ದಕ್ಷಿಣಾಮೂರ್ತಿ -

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಮಧುರೈ ನಲ್ಲಿ ಮೀನಾಕ್ಷಿ ದೇವಸ್ಥಾನದ ದಕ್ಷಿಣದ್ವಾರದಲ್ಲಿ ದಕ್ಷಿಣಮೂರ್ತಿ ಶಿವ ಶಿಲ್ಪ.

ದಕ್ಷಿಣಾಮೂರ್ತಿ (ಸಂಸ್ಕೃತ: दक्षिणामूर्ति) ಎಂಬುದು ಹಿಂದೂ ದೇವರು ಶಿವನ ಎಲ್ಲಾ ರೀತಿಯ ಜ್ಞಾನದ ಗುರು ಮತ್ತು ಶಿಕ್ಷಕ. ಪರಮಗುರುವಿಗೆ ಸಂವಹನಗೊಂಡ ಭಗವಾನ್ ಪರಮಶಿವನ ಈ ಅಂಶವು ಸರ್ವೋಚ್ಚ ಅಥವಾ ಅಂತಿಮ ಅರಿವು, ತಿಳುವಳಿಕೆ ಮತ್ತು ಜ್ಞಾನ. ಅದೇ ಜ್ಞಾನವೇ ಅವನ ವ್ಯಕ್ತಿತ್ವವಾಗಿದೆ. ಈ ರೂಪವು ಶಿವನನ್ನು ಯೋಗ, ಸಂಗೀತ ಮತ್ತು ಬುದ್ಧಿವಂತಿಕೆಯ ಶಿಕ್ಷಕನಾಗಿ ಪ್ರತಿನಿಧಿಸುತ್ತದೆ ಮತ್ತು ಶಾಸ್ತ್ರಗಳ ಮೇಲೆ ನಿರೂಪಣೆಯನ್ನು ನೀಡುತ್ತದೆ.ಅವನನ್ನು ಬುದ್ಧಿಮತ್ತೆಯ ದೇವರು, ಸಂಪೂರ್ಣ ಮತ್ತು ಲಾಭದಾಯಕ ಧ್ಯಾನ ಎಂದು ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಪರಮಗುರು ಇಲ್ಲದಿದ್ದರೆ, ಅವರು ತಮ್ಮ ಗುರು ಎಂದು ದಕ್ಷಿಣಾಮೂರ್ತಿಯನ್ನು ಭಗವಂತ ಎಂದು ಪರಿಗಣಿಸಿ ಪೂಜಿಸಬಹುದು. ಅಂತಿಮವಾಗಿ ಅವರು ಯೋಗ್ಯರಾಗಿದ್ದರೆ ಮಾನವ ಸ್ವ-ಸಾಕ್ಷಾತ್ಕಾರದ ಗುರುಗಳಿಂದ ಆಶೀರ್ವದಿಸಲ್ಪಡುತ್ತಾರೆ. [೧][೨]

ಪದ- ಉತ್ಪತ್ತಿ[ಬದಲಾಯಿಸಿ]

