ಲಾವಂಚ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಾವಂಚ
Vetiveria zizanioides0.jpg
Egg fossil classification
Kingdom:
Plantae
(unranked):
(unranked):
(unranked):
Order:
Family:
Genus:
Species:
C. zizanioides
Binomial nomenclature
Cymbopogon cintratus(citronella)
Synonym (taxonomy)

Vetiveria zizanioides

ಲಾವಂಚನ ಬೇರುಗಳು

ಲಾವಂಚ ಅಥವಾ ರಾಮಂಚ ಒಂದು ಹುಲ್ಲಿನ ವರ್ಗಕ್ಕೆ ಸೇರಿದ ಸಸ್ಯ. ಸುಗಂಧ ತೈಲಗಳ ತಯಾರಿಕೆಗೆ ಬಳಸುವ ಸಸ್ಯಗಳಲ್ಲಿ ಇದು ಪ್ರಮುಖವಾದುದು. ವೈಜ್ಞಾನಿಕವಾಗಿ ಇದರ ಹೆಸರು ವೆಟಿವೇರಿಯಾ ಜಿಜನಿಯೋಡೆಸ್‌. "ವೆಟಿವೇರ್‌ ಹುಲ್ಲು', "ಮಡಿವಾಳ ಬೇರು', "ರಾಮಚ್ಚ", "ಖಸ್‌' ಎಂದೂ ಕರೆಯುತ್ತಾರೆ.[೧] ಲಾವಂಚ ಬಹುವಾರ್ಷಿಕ ಬೆಳೆ. ಮರಳು ಮಣ್ಣನ್ನು ಹೊರತುಪಡಿಸಿ ಬೇರೆ ಎಲ್ಲಾ ವಿಧದ ಮಣ್ಣಿನಲ್ಲೂ ಬೆಳೆಯಬಹುದು. ಸುಮಾರು ಒಂದೂವರೆಯಿಂದ ಎರಡು ಅಡಿಗಳಷ್ಟು ಎತ್ತರವಾಗಿ ಬೆಳೆಯುವ ಈ ಹುಲ್ಲು ಸಾಧಾರಣ ತೇವಾಂಶ ಹಾಗೂ ಉಷ್ಣಾಂಶ ಇರುವ ಪ್ರದೇಶಗಳಲ್ಲಿ ಹುಲುಸಾಗಿ ಜೊಂಡಿನಂತೆ ಹರಡುತ್ತದೆ.[೨]

ಔಷಧೀಯ ಗುಣ[ಬದಲಾಯಿಸಿ]

ಲಾವಂಚವು ವಿವಿಧ ಔಷಧೀಯ ಗುಣಗಳನ್ನೂ ಒಳಗೊಂಡಿದೆ. ನೀರನ್ನು ಶುದ್ಧಗೊಳಿಸುವ ಗುಣವಿರುವುದರಿಂದ ಕುಡಿಯುವ ನೀರಿನ ಪಾತ್ರೆಗೆ ಲಾವಂಚ ಬೇರುಗಳನ್ನು ಹಾಕುತ್ತಾರೆ. ಇದರಿಂದ ನೀರು ಸ್ವಚ್ಛ ಮತ್ತು ಪರಿಮಳಯುಕ್ತವಾಗುವುದು. ಲಾವಂಚದ ತೈಲವನ್ನು ಮೈ-ಕೈನೋವು ನಿವಾರಣೆಗೆ ಬಳಸುತ್ತಾರೆ. ವಾತ, ಹೊಟ್ಟೆಶೂಲೆ, ಜಂತು ಹುಳಗಳ ಸಮಸ್ಯೆಗಳು ಲಾವಂಚದ ಬೇರನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸೋಸಿ ಕುಡಿಯುವುದರಿಂದ ನಿವಾರಣೆಯಾಗುವುದು. ಅಲ್ಲದೆ ಹಲವಾರು ಆಯುರ್ವೇದ ಔಷಧಗಳ ತಯಾರಿಯಲ್ಲೂ ಲಾವಂಚವನ್ನು ಬಳಸುತ್ತಾರೆ.ಲಾವಂಚದ ಬೇರುಗಳನ್ನು ಕುದಿಯುವ ನೀರಿನ ಹಾಕಿ, ಬೇಯಿಸಿ, ಭಟ್ಟಿ ಇಳಿಸಿ ತೈಲ ಉತ್ಪಾದಿಸುತ್ತಾರೆ. ಆ ತೈಲವನ್ನು ಸೋಪು, ಅತ್ತರ, ಅಗರು ಬತ್ತಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಬೇರುಗಳಿಂದ ಹೂವಿನ ಬುಟ್ಟಿ, ಬೀಸಣಿಕೆ, ಗೃಹಾಲಂಕಾರದ ವಸ್ತುಗಳು, ಚಾಪೆ ಇತ್ಯಾದಿಗಳನ್ನು ತಯಾರಿಸುತ್ತಾರೆ.[೧]

