. ಉಗುರು ಮತ್ತು ಕೂದಲು ಒಂದೇ ತರದ ಪ್ರೊಟಿನ್‌ನಿಂದ ತಯಾರಾಗುತ್ತದೆ. ಕೆರಾಟಿನ್ ಪ್ರೊಟಿನ್ ನಿಂದ ಉಗುರು ಬೆಳೆಯುತ್ತದೆ. ಮೇಲ್ಭಾಗದಲ್ಲಿರುವ ಕೆರಾಟಿನ್ ಜೀವಕೋಶಗಳು ಗಟ್ಟಿಯಾಗಿರುತ್ತದೆ. ಉಗುರಿನ ಪದರದ ಕೆಳಗೆ ಬೆಳೆಯುವುದರಿಂದ ಹೊಸ ಜೀವಕೋಶ ಹಳೇಯದನ್ನು ಮೇಲಕ್ಕೆ ತಳ್ಳುವುದರಿಂದ ಉಗುರು ರಚನೆ ಆಗುತ್ತದೆ. ಉಗುರಿನ ಕೆಳಗೆ ಕಾಣುವ ನಸುಗೆಂಪು ಬಣ್ಣ ರಕ್ತನಾಳಗಳಲ್ಲಿ ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತದೆ. ಉಗುರು ಎಂದು ನಾವು ಕರೆಯುವುದು ಜೀವಕೋಶಕ್ಕೆಗಳಿಗೆ.[೧]
ಉಗುರಿನ ಬೆಳವಣಿಗೆ
[ಬದಲಾಯಿಸಿ]ಕೈಬೆರಳಿನ ಉಗುರು ತಿಂಗಳಿಗೆ ೨.೫ ಮಿಲಿ ಮೀಟರ್ ಉದ್ದ ಬೆಳೆಯುತ್ತದೆ. ಉಗುರನ್ನು ಹಾಗೆ ಬಿಟ್ಟರೆ ಬೆಳೆಯುತ್ತಲೆ ಹೋಗುತ್ತದೆ. ಕಾಲಿನ ಉಗುರುಗಳಿಗಿಂತ ಕೈಬೆರಳುಗಳ ಉಗುರು ಜಾಸ್ತಿ ಬೆಳೆಯುತ್ತವೆ. ಕೈ ಬೆರಳಿನ ಉಗುರು ತಿಂಗಳಿಗೆ ೨.೫ ಮಿಲಿ ಮೀಟರ್ ಬೆಳೆದರೆ ಕಾಲ್ಬೆರಳಿನ ಉಗುರು ೨ ಮಿಲಿ ಮೀಟರ್ ಬೆಳೆಯುತ್ತದೆ. ಅತಿ ವೇಗವಾಗಿ ಬೆಳೆಯುವ ಉಗುರು ಉಂಗುರ ಬೆರಳು ಅಥವಾ ಮಧ್ಯ ಬೆರಳಿನದ್ದು. ನಿಧಾನಕ್ಕೆ ಬೆಳೆಯುವುದು ಹೆಬ್ಬೆರಳಿನ ಉಗುರು. ಯಾವ ಕೈ ಹೆಚ್ಚಾಗಿ ಬಳಕೆಮಾಡುತ್ತೆವೆಯೋ ಆ ಕೈ ಉಗುರು ವೇಗವಾಗಿ ಬೆಳೆಯುತ್ತದೆ. ವಯಸ್ಸಾದಂತೆ ಉಗುರಿನ ಬೆಳವಣಿಗೆಯು ಕಮ್ಮಿ ಆಗುತ್ತ ಹೋಗುತ್ತದೆ. ಗರ್ಭಿಣಿ ಹೆಂಗಸರಲ್ಲಿ ಉಗುರು ಬಹಳ ವೇಗವಾಗಿ ಬೆಳೆಯುತ್ತದೆ. ಉಗುರಿನ ಬೆಳವಣಿಗೆ ಮೇಲೆ ವಾತಾವರಣವೂ ಪ್ರಭಾವ ಬೀರುತ್ತೆ. ಬೇಸಿಗೆ ಮತ್ತು ಬಿಸಿ ವಾತಾವರಣದಲ್ಲಿ ಉಗುರು ವೇಗವಾಗಿ ಬೆಳೆಯುತ್ತದೆ. ಜ್ವರ ಬಂದಾಗ ಹಾರ್ಮೋನ್ ಬ್ಯಾಲೆನ್ಸ್ ತಪ್ಪಿದಾಗ ಉಗುರಿನ ಬೆಳವಣಿಗೆ ಕಡಿಮೆ ಆಗುತ್ತದೆ. ರಾತ್ರಿಗಿಂತ ಹಗಲು ವೇಳೆ ಉಗುರಿನ ಬೆಳವಣಿಗೆ ವೇಗವಾಗಿ ಇರುತ್ತದೆ. ಕೈಬೆರಳಿನ ಉಗುರಿಗಿಂತ ಕಾಲಿನ ಉಗುರು ತುಂಬಾ ಗಟ್ಟಿ ಇರುತ್ತದೆ. ಉಗುರಿನಲ್ಲಿ ಕೆರಾಟಿನ್ ಪ್ರಮಾಣ ಹೆಚ್ಚಾದಂತೆ ಉಗುರಿನ ಸಾಮಥ್ಯ ಹೆಚ್ಚಾಗಿರುತ್ತದೆ.
ಉಗುರಿನ ಆರೋಗ್ಯ
[ಬದಲಾಯಿಸಿ]ಉಗುರಿನ ಮೇಲೆ ಬಿಳಿ ಚುಕ್ಕಿಗಳಿದ್ದರೆ ಜಿಂಕ್ ಕೊರತೆ ಇರುತ್ತದೆ. ಉಗುರಿನ ಕೆಳಗಿರುವ ರಕ್ತನಾಳ ಉಗುರಿನ ಬೆಳವಣಿಗೆಗೆ ಕಾರಣವಾಗುತ್ತದೆ. ಉಗುರಿನ ಬಣ್ಣ ಕೂಡ ಅದರಿಂದಲೇ ತಿಳಿಯುತ್ತದೆ. ರಕ್ತನಾಳಗಳಿಂದ ಹಾಗೂ ಉಗುರಿನ ಬಣ್ಣದಿಂದ ಆರೋಗ್ಯ ಸೂಚನೆ ಸಿಗುತ್ತದೆ. ತಿನ್ನುವ ಆಹಾರ ಹಾಗೂ ಆರೋಗ್ಯದ ಸ್ಥಿತಿ ಉಗುರುಗಳ ಮೇಲೂ ಪರಿಣಾಮ ಬೀರುತ್ತದೆ. ಉಗುರಿನ ಮೇಲೆ ಬಿಳಿ ಗೆರೆಗಳಿದ್ದರೆ ಲಿವರ್ ಸಮಸ್ಯೆ ಇದೆ.[೨]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]