ಹಿಂದೂ ಧರ್ಮದ
ಮೇಲಿನ ಒಂದು ಸರಣಿಯ ಭಾಗ
ಹಿಂದೂ ಧರ್ಮOm symbol.svg

ಓಂಬ್ರಹ್ಮಈಶ್ವರ
ಹಿಂದೂಹಿಂದೂ ಧರ್ಮದ ಇತಿಹಾಸ

HinduSwastika.svg

 • ದಕ್ಷಿಣಾಮೂರ್ತಿಯು ಪರಮೇಶ್ವರನ ಲೀಲಾ ವಿಭೂತಿಗಳಲ್ಲಿ ಒಂದು. ವೀಣಾ ಸಾಂಬ ಯೋಗ ಸಂಹಾರ ಶಕ್ತಿ ಜ್ಞಾನ ಅನುಷ್ಠಾನ ವ್ಯಾಖ್ಯಾನ ವಿದ್ಯಾ ವಟಮೂಲ ಎಂಬ ಹತ್ತು ವಿಧ ಶಿವಮೂರ್ತಿಗಳಲ್ಲಿ ಕೊನೆಯದೇ ಇದು. ದಕ್ಷಿಣಾ ಎಂದರೆ ಬುದ್ಧಿ. ಆ ಬುದ್ಧಿಯ (ಜ್ಞಾನದ) ಕಡೆಗೆ ಅಭಿಮುಖನಾಗಿರುವುದರಿಂದ ಈ ಹೆಸರು. ಮೂರ್ತಿ ದಕ್ಷಿಣಾಭಿಮುಖವಾಗಿ ಇರುವುದರಿಂದ ಈ ಹೆಸರು ಎಂದು ಕೆಲವರ ಅಭಿಪ್ರಾಯ.

ಸರ್ವವಿದ್ಯೆಗಳಿಗೆ ನಿಧಿ[ಬದಲಾಯಿಸಿ]

ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ |
ನಿಧಯೇ ಸರ್ವವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||
ಅರ್ಥ:-ಸರ್ವಲೋಕಗಳಿಗೆ ಗುರುವೂ ಭವರೋಗಿಗಳಿಗೆ ವೈದ್ಯನೂ ಸರ್ವವಿದ್ಯೆಗಳಿಗೆ ನಿಧಿಯೂ ಆದ ದಕ್ಷಿಣಾಮೂರ್ತಿಗೆ ನಮಸ್ಕಾರ.
 • ಈ ದೇವತೆಯನ್ನು ಪ್ರಾರ್ಥಿಸುವುದು ರೂಢಿಯಲ್ಲಿದೆ. ದಕ್ಷಿಣಾಮೂರ್ತಿ ವಿದ್ಯೆಗೆ ಅಧಿಷ್ಠಾತ್ಮ ದೇವತೆ ಎಂದು ಉಪನಿಷತ್ತು ಮತ್ತು ಸ್ತೋತ್ರಗಳಿಂದ ತಿಳಿದು ಬರುತ್ತದೆ. ವ್ಯಾವಹಾರಿಕ ರೂಪದ ಉಪದೇಶ ಮಿಥ್ಯೆಯಾದ ಕಾರಣ ಜ್ಞಾನ (ಬ್ರಹ್ಮ) ಮೂರ್ತಿಯಾದ ಈ ದೇವತೆ ಮುಖದಿಂದ ಯಾವ ಉಪದೇಶವನ್ನೂ ಮಾಡುವುದಿಲ್ಲ. ಆದಕಾರಣ ಈ ಮೂರ್ತಿಯ ಗುರುರೂಪವಾದ ಉಪದೇಶ ಮೌನವಷ್ಟೇ. ಶಿಷ್ಯರು ಈ ಮುದ್ರೆಯಿಂದಲೇ ಸಂಶಯಮುಕ್ತರಾಗಿ ಜ್ಞಾನಿಗಳಾಗುತ್ತಾರೆ. ಇತರ ದೇವತೆಗಳಿಗೆ ಪುರಾಣಪ್ರಸಿದ್ಧಿ ಇರುವಂತೆ ಈ ದೇವತೆಯ ವಿಚಾರ ಪುರಾಣಗಳಲ್ಲಿ ಅಧಿಕವಾಗಿ ಕಂಡುಬರುವುದಿಲ್ಲ. ಮಂತ್ರಶಾಸ್ತ್ರಕ್ಕೆ ಸಂಬಂಧಪಟ್ಟ ಉಪಾಸನಾದಿ ವಿಭಾಗದಲ್ಲಿ ಈ ದೇವತೆಯ ವಿಚಾರವಿದೆ. ಜ್ಞಾನವನ್ನು ಬಯಸುವವರು ಈ ದೇವತೆಯನ್ನು ಉಪಾಸನೆ ಮಾಡುತ್ತಾರೆ.

