ಪೊಯೇಸಿಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಹುಲ್ಲುಭೂಮಿ

ಪೊಯೇಸಿಯಿ ಹುಲ್ಲುಗಳು ಎಂದು ಕರೆಯಲ್ಪಡುವ ಏಕದಳ ಹೂಬಿಡುವ ಸಸ್ಯಗಳ ಒಂದು ದೊಡ್ಡದಾದ ಮತ್ತು ಬಹುತೇಕ ಸರ್ವವ್ಯಾಪಿ ಕುಟುಂಬವಾಗಿದೆ. ಪೊಯೇಸಿಯಿ ಕುಟುಂಬದಲ್ಲಿ ಧಾನ್ಯ ಹುಲ್ಲುಗಳು, ಬಿದಿರುಗಳು ಮತ್ತು ನೈಸರ್ಗಿಕ ಹುಲ್ಲುಭೂಮಿ ಹಾಗೂ ಕೃಷಿಮಾಡಲಾದ ಹುಲ್ಲುಮೈದಾನಗಳು ಹಾಗೂ ಗೋಮಾಳದ ಹುಲ್ಲುಗಳು ಸೇರಿವೆ. ಹುಲ್ಲುಗಳು ಗೆಣ್ಣುಗಳ ಹೊರತಾಗಿ ಬೇರೆಡೆಗಳಲ್ಲಿ ಪೊಳ್ಳಾಗಿರುವ ಕಾಂಡಗಳು ಮತ್ತು ಎರಡು ದರ್ಜೆಗಳಲ್ಲಿ ಹುಟ್ಟಿರುವ ಕಿರಿದಾದ ಪರ್ಯಾಯ ಎಲೆಗಳನ್ನು ಹೊಂದಿರುತ್ತವೆ. ಪ್ರತಿ ಎಲೆಯ ಕೆಳಗಿನ ಭಾಗವು ಕಾಂಡವನ್ನು ಆವರಿಸಿರುತ್ತದೆ, ಮತ್ತು ಎಲೆ ಕೋಶವನ್ನು ರೂಪಿಸುತ್ತದೆ. ಈ ಕುಟುಂಬದಲ್ಲಿ ಸುಮಾರು ೭೮೦ ಕುಲಗಳು ಮತ್ತು ಸುಮಾರು ೧೨,೦೦೦ ಪ್ರಜಾತಿಗಳಿವೆ,[೧] ಮತ್ತು ಐದನೇ ಅತಿ ದೊಡ್ಡ ಸಸ್ಯ ಕುಟುಂಬವೆನಿಸಿಕೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]

  1. Christenhusz, M.J.M.; Byng, J.W. (2016). "The number of known plants species in the world and its annual increase". Phytotaxa. 261 (3): 201–217. doi:10.11646/phytotaxa.261.3.1. Archived from the original on 2016-07-29. Unknown parameter |deadurl= ignored (help)