ವಿಷಯಕ್ಕೆ ಹೋಗು

ಸೆಣಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗೋಣಿ ಇಂದ ಪುನರ್ನಿರ್ದೇಶಿತ)

Expression error: Unexpected < operator.

ಸೆಣಬಿನ ಗಿಡಗಳು (ಕಾರ್ಕ್ಹೋರುಸ್ ಆಲಿಟೋರಿಸ್ ಹಾಗು ಕಾರ್ಕ್ಹೋರುಸ್ ಕ್ಯಾಪ್ಸುಲರಿಸ್)

ಸೆಣಬು ಒಂದು ಉದ್ದದ, ಮೆದುವಾದ, ಹೊಳಪುಳ್ಳ ಸಸ್ಯದ ನಾರು. ಇದನ್ನು ಒರಟಾದ ಬಲವಾದ ನೂಲನ್ನಾಗಿ ಹೆಣೆಯಬಹುದಾಗಿದೆ. ಇದನ್ನು ಕಾರ್ಕ್ಹೊರುಸ್ ಜಾತಿಯ ಟಿಲಿಯಸೆಯೆ ಸಸ್ಯವರ್ಗದಿಂದ ತಯಾರಿಸಲಾಗುತ್ತದೆ.

ಸೆಣಬು ಅತ್ಯಂತ ಸುಲಭವಾಗಿ ಸಿಗುವ ನೈಸರ್ಗಿಕ ನಾರುಗಳಲ್ಲಿ ಒಂದಾಗಿದೆ. ಜೊತೆಗೆ ಹತ್ತಿಯ ನಂತರ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿ ವಿವಿಧ ರೀತಿಯಲ್ಲಿ ಬಳಕೆಯಾಗುತ್ತದೆ. ಸೆಣಬಿನ ನಾರುಗಳು ಪ್ರಾಥಮಿಕವಾಗಿ ಸಸ್ಯ ಪದಾರ್ಥಗಳಾದ ಸೆಲ್ಯುಲೋಸ್ (ಸಸ್ಯದ ನಾರಿನ ಪ್ರಮುಖ ಅಂಶ) ಹಾಗು ಲಿಗ್ನಿನ್ (ಮರದ ನಾರಿನ ಪ್ರಮುಖ ಅಂಶ)ನಿಂದ ರಚನೆಯಾಗಿವೆ. ಈ ಪ್ರಕಾರವಾಗಿ ಆಂಶಿಕವಾಗಿ ಜವಳಿ ನಾರು ಹಾಗೂ ಆಂಶಿಕವಾಗಿ ಮರ ನಾರಾದ ಇದು ಲಿಗ್ನೋ-ಸೆಲ್ಯುಲೋಸಿಕ್ ನಾರು. ಇದು ನಾರಿನ ತೊಗಟೆಯ (ತೊಗಟೆ ಅಥವಾ ಸಸ್ಯದ ತೊಗಟೆಯಿಂದ ಸಂಗ್ರಹಿಸಲಾದ ನಾರು) ಗುಂಪಿಗೆ ಕೆನ್ಯಾಫ್, ಕೈಗಾರಿಕಾ ಸೆಣಬಿನ ನಾರು, ಫ್ಲಾಕ್ಸ್(ಲಿನೆನ್), ರಾಮಿ, ಮುಂತಾದವುಗಳ ಜೊತೆಗೆ ಸೇರುತ್ತದೆ. ಸೆಣಬಿನ ನಾರಿನ ಕೈಗಾರಿಕಾ ಹೆಸರು ಕಚ್ಚಾ ಸೆಣಬು . ನಾರುಗಳು ಕಂದು ಮಿಶ್ರಿತ ಮಾಸಲು ಬಿಳಿಯ ಬಣ್ಣವನ್ನು ಹೊಂದಿರುತ್ತವೆ ಹಾಗು ೧-೪ ಮೀಟರ್ ಗಳ (೩-೧೨ ಅಡಿ) ಉದ್ದವಿರುತ್ತದೆ.

ಸೆಣಬು ನಾರನ್ನು ಸಾಮಾನ್ಯವಾಗಿ ಹೆಸಿಯಾನ್ ಎಂದು ಕರೆಯುತ್ತಾರೆ; ಸೆಣಬಿನ ಉಡುಪುಗಳನ್ನು ಸಹ ಹೆಸಿಯಾನ್ ಬಟ್ಟೆ ಎಂದು ಕರೆಯಲಾಗುತ್ತದೆ. ಜೊತೆಗೆ ಸೆಣಬಿನ ದೊಡ್ಡ ಚೀಲಗಳನ್ನು ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಗೋಣಿ ಚೀಲ ಎಂದು ಕರೆಯಲಾಗುತ್ತದೆ. ಸೆಣಬಿನಿಂದ ತಯಾರಾದ ಬಟ್ಟೆಯು ಉತ್ತರ ಅಮೇರಿಕಾದಲ್ಲಿ ಬರ್ಲ್ಯಾಪ್ ಎಂಬ ಹೆಸರಿನಿಂದ ಜನಪ್ರಿಯವಾಗಿದೆ.

ಸಾಗುವಳಿ

[ಬದಲಾಯಿಸಿ]

ಸೆಣಬಿಗೆ ಒಂದು ಸಾದಾ ಮೆಕ್ಕಲು ಮಣ್ಣು ಹಾಗು ನಿಂತ ನೀರಿನ ಅವಶ್ಯಕತೆಯಿದೆ. ಸೆಣಬನ್ನು ಬೆಳೆಯಲು ಅನುಕೂಲಕರವಾದ ಹವಾಮಾನವನ್ನು (ಬೆಚ್ಚನೆಯ ಹಾಗು ಒಣ ಹವೆ) ಮುಂಗಾರು ಋತುವಿನಲ್ಲಿ ಮುಂಗಾರು ವಾತಾವರಣವು ಒದಗಿಸುತ್ತದೆ.

೨೦˚ C ನಿಂದ ೪೦˚ Cವರೆಗಿನ ತಾಪಮಾನ ಹಾಗು ೭೦%–೮೦%ನಷ್ಟು ತೇವದ ಪ್ರಮಾಣವು ಯಶಸ್ಸಿನ ಸಾಗುವಳಿಗೆ ಅನುಕೂಲಕರವಾಗಿರುತ್ತದೆ. ಸೆಣಬಿನ ಬೆಳೆಗೆ ವಾರಕ್ಕೆ ೫-೮ ಸೆಂ.ನಷ್ಟು ಮಳೆಯ ಅಗತ್ಯವಿದೆ ಜೊತೆಗೆ ಬಿತ್ತನೆಯ ಅವಧಿಯಲ್ಲಿ ಇನ್ನೂ ಹೆಚ್ಚಿನ ಮಳೆಯ ಅಗತ್ಯವಿದೆ.

ಬಿಳಿ ಸೆಣಬು (ಕಾರ್ಕ್ಹೋರುಸ್ ಕ್ಯಾಪ್ಸುಲರಿಸ್ )

[ಬದಲಾಯಿಸಿ]

ಹಲವಾರು ಐತಿಹಾಸಿಕ ದಾಖಲೆಗಳು (ಅಬುಲ್ ಫಜಲ್ ೧೫೯೦ರಲ್ಲಿ ಬರೆದ ಆಯಿನ್-ಎ-ಅಕ್ಬರಿ ಒಳಗೊಂಡು) ಭಾರತದ ಬಡ ಹಳ್ಳಿಗರು ಸೆಣಬಿನಿಂದ ತಯಾರಾದ ಬಟ್ಟೆಗಳನ್ನು ಧರಿಸುತ್ತಿದ್ದರೆಂದು ನಿರೂಪಿಸುತ್ತದೆ. ನೇಕಾರರು ಸರಳವಾದ ಕೈಮಗ್ಗ ಹಾಗು ಚರಕಗಳನ್ನು ಬಳಸಿಕೊಂಡು ಹತ್ತಿಯ ನೂಲುಗಳನ್ನು ಸಹ ನೇಯುತ್ತಿದ್ದರು. ಭಾರತದಲ್ಲಿ, ವಿಶೇಷವಾಗಿ ಬೆಂಗಾಲಿಗಳು ಹಿಂದಿನ ಕಾಲದಿಂದಲೂ ಬಿಳಿ ಸೆಣಬಿನಿಂದ ಮಾಡಲಾದ ಹಗ್ಗಗಳು ಹಾಗು ಹುರಿಗಳನ್ನು ತಮ್ಮ ಮನೆಬಳಕೆಯಲ್ಲಿ ಹಾಗು ಇತರ ಉದ್ದೇಶಗಳಿಗಾಗಿ ಬಳಕೆ ಮಾಡುತ್ತಿದ್ದರೆಂದೂ ಸಹ ಇತಿಹಾಸವು ನಿರೂಪಿಸುತ್ತದೆ.

ಟೋಸ್ಸ ಸೆಣಬು (ಕಾರ್ಕ್ಹೋರುಸ್ ಆಲಿಟೋರಿಸ್ )

[ಬದಲಾಯಿಸಿ]

ಟೋಸ್ಸ ಸೆಣಬು(ಕಾರ್ಕ್ಹೋರುಸ್ ಆಲಿಟೋರಿಸ್ ) ಒಂದು ಆಫ್ರೋ-ಅರೇಬಿಯನ್ ಸಸ್ಯ ಜಾತಿ. ಇದು ತನ್ನ ಎಲೆಗಳಿಂದಾಗಿ ಜನಪ್ರಿಯತೆ ಗಳಿಸಿದೆ. ಜೊತೆಗೆ ಇದನ್ನು ಅಂಟಾದ ಸೊಪ್ಪಿನ ಖಾದ್ಯ ಮೊಲೋಖಿಯ ದಲ್ಲಿ ಪದಾರ್ಥವಾಗಿ ಬಳಸಲಾಗುತ್ತದೆ (ملوخية, ವ್ಯುತ್ಪತ್ತಿ ತಿಳಿಯದ ಪದ). ಇದು ಕೆಲವು ಅರಬ್‌ರಾಷ್ಟ್ರಗಳಲ್ಲಿ ಜನಪ್ರಿಯವಾಗಿದೆ. ಹೀಬ್ರೂ ಬೈಬಲ್ಬುಕ್ ಆಫ್ ಜಾಬ್ ನಲ್ಲಿ ಈ ಸೊಪ್ಪಿನ ತರಕಾರಿಯನ್ನು ಜಿವ್ಸ್ ಮ್ಯಾಲೋ ಎಂದು ಉಲ್ಲೇಖಿಸಲಾಗಿದೆ.