ದೇವತೆಯ ತಾಣ[ಬದಲಾಯಿಸಿ]

ಕಪಾಲೀಶ್ವರದೇವಅಲಯದ ಗೋಪುರ; ಚೆನ್ನೈನ ಕಪಲೀಶ್ವರ ಗೋಪುರದಲ್ಲಿ ದಕ್ಷಿಣಮೂರ್ತಿಯ ಎರಡು ಬಗೆಯ ಶಿಲ್ಪಗಳನ್ನು ಚಿತ್ರಿಸಿದೆ: ಒಂದು ವೀಣೆಯನ್ನು ನುಡಿಸುತ್ತದೆ, ಇನ್ನೊಂದು ಧ್ಯಾನಸ್ಥ ಸ್ಥಿತಿಯಲ್ಲಿದೆ.
 • ಅನೇಕ ಮರಗಳ ನೆರಳುಗಳಿಂದ ಬಿಸಿಲಿಲ್ಲದೆ ತಂಪಾದ ಗಿರಿತೊರೆಗಳಿಂದ ಕೂಡಿರುವ ಲತಾಪುಷ್ಪ ಸಮೃದ್ಧವಾದ ದುಂಬಿಗಳ ಝೇಂಕಾರ ನವಿಲುಗಳ ನರ್ತನ ಕೋಗಿಲೆಗಳ ಇಂಪಾದಧ್ವನಿ, ಹಾವು-ಮುಂಗುಸಿ, ಹಸು-ಹುಲಿ ಮೊದಲಾದ ವೈರ ಪ್ರಾಣಿಗಳೂ ತಮ್ಮ ವೈರವನ್ನು ಮರೆತು ವಿಹರಿಸುತ್ತಿರುವ ಶುಕನೇ ಮೊದಲಾದ ಮುನಿಗಳು ಮತ್ತು ಇಂದ್ರಾದಿ ದೇವತೆಗಳಿಂದ ಸೇವಿತರಾದ ಸಿದ್ಧ ಕಿನ್ನರರ ವಾಸಸ್ಥಳವಾದ ಮೇರುಪರ್ವತ ಪ್ರದೇಶದಲ್ಲಿ ಗರುಡ ಶಿಲೆಯ ಎಲೆಗಳು ಪದ್ಮರಾಗದ ಹಣ್ಣುಗಳು ನವರತ್ನದ ಬಿಳಿಲುಗಳು ಹಾಗೂ ಸುಗಂಧವನ್ನು ಬೀರುವ ಹೂಗಳಿಂದ ಕೂಡಿದ ಎತ್ತರವಾದ ಒಂದು ಆಲದ ಮರವಿದೆ. ಆ ಮರದ ಕೆಳಗೆ ರತ್ನಸಿಂಹಾಸನದ ಮೇಲೆ ಶರತ್ಕಾಲದ ಚಂದ್ರಕಾಂತಿಯನ್ನು ಬೀರುವ ಮುಖದಿಂದ ಕೂಡಿದ ದಕ್ಷಿಣಾಮೂರ್ತಿ ಮಂಡಿಸಿದ್ದಾನೆ. ಮುನಿಗಳ ಗುಂಪು ಈತನನ್ನು ಯಾವಾಗಲೂ ಸ್ತುತಿಸುತ್ತಿದ್ದಾರೆ. ಈ ಸ್ವರೂಪದಿಂದ ಜಗತ್ತಿಗೇ ಮೊದಲಿಗನಾದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕು ಎಂದು ಶಾರದಾತಿಲಕದಲ್ಲಿ ಹೇಳಿದೆ.

ಧ್ಯಾನ ಕ್ರಮ[ಬದಲಾಯಿಸಿ]

