ಬಿಸಿಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೋಡಗಳ ಮೂಲಕ ಬಿಸಿಲು ಬೀಳುತ್ತಿರುವುದು

ಬಿಸಿಲು ಎಂದರೆ ಸೂರ್ಯನು ಹೊರಸೂಸಿದ ವಿದ್ಯುತ್ಕಾಂತೀಯ ವಿಕಿರಣದ ಒಂದು ಭಾಗ, ವಿಶೇಷವಾಗಿ ಅತಿಗೆಂಪು, ಗೋಚರ ಮತ್ತು ನೇರಳಾತೀತ ಬೆಳಕು. ಭೂಮಿಯ ಮೇಲೆ, ಬಿಸಿಲು ವಾತಾವರಣದ ಮೂಲಕ ಸೋಸಲ್ಪಡುತ್ತದೆ, ಮತ್ತು ಸೂರ್ಯನು ದಿಗಂತದ ಮೇಲಿದ್ದಾಗ ಸೂರ್ಯಪ್ರಕಾಶವಾಗಿ ಪ್ರಕಟವಾಗುತ್ತದೆ. ನೇರ ಸೌರ ವಿಕಿರಣವು ಮೋಡಗಳಿಂದ ಪ್ರತಿಬಂಧಗೊಳ್ಳದಿದ್ದಾಗ, ಅದು ಬಿಸಿಲಾಗಿ ಅನುಭವಿಸಲ್ಪಡುತ್ತದೆ. ಬಿಸಿಲು ಎಂದರೆ ಪ್ರಕಾಶಮಾನ ಬೆಳಕು ಮತ್ತು ವಿಕಿರಣ ಶಾಖದ ಸಂಯೋಜನೆ. ಮೋಡಗಳು ಇದನ್ನು ಪ್ರತಿಬಂಧಿಸಿದಾಗ ಅಥವಾ ಇದು ಇತರ ವಸ್ತುಗಳಿಂದ ಪ್ರತಿಫಲಿತವಾದಾಗ ಚದುರಿದ ಬೆಳಕಾಗಿ ಅನುಭವಿಸಲ್ಪಡುತ್ತದೆ. ಒಂದು ಪ್ರದೇಶವು ಸೂರ್ಯನಿಂದ ಚದರ ಮೀಟರ್‍ಗೆ ಕನಿಷ್ಠಪಕ್ಷ ೧೨೦ ವಾಟ್ ನೇರ ಉಜ್ಜ್ವಲತೆಯನ್ನು ಪಡೆಯುವ ಸಂಚಿತ ಸಮಯ ಎಂಬ ಅರ್ಥಸೂಚಿಸಲು ಬಿಸಿಲಿನ ಅವಧಿ ಪದವನ್ನು ವಿಶ್ವ ಪವನಶಾಸ್ತ್ರ ಸಂಸ್ಥೆಯು ಬಳಸುತ್ತದೆ.[೧]

ಬಿಸಿಲಿನಲ್ಲಿನ ನೇರಳಾತೀತ ವಿಕಿರಣವು ಸಕಾರಾತ್ಮಕ ಮತ್ತು ನಕಾರಾತ್ಮಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆ, ಏಕೆಂದರೆ ಇದು ವಿಟಮಿನ್ ಡಿಥ್ರೀ ಮತ್ತು ಒಂದು ವಿಕೃತಿಕಾರಿಯ ಪ್ರಧಾನ ಮೂಲವಾಗಿದೆ. ಸೂರ್ಯನ ಮೇಲ್ಮೈಯಿಂದ ಭೂಮಿಯನ್ನು ತಲುಪಲು ಬಿಸಿಲು ಸುಮಾರು ೮.೩ ನಿಮಿಷ ತೆಗೆದುಕೊಳ್ಳುತ್ತದೆ. ಸೂರ್ಯನ ಕೇಂದ್ರದಿಂದ ಆರಂಭಗೊಳ್ಳುವ ಮತ್ತು ಆವೇಶಹೊಂದಿದ ಕಣವು ಎದುರಾದ ಪ್ರತಿ ಬಾರಿಯೂ ದಿಕ್ಕು ಬದಲಾಯಿಸುವ ಒಂದು ಫ಼ೋಟಾನ್ ಮೇಲ್ಮೈ ಮುಟ್ಟಲು ೧೦,೦೦೦ ರಿಂದ ೧೭೦,೦೦೦ ವರ್ಷಗಳು ತೆಗೆದುಕೊಳ್ಳುವುದು. ಸಸ್ಯಗಳು ಮತ್ತು ಇತರ ಸ್ವಪೋಷಕ ಜೀವಿಗಳು ಬೆಳಕಿನ ಶಕ್ತಿಯನ್ನು ಜೀವಿಗಳ ಚಟುವಟಿಕೆಗಳಿಗೆ ಬಲ ಒದಗಿಸಲು ಬಳಸಲ್ಪಡಬಹುದಾದ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸಲು ಬಳಸುವ ಪ್ರಕ್ರಿಯೆಯಾದ ದ್ಯುತಿಸಂಶ್ಲೇಷಣೆಯಲ್ಲಿ ಬಿಸಿಲು ಒಂದು ಮುಖ್ಯ ಅಂಶವಾಗಿದೆ.