ಟೋಸ್ಸ ಸೆಣಬಿನ ನಾರು ಮೃದುವಾಗಿ, ರೇಷ್ಮೆಯಂತಿದೆ, ಹಾಗು ಬಿಳಿ ಸೆಣಬಿಗಿಂತ ಬಲವಾಗಿದೆ. ಈ ಜಾತಿಯು ಆಶ್ಚರ್ಯಕರ ರೀತಿಯಲ್ಲಿ ಗಂಗಾ ಮುಖಜಭೂಮಿಯ ವಾತಾವರಣದಲ್ಲಿ ಒಳ್ಳೆಯ ಸುಸ್ಥಿರತೆಯನ್ನು ತೋರಿಸಿದೆ. ಬಿಳಿ ಸೆಣಬಿನ ಜೊತೆಯಲ್ಲಿ, ಟೋಸ್ಸ ಸೆಣಬನ್ನು ಸಹ ಬಂಗಾಳ ದ ಮಣ್ಣಿನಲ್ಲಿ ಸಾಗುವಳಿ ಮಾಡಲಾಗುತ್ತದೆ. ೧೯ನೇ ಶತಮಾನದ ಪ್ರಾರಂಭದಿಂದಲೂ ಇದನ್ನು ಅಲ್ಲಿ ಪಾಟ್ ಎಂದು ಕರೆಯಲಾಗುತ್ತದೆ. ಪ್ರಸಕ್ತವಾಗಿ, ಬಂಗಾಳದ ಪ್ರದೇಶವು (ಪಶ್ಚಿಮ ಬಂಗಾಳ, ಭಾರತ ಹಾಗು ಬಾಂಗ್ಲಾದೇಶ)ಟೋಸ್ಸ ಸೆಣಬಿನ ಜಾತಿಯನ್ನು ಬೆಳೆಯುವ ವಿಶ್ವದ ಅತ್ಯಂತ ದೊಡ್ಡ ಉತ್ಪಾದಕ.

ಇತಿಹಾಸ

[ಬದಲಾಯಿಸಿ]

ಶತಮಾನಗಳಿಂದಲೂ, ಸೆಣಬು ಸಂಪೂರ್ಣವಾಗಿ ನೈಋತ್ಯ ಬಾಂಗ್ಲಾದೇಶದಲ್ಲಿ ಹಾಗು ಭಾರತಪಶ್ಚಿಮ ಬಂಗಾಳದಲ್ಲಿ ಬೆಂಗಾಲಿ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದೆ. ಕಳೆದ ೧೯ನೇ ಹಾಗು ೨೦ನೇ ಶತಮಾನದ ಪ್ರಾರಂಭದ ಬ್ರಿಟಿಶ್ ಆಡಳಿತಾವಧಿಯಲ್ಲಿ ಬಂಗಾಳದ ಹೆಚ್ಚಿನ ಕಚ್ಚಾ ಸೆಣಬಿನ ನಾರನ್ನು ಯುನೈಟೆಡ್ ಕಿಂಗ್ಡಮ್ ಗೆ ಒಯ್ಯಲಾಗುತ್ತಿತ್ತು. ನಂತರ ಅದನ್ನು ದುಂಡೀ ಯಲ್ಲಿ ಕೇಂದ್ರೀಕೃತವಾಗಿದ್ದ ಗಿರಣಿಗಳಲ್ಲಿ ಸಂಸ್ಕರಣ ಮಾಡಲಾಗುತ್ತಿತ್ತು. ಪ್ರಾರಂಭದಲ್ಲಿ, ಅವುಗಳ ರಚನೆಯಿಂದಾಗಿ ಬರಿಗೈಯಲ್ಲಿ ಮಾತ್ರ ಸಂಸ್ಕರಣ ಮಾಡಲು ಸಾಧ್ಯವಾಗುತ್ತಿತ್ತು. ಆದರೆ ತಿಮಿಂಗಲದ ಎಣ್ಣೆ ಯಿಂದ ಇದನ್ನು ಸಂಸ್ಕರಣೆ ಮಾಡಿದರೆ ಯಂತ್ರದಿಂದ ಸಂಸ್ಕರಣೆ ಸಾಧ್ಯವೆಂದು ಆ ನಗರದಲ್ಲಿ ಶೋಧಿಸಲಾಯಿತು.[]. ಈ ಉದ್ದಿಮೆಯು ಅಭಿವೃದ್ಧಿ ಹೊಂದಿತು ("ಸೆಣಬು ನೇಯ್ಗೆ" ಯು ೧೯೦೧ರ UK ಜನಗಣತಿಯಲ್ಲಿ ಒಂದು ಅಂಗೀಕೃತಗೊಂಡ ವ್ಯಾಪಾರ ಉದ್ದಿಮೆಯಾಯಿತು). ಆದರೆ ಈ ಉದ್ದಿಮೆಯು, ೧೯೭೦ರಲ್ಲಿ ಪ್ರಾರಂಭವಾದ ಸಂಶ್ಲೇಷಿತ ನಾರಿನ ಬಳಕೆಯಿಂದ ಅಂತ್ಯಗೊಂಡಿತು.

ಕಳೆದ ೧೮೦೦ರಲ್ಲಿ, ದುಂಡೀಯಲ್ಲಿ ಒಂದು ಸೆಣಬಿನ ಗಿರಣಿಯ ಒಡೆಯರಾಗಿದ್ದ ಮಾರ್ಗರೆಟ್ ಡೋನ್ನೆಲ್ಲಿ, ಬಂಗಾಳದಲ್ಲಿ ಮೊದಲ ಸೆಣಬಿನ ಗಿರಣಿಯನ್ನು ಸ್ಥಾಪಿಸಿದರು. ನೈಲಾನ್ ಮತ್ತು ಪಾಲಿಥೀನ್ ಅಪರೂಪವಾಗಿ ಬಳಕೆಯಾಗುತ್ತಿದ್ದ ೧೯೫೦ ಮತ್ತು ೧೯೬೦ರ ದಶಕಗಳಲ್ಲಿ, ಮುಂಚಿನ ಏಕೀಕೃತ ಪಾಕಿಸ್ತಾನಕ್ಕೆ ಪೂರ್ವ ಬಂಗಾಳ ದಲ್ಲಿ (ಇಂದಿನ ಬಾಂಗ್ಲಾದೇಶ) ಬೆಳೆಯಲಾಗುತ್ತಿದ್ದ ಸೆಣಬನ್ನು ಆಧರಿಸಿದ ಉತ್ಪಾದನೆಗಳ ರಫ್ತು ವಿದೇಶಿ ವಿನಿಮಯ ಗಳಿಕೆಗಳ ಪ್ರಮುಖ ಮೂಲಗಳಲ್ಲಿ ಒಂದಾಗಿತ್ತು. ಸೆಣಬನ್ನು "ಬಾಂಗ್ಲಾದೇಶದ ಚಿನ್ನದ ನಾರು" ಎಂದು ಕರೆಯಲಾಗುತ್ತಿತ್ತು. ಆದಾಗ್ಯೂ, ಪಾಲಿಥಿನ್ ಹಾಗು ಇತರ ಸಂಶ್ಲೇಷಿತ ವಸ್ತುಗಳು ಸೆಣಬಿಗೆ ಪರ್ಯಾಯವಾಗಿ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಾಗ, ಸೆಣಬಿನ ಉದ್ಯಮವು ಹೆಚ್ಚುಕಡಿಮೆ ಕುಸಿತವನ್ನು ಅನುಭವಿಸಿತು.

ಕಳೆದ ೧೯೮೦ರ ಕೆಲ ವರ್ಷಗಳ ಅವಧಿಯಲ್ಲಿ, ಸೆಣಬಿಗೆ ಸಮರ್ಪಕವಾದ ಬೆಲೆಯು ದೊರಕದಿದ್ದಾಗ ಬಾಂಗ್ಲಾದೇಶದ ರೈತರು ಸೆಣಬಿನ ಬೆಳೆಯನ್ನು ಸುಟ್ಟು ಹಾಕಿದರು. ಹಲವು ಸೆಣಬಿನ ರಫ್ತುಗಾರರು, ಸೆಣಬಿಗೆ ಬದಲಾಗಿ ಇತರ ಪದಾರ್ಥಗಳತ್ತ ತಿರುಗಿದರು. ಸೆಣಬು-ಆಧಾರಿತ ಸಂಸ್ಥೆಗಳು ಹಾಗು ಸರಕಾರದ ಅಂಗಗಳು ಬಲವಂತವಾಗಿ ಬಾಗಿಲುಹಾಕಬೇಕಾಯಿತು, ಅಥವಾ ಬದಲಾಯಿಸುವುದರ ಜೊತೆಗೆ ಅವುಗಳ ಗಾತ್ರವನ್ನು ಕಡಿತಗೊಳಿಸಲಾಯಿತು. ಬೇಡಿಕೆಯಲ್ಲಿ ದೀರ್ಘಾವಧಿ ಕ್ಷೀಣತೆಯು ವಿಶ್ವದ ಅತ್ಯಂತ ದೊಡ್ಡ ಸೆಣಬಿನ ಗಿರಣಿಯನ್ನು (ಅದಂಜೀ ಜೂಟ್ ಮಿಲ್ಸ್)ಮುಚ್ಚುವಂತೆ ಮಾಡಿತು. ಬಾಂಗ್ಲಾದೇಶದ ಎರಡನೇ ಅತ್ಯಂತ ದೊಡ್ಡ ಗಿರಣಿಯಾಗಿದ್ದ ಲತಿಫ್ ಬವನಿ ಜೂಟ್ ಮಿಲ್ಸ್, ಮುಂಚೆ ವ್ಯಾಪಾರಸ್ಥ, ಯಾಹ್ಯ ಬವನ್ ನ ಒಡೆತನದಲ್ಲಿದ್ದ ಗಿರಣಿಯನ್ನು ಸರಕಾರವು ರಾಷ್ಟ್ರೀಕೃತಗೊಳಿಸಿತು. ಆದಾಗ್ಯೂ, ಬಾಂಗ್ಲಾದೇಶದ ರೈತರು ಆಂತರಿಕ ಮಾರುಕಟ್ಟೆಯಲ್ಲಿ ಸೆಣಬಿಗಿದ್ದ ಬೇಡಿಕೆಯಿಂದಾಗಿ ಅದರ ಬೆಳೆಯನ್ನು ಸಂಪೂರ್ಣವಾಗಿ ನಿಲ್ಲಿಸಲಿಲ್ಲ. ಕಳೆದ ೨೦೦೪-೨೦೦೯ರ ನಡುವೆ, ಸೆಣಬಿನ ಮಾರುಕಟ್ಟೆಯು ಚೇತರಿಸಿಕೊಂಡಿತು ಹಾಗು ಕಚ್ಚಾ ಸೆಣಬಿನ ಬೆಲೆಯು ೨೦೦%ನಷ್ಟು ಅಧಿಕವಾಯಿತು.