ದಕ್ಷಿಣಾಮೂರ್ತಿ
 • ಕರ್ಪೂರದಂತೆ ಶುಭ್ರನೂ ತರ್ಕಮುದ್ರೆಯನ್ನು ಧರಿಸಿ ಬ್ರಹ್ಮತತ್ತ್ವವನ್ನು ತಿಳಿಸುವವನೂ ಯೋಗಾಸನದಲ್ಲಿ ಮಂಡಿತನೂ ಆದ ದಕ್ಷಿಣಾಮೂರ್ತಿಯನ್ನು ಧ್ಯಾನಿಸಬೇಕೆಂದು ಶ್ರೀಮಾನಸೋಲ್ಲಾಸ ಗ್ರಂಥ ಹೇಳುತ್ತದೆ.
 • ಬ್ರಹ್ಮತತ್ತ್ವವನ್ನು ಬಯಸುವ ವೃದ್ಧರಾದ ಋಷಿಗಳ ಗುಂಪಿನಿಂದ ಆವೃತನಾದ ಜ್ಞಾನಮುದ್ರೆಯನ್ನು ಧರಿಸಿ ಆನಂದಮೂರ್ತಿಯೂ ಮೌನರೂಪ ವ್ಯಾಖ್ಯಾನದಿಂದ ಬ್ರಹ್ಮತತ್ತ್ವವನ್ನು ಪ್ರಕಟಿಸುತ್ತಿರುವ ತರುಣನೂ ಆದ ದಕ್ಷಿಣಾಮೂರ್ತಿಯನ್ನು ಸ್ಮರಿಸಬೇಕೆಂದು ಶ್ರೀತತ್ತ್ವಸುಧೆ ತಿಳಿಸುತ್ತದೆ.

ಉಪನಿಷದ್ ವಾಕ್ಯ[ಬದಲಾಯಿಸಿ]

 • ವೀಣೆ ಮುತ್ತಿನ ಜಪಮಾಲೆ ಪುಸ್ತಕ ಜ್ಞಾನಮುದ್ರೆ ಅಥವಾ ಅಗ್ನಿನಾಗಗಳನ್ನು ಚತುರ್ಭುಜಗಳಲ್ಲಿ ಧರಿಸಿ ಬೆಳ್ಳಿಯಂತೆ ಶುಭ್ರವರ್ಣದಿಂದ ಕೂಡಿದ ಭಸ್ಮಲೇಪಿತ ಶರೀರವುಳ್ಳವನೂ ತ್ರಿಲೋಚನನೂ ತಲೆಯಲ್ಲಿ ಚಂದ್ರಕಲೆಯುಳ್ಳವನೂ ಕಿರೀಟಧಾರಿಯೂ ಯೋಗಾಸನಾರೂಢನೂ ಆಗಿರುವಂತೆ ಈ ದೇವತೆಯ ಸ್ವರೂಪ ದಕ್ಷಿಣಾಮೂರ್ತಿ ಉಪನಿಷತ್ತಿನಲ್ಲಿ ವರ್ಣಿತವಾಗಿದೆ.
 • ಜ್ಞಾನಾಧಿದೈವವಾದುದರಿಂದ ಮೇಧಾ ದಕ್ಷಿಣಮೂರ್ತಿ ಎಂಬ ಹೆಸರು ಮಂತ್ರೋದ್ಧಾರದಲ್ಲಿ ಕಂಡುಬರುತ್ತದೆ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ತನ್ನಲ್ಲಿ ಸಂಹರಿಸಿಕೊಂಡು ಸ್ವಾತ್ಮಾನಂದ ಸುಖದಲ್ಲಿ ವಿಹರಿಸುವ ಈಶ್ವರನ ಸ್ವರೂಪವೇ ದಕ್ಷಿಣಾಮೂರ್ತಿ. ಈ ದಕ್ಷಿಣ ಮುಖನಾದ ಶಿವ ಪ್ರತ್ಯಕ್ಷನಾದರೆ ತತ್ತ್ವಜ್ಞಾನ ಸಿದ್ಧಿಸುತ್ತದೆ.[೩]
ತಮಿಳುನಾಡಿನಲ್ಲಿರುವ ದಕ್ಷಿಣಾಮೂರ್ತಿಯ ದೇವಾಲಯ

ಶ್ರೀ ಶಂಕರ ವಿರಚಿತ ದಕ್ಷಿಣಾಮೂರ್ತಿಯ ಸ್ತೋತ್ರ[ಬದಲಾಯಿಸಿ]

