ಚಕ್ಕೋತ
ಇದು ದೇವನಹಳ್ಳಿಯ ಹೆಸರುವಾಸಿ ಹಣ್ಣು. ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ[೧]. ದೊಡ್ದ ಹಣ್ಣುಗಳು ಬಾಚಣೆಗೆಯಂತಹ ದೊಡ್ದ ತೊಳೆಗಳನ್ನು ಒಳಗೊಂಡಿರುತ್ತದೆ.[೨] ಇದು ಒಗರು ಮತ್ತು ಸ್ವಲ್ಪ ಕಹಿಮಿಶ್ರಿತ ಹುಳಿಯ ರುಚಿ ಹೊಂದಿರುವುದರಿಂದ ಇದನ್ನು ಆಸ್ವಾದಿಸುವವರು ಕೆಲವರು ಮಾತ್ರ. ಆದುದರಿಂದ ಇದು ಪ್ರಪಂಚದಲ್ಲಿ ಜನಪ್ರಿಯ ಹಣ್ಣುಗಳ ಸಾಲಿಗೆ ಸೇರಿಲ್ಲ. ಈ ಹಣ್ಣಿನಲ್ಲಿ 'ಎ' 'ಬಿ' ಮತ್ತು 'ಸಿ' ಜೀವಸತ್ವಗಳು ಹೇರಳವಾಗಿವೆ.ಈ ಹಣ್ಣಿನ ಹೊರಸಿಪ್ಪೆ ತೆಗೆದು ತೊಳೆಗಳನ್ನು ಹಾಗೆಯೇ ಬಿಡಿಸಿ ತಿನ್ನುತ್ತಾರೆ.
ಮಣ್ಣು ಮತ್ತು ಹವಾಗುಣ
[ಬದಲಾಯಿಸಿ]ಇದಕ್ಕೆ ಇಂತಹುದೇ ಮಣ್ಣು[ಶಾಶ್ವತವಾಗಿ ಮಡಿದ ಕೊಂಡಿ] ಮತ್ತು ಹವಾಗುಣ ಬೇಕೆಂಬ ವಿಶಿಷ್ಟತೆ ಇಲ್ಲ. ಕಿತ್ತಳೆ[ಶಾಶ್ವತವಾಗಿ ಮಡಿದ ಕೊಂಡಿ]ಯನ್ನು ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಇದು ಬೆಳೆದೀತು. ಶುಷ್ಕ ಮತ್ತು ಹೆಚ್ಚು ಉಷ್ಣತೆಯ ವಾತಾವರಣವಿರುವ ಪ್ರದೇಶಗಳು ಇದಕ್ಕೆ ಬಹು ಸೂಕ್ತ. ಹೆಚ್ಚು ಮಳೆ ಬಂದರೂ ಅಡ್ದಿ ಇಲ್ಲ.
ತಳಿಗಳು
[ಬದಲಾಯಿಸಿ]ಇದರಲ್ಲಿ ಪ್ರದೇಶದಿಂದ ಪ್ರದೇಶಗಳಿಗೆ ಅನುಗುಣವಾಗಿ ಅನೇಕ ವಿಧಗಳು ಕಂಡು ಬಂದರೂ ನಿಶ್ಚಿತ ಮತ್ತು ವರ್ಣಿಸಿದ ವಿಧಗಳು ಇಲ್ಲ.
ಬೀಜ ಮತ್ತು ಬಿತ್ತನೆ
[ಬದಲಾಯಿಸಿ]ಇದು ನಿಂಬೆ ಜಾತಿಯಲ್ಲಿ ಕಂಡುಬರುವ ಏಕಭ್ರೂಣೀಯ ಸಸ್ಯ. ಇದನ್ನು ಜಟಿಕಟ್ಟಿ, ಜಾಂಬೂರಿ ಮುಂತಾದ ಆಧಾರಸಸಿಗಳ ಮೇಲೆ ಕಸಿಕಟ್ಟಿ ಕಸಿಗಿಡಗಳನ್ನು ಪಡೆದುಕೊಳ್ಳಲಾಗುತ್ತದೆ. ಕಿತ್ತಳೆಯಲ್ಲಿ ವಿವರಿಸಿದಂತೆ ಗುರಾಣಿಕಸಿ ವಿಧಾನವನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ.ಇದನ್ನು ನಾಟಿ ಮಾಡುವ ಅಂತರ ಪ್ರದೇಶದಿಂದ ಪ್ರದೇಶಕ್ಕೆ ಬದಲಾದರು ಸಾಮಾನ್ಯವಾಗಿ ೫-೬ಮೀ. ಅಂತರದ ಸಾಲುಗಳಲ್ಲಿ ೫-೬ಮೀ.ಗೊಂದರಂತೆ ನಾಟಿ ಮಾಡಲಾಗುತ್ತದೆ.
ಕೊಯ್ಲು ಮತ್ತು ಇಳುವರಿ
[ಬದಲಾಯಿಸಿ]ಇದು ದಕ್ಷಿಣ ಭಾರತದಲ್ಲಿ ನವೆಂಬರ್‍ನಲ್ಲಿ ಕೊಯ್ಲಿಗೆ ಬರುತ್ತದೆ. ಕಾಯಿಗಳು ಕೊಯ್ಲಿಗೆ ಬಂದಾಗ ಕಡುಹಸಿರಿನಿಂದ ತಿಳಿಹಸಿರು ಬಣ್ಣಕ್ಕೆ ತಿರುಗುತ್ತವೆ. ಚೆನ್ನಾಗಿ ಬೆಳೆದ ಪ್ರತಿಯೊಂದು ಸಸಿಯಿಂದ ಸುಮಾರು ೧೦೦-೨೦೦ ಹಣ್ಣುಗಳನ್ನು ಪಡೆಯಬಹುದು.
ಉಲ್ಲೇಖ
[ಬದಲಾಯಿಸಿ]- ↑ https://hort.purdue.edu/newcrop/morton/pummelo.html
- ↑ ಜನಪ್ರಿಯ ಹಣ್ಣುಗಳು, ಡಾ||ಪಿ.ನಾರಾಯನಣ ಸ್ವಾಮಿ , ನವಕರ್ನಾಟಕ ಪ್ರಕಾಶನ, ೨೦೦೩, ೭೫