ನೈಸರ್ಗಿಕ ನಾರುಗಳು ಕ್ರಮೇಣವಾಗಿ ಉತ್ತಮ ಪರ್ಯಾಯಗಳಾಗಿರುವ ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ಸೆಣಬು ಕೈಗಾರಿಕೆಯ ವಿವಿಧ ಕ್ಷೇತ್ರಗಳಲ್ಲಿ ಪ್ರವೇಶಿಸಿತು. ಈ ಕೈಗಾರಿಕೆಗಳಲ್ಲಿ ಕಾಗದ, ಸೆಲ್ಯೂಲಾಯ್ಡ್ ಉತ್ಪನ್ನಗಳು(ಸಿನೆಮಾ), ನೇಯ್ಗೆ ಮಾಡಿರದ ವಸ್ತ್ರಗಳು, ಸಂಯೋಜಿತ ವಸ್ತುಗಳು (ಕೃತಕ-ಮರ), ಹಾಗು ಜಿಯೋ ಟೆಕ್ಸ್‌ಟೈಲ್ಸ್.

ಡಿಸೆಂಬರ್ ೨೦೦೬ರಲ್ಲಿ ಜನರಲ್ ಅಸೆಂಬ್ಲಿ ಆಫ್ ದಿ ಯುನೈಟೆಡ್ ನೇಶನ್ಸ್, ಸೆಣಬು ಹಾಗು ಇತರ ನೈಸರ್ಗಿಕ ನಾರುಗಳ ಬಗ್ಗೆ ಗಮನಸೆಳೆಯುವ ಸಲುವಾಗಿ ೨೦೦೯ನೇ ವರ್ಷವನ್ನು ಇಂಟರ್ನ್ಯಾಷನಲ್ ಇಯರ್ ಆಫ್ ನ್ಯಾಚುರಲ್ ಫೈಬರ್ಸ್ ಎಂದು ಘೋಷಣೆ ಮಾಡಿತು.

ಉತ್ಪಾದನೆ

[ಬದಲಾಯಿಸಿ]
ಸೆಣಬಿನ ಚಾಪೆಯನ್ನು ಪ್ರವಾಹದ ಸವೆತವನ್ನು ತಡೆಗಟ್ಟಲು ಬಳಸಲಾಗುತ್ತಿದೆ ಹಾಗೂ ನೈಸರ್ಗಿಕ ಸಸ್ಯವರ್ಗ ಸ್ಥಿರಗೊಳ್ಳುತ್ತದೆ.ಈ ಉದ್ದೇಶಕ್ಕಾಗಿ, ಒಂದು ನೈಸರ್ಗಿಕ ಹಾಗು ಜೈವಿಕ ವಿಘಟನೀಯತೆಯ ನಾರು ಅವಶ್ಯಕವಾಗಿದೆ.

ಸೆಣಬು ಕಡಿಮೆ ಗೊಬ್ಬರ ಅಥವಾ ಕ್ರಿಮಿನಾಶಕಗಳನ್ನು ಅವಲಂಬಿಸಿರುವ ಒಂದು ಮಳೆ-ಆಧಾರಿತ ಬೆಳೆ. ಉತ್ಪಾದನೆಯು ಬಾಂಗ್ಲಾದೇಶ ಹಾಗು ಭಾರತದ ಕೆಲವು ಪ್ರದೇಶಗಳಲ್ಲಿ ಕೇಂದ್ರಿಕೃತವಾಗಿದೆ. ಸೆಣಬಿನ ನಾರು, ಸೆಣಬಿನ ಗಿಡದ ಕಾಂಡದಿಂದ ಹಾಗು ರಿಬ್ಬನ್ (ಹೊರ ಪದರ) ನಿಂದ ಬರುತ್ತದೆ. ನಾರುಗಳನ್ನು ಮೊದಲು ನೀರಿನಲ್ಲಿ ಅದ್ದುವ ಮೂಲಕ ಸಾರ ತೆಗೆಯಲಾಗುತ್ತದೆ. ಈ ನೆನಸಿ ಮೃದುಗೊಳಿಸುವ ಪ್ರಕ್ರಿಯೆಯಲ್ಲಿ ಸೆಣಬಿನ ಕಾಂಡಗಳನ್ನು ಒಟ್ಟಿಗೆ ಕಂತೆ ಕಟ್ಟಲಾಗುತ್ತದೆ ಹಾಗು ಸಣ್ಣಗೆ ಹರಿಯುವ ನೀರಿನಲ್ಲಿ ಮುಳುಗಿಸಲಾಗುತ್ತದೆ. ನೆನಸಿ ಮೃದುಗೊಳಿಸುವ ಪ್ರಕ್ರಿಯೆಯಲ್ಲಿ ಎರಡು ವಿಧಾನಗಳಿವೆ: ಕಾಂಡ ಹಾಗು ರಿಬ್ಬನ್. ನೆನಸಿ ಮೃದುಗೊಳಿಸಿದ ಪ್ರಕ್ರಿಯೆಯ ನಂತರ, ತೊಗಟೆಯನ್ನು ಸುಲಿದು ಹಾಕಲಾಗುತ್ತದೆ. ಸಾಮಾನ್ಯವಾಗಿ ಹೆಂಗಸರು ಮತ್ತು ಮಕ್ಕಳು ಈ ಕೆಲಸವನ್ನು ಮಾಡುತ್ತಾರೆ. ತೊಗಟೆ ಸುಲಿಯುವ ಪ್ರಕ್ರಿಯೆಯಲ್ಲಿ, ನಾರಿನಂಶವಿಲ್ಲದ ಪದಾರ್ಥವನ್ನು ತೆಗೆದು ಹಾಕಲಾಗುತ್ತದೆ, ನಂತರ ಕೆಲಸಗಾರರು ಸೆಣಬಿನ ಕಾಂಡದಲ್ಲಿರುವ ನಾರನ್ನು ಕೀಳುತ್ತಾರೆ.[] ಸ್ಥಳೀಯ ಸೆಣಬನ್ನು ಭಾರತ, ಪಾಕಿಸ್ತಾನ, ಚೀನಾ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿದರೆ ಬ್ರಿಟನ್, ಸ್ಪೇನ್, ಐವರಿ ಕೋಸ್ಟ್, ಜರ್ಮನಿ ಹಾಗು ಬ್ರೆಜಿಲ್ ರಾಷ್ಟ್ರಗಳೂ ಸಹ ಬಾಂಗ್ಲಾದೇಶದಿಂದ ಕಚ್ಚಾ ಸೆಣಬನ್ನು ಆಮದು ಮಾಡಿಕೊಳ್ಳುತ್ತವೆ. ಭಾರತ, ವಿಶ್ವದಲ್ಲಿ ಅತ್ಯಂತದ ದೊಡ್ಡ ಪ್ರಮಾಣದಲ್ಲಿ ಸೆಣಬನ್ನು ಬೆಳೆಯುವ ರಾಷ್ಟ್ರ.

ಅಗ್ರ ಹತ್ತು ಸೆಣಬು ಉತ್ಪಾದಕರು — 11 ಜೂನ್ 2008
ದೇಶ ಉತ್ಪಾದನೆ (ಟನ್ನು ಗಳು) ಅಡಿಟಿಪ್ಪಣಿ
 ಭಾರತ ೨ ೧೪೦ ೦೦೦ F
 ಬಾಂಗ್ಲಾದೇಶ ೮೦೦ ೦೦೦ F
 ಚೀನಾ ೯೯ ೦೦೦
 ಐವರಿ ಕೋಸ್ಟ್ ೪೦ ೦೦೦ F
Thailandಥೈಲ್ಯಾಂಡ್ ೩೧ ೦೦೦ F
ಬರ್ಮಾಮಯನ್ಮಾರ್ ೩೦ ೦೦೦ F
 Brazil ೨೬ ೭೧೧
 ಉಜ್ಬೇಕಿಸ್ಥಾನ್ ೨೦ ೦೦೦ F
ನೇಪಾಳ ನೇಪಾಲ ೧೬ ೭೭೫
 ವಿಯೆಟ್ನಾಮ್ ೧೧ ೦೦೦ F
[15]ವಿಶ್ವ ' ೩ ೨೨೫ ೫೫೧ A
ಯಾವುದೇ ಸಂಕೇತ ಇಲ್ಲದಿರುವುದು = ಅಧಿಕೃತ ಸಂಖ್ಯೆ, F = FAO ಅಂದಾಜು, A = ಸರಾಸರಿ (ಇದರಲ್ಲಿ ಅಧಿಕೃತ, ಭಾಗಶಃ ಅಧಿಕೃತ ಅಥವಾ ಅಂದಾಜು ಸೇರಿರಬಹುದು);
ಮೂಲಾಧಾರ: ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗನೈಜೆಶನ್ ಆಫ್ ಯುನೈಟೆಡ್ ನೇಶನ್ಸ್: ಎಕನಾಮಿಕ್ ಅಂಡ್ ಸೋಶಿಯಲ್ ಡಿಪಾರ್ಟ್ಮೆಂಟ್: ದಿ ಸ್ಟ್ಯಾಟಿಸ್ಟಿಕಲ್ ಡಿವಿಷನ್ Archived 2012-06-19 ವೇಬ್ಯಾಕ್ ಮೆಷಿನ್ ನಲ್ಲಿ.

ಬಳಕೆಗಳು

[ಬದಲಾಯಿಸಿ]
ಚಿತ್ರ:Frozen jute leaes.jpg
ಘನೀಕೃತ ಸೆಣಬು (ಸಲುಯೋಟ್)ಎಲೆಗಳು ಲಾಸ್ ಏಂಜಲ್ಸ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದು.

ಸೆಣಬು, ಹತ್ತಿಯ ನಂತರದ ಎರಡನೇ ಅತ್ಯಂತ ಪ್ರಮುಖ ಸಸ್ಯದ ನಾರಾಗಿದೆ, ಸಾಗುವಳಿಗೆ ಮಾತ್ರವಲ್ಲದೆ, ವಿವಿಧ ರೀತಿಯಲ್ಲಿ ಬಳಕೆಯಾಗುತ್ತದೆ. ಸೆಣಬನ್ನು ಮುಖ್ಯವಾಗಿ ಕಚ್ಚಾ ಹತ್ತಿಯನ್ನು ಮೂಟೆಕಟ್ಟಲು ಬಳಸಲಾಗುವ ಬಟ್ಟೆ ತಯಾರಿಕೆಗೆ, ಇದಲ್ಲದೆ ಗೋಣಿಚೀಲಗಳನ್ನು ಹಾಗು ಕಚ್ಚಾ ಬಟ್ಟೆಯನ್ನು ತಯಾರಿಸುವಲ್ಲಿ ಬಳಕೆಯಾಗುತ್ತದೆ. ನಾರುಗಳನ್ನು ಪರದೆಗಳಾಗಿ, ಕುರ್ಚಿಯ ಹೊದಿಕೆಗಳಾಗಿ, ಜಮಖಾನೆಗಳಾಗಿ, ರತ್ನಕಂಬಳಿಗಳಾಗಿ, ಹೆಸಿಅನ್ ಬಟ್ಟೆ ಹಾಗು ಲಿನೋಲಿಯಂ (ನೆಲದ ಹಾಸು ಬಟ್ಟೆ)ಗಳಿಗೆ ಆಧಾರವಾಗಿ ನೇಯಲಾಗುತ್ತದೆ.