ಸೂರ್ಯನ ವಿಕಿರಣದ ವರ್ಣಪಟಲವು ಕೃಷ್ಣಕಾಯದ ವರ್ಣಪಟಲಕ್ಕೆ ಹತ್ತಿರವಾಗಿದೆ ಮತ್ತು ಸುಮಾರು ೫,೮೦೦ ಕೆಲ್ವಿನ್‍ನಷ್ಟು ಉಷ್ಣಾಂಶ ಹೊಂದಿದೆ. ಸೂರ್ಯವು ವಿದ್ಯುತ್ಕಾಂತೀಯ ವರ್ಣಪಟಲದ ಬಹುತೇಕ ಉದ್ದಕ್ಕೆ ವಿದ್ಯುತ್ಕಾಂತೀಯ ವಿಕಿರಣವನ್ನು ಹೊರಸೂಸುತ್ತದೆ. ಬೀಜಸಮ್ಮಿಳನ ಪ್ರಕ್ರಿಯೆಯ ಪರಿಣಾಮವಾಗಿ ಸೂರ್ಯವು ಗಾಮಾ ಕಿರಣಗಳನ್ನು ಉತ್ಪತ್ತಿ ಮಾಡುತ್ತದಾದರೂ, ಆಂತರಿಕ ಹೀರಿಕೆ ಮತ್ತು ಉಷ್ಣ ಪ್ರಕ್ರಿಯೆಯು ಅವು ಸೂರ್ಯನ ಮೇಲ್ಮೈಯನ್ನು ತಲುಪುವಷ್ಟರಲ್ಲಿ ಈ ಅತಿ ಹೆಚ್ಚು ಶಕ್ತಿಯ ಫ಼ೋಟಾನ್‍ಗಳನ್ನು ಕಡಿಮೆ ಶಕ್ತಿಯ ಫ಼ೋಟಾನ್‍ಗಳಾಗಿ ಪರಿವರ್ತಿಸುತ್ತವೆ ಮತ್ತು ಅವು ಬಾಹ್ಯಾಕಾಶದಲ್ಲಿ ಹೊರಸೂಸಲ್ಪಡುತ್ತವೆ.

ಉಲ್ಲೇಖಗಳು[ಬದಲಾಯಿಸಿ]

[೨] [೩] [೪]

  1. "Chapter 8 – Measurement of sunshine duration" (PDF). CIMO Guide. World Meteorological Organization. Retrieved 2008-12-01.
  2. https://kannada.oneindia.com/column/shreenidhi/2009/0310-wish-you-happy-summer.html
  3. https://kannada.boldsky.com/health/wellness/2018/foods-you-must-totally-avoid-during-the-summer-season-017069.html
  4. "ಆರ್ಕೈವ್ ನಕಲು". Archived from the original on 2019-06-01. Retrieved 2018-08-27.
"https://kn.wikipedia.org/w/index.php?title=ಬಿಸಿಲು&oldid=1118312" ಇಂದ ಪಡೆಯಲ್ಪಟ್ಟಿದೆ