ದಕ್ಷಿಣಾ ಮೂರ್ತಿ ಸ್ತೋತ್ರಮ್

ಶಾಂತಿಪಾಠಃ

ಓಂ ಯೋ ಬ್ರಹ್ಮಾಣಂ ವಿದಧಾತಿ ಪೂರ್ವಂ
ಯೋ ವೈ ವೇದಾಂಶ್ಚ ಪ್ರಹಿಣೋತಿ ತಸ್ಮೈ |
ತಂಹದೇವಮಾತ್ಮ ಬುದ್ಧಿಪ್ರಕಾಶಂ
ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ ||

ಧ್ಯಾನಮ್:-
ಓಂ ಮೌನವ್ಯಾಖ್ಯಾ ಪ್ರಕಟಿತಪರಬ್ರಹ್ಮತತ್ವಂಯುವಾನಂ
ವರ್ಶಿಷ್ಠಾಂತೇವಸದೃಷಿಗಣೈರಾವೃತಂ ಬ್ರಹ್ಮನಿಷ್ಠೈಃ |
ಆಚಾರ್ಯೇಂದ್ರಂ ಕರಕಲಿತ ಚಿನ್ಮುದ್ರಮಾನಂದಮೂರ್ತಿಂ
ಸ್ವಾತ್ಮರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ||

ವಟವಿಟಪಿಸಮೀಪೇ ಭೂಮಿಭಾಗೇ ನಿಷಣ್ಣಂ
ಸಕಲಮುನಿಜನಾನಾಂ ಙ್ಞಾನದಾತಾರಮಾರಾತ್ |
ತ್ರಿಭುವನಗುರುಮೀಶಂ ದಕ್ಷಿಣಾಮೂರ್ತಿದೇವಂ
ಜನನಮರಣದುಃಖಚ್ಛೇದ ದಕ್ಷಂ ನಮಾಮಿ ||

ಚಿತ್ರಂ ವಟತರೋರ್ಮೂಲೇ ವೃದ್ಧಾಃ ಶಿಷ್ಯಾಃ ಗುರುರ್ಯುವಾ |
ಗುರೋಸ್ತು ಮೌನವ್ಯಾಖ್ಯಾನಂ ಶಿಷ್ಯಾಸ್ತುಚ್ಛಿನ್ನಸಂಶಯಾಃ ||

ಓಂ ನಮಃ ಪ್ರಣವಾರ್ಥಾಯ ಶುದ್ಧಙ್ಞಾನೈಕಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃ ||

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಷಾತ್ ಪರಂ ಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||

ನಿಧಯೇ ಸರ್ವವಿದ್ಯಾನಾಂ ಭಿಷಜೇ ಭವರೋಗಿಣಾಮ್ |
ಗುರವೇ ಸರ್ವಲೋಕಾನಾಂ ದಕ್ಷಿಣಾಮೂರ್ತಯೇ ನಮಃ ||

ಚಿದೋಘನಾಯ ಮಹೇಶಾಯ ವಟಮೂಲನಿವಾಸಿನೇ |
ಸಚ್ಚಿದಾನಂದ ರೂಪಾಯ ದಕ್ಷಿಣಾಮೂರ್ತಯೇ ನಮಃ ||

ಈಶ್ವರೋ ಗುರುರಾತ್ಮೇತಿ ಮೂತ್ರಿಭೇದ ವಿಭಾಗಿನೇ |
ವ್ಯೋಮವದ್ ವ್ಯಾಪ್ತದೇಹಾಯ ದಕ್ಷಿಣಾಮೂರ್ತಯೇ ನಮಃ ||