ಇವುಗಳ ಅನೇಕ ಬಳಕೆಗೆ ಸಂಶ್ಲೇಷಿತ ವಸ್ತುಗಳು ಸೆಣಬಿನ ಬದಲಾಗಿ ಬಂದಿದ್ದರೂ, ಕೆಲವು ಬಳಕೆಗಳು ಸೆಣಬಿನ ಜೈವಿಕ ವಿಘಟನೀಯತೆಯ ಸ್ವಭಾವದ ಲಾಭವನ್ನು ಬಳಸಿಕೊಳ್ಳುತ್ತವೆ, ಏಕೆಂದರೆ ಇಂತಹ ಬಳಕೆಗಳಲ್ಲಿ ಸಂಶ್ಲೇಷಿತ ವಸ್ತುಗಳು ಅಸೂಕ್ತವಾಗಿರುತ್ತದೆ. ಇಂತಹ ಬಳಕೆಯ ಕೆಲವು ಉದಾಹರಣೆಗಳೆಂದರೆ ಚಿಕ್ಕ ಸಸಿಗಳನ್ನು ನೆಡಲು ಬಳಸಲಾಗುವ ಧಾರಕಗಳು. ಇಂತಹ ಧಾರಕಗಳಲ್ಲಿ ಬೇರುಗಳಿಗೆ ಹಾನಿಯಾಗದಂತೆ ನೇರವಾಗಿ ನೆಡಬಹುದಾಗಿದೆ ಮತ್ತು ನೆಲದ ಮರುಚೈತನ್ಯ, ಸೆಣಬಿನ ಬಟ್ಟೆಗಳು ಸವೆತವನ್ನು ತಡೆಗಟ್ಟಿ ನೈಸರ್ಗಿಕ ಸಸ್ಯವರ್ಗ ಸ್ಥಿರವಾಗುಳಿಯುತ್ತವೆ.

ಇದರ ನಾರನ್ನು ಪ್ರತ್ಯೇಕವಾಗಿ ಇಲ್ಲವೇ ಇತರ ಮಾದರಿಯ ನಾರುಗಳ ಜೊತೆ ಸೇರಿಸಿ ಹೊಸೆದು ಹುರಿ ಮಾಡಬಹುದು ಹಾಗು ಹಗ್ಗ ವನ್ನು ತಯಾರಿಸಬಹುದು. ಸಸ್ಯದ ದಪ್ಪದಾದ ಕೊನೆ ಭಾಗ, ಸೆಣಬಿನ ಬುಡವನ್ನು, ಅಗ್ಗದ ಬಟ್ಟೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದಕ್ಕೆ ಪ್ರತಿಯಾಗಿ, ಸೆಣಬಿನ ಉತ್ತಮ ದಾರವನ್ನು ಬೇರ್ಪಡಿಸಿ ಅದನ್ನು ಕೃತಕ ರೇಷ್ಮೆ ಯಾಗಿ ಪರಿವರ್ತಿಸಬಹುದು. ಸೆಣಬಿನ ನಾರುಗಳನ್ನು ಪಲ್ಪ್(ಒಣಗಿದ ನಾರಿನ ವಸ್ತು) ಹಾಗು ಕಾಗದವನ್ನು ತಯಾರಿಸಲು ಕೂಡ ಬಳಸಲಾಗುತ್ತಿದೆ.ಬಹುತೇಕ ಕಾಗದ ತಯಾರಿಕೆಗೆ ಮರದ ತಿರುಳು ಪಡೆಯಲು ಕಾಡನ್ನು ನಾಶಮಾಡುತ್ತಿರುವ ಬಗ್ಗೆ ಕಳವಳ ಹೆಚ್ಚಿರುವ ನಡುವೆ,ಈ ಉದ್ದೇಶಕ್ಕಾಗಿ ಸೆಣಬಿನ ಪ್ರಾಮುಖ್ಯತೆ ಹೆಚ್ಚಬಹುದು. ಸೆಣಬಿನ ಬಳಕೆಯ ದೀರ್ಘ ಇತಿಹಾಸದಲ್ಲಿ ಅದನ್ನು ಗೊಣಿಚೀಲವಾಗಿ, ನೆಲಹಾಸುಗಳಾಗಿ, ಬಟ್ಟೆಗಳನ್ನು ಸುತ್ತಲು (ಹತ್ತಿ ಮೂಟೆ), ಹಾಗು ವಸ್ತ್ರವಿನ್ಯಾಸ ಹಾಗು ಅದರ ತಯಾರಿಕಾ ಉದ್ಯಮದಲ್ಲಿ ಬಳಸಲಾಗುತ್ತದೆ.

ಸಾಂಪ್ರದಾಯಿಕವಾಗಿ ಸೆಣಬನ್ನು, ಸಾಂಪ್ರದಾಯಿಕ ವಸ್ತ್ರೋದ್ಯಮದ ಯಂತ್ರೋಪಕರಣಗಳಲ್ಲಿ ಬಟ್ಟೆಗಳ ನಾರುಗಳಾಗಿ ಬಳಸಲಾಗುತ್ತಿತ್ತು, ಏಕೆಂದರೆ ಅವು ಸೆಲ್ಯುಲೋಸ್ (ಸಸ್ಯದ ನಾರಿನ ಅಂಶ) ಹಾಗು ಲಿಗ್ನಿನ್ (ಮರದ ನಾರಿನ ಅಂಶ)ನ್ನು ಒಳಗೊಂಡಿತ್ತು. ಆದರೆ, ಮೋಟಾರು ವಾಹನೋದ್ಯಮದಲ್ಲಿ,ಪಲ್ಪ್ ಹಾಗು ಕಾಗದಗಳು, ಮತ್ತು ಮರದ ಪೀಠೋಪಕರಣಗಳು ಹಾಗು ಹಾಸಿಗೆ ತಯಾರಿಕಾ ಕೈಗಾರಿಕೆಗಳು ಸೆಣಬು ಹಾಗೂ ಅದಕ್ಕೆ ಸಂಬಂಧಿಸಿದ ನಾರುಗಳನ್ನು ಬಳಸಲು ಆರಂಭಿಸಿದಾಗ ಪ್ರಮುಖ ಪ್ರಗತಿಯು ಕಂಡು ಬಂತು. ನೇಯ್ಗೆರಹಿತ,ತಾಂತ್ರಿಕ ವಸ್ತ್ರಗಳು ಮತ್ತು ಸಂಯೋಜಿತಗಳ ತಯಾರಿಕೆಗೆ ನೇಯ್ಗೆರಹಿತ ಮತ್ತು ಸಂಯೋಜಿತ ತಂತ್ರಜ್ಞಾನದೊಂದಿಗೆ ಸೆಣಬಿನ ಬಳಕೆ ಆರಂಭಿಸಿದ್ದವು. ಹೀಗಾಗಿ, ಸೆಣಬು ತನ್ನ ಜವಳಿ ನಾರಿನ ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಒಂದೇ ಸಮನೆ ತನ್ನ ಹೊಸ ರೂಪದತ್ತ ಸಾಗಿದೆ, ಅದೆಂದರೆ, ಮರದ ನಾರು. ಪ್ರಗತಿಯೇ ಇಲ್ಲವೆಂದು ಭಾವಿಸಲಾಗಿದ್ದ ಸೆಣಬು, ಜವಳಿ ನಾರಾಗಿ ಉತ್ತುಂಗಕ್ಕೇರಿದೆ, ಆದರೆ ಸೆಣಬು ಮರದ ನಾರಾಗಿ ಹಲವು ಭರವಸೆ ನೀಡುವ ಲಕ್ಷಣಗಳನ್ನು ಹೊಂದಿದೆ.[]

ಸೆಣಬನ್ನು ಹಲವು ವಿಧದ ಬಟ್ಟೆಗಳಾದ ಹೆಸಿಅನ್ ಬಟ್ಟೆ, ಗೋಣಿ ತಟ್ಟು, ಅಸ್ತರಿ ಬಟ್ಟೆ, ನೆಲಹಾಸುಗಳಿಗೆ ಆಧಾರ ನೀಡಿ ಹೊಲೆಯುವ ಬಟ್ಟೆ (CBC), ಹಾಗು ಕ್ಯಾನ್ವಾಸ್ ನಲ್ಲಿ ಬಳಕೆಯಾಗುತ್ತದೆ. ಗೋಣಿ ಚೀಲಗಳಿಗಿಂತ ಕಡಿಮೆ ತೂಕವನ್ನು ಹೊಂದಿರುವ ಹೆಸಿಅನ್ ಬಟ್ಟೆಯನ್ನು, ಕೈಚೀಲಗಳು, ಹೊದಿಕೆಗಳು, ಗೋಡೆ-ಹಾಸುಗಳು, ಪೀಠೋಪಕರಣಗಳನ್ನು ಸಜ್ಜುಗೊಳಿಸಲು ಹಾಗು ಮನೆಯನ್ನು ಸಜ್ಜುಗೊಳಿಸುವಲ್ಲಿ ಬಳಸಲಾಗುತ್ತದೆ. ಭಾರವಾದ ಸೆಣಬಿನ ನಾರಿನ ಬಟ್ಟೆಯಾದ ಗೋಣಿಬಟ್ಟೆಯು ತನ್ನ ಹೆಸರಲ್ಲೇ ಬಳಕೆಯನ್ನು ಸೂಚಿಸುತ್ತದೆ. ಸೆಣಬಿನಿಂದ ಮಾಡಲಾದ CBCಯು ಎರಡು ವಿಧಾನದಲ್ಲಿ ಬರುತ್ತದೆ. ಪ್ರಾಥಮಿಕ CBCಯು ಒಂದು ಕುಚ್ಚಾದ ಮೇಲ್ಮೈಯನ್ನು ಒದಗಿಸುತ್ತದೆ, ಈ ನಡುವೆ ದ್ವಿತೀಯ CBCಯನ್ನು ಪ್ರಾಥಮಿಕ ಆಧಾರಕ್ಕೆ ಹೊದಿಕೆಯಾಗಿ ಅಂಟಿಸಲಾಗುತ್ತದೆ. ಸೆಣಬಿನ ಪ್ಯಾಕೆಜಿಂಗ್ ನ್ನು ಒಂದು ಪರಿಸರ-ಸ್ನೇಹಿ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ.