ನೀರಿಂಗಿಸುವಿಕೆಗೆ[ಬದಲಾಯಿಸಿ]

ಸಾಮಾನ್ಯವಾಗಿ ನದಿ, ಕೆರೆ, ತೋಡು ಇತ್ಯಾದಿಗಳ ಬದಿಯಲ್ಲಿ ಲಾವಂಚದ ಗಿಡಗಳನ್ನು ಕಾಣಬಹುದು. ಲಾವಂಚದ ಬೇರುಗಳು ಸುಮಾರು ಎರಡರಿಂದ ಮೂರು ಮೀಟರುಗಳಷ್ಟು ಭೂಮಿಯ ಆಳಕ್ಕೆ ಇಳಿಯಬಲ್ಲವು. ಇದರಿಂದ ಅದು ಮಣ್ಣಿನ ಸವಕಳಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಇದರಲ್ಲಿ ನೀರಿಂಗಿಸುವ ಗುಣವಿದೆ.ಇಳಿಜಾರು ಪ್ರದೇಶಗಳಲ್ಲಿ ಲಾವಂಚದ ಗಿಡಗಳನ್ನು ನೆಡುವುದರಿಂದ ಮಳೆ ನೀರು ಹರಿದು ಹೋಗುವುದನ್ನು ತಡೆಯಬಹುದು. ಮಾತ್ರವಲ್ಲ ನೀರಿನೊಂದಿಗೆ ಕೊಚ್ಚಿಹೋಗುವ ಮಣ್ಣನ್ನು ಸ್ವಲ್ಪಮಟ್ಟಿಗೆ ತಡೆಹಿಡಿಯಬಹುದು. ಇದರಿಂದಲೇ ಲಾವಂಚವನ್ನು "ಬಡವನ ನೀರಾವರಿ' ಎನ್ನುವರು. ಜಾನುವಾರುಗಳಿಗೆ ಮೇವು ಒದಗಿಸುವುದಲ್ಲದೆ ಭೂಮಿಯ ಮೇಲೆ ಹಸಿರು ಹೊದಿಕೆಯಾಗಿದ್ದು, ತಂಪಿನ ವಾತಾವರಣ ಸೃಷ್ಟಿಸುವುದು. ನೀರಿನ ಶುದ್ಧೀಕರಣಕ್ಕೆ ನಮ್ಮಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ವೆಟಿವೇರ್‌ಗಳನ್ನು ಬಳಸಲಾಗುತ್ತದೆ. ಮುಖ್ಯವಾಗಿ ಕ್ವೀನ್ಸ್‌ ಲ್ಯಾಂಡ್‌, ಆಸ್ಟ್ರೇಲಿಯಾ, ಚೀನಾ, ಥಾçಲ್ಯಾಂಡ್‌, ವಿಯೆಟ್ನಾಂ, ಸೆನೆಗಲ್‌ ಮುಂತಾದವುಗಳು.[೧] ಅವು ಕೆಲವೇ ತಿಂಗಳುಗಳಲ್ಲಿ ಬೃಹತ್ ಪೊದೆಯಾಗಿ ಬೆಳೆದು ಹೊಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಇಂಗಿಸಿಕೊಡುತ್ತವೆ. ಒಂದರ್ಥದಲ್ಲಿ ಇವನ್ನು ಬಡವನ ನೀರಾವರಿ ಎಂದೂ ಹೇಳಬಹುದು. ರೈತ ಸಮುದಾಯ ತಮ್ಮ ನೆಲದ ಸಂರಕ್ಷಣೆಗೆ, ಅಂತರ್ಜಲದ ಮರುಪೂರಣಕ್ಕೆ ಲಾವಂಚವನ್ನು ಒಂದು ಪ್ರಬಲ ಅಸ್ತ್ರವನ್ನಾಗಿ ಬಳಸಬಹುದು. ಲಾವಂಚವು ಮೇವು, ಕೃಷಿಭೂಮಿಯ ಹೊದಿಕೆಗೆ ಹುಲ್ಲು ಹಾಗೂ ಉರುವಲಿನಂತಹ ಕಿರು ಉತ್ಪನ್ನಗಳನ್ನೂ ಕೊಡುತ್ತದೆ.[೨]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ "ಲಾವಂಚ ಬಹೂಪಯೋಗಿ ಹುಲ್ಲು".[ಶಾಶ್ವತವಾಗಿ ಮಡಿದ ಕೊಂಡಿ]
  2. ೨.೦ ೨.೧ "ಬಹೂಪಯೋಗಿ ಲಾವಂಚ".

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಲಾವಂಚ&oldid=1156080" ಇಂದ ಪಡೆಯಲ್ಪಟ್ಟಿದೆ