ಅಂಗುಷ್ಥತರ್ಜನೀಯೋಗಮುದ್ರಾ ವ್ಯಾಜೇನಯೋಗಿನಾಮ್ |
ಶೃತ್ಯರ್ಥಂ ಬ್ರಹ್ಮಜೀವೈಕ್ಯಂ ದರ್ಶಯನ್ಯೋಗತಾ ಶಿವಃ ||

||ಓಂ ಶಾಂತಿಃ ಶಾಂತಿಃ ಶಾಂತಿಃ ||
ಸ್ತೋತ್ರ
ವಿಶ್ವಂದರ್ಪಣ ದೃಶ್ಯಮಾನ ನಗರೀ ತುಲ್ಯಂ ನಿಜಾಂತರ್ಗತಂ
ಪಶ್ಯನ್ನಾತ್ಮನಿ ಮಾಯಯಾ ಬಹಿರಿವೋದ್ಭೂತಂ ಯಥಾನಿದ್ರಯಾ |
ಯಸ್ಸಾಕ್ಷಾತ್ಕುರುತೇ ಪ್ರಭೋಧಸಮಯೇ ಸ್ವಾತ್ಮಾನಮೇ ವಾದ್ವಯಂ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 1 ||

ಬೀಜಸ್ಯಾಂತತಿ ವಾಂಕುರೋ ಜಗದಿತಂ ಪ್ರಾಙ್ನರ್ವಿಕಲ್ಪಂ ಪುನಃ
ಮಾಯಾಕಲ್ಪಿತ ದೇಶಕಾಲಕಲನಾ ವೈಚಿತ್ರ್ಯಚಿತ್ರೀಕೃತಮ್ |
ಮಾಯಾವೀವ ವಿಜೃಂಭಯತ್ಯಪಿ ಮಹಾಯೋಗೀವ ಯಃ ಸ್ವೇಚ್ಛಯಾ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 2 ||

ಯಸ್ಯೈವ ಸ್ಫುರಣಂ ಸದಾತ್ಮಕಮಸತ್ಕಲ್ಪಾರ್ಥಕಂ ಭಾಸತೇ
ಸಾಕ್ಷಾತ್ತತ್ವಮಸೀತಿ ವೇದವಚಸಾ ಯೋ ಬೋಧಯತ್ಯಾಶ್ರಿತಾನ್ |
ಯಸ್ಸಾಕ್ಷಾತ್ಕರಣಾದ್ಭವೇನ್ನ ಪುರನಾವೃತ್ತಿರ್ಭವಾಂಭೋನಿಧೌ
ತಸ್ಮೈ ಶ್ರೀಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 3 ||

ನಾನಾಚ್ಛಿದ್ರ ಘಟೋದರ ಸ್ಥಿತ ಮಹಾದೀಪ ಪ್ರಭಾಭಾಸ್ವರಂ
ಙ್ಞಾನಂ ಯಸ್ಯ ತು ಚಕ್ಷುರಾದಿಕರಣ ದ್ವಾರಾ ಬಹಿಃ ಸ್ಪಂದತೇ |
ಜಾನಾಮೀತಿ ತಮೇವ ಭಾಂತಮನುಭಾತ್ಯೇತತ್ಸಮಸ್ತಂ ಜಗತ್
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 4 ||

ದೇಹಂ ಪ್ರಾಣಮಪೀಂದ್ರಿಯಾಣ್ಯಪಿ ಚಲಾಂ ಬುದ್ಧಿಂ ಚ ಶೂನ್ಯಂ ವಿದುಃ
ಸ್ತ್ರೀ ಬಾಲಾಂಧ ಜಡೋಪಮಾಸ್ತ್ವಹಮಿತಿ ಭ್ರಾಂತಾಭೃಶಂ ವಾದಿನಃ |
ಮಾಯಾಶಕ್ತಿ ವಿಲಾಸಕಲ್ಪಿತ ಮಹಾವ್ಯಾಮೋಹ ಸಂಹಾರಿಣೇ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 5 ||

ರಾಹುಗ್ರಸ್ತ ದಿವಾಕರೇಂದು ಸದೃಶೋ ಮಾಯಾ ಸಮಾಚ್ಛಾದನಾತ್
ಸನ್ಮಾತ್ರಃ ಕರಣೋಪ ಸಂಹರಣತೋ ಯೋ‌உಭೂತ್ಸುಷುಪ್ತಃ ಪುಮಾನ್ |
ಪ್ರಾಗಸ್ವಾಪ್ಸಮಿತಿ ಪ್ರಭೋದಸಮಯೇ ಯಃ ಪ್ರತ್ಯಭಿಙ್ಞಾಯತೇ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 6 ||