ಸೆಣಬಿನ ವಿವಿಧ ಉತ್ಪನ್ನಗಳು ಇಂದಿನ ಗ್ರಾಹಕರಿಗೆ ಹೆಚ್ಚು ಹೆಚ್ಚು ಉಪಯುಕ್ತವಾಗುತ್ತಿದೆ. ಇವುಗಳಲ್ಲಿ ಎಸ್ಪಡ್ರಿಲ್ ಗಳು(ಹೆಣೆದ ನಾರಿನ ಅಟ್ಟೆಯುಳ್ಳ ಹಗುರ ಕ್ಯಾನ್ವಾಸ್ ಷೂಗಳು), ನೆಲಕ್ಕೆ ಹೊದಿಕೆಗಳು, ಮನೆಯ ಜವಳಿಗಳು,ಉತ್ತಮ ನಿರ್ವಹಣೆ ಮಾಡುವ ತಾಂತ್ರಿಕ ವಸ್ತ್ರೋದ್ಯಮದಲ್ಲಿ, ಜಿಯೋಟೆಕ್ಸ್ಟೈಲ್ಸ್, ಸಂಯುಕ್ತತೆಗಳು, ಹಾಗು ಇನ್ನೂ ಹೆಚ್ಚಿನ ಉತ್ಪನ್ನಗಳಲ್ಲಿ ಸೇರಿದೆ.

ಸೆಣಬಿನ ಕೈಚೀಲ ಗಳನ್ನು ಅಧುನಿಕ ಶೈಲಿಯ ಕೈಚೀಲಗಳನ್ನಾಗಿ & ಪ್ರಚಾರದ ಕೈಚೀಲಗಳನ್ನು ತಯಾರಿಸಲು ಬಳಸಲಾಗುತ್ತದೆ.

ಸೆಣಬಿನ ನೆಲ ಹಾಸುಗಳು , ನೇಯ್ದ ಹಾಗು ಕುಚ್ಚಾದ ಹಾಗು ನೆಲಹಾಸುಗಳ ರಾಶಿಯನ್ನು ಒಳಗೊಂಡಿರುತ್ತದೆ. ೫/೬ ಮೀಟರ್ ಗಳಷ್ಟು ಅಗಲ ಹಾಗು ಉದ್ದವಾದ ಸೆಣಬಿನ ಚಾಪೆಗಳು ಹಾಗು ಹೆಣಿಗೆಗಳನ್ನು ಭಾರತದ ದಕ್ಷಿಣ ಭಾಗದಲ್ಲಿ, ಗಟ್ಟಿಯಾದ ಹಾಗು ಅಲಂಕಾರಿಕ ವಿಧಗಳಲ್ಲಿ ಸುಲಭವಾಗಿ ನೇಯಲಾಗುತ್ತದೆ. ಜೊತೆಗೆ ವಿವಿಧ ನೇಯ್ಗೆಯ ವಿಧಾನಗಳಾದ, ಬೌಕ್ಲೆ, ಪನಾಮ, ಹೆರ್ರಿಂಗ್ ಬೋನ್, ಮುಂತಾದವುಗಳಿಂದ ನೇಯಲಾಗುತ್ತದೆ. ಸೆಣಬಿನ ಚಾಪೆಗಳು & ರಗ್ಗುಗಳನ್ನು ವಿದ್ಯುತ್ ಮಗ್ಗ & ಕೈಮಗ್ಗ ಎರಡೂ ವಿಧಾನದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಭಾರತದ ಕೇರಳದಲ್ಲಿ ತಯಾರಿಸಲಾಗುತ್ತದೆ. ಮನೆಯ ಒಳಾಂಗಣ ವಿನ್ಯಾಸದಲ್ಲಿ ಸಾಂಪ್ರದಾಯಿಕ ಸತ್ರಂಜಿ ಚಾಪೆಯು ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ನೇಯ್ಗೆ ಮಾಡಿಲ್ಲದ ಸೆಣಬು ಹಾಗು ಸಂಯೋಜಿತಗಳನ್ನು ಚಾಪೆ ಅಥವಾ ಜಮಖಾನದ ಕೆಳಗೆ, ಲಿನೋಲಿಯಂ ತಲಾಧಾರವಾಗಿ, ಹಾಗು ಇನ್ನೂ ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ.

ಗೃಹ ಜವಳಿಯಾಗಿ ಸೆಣಬಿನಿಂದ ಹಲವು ಅನುಕೂಲಗಳಿವೆ. ಇದನ್ನು ಹತ್ತಿಯ ಬದಲಿಗೆ ಬಳಸಬಹುದು ಅಥವಾ ಅದರ ಜೊತೆಗೆ ಸೇರಿಸಿ ನೇಯ್ಗೆ ಮಾಡಬಹುದು. ಇದೊಂದು ಬಲವಾದ, ಬಾಳಿಕೆ ಬರುವ, ಬಣ್ಣ ಹಾಗು ಹೆಚ್ಚಿನ ಪ್ರಕಾಶವನ್ನು ಬೀರುವ ನಾರಾಗಿದೆ. ಇದರ UV ಸಂರಕ್ಷಣೆ, ಶಬ್ದ ಹಾಗು ಶಾಖ ನಿರೋಧಕ ಗುಣ, ಕಡಿಮೆ ಶಾಖಾಧಾರಕ ವಾಹಕತೆ ಹಾಗು ಕ್ರಿಯಾಶೀಲತೆಯ ಲಕ್ಷಣಗಳಿಂದಾಗಿ ಮನೆಯ ಒಳಾಂಗಣ ವಿನ್ಯಾಸದಲ್ಲಿ ಇದೊಂದು ಉತ್ತಮ ಆಯ್ಕೆಯಾಗಿದೆ. ಇದಲ್ಲದೆ, ಸೆಣಬಿನ ನಾರಿನಿಂದ ತಯಾರಾದ ಬಟ್ಟೆಗಳು ಕಾರ್ಬನ್ ಡೈ ಆಕ್ಸೈಡ್‌ಗೆ ತಟಸ್ಥವಾಗಿರುತ್ತದೆ ಹಾಗು ನೈಸರ್ಗಿಕವಾಗಿ ವಿಭಜನೀಯವಾಗಿರುತ್ತದೆ. ಈ ಗುಣಗಳಿಂದಾಗಿ ಸೆಣಬನ್ನು ಉತ್ತಮ ನಿರ್ವಹಣೆಯ ತಾಂತ್ರಿಕ ವಸ್ತ್ರೋದ್ಯಮದಲ್ಲಿ ಬಳಸಬಹುದಾಗಿದೆ[].

ಇದಲ್ಲದೆ, ಸೆಣಬನ್ನು ೪-೬ ತಿಂಗಳಲ್ಲಿ ಸೆಣಬಿನ ಹರ್ಡ್ ನಿಂದ ಉತ್ಪತ್ತಿಯಾದ (ಸೆಣಬಿನ ಕಾಂಡದ ಒಳಗಿನ ತಿರುಳು ಅಥವಾ ಪ್ಯಾರೆನ್ಕೈಮ) ಒಂದು ದೊಡ್ಡ ಪ್ರಮಾಣದ ಸೆಲ್ಯುಲೋಸ್‌ನಿಂದ ಬೆಳೆಸಬಹುದಾಗಿದೆ. ಇದು ವಿಶ್ವದಲ್ಲಿರುವ ಬಹುತೇಕ ಮರದ ಬೇಡಿಕೆಯನ್ನು ಪೂರೈಸಲು ಸಾಧ್ಯ. ಕೈಗಾರಿಕೀಕರಣದಿಂದ ಉಂಟಾಗುವ ಅರಣ್ಯನಾಶವನ್ನು ತಡೆಗಟ್ಟುವ ಇತರ ಬೆಳೆಗಳೊಂದಿಗೆ ಸೆಣಬು ಕೂಡ ಒಂದು ಪ್ರಮುಖ ಬೆಳೆಯಾಗಿದೆ.

ಈ ಪ್ರಕಾರವಾಗಿ, ಸೆಣಬು ಬೀಜದಿಂದ ಹಿಡಿದು ಅವಧಿ ಮುಗಿದ ನಾರಿನ ತನಕವೂ ಅತ್ಯಂತ ಪರಿಸರ ಸ್ನೇಹಿ ನಾರಾಗಿದೆ. ಏಕೆಂದರೆ ಅವಧಿ ಮುಗಿದ ನಾರನ್ನು ಒಂದಕ್ಕಿಂತ ಹೆಚ್ಚು ಬಾರಿ ಪುನರ್ಬಳಕೆ ಮಾಡಬಹುದಾಗಿದೆ.

ಸೆಣಬನ್ನು ಗಿಲಿ ಸೂಟಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ಹುಲ್ಲು ಅಥವಾ ಪೊದೆಯನ್ನು ಹೋಲುವ ಇದನ್ನು ವೇಷವನ್ನು ಮರೆಮಾಚಲು ಬಳಸಲಾಗುತ್ತದೆ.

ಸೆಣಬಿನ ಮತ್ತೊಂದು ರೂಪವೆಂದರೆ ಜಿಯೋಟೆಕ್ಸ್ಟೈಲ್ಸ್. ಇದು ಕೃಷಿ ಕ್ಷೇತ್ರದಲ್ಲಿ ಕೃಷಿ ವಸ್ತುಗಳನ್ನು ಅತ್ಯಂತ ಜನಪ್ರಿಯಗೊಳಿಸಿತು. ನೈಸರ್ಗಿಕ ನಾರಿನಿಂದ ನೇಯಲಾದ ಈ ತೆಳು ಬಟ್ಟೆಯನ್ನು ಭೂಮಿಯ ಕೊರೆತದ ರಕ್ಷಣೆಗೆ, ಬೆಳೆಯ ಸಂರಕ್ಷಣೆಗೆ, ಕಳೆ ನಿಯಂತ್ರಣಕ್ಕೆ ಹಾಗು ಇತರ ಹಲವು ಕೃಷಿ ಹಾಗು ಭೂದೃಶ್ಯ ವಿನ್ಯಾಸಕ್ಕೆ ಬಳಸಲಾಗುತ್ತದೆ. ಈ ಜಿಯೋಟೆಕ್ಸ್ಟೈಲ್ಸ್ ನ್ನು ಒಂದು ವರ್ಷಕ್ಕೂ ಹೆಚ್ಚಿಗೆ ಬಳಸಬಹುದು ಹಾಗು ಜೈವಿಕ-ವಿಘಟನೀಯತೆ ಹೊಂದಿದ ಸೆಣಬನ್ನು ನೆಲದ ಮೇಲೆ ಕೊಳೆಯಿಸಲು ಬಿಡಲಾಗುವುದರಿಂದ ಇದು ಭೂಮಿಯನ್ನು ತಂಪಾಗಿಸುತ್ತದೆ ಹೆಚ್ಚಿನ ಫಲವತ್ತತೆಗೊಳಿಸುವಲ್ಲಿ ಸಮರ್ಥವಾಗಿದೆ. ಈ ರೀತಿಯಾದ ವಿಧಾನವನ್ನು ಬಳಸಿಕೊಂಡು ಗಂಗಾನದಿ ಮುಖಜಭೂಮಿಯ ಫಲವತ್ತತೆಯನ್ನು ಸಹರಾ ಅಥವಾ ಆಸ್ಟ್ರೇಲಿಯದ ಮರುಭೂಮಿಗಳಿಗೆ ವರ್ಗಾವಣೆ ಮಾಡಬಹುದು.[ಸೂಕ್ತ ಉಲ್ಲೇಖನ ಬೇಕು]

