ಕೀವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣ್ಣಿನಿಂದ ಕೀವು ಬರುತ್ತಿರುವುದು

ಕೀವು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ಸೋಂಕಿನ ಅವಧಿಯಲ್ಲಿ ಉರಿಯೂತದ ಸ್ಥಳದಲ್ಲಿ ರೂಪಗೊಳ್ಳುವ, ಸಾಮಾನ್ಯವಾಗಿ ಶ್ವೇತಹಳದಿ, ಹಳದಿ, ಅಥವಾ ಹಳದಿ ಕಂದುಬಣ್ಣದ ಸ್ರಾವ.[೧] ಆವೃತ ಅಂಗಾಂಶ ಸ್ಥಳದಲ್ಲಿ ಕೀವಿನ ಶೇಖರಣೆಯನ್ನು ಕುರು ಎಂದು ಕರೆಯಲಾದರೆ, ಬಾಹ್ಯತ್ವಚೆಯ ಒಳಗೆ ಅಥವಾ ಕೆಳಗೆ ಕೀವಿನ ಕಾಣುವಂಥ ಸಂಗ್ರಹವನ್ನು ಬೊಕ್ಕೆ, ಮೊಡವೆ, ಅಥವಾ ಗುಳ್ಳೆ ಎಂದು ಕರೆಯಲಾಗುತ್ತದೆ. ಕೀವು ತೆಳುವಾದ, ಪ್ರೋಟೀನ್ ಯುಕ್ತ ದ್ರವವಾದ ಲಿಕರ್ ಪ್ಯೂರಿಸ್ ಮತ್ತು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯಿಂದ ಮೃತ ಬಿಳಿ ರಕ್ತ ಕಣಗಳನ್ನು (ಬಹುತೇಕವಾಗಿ ನ್ಯೂಟ್ರೊಫ಼ಿಲ್‍ಗಳು) ಹೊಂದಿರುತ್ತದೆ. ಸೋಂಕಿನ ಅವಧಿಯಲ್ಲಿ, ಬೃಹತ್ಕಣಗಳು ಸೈಟೊಕೀನ್‍ಗಳನ್ನು ಬಿಡುಗಡೆ ಮಾಡುತ್ತವೆ. ಇವು ರಾಸಾಯನಿಕ ಅನುಚಲನ ಕ್ರಿಯೆಯಿಂದ ಸೋಂಕಿನ ಸ್ಥಳವನ್ನು ಅರಸುವಂತೆ ನ್ಯೂಟ್ರೊಫ಼ಿಲ್‍ಗಳನ್ನು ಪ್ರಚೋದಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Pus – What Is Pus?". medicalnewstoday.com. Retrieved 2016-08-19.
"https://kn.wikipedia.org/w/index.php?title=ಕೀವು&oldid=888839" ಇಂದ ಪಡೆಯಲ್ಪಟ್ಟಿದೆ