ಬಾಲ್ಯಾದಿಷ್ವಪಿ ಜಾಗ್ರದಾದಿಷು ತಥಾ ಸರ್ವಾಸ್ವವಸ್ಥಾಸ್ವಪಿ
ವ್ಯಾವೃತ್ತಾ ಸ್ವನು ವರ್ತಮಾನ ಮಹಮಿತ್ಯಂತಃ ಸ್ಫುರಂತಂ ಸದಾ |
ಸ್ವಾತ್ಮಾನಂ ಪ್ರಕಟೀಕರೋತಿ ಭಜತಾಂ ಯೋ ಮುದ್ರಯಾ ಭದ್ರಯಾ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 7 ||

ವಿಶ್ವಂ ಪಶ್ಯತಿ ಕಾರ್ಯಕಾರಣತಯಾ ಸ್ವಸ್ವಾಮಿಸಂಬಂಧತಃ
ಶಿಷ್ಯಚಾರ್ಯತಯಾ ತಥೈವ ಪಿತೃ ಪುತ್ರಾದ್ಯಾತ್ಮನಾ ಭೇದತಃ |
ಸ್ವಪ್ನೇ ಜಾಗ್ರತಿ ವಾ ಯ ಏಷ ಪುರುಷೋ ಮಾಯಾ ಪರಿಭ್ರಾಮಿತಃ
ತಸ್ಮೈ ಶ್ರೀ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 8 ||

ಭೂರಂಭಾಂಸ್ಯನಲೋ‌உನಿಲೋ‌உಂಬರ ಮಹರ್ನಾಥೋ ಹಿಮಾಂಶುಃ ಪುಮಾನ್
ಇತ್ಯಾಭಾತಿ ಚರಾಚರಾತ್ಮಕಮಿದಂ ಯಸ್ಯೈವ ಮೂರ್ತ್ಯಷ್ಟಕಮ್ |
ನಾನ್ಯತ್ಕಿಂಚನ ವಿದ್ಯತೇ ವಿಮೃಶತಾಂ ಯಸ್ಮಾತ್ಪರಸ್ಮಾದ್ವಿಭೋ
ತಸ್ಮೈ ಗುರುಮೂರ್ತಯೇ ನಮ ಇದಂ ಶ್ರೀ ದಕ್ಷಿಣಾಮೂರ್ತಯೇ || 9 ||

ಸರ್ವಾತ್ಮತ್ವಮಿತಿ ಸ್ಫುಟೀಕೃತಮಿದಂ ಯಸ್ಮಾದಮುಷ್ಮಿನ್ ಸ್ತವೇ
ತೇನಾಸ್ವ ಶ್ರವಣಾತ್ತದರ್ಥ ಮನನಾದ್ಧ್ಯಾನಾಚ್ಚ ಸಂಕೀರ್ತನಾತ್ |
ಸರ್ವಾತ್ಮತ್ವಮಹಾವಿಭೂತಿ ಸಹಿತಂ ಸ್ಯಾದೀಶ್ವರತ್ವಂ ಸ್ವತಃ
ಸಿದ್ಧ್ಯೇತ್ತತ್ಪುನರಷ್ಟಧಾ ಪರಿಣತಂ ಚೈಶ್ವರ್ಯ ಮವ್ಯಾಹತಮ್ || 10 ||

|| ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ದಕ್ಷಿಣಾಮುರ್ತಿಸ್ತೋತ್ರಂ ಸಂಪೂರ್ಣಮ್ ||[೪]

ಪೂರಕ ಮಾಹಿತಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. For iconographic description of the Dakṣiṇāmūrti form, see: Sivaramamurti (1976), p. 47.
 2. Dictionary of Hindu Lore and Legend
 3. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದಕ್ಷಿಣಾಮೂರ್ತಿ
 4. "ದಕ್ಷಿಣಾಮುರ್ತಿಸ್ತೋತ್ರಂ". Archived from the original on 2013-03-25. Retrieved 2020-05-14.