ಸೆಣಬಿನ ಎಲೆಗಳನ್ನು ವಿಶ್ವದ ಹಲವು ಭಾಗಗಳಲ್ಲಿ ಸೇವಿಸಲಾಗುತ್ತದೆ. ಪಶ್ಚಿಮ ಆಫ್ರಿಕಾದಲ್ಲಿ ಇದೊಂದು ಜನಪ್ರಿಯ ತರಕಾರಿ. ನೈಜೀರಿಯಯಾರುಬ ಗಳು ಇದನ್ನು "ಎವೆಡು" ಎಂದು ಕರೆದರೆ ಮಾಲಿಸೊಂಘಯ್‌ಗಳು "ಫಾಕೊಯ್" ಎಂದು ಕರೆಯುತ್ತಾರೆ. ಇದನ್ನು ಒಂದು ಸಾಮಾನ್ಯವಾದ ಅಂಟಿನ(ಸ್ವಲ್ಪ "ಲೋಳೆಯಾದ")ಸೂಪ್ ಅಥವಾ ಸಾಸ್ ಆಗಿ ಕೆಲವು ಪಶ್ಚಿಮ ಆಫ್ರಿಕಾದ ಪಾಕ ಸಂಪ್ರದಾಯಗಳಲ್ಲಿ ಹಾಗು ಈಜಿಪ್ಟ್ ನಲ್ಲಿ ಬಳಸಲಾಗುತ್ತದೆ. ಈಜಿಪ್ಟ್ ನಲ್ಲಿ ಇದನ್ನು ಮುಲುಖಿಯ್ಯ ಎಂದು ಕರೆಯಲಾಗುತ್ತದೆ ಹಾಗು ಇದನ್ನು ರಾಷ್ಟ್ರೀಯ ಖಾದ್ಯ ವೆಂದು ಪರಿಗಣಿಸಲಾಗಿದೆ. ಫಿಲಿಫೈನ್ಸ್‌ನ ಉತ್ತರ ಪ್ರಾಂತದಲ್ಲಿ ಇದೊಂದು ಜನಪ್ರಿಯ ಖಾದ್ಯ, ಅಲ್ಲಿ ಇದು ಸಲುಯೋಟ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಸೆಣಬಿನ ಎಲೆಗಳನ್ನು ಪಶ್ಚಿಮ ಕೀನ್ಯದ ಲುಯ್ಹಿಯ ಜನರು ಸಹ ಸೇವಿಸುತ್ತಾರೆ, ಇದು ಅಲ್ಲಿ 'ಮ್ರೆನ್ಡ' ಅಥವಾ 'ಮುರೆರೆ' ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಕೀನ್ಯಾದ ಹಲವು ಸಮುದಾಯಗಳ ಮುಖ್ಯ ಆಹಾರವಾದ 'ಉಗಲಿ' ಜೊತೆಗೆ ಸೇವಿಸಲಾಗುತ್ತದೆ. ಈ ಎಲೆಗಳುಬೀಟಕೆರೋಟಿನ್, ಕಬ್ಬಿಣ, ಕ್ಯಾಲ್ಷಿಯಂ, ಹಾಗು ವಿಟಮಿನ್ Cಯಿಂದ ಸಮೃದ್ಧವಾಗಿದೆ. ಈ ಸಸ್ಯವು ಆಂಟಿಆಕ್ಸಿಡೆಂಟ್ ಚಟುವಟಿಕೆ ಹೊಂದಿರುವ ಜತೆಗೆ ವಿಟಮಿನ್ Eಗೆ ಸಮಾನವಾದ ಪರಿಣಾಮಕಾರಿ α-ಟೋಕೋಫೆರೋಲ್ ಅನ್ನು ಹೊಂದಿದೆ.

ಸೆಣಬಿನ ನಾನಾರೂಪದ ಉಪವಸ್ತುಗಳನ್ನು ಪ್ರಸಾಧನ ಸಾಮಗ್ರಿಗಳಾಗಿ, ಔಷಧವಾಗಿ, ಬಣ್ಣಗಳಾಗಿ, ಹಾಗು ಇತರ ಉತ್ಪನ್ನಗಳಲ್ಲಿ ಬಳಸಬಹುದಾಗಿದೆ.

