ಕಾಮಕಸ್ತೂರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Basil
Basil-Basilico-Ocimum basilicum-albahaca.jpg
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Asteroids
ಗಣ: Lamiales
ಕುಟುಂಬ: Lamiaceae
ಕುಲ: Ocimum
ಪ್ರಭೇದ: O. basilicum
ದ್ವಿಪದ ಹೆಸರು
Ocimum basilicum
L.

ಸಂ: ಮುಂಜರಕಿ

ಹಿಂ: ಸಬ್‍ಜಾ, ಬೂಬಾಯ್

ಮ: ಸಬ್‍ಜಾ

ಗು: ಸಬ್‍ಜಾ

ತೆ: ಕರ್ಪೂರ ತುಲಸಿ

ತ: ಕಪೂರಂ ತಲಸಿ

ವರ್ಣನೆ[ಬದಲಾಯಿಸಿ]

ಮನೆಗಳ ಮುಂದೆ ಅಲಂಕಾರಕ್ಕಾಗಿ ಮತ್ತು ಸುವಾಸನೆಗಾಗಿ ಬೆಳೆಸುತ್ತಾರೆ. ಎಲೆಗಳು ಹಸಿರಾಗಿದ್ದು ಸ್ವಲ್ಪ ಅಗಲವಾಗಿರುತ್ತದೆ. ಇದರ ಎಲೆಗಳು ತುಳಸಿ ಎಲೆಗಳನ್ನು ಹೋಲುತ್ತವೆ ಮತ್ತು ಸ್ವಲ್ಪ ದೊಡ್ಡವಿರುತ್ತದೆ. ಇದರ ಹೂವುಗಳು ಬಿಳಿ ಮತ್ತು ಗುಲಾಬಿ ಬಣ್ಣಗಳನ್ನು ಹೊಂದಿರುತ್ತದೆ. ಹೂವು ಕಟ್ಟುವವರು ಇದನ್ನು ಹೂವಿನ ಮಧ್ಯೆ ಸೇರಿಸಿ ಹೂವನ್ನು ಕಟ್ಟುತ್ತಾರೆ. ಹೆಣ್ಣುಮಕ್ಕಳು ಇದನ್ನು ತಲೆಗೆ ಮುಡಿಯುತ್ತಾರೆ. ಕಾಮಕಸ್ತೂರಿಯ ತೆನೆಯು ಅತ್ಯಂತ ಸುವಾಸನೆಯಿಂದ ಕೂಡಿರುತ್ತದೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಮಲಬದ್ಧತೆ ಮತ್ತು ಮೂಲವ್ಯಾಧಿಗಳ ನಿವಾರಣೆಗೆ[ಬದಲಾಯಿಸಿ]

ಕಾಮಕಸ್ತೂರಿ ಬೀಜಗಳು ಗ್ರಂಧಿಗೆ ಅಂಗಡಿಗಳಲ್ಲಿ ನಮಗೆ ದೊರೆಯುತ್ತದೆ. ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ಶರೀರಕ್ಕೆ ತಂಪು ನೀಡುತ್ತವೆ. ಆದ್ದರಿಂದ ಮಲಬದ್ಧತೆ ಮತ್ತು ಮೂಲವ್ಯಾಧಿಗೆ ಉಪಯೋಗಕಾರಿಯಾಗಿದೆ.

ಗಂಟಲು ಬೇನೆ, ರಕ್ತ ಭೇದಿ ನಿವಾರಣೆಗೆ[ಬದಲಾಯಿಸಿ]

ಒಂದು ಟೀ ಚಮಚ ಕಾಮಕಸ್ತೂರಿ ನೀರಿನಲ್ಲಿ ನೆನೆಹಾಕಿದಾಗ ಅದು ನೆನೆದು ಲೋಳಿ ಸರದಂತೆ ಅಂಟು ಅಂಟಾಗಿ ಉಬ್ಬಿರುತ್ತವೆ. ಇದಕ್ಕೆ ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಸೇವಿಸುತ್ತಾರೆ. ಇದು ರಕ್ತ ಭೇದಿಗೆ ಉಪಯೋಗಕಾರಿ. ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ ಜೇನುತುಪ್ಪದಲ್ಲಿ ಬೆರೆಸಿ ನೆಕ್ಕಿದರೆ ಗಂಟಲು ಬೇನೆ ಗುಣಮುಖವಾಗುತ್ತದೆ.

ಗಂಟಲು ಬೇನೆ[ಬದಲಾಯಿಸಿ]

ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಬಟ್ಟೆಯಲ್ಲಿ ಶೋಧಿಸಿ, ಜೇನುತುಪ್ಪದಲ್ಲಿ ಬೆರೆಸಿ ನೆಕ್ಕುವುದು.

ಮೂಗಿನಿಂದ ನೀರು ಸುರಿಯುವುದು, ಶೀತ ಮತ್ತುಜ್ವರಕ್ಕೆ[ಬದಲಾಯಿಸಿ]

ಕಾಮಕಸ್ತೂರಿ ಎಲೆಗಳ ಕಷಾಯ ಮಾಡಿ 1/4 ಒಳಲೆ ಕಷಾಯಕ್ಕೆ ಸ್ವಲ್ಪಜೇನು ಸೇರಿಸಿ ಕುಡಿಸುವುದು.

ಅಜೀರ್ಣ ಮತ್ತು ಹೊಟ್ಟೆಯ ಬಾಧೆಗೆ[ಬದಲಾಯಿಸಿ]

ಕಾಮಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿಅರೆದು ಶೋಧಿಸಿ, ಸ್ವಲ್ಪಜೇನು ಕೂಡಿಸಿ ಸೇವಿಸುವುದು.ಒಂದು ವೇಳೆಗೆ ಅರ್ಧಟೀ ಚಮಚ ರಸ ಸಾಕಾಗುವುದು.

ಬೇಸಿಗೆಯಲ್ಲಿ ತಂಪಾದ ಶರಬತ್ತು- ಬಾಯಾರಿಕೆ ಶಮನಕ್ಕೆ[ಬದಲಾಯಿಸಿ]

ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಹಾಕಿ ಅದಕ್ಕೆ ಸಕ್ಕರೆ, ಸ್ವಲ್ಪ ಮಂಜುಗಡ್ಡೆ ಪುಡಿ ಬೆರೆಸಿ, ಅದಕ್ಕೆ ಸ್ವಲ್ಪ ಕೇಸರಿ ಬಣ್ಣ ಸೇರಿಸಿ ಶರಬತ್ತು ತಯಾರಿಸುತ್ತಾರೆ. ಇದರಿಂದ ಬಾಯರಿಕೆ ನಿವಾರಣೆಯಾಗುತ್ತದೆ. ಅಲ್ಲದೆ ಇದು ಶರೀರಕ್ಕೆ ತಂಪು ನೀಡುತ್ತವೆ.[೧]

ಉಲ್ಲೇಖ[ಬದಲಾಯಿಸಿ]

  1. ಅಪೂರ್ವ ಗಿಡಮೂಲಿಕೆಗಳು ಮತ್ತು ಸರಳ ಚಿಕಿತ್ಸೆಗಳು, ವೈದ್ಯ: ಎ. ಆರ್. ಎಂ. ಸಾಹೇಬ್ ನಿವೃತ್ತ ವಲಯಾರಣ್ಯಾಧಿಕಾರಿಗಳು, ಪ್ರಕಾಶಕರು:ದಿವ್ಯಚಂದ್ರ ಪ್ರಕಶನ, ಪುಟ ಸಂಖ್ಯೆ-೭೬