ವಾಯುಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರು ಗ್ರಹದ ವಾಯುಮಂಡಲದ ಒಂದು ಚಿತ್ರ

ವಾಯುಮಂಡಲಕ್ಕೆ ವಾತಾವರಣ, ಗಾಳಿಹೊದಿಕೆ, ಸುತ್ತಾವಿ ಎಂಬ ಅರ್ಥಗಳಿವೆ. ಸಾಕಷ್ಟು ಘನವನ್ನು ಹೊಂದಿರುವ ಅಂತರಿಕ್ಷ ಕಾಯಗಳು ತಮ್ಮ ಗುರುತ್ವಾಕರ್ಷಣ ಬಲದಿಂದ ಸುತ್ತಲು ಹಿಡಿದಿಟ್ಟುಕೊಳ್ಳುವ ವಾಯುವಿನ ಪದರವನ್ನು ವಾಯುಮಂಡಲವೆಂದು ಕರೆಯಬಹುದು. ಕೆಲವು ಅನಿಲರೂಪಿ ಗ್ರಹಗಳು ಹೆಚ್ಚಾಗಿ ಅನಿಲಗಳಿಂದಲೇ ನಿರ್ಮಿತವಾಗಿರುವುದರಿಂದ ಅವುಗಳ ವಾಯುಮಂಡಲ ಅತ್ಯಂತ ಬೃಹತ್ ಗಾತ್ರವನ್ನು ಹೊಂದಿರುತ್ತವೆ. ಭೂಮಿಯ ವಾಯುಮಂಡಲ ಸಾರಜನಕ, ಆಮ್ಲಜನಕ, ಇಂಗಾಲದ ಡೈಆಕ್ಸೈಡ್, ಆರ್ಗಾನ್ ನಿಂದ ಹೆಚ್ಚಾಗಿ ಕೂಡಿರುತ್ತದೆ.

ವಾಯುಮಂಡಲ

ಭೂಮಿಯ ವಾಯುಮಂಡಲದ ರಚನೆ - ವಾಯುಮಂಡಲದಲ್ಲಿ ಐದು ಪ್ರಧಾನ ಪದರಗಳಿವೆ.

  • ಬಹಿರ್ಗೋಳ-- ೭೦೦-೧೦೦೦೦ ಕಿ ಮೀ
  • ಉಷ್ಣಗೋಳ--೮೦-೭೦೦ ಕಿ ಮೀ
  • ಮಧ್ಯಗೋಳ--೫೦-೮೦ ಕಿ ಮೀ
  • ಸ್ಟ್ರಾಟೊಸ್ಫಿಯರ್--೧೨-೫೦ ಕಿ ಮೀ
  • ಟ್ರೊಪೋಸ್ಫಿಯರ್--೦-೧೮ ಕಿ ಮೀ
ವಾಯುಮಂಡಲಗಳದ ಪದರಗಳು
ಚಂದ್ರ ಮತ್ತು ಟ್ರೊಪೋಸ್ಫಿಯರ್