ವೈಶಿಷ್ಟ್ಯಗಳು

[ಬದಲಾಯಿಸಿ]
ಉದ್ದದ ಸೆಣಬಿನ ನಾರಿನ ಕೆಳಭಾಗವನ್ನು ಕತ್ತರಿಸುತ್ತಿರುವ ಚಿತ್ರ.ಕೆಳಭಾಗವು ಕಠಿಣ ನಾರಾಗಿದೆ, ಇದನ್ನು ಬಾಂಗ್ಲಾದೇಶ ಹಾಗು ಭಾರತದಲ್ಲಿ ಸೆಣಬು ತುಂಡುಗಳು ಎಂದು ಕರೆಯಲಾಗುತ್ತದೆ(ಬೇರೆಕಡೆಗಳಲ್ಲಿ ಇದನ್ನು ಸಾಮಾನ್ಯವಾಗಿ ಸೆಣಬಿನ ಬುಡಗಳು ಅಥವಾ ಸೆಣಬಿನ ಮೇಲ್ಭಾಗ ಎಂದು ಕರೆಯಲಾಗುತ್ತದೆ). ಕತ್ತರಿಸಿದ ಸೆಣಬುಗಳು ಕಡಿಮೆ ಗುಣಮಟ್ಟವನ್ನು ಹೊಂದಿರುತ್ತವೆ, ಆದರೆ ಪೇಪರ್, ನೂಲುಹುರಿ, ಹಾಗು ಇತರ ನಾರು ಸಂಸ್ಕರಣಾ ಕೈಗಾರಿಕೆಗಳಲ್ಲಿ ವಾಣಿಜ್ಯ ಮೌಲ್ಯವನ್ನು ಹೊಂದಿದೆ. ಬಾಂಗ್ಲಾದೇಶದ ಮಳಿಗೆಯಲ್ಲಿ ಸೆಣಬಿನ ನಾರುಗಳನ್ನು ಮೂಟೆಗಳಲ್ಲಿ ಸಂಗ್ರಹಿಸಿರುವುದು ಹಿನ್ನೆಲೆಚಿತ್ರದಲ್ಲಿ ಕಾಣಬಹುದು.
  • ಸೆಣಬಿನ ನಾರು ೧೦೦%ನಷ್ಟು ಜೈವಿಕ ವಿಘಟನೀಯವಾಗಿದೆ ಹಾಗು ಮರುಬಳಕೆ ಮಾಡಬಹುದಾಗಿರುವುದರಿಂದ ಪರಿಸರ ಸ್ನೇಹಿಯಾಗಿದೆ.
  • ಇದೊಂದು ಹೊಂಬಣ್ಣ ಹಾಗು ರೇಷ್ಮೆ ಹೊಳಪನ್ನು ಹೊಂದಿರುವ ನೈಸರ್ಗಿಕ ನಾರು. ಹೀಗಾಗಿ ಇದನ್ನು ದಿ ಗೋಲ್ಡನ್ ಫೈಬರ್ ಎಂದು ಕರೆಯಲಾಗಿದೆ.
  • ಇದು ಸಸ್ಯದ ಕಾಂಡದಿಂದ ಅಥವಾ ತೊಗಟೆಯಿಂದ ಸಂಗ್ರಹಿಸುವ ಅತೀ ಅಗ್ಗದ ಸಸ್ಯದ ನಾರು.
  • ಹತ್ತಿಯ ನಂತರ ಬಳಕೆಯಲ್ಲಿ, ವಿಶ್ವವ್ಯಾಪಕ ಉಪಭೋಗದಲ್ಲಿ, ಉತ್ಪಾದನೆಯಲ್ಲಿ ಹಾಗು ಲಭ್ಯತೆಯಲ್ಲಿ ಎರಡನೇ ಪ್ರಮುಖ ಸಸ್ಯದ ನಾರು ಇದಾಗಿದೆ.
  • ಇದು ಹೆಚ್ಚಿನ ಕರ್ಷಕ ಬಲವನ್ನು ಹೊಂದಿದೆ, ಕಡಿಮೆ ವಿಸ್ತರಣೀಯತೆ ಯನ್ನು ಹಾಗು ನೇಯ್ಗೆಗಳ ಉತ್ತಮ ಜಲನಿರೋಧಕಗುಣದ ಬಗ್ಗೆ ಭರವಸೆ ನೀಡುತ್ತದೆ. ಹೀಗಾಗಿ, ಸೆಣಬು ಕೃಷಿ ಪದಾರ್ಥಗಳ ದೊಡ್ಡ ಗಾತ್ರದ ಪ್ಯಾಕೇಜಿಂಗ್‌ಗೆ ಬಹಳ ಸೂಕ್ತವಾಗಿದೆ.
  • ಇದು ಉತ್ತಮ ಮಟ್ಟದ ಕೈಗಾರಿಕಾ ನೂಲುಹುರಿ, ವಸ್ತ್ರ, ಬಲೆ, ಹಾಗು ಚೀಲಗಳನ್ನು ತಯಾರಿಸುವಲ್ಲಿ ಸಹಾಯಕವಾಗಿದೆ. ಇಂತಹ ಅತ್ಯಂತ ಬಹುಪಯೋಗಿ ನೈಸರ್ಗಿಕ ನಾರನ್ನು ಕಚ್ಚಾ ವಸ್ತುಗಳನ್ನು ಪ್ಯಾಕ್ ಮಾಡಲು, ವಸ್ತ್ರೋದ್ಯಮದಲ್ಲಿ, ವಸ್ತ್ರಗಳಲ್ಲದೆ, ನಿರ್ಮಾಣದಲ್ಲಿ, ಹಾಗು ಕೃಷಿ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ನೂಲುಹುರಿ ಯ ದೊಡ್ಡ ಪ್ರಮಾಣವು ಸತತವಾಗಿ ಹರಿದುಹೋಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗು ಮೂರು ಸುತ್ತಿನಲ್ಲಿ ಸಂಯೋಜಿಸಿದಾಗ ಮುರಿಯುವ ವಿಸ್ತರಣೀಯತೆ ಹೆಚ್ಚುತ್ತದೆ.
  • ಹೆಂಪ್ ನಾರಿನಂತೆ, ಸೆಣಬು ಕ್ಯಾನಬಿಸ್ ನ ಒಂದು ರೂಪವಲ್ಲ.
  • ಜಗತ್ತಿನಲ್ಲಿ ಸೆಣಬಿನ ಅತ್ಯುತ್ತಮ ಮೂಲವೆಂದರೆ ಗಂಗಾನದಿಯ ಮುಖಜಭೂಮಿಯಲ್ಲಿ ಬಂಗಾಳ ಡೆಲ್ಟಾ ಬಯಲು ಪ್ರದೇಶ, ಇದನ್ನು ಹೆಚ್ಚಾಗಿ ಬಾಂಗ್ಲಾದೇಶ ಆವರಿಸಿಕೊಂಡಿದೆ.
  • ಸೆಣಬು ಒಳ್ಳೆಯ ನಿರೋಧಕವಾಗಿ ಹಾಗು ಪ್ರತಿಸ್ಥಾಯಿ ಗುಣಗಳನ್ನು ಹಾಗು ಕಡಿಮೆ ಉಷ್ಣ ವಾಹಕತೆ ಯನ್ನು ಹಾಗು ಒಂದು ಮಧ್ಯಮ ಮಟ್ಟದಲ್ಲಿ ತೇವವನ್ನು ಉಳಿಸಿಕೊಳ್ಳುವ ಅನುಕೂಲಗಳನ್ನು ಹೊಂದಿರುತ್ತದೆ. ಸೆಣಬಿನ ಇತರ ಅನುಕೂಲಗಳೆಂದರೆ ಶಬ್ದ ನಿರೋಧಕ ಗುಣಗಳನ್ನು ಹೊಂದಿರುವುದು ಹಾಗು ಚರ್ಮಕ್ಕೆ ಯಾವುದೇ ಉಪದ್ರವ ಗಳನ್ನು ನೀಡದೆ ತಯಾರಿಸಬಹುದಾಗಿದೆ.
  • ಸೆಣಬು ಸಂಶ್ಲೇಷಿತ ಹಾಗು ನೈಸರ್ಗಿಕವಾಗಿ ಎರಡೂ ತರದಲ್ಲಿ ಇತರ ನಾರುಗಳ ಜೊತೆಗೆ ಸಂಯೋಜನೆ ಹೊಂದುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದರ ಜೊತೆಗೆ ಸೆಲ್ಯೂಲೋಸ್ ವಸ್ತುಗಳಿಂದ ತಯಾರಿಸಿದ ವರ್ಣದ್ರವ್ಯಗಳ ವರ್ಗಗಳಾದ ನೈಸರ್ಗಿಕ, ಪ್ರತ್ಯಾಮ್ಲೀಯ ರಂಗು, ವ್ಯಾಟ್ (ರಂಗಿನ ನೀರು ತುಂಬಿದ ತೊಟ್ಟಿಯಲ್ಲಿ ಮುಳುಗಿಸಿದ), ಗಂಧಕ, ಪ್ರತಿಕ್ರಿಯಾಶೀಲ, ಹಾಗು ಬಣ್ಣ ಹಾಕಿದ ವರ್ಣದ್ರವ್ಯ ಗಳ ಜೊತೆ ಸಂಯೋಜನೆ ಹೊಂದುತ್ತದೆ. ನೈಸರ್ಗಿಕವಾಗಿ ಆರಾಮ ನೀಡುವ ನಾರುಗಳಿಗೆ ಬೇಡಿಕೆ ಹೆಚ್ಚಾದಂತೆ, ಹತ್ತಿಯೊಂದಿಗೆ ಸಂಯೋಜಿಸಲಾದ ಸೆಣಬು ಹಾಗು ಇತರ ನೈಸರ್ಗಿಕ ನಾರುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಈ ಬೇಡಿಕೆಯನ್ನು ಪೂರೈಸುವ ಸಲುವಾಗಿ, ನೈಸರ್ಗಿಕ ನಾರಿನ ಉದ್ಯಮವು ಸಂಸ್ಕರಣೆಯನ್ನು ಆಧುನಿಕಗೊಳಿಸುವ ಸಲುವಾಗಿ ರೈಟರ್'ಸ್ಎಲಿಟೆಕ್ಸ್ ವ್ಯವಸ್ಥೆಯನ್ನು ಆರಿಸಿಕೊಳ್ಳಬಹುದೆಂದು ಸೂಚಿಸಲಾಗಿದೆ. ಪರಿಣಾಮವಾಗಿ ಸೆಣಬು/ಹತ್ತಿಯ ನೂಲುಹುರಿಗಳು ತೇವ ಸಂಸ್ಕರಣಾ ವಿಧಾನಗಳಿಂದ ಕಡಿಮೆ ವೆಚ್ಚದಲ್ಲಿ ಬಟ್ಟೆಗಳನ್ನು ಉತ್ಪಾದಿಸಬಹುದಾಗಿದೆ. ಸೆಣಬನ್ನು ಉಣ್ಣೆಯ ಜೊತೆಗೂ ಸಂಯೋಜಿಸಬಹುದಾಗಿದೆ. ಸೆಣಬನ್ನು ಕಾಸ್ಟಿಕ್ ಸೋಡಾ (ಸೋಡಿಯಂ ಹೈಡ್ರಾಕ್ಸೈಡ್) ಜೊತೆಗೆ ಸಂಸ್ಕರಿಸಿದಾಗ, ಗರಿಗರಿಯಾದ, ಮೃದುವಾದ, ನಮ್ಯತೆಯ ಹಾಗು ಬಟ್ಟೆಯ ನೋಟವು ಸುಧಾರಿಸುತ್ತದೆ. ಇವೆಲ್ಲವೂ ಉಣ್ಣೆಯೊಂದಿಗೆ ನೇಯ್ಗೆ ಮಾಡುವಲ್ಲಿ ಸಹಾಯಕವಾಗಿದೆ. ದ್ರವರೂಪದ ಅಮೋನಿಯ ಸಹ ಸೆಣಬಿನ ಮೇಲೆ ಇದೇ ರೀತಿಯ ಪರಿಣಾಮವನ್ನು ಬೀರುವುದರ ಜೊತೆಗೆ ಜ್ವಾಲೆ-ನಿರೋಧಕ ಅಂಶಗಳೊಂದಿಗೆ ಸಂಸ್ಕರಿಸಿದಾಗ ಜ್ವಾಲೆಯ ನಿರೋಧ ಶಕ್ತಿಯು ಸುಧಾರಿಸುವುದು ಸಹ ಒಂದು ಹೆಚ್ಚಿದ ವೈಶಿಷ್ಟ್ಯವಾಗಿದೆ.
  • ಕೆಲವು ಗಮನಿಸಬೇಕಾದ ಅನನುಕೂಲಗಳಲ್ಲಿ ಕಳಪೆಯಾಗಿ ತೂಗುಬಿಡುವುದು ಹಾಗು ಸುಕ್ಕಾಗುವುದನ್ನು ತಡೆಯದಿರುವುದು, ಭಂಗುರತೆ(ಸುಲಭವಾಗಿ ಹರಿಯುವ ಲಕ್ಷಣ) ನಾರಿನ ಉದುರುವಿಕೆ, ಹಾಗು ಸೂರ್ಯನ ಕಿರಣಗಳಿಗೆ ಹಳದಿ ಬಣ್ಣಕ್ಕೆ ತಿರುಗುವುದು. ಆದಾಗ್ಯೂ, ಬಟ್ಟೆಗಳನ್ನು ಹರಳೆಣ್ಣೆ ಯಂತಹ ಲೂಬ್ರಿಕೆಂಟ್(ಸುಲಭವಾಗಿ ಜಾರುವ ವಸ್ತು)ವನ್ನು ಬಳಸಿ ತಯಾರಿಸಿದರೆ, ಅದು ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗುವುದನ್ನು ಕಡಿಮೆ ಮಾಡುತ್ತದೆ ಹಾಗು ಬಟ್ಟೆಗಳು ತೂಕ ಕಳೆದುಕೊಳ್ಳುವುದನ್ನು ಕಡಿಮೆ ಮಾಡುತ್ತದೆ, ಜೊತೆಗೆ ರಂಗು ಕಟ್ಟುವ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ. ಸೆಣಬು ತೇವಗೊಂಡಾಗ ಅದರ ಬಲವು ಕಡಿಮೆಯಾಗುತ್ತದೆ, ಜೊತೆಗೆ ಆರ್ದ್ರತೆಯ ವಾತಾವರಣದಲ್ಲಿ ಸೂಕ್ಷ್ಮಜೀವಿಯ ಆಕ್ರಮಣಕ್ಕೆ ಒಳಗಾಗುತ್ತದೆ. ಸೆಣಬಿನ ಭಂಗುರತೆ ಹಾಗು ಅನಮ್ಯತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲು ಅದನ್ನು ಒಂದು ಕಿಣ್ವದ ಜೊತೆ ಸಂಸ್ಕರಿಸಬಹುದಾಗಿದೆ. ಕಿಣ್ವದ ಜೊತೆಗೆ ಸಂಸ್ಕರಿಸಿದ ನಂತರ, ಸೆಣಬು ನೈಸರ್ಗಿಕ ವರ್ಣದ್ರವ್ಯಗಳನ್ನು ಕೂಡಲೇ ಸ್ವೀಕರಿಸುವ ಒಲವನ್ನು ತೋರುತ್ತವೆ. ಇದನ್ನು ಮ್ಯಾರಿಗೋಲ್ಡ್ (ಚೆಂಡುಮಲ್ಲಿಗೆ) ಹೂವಿನ ಸಾರದಿಂದ ಮಾಡಬಹುದಾಗಿದೆ. ಈ ಸಾರದಿಂದ ಸೆಣಬಿನ ಬಟ್ಟೆಗೆ ವರ್ಣದ್ರವ್ಯಗೊಳಿಸುವ ಒಂದು ಪ್ರಯತ್ನದಲ್ಲಿ, ಬಿಳುಪಾಗಿಸಿದ ಬಟ್ಟೆಯನ್ನು ಫೆರಸ್ ಸಲ್ಫೇಟ್ ನ ಜೊತೆಗೆ ಕ್ಷಾರಕಗೊಳಿಸಲಾಯಿತು, ಇದು ಬಟ್ಟೆಯ ವರ್ಣದ್ರವ್ಯದ ಮೌಲ್ಯವನ್ನು ಹೆಚ್ಚಿಸಿತು. ಸೆಣಬು ಪ್ರತಿಕ್ರಿಯಾಶೀಲ ವರ್ಣದ್ರವ್ಯ ಗಳಿಗೂ ಸಹ ಉತ್ತಮವಾಗಿ ಪ್ರತಿಕ್ರಯಿಸುತ್ತದೆ. ಈ ಪ್ರಕ್ರಿಯೆಯನ್ನು ಬೆಲೆ ಕೂಡಿಸಿದ ಸೆಣಬಿನ ನಾನಾ ಉತ್ಪನ್ನಗಳಲ್ಲಿ ಉಜ್ವಲವಾಗಿ ಹಾಗು ವೇಗವಾಗಿ ಬಣ್ಣ ಬರುವಂತೆ ಮಾಡಲು ಬಳಸಲಾಗುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]

]]

ಆಕರಗಳು

[ಬದಲಾಯಿಸಿ]
  1. BBC.co.uk
  2. ೨.೦ ೨.೧ ಸೆಣಬು. (IJSG) Archived 2008-05-26 ವೇಬ್ಯಾಕ್ ಮೆಷಿನ್ ನಲ್ಲಿ.. ೧೩ ಜೂನ್ ೨೦೦೭ರಲ್ಲಿ ಮರುಸಂಕಲನಗೊಂಡಿದೆ.
  3. ದಿ ಗೋಲ್ಡನ್ ಫೈಬರ್ ಟ್ರೇಡ್ ಸೆಂಟರ್ ಲಿಮಿಟೆಡ್. (GFTCL) - ಆರ್ಟಿಕಲ್ಸ್ & ಇನ್ಫಾರ್ಮೇಶನ್ ಆನ್ ಜೂಟ್, ಕೆನ್ಯಾಫ್, & ರೋಸೆಲ್ಲೇ ಹೆಂಪ್.


ಟಿಪ್ಪಣಿಗಳು

[ಬದಲಾಯಿಸಿ]
  • ಬಸು, G., A. K. ಸಿನ್ಹಾ, ಹಾಗು S. N. ಚಟ್ಟೋಪಾಧ್ಯಾಯ್. "ಪ್ರಾಪರ್ಟೀಸ್ ಆಫ್ ಜೂಟ್ ಬೇಸ್ಡ್ ಟರ್ನರಿ ಬ್ಲೆನ್ಡೆಡ್ ಬಲ್ಕ್ಡ್ ಯಾರ್ನ್ಸ್". ಮ್ಯಾನ್-ಮೇಡ್ ಟೆಕ್ಸ್ಟೈಲ್ಸ್ ಇನ್ ಇಂಡಿಯಾ . ಸಂಪುಟ. 48, ನಂ. 9 (ಸೆಪ್. 2005): 350–353. (AN 18605324)
  • ಚಟ್ಟೋಪಾಧ್ಯಾಯ್, S. N., N. C. ಪಾನ್, and A. ಡೇ. "ಏ ನಾವೆಲ್ ಪ್ರೋಸೆಸ್ಸ್ ಆಫ್ ಡೈಯಿಂಗ್ ಆಫ್ ಜೂಟ್ ಫ್ಯಾಬ್ರಿಕ್ ಯೂಸಿಂಗ್ ರಿಯಾಕ್ಟಿವ್ ಡೈ". ಟೆಕ್ಸ್ಟೈಲ್ ಇಂಡಸ್ಟ್ರಿ ಆಫ್ ಇಂಡಿಯಾ . ಸಂಪುಟ. 42, ನಂ. 9 (ಸೆಪ್. 2004): 15–22. (AN 17093709)
  • ದೊರೈಸ್ವಾಮಿ, I., A. ಬಸು, ಹಾಗು K. P. ಚೆಲ್ಲಮಣಿ. "ಡೆವಲಪ್ಮೆಂಟ್ ಆಫ್ ಫೈನ್ ಕ್ವಾಲಿಟಿ ಜೂಟ್ ಫೈಬರ್ಸ್". ಕಲರೆಜ್ . ನವೆ. 6–8, 1998, 2p. (AN TDH0624047199903296)
  • ಕೊಜ್ಲೋಸ್ಕಿ, R., ಹಾಗು S. ಮನ್ಯಸ್. "ಗ್ರೀನ್ ಫೈಬರ್ಸ್". ದಿ ಟೆಕ್ಸ್ಟೈಲ್ ಇನ್ಸ್ಟಿಟ್ಯೂಟ್. ಟೆಕ್ಸ್ಟೈಲ್ ಇಂಡಸ್ಟ್ರಿ: ವಿನ್ನಿಂಗ್ ಸ್ಟ್ರಾಟೆಜೀಸ್ ಫಾರ್ ದಿ ನ್ಯೂ ಮಿಲ್ಲೆನಿಯಂ-ಪೇಪರ್ಸ್ ಪ್ರೆಸೆನ್ಟೆಡ್ ಅಟ್ ದಿ ವರ್ಲ್ಡ್ ಕಾನ್ಫರೆನ್ಸ್ . ಫೆಬ್. 10–13, 1999: 29 (13p). (AN TDH0646343200106392)
  • ಮಧು, T. "ಬಯೋ-ಕಾಂಪೋಸಿಟ್ಸ್—ಆನ್ ಓವರ್ವ್ಯೂ" ಟೆಕ್ಸ್ಟೈಲ್ ಮ್ಯಾಗಜಿನ್ . ಸಂಪುಟ. 43, ನಂ. 8 (ಜೂ. 2002): 49 (2 pp). (AN TDH0656367200206816)
  • ಮೌಲಿಕ್, S. R. "ಕೆಮಿಕಲ್ ಮಾಡಿಫಿಕೇಶನ್ ಆಫ್ ಜೂಟ್". ಏಶಿಯನ್ ಟೆಕ್ಸ್ಟೈಲ್ ಜರ್ನಲ್ . ಸಂಪುಟ. 10, ನಂ. 7 (ಜು. 2001): 99 (8 pp). (AN TDH0648424200108473)
  • ಮೋಸೆಸ್, J. ಜೆಯಕೋಡಿ, ಹಾಗು M. ರಾಮಸಾಮಿ. "ಕ್ವಾಲಿಟಿ ಇಂಪ್ರೂವ್ಮೆಂಟ್ ಆನ್ ಜೂಟ್ ಅಂಡ್ ಜೂಟ್ ಕಾಟನ್ ಮೆಟಿರಿಯಲ್ಸ್ ಯೂಸಿಂಗ್ ಎನ್ಜೈಮ್ ಟ್ರೀಟ್ಮೆಂಟ್ ಅಂಡ್ ನ್ಯಾಚುರಲ್ ಡೈಯಿಂಗ್". ಮ್ಯಾನ್-ಮೇಡ್ ಟೆಕ್ಸ್ಟೈಲ್ಸ್ ಇನ್ ಇಂಡಿಯಾ . ಸಂಪುಟ. 47, ನಂ. 7 (ಜು. 2004): 252–255. (AN 14075527)
  • ಪಾನ್, N. C., S. N. ಚಟ್ಟೋಪಾಧ್ಯಾಯ್, ಹಾಗು A. ಡೇ. "ಡೈಯಿಂಗ್ ಆಫ್ ಜೂಟ್ ಫ್ಯಾಬ್ರಿಕ್ ವಿಥ್ ನ್ಯಾಚುರಲ್ ಡೈ ಎಕ್ಸ್ಟ್ರಾಕ್ಟೆಡ್ ಫ್ರಮ್ ಮ್ಯಾರಿ ಗೋಲ್ಡ್ ಫ್ಲವರ್". ಏಶಿಯನ್ ಟೆಕ್ಸ್ಟೈಲ್ ಜರ್ನಲ್ . ಸಂಪುಟ. 13, ನಂ. 7 (ಜು. 2004): 80–82. (AN 15081016)
  • ಪಾನ್, N. C., A. ಡೇ, ಹಾಗು K. K. ಮಹಾಲ್ನೋಬಿಸ್. "ಪ್ರಾಪರ್ಟೀಸ್ ಆಫ್ ಜೂಟ್". ಇಂಡಿಯನ್ ಟೆಕ್ಸ್ಟೈಲ್ ಜರ್ನಲ್ . ಸಂಪುಟ. 110, ನಂ. 5 (ಫೆಬ್. 2000): 16. (AN TDH0635236200004885)
  • ರಾಯ್, T. K. G., S. K. ಚ್ಯಾಟರ್ಜಿ, and B. D. ಗುಪ್ತಾ. "ಕಂಪ್ಯಾರಿಟಿವ್ ಸ್ಟಡೀಸ್ ಆನ್ ಬ್ಲೀಚಿಂಗ್ ಅಂಡ್ ಡೈಯಿಂಗ್ ಆಫ್ ಜೂಟ್ ಆಫ್ಟರ್ ಪ್ರಾಸೆಸ್ಸಿಂಗ್ ವಿಥ್ ಮಿನರಲ್ ಆಯಿಲ್ ಇನ್ ವಾಟರ್ ಎಮಲ್ಶನ್ ವಿಸ್-ಅ-ವಿಸ್ ಸೆಲ್ಫ್-ಎಮಲ್ಸಿಫಿಯಬಲ್ ಕ್ಯಾಸ್ಟರ್ ಆಯಿಲ್". ಕಲರೆಜ್ . ಸಂಪುಟ. 49, ನಂ. 8 (ಆಗಸ್ಟ್ 2002): 27 (5 pp). (AN TDH0657901200208350)
  • ಶೆಣೈ, V. A. "ಎನ್ಜೈಮ್ ಟ್ರೀಟ್ಮೆಂಟ್". ಇಂಡಿಯನ್ ಟೆಕ್ಸ್ಟೈಲ್ ಜರ್ನಲ್ . ಸಂಪುಟ. 114, ನಂ. 2 (ನವೆಂ. 2003): 112–113. (AN 13153355)
  • ಶ್ರೀನಿವಾಸನ್, J., A. ವೆಂಕಟಾಚಲಂ, ಹಾಗು P. ರಾಧಾಕೃಷ್ಣನ್. "ಸ್ಮಾಲ್-ಸ್ಕೇಲ್ ಜೂಟ್ ಸ್ಪಿನ್ನಿಂಗ್: ಆನ್ ಅನಾಲಿಸಿಸ್". ಟೆಕ್ಸ್ಟೈಲ್ ಮ್ಯಾಗಜಿನ್ . ಸಂಪುಟ. 40, ನಂ. 4 (ಫೆಬ್. 1999): 29. (ANTDH0624005199903254)
  • ವಿಜಯಕುಮಾರ್, K. A., ಹಾಗು P. R. ರಾಜೇಂದ್ರ. "ಏ ನ್ಯೂ ಮೆಥಡ್ ಟು ಡಿಟರ್ಮೈನ್ ದಿ ಪ್ರಪೋರ್ಶನ್ ಆಫ್ ಜೂಟ್ ಇನ್ ಏ ಜೂಟ್/ಕಾಟನ್ ಬ್ಲೆಂಡ್". ಏಶಿಯನ್ ಟೆಕ್ಸ್ಟೈಲ್ ಜರ್ನಲ್ , ಸಂಪುಟ. 14, ನಂ. 5 (ಮೇ 2005): 70-72. (AN 18137355)

ಹೊರಗಿನ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಸೆಣಬು&oldid=1227085" ಇಂದ ಪಡೆಯಲ್ಪಟ್ಟಿದೆ