ಮೀನಾಕ್ಷಿ ದೇವಸ್ಥಾನ

Coordinates: 9°55′10″N 78°07′10″E / 9.91944°N 78.11944°E / 9.91944; 78.11944
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೀನಾಕ್ಷಿ ದೇವಸ್ಥಾನ
ಹೆಸರು
ಸರಿಯಾದ ಹೆಸರುಅರುಲ್ಮಿಗು ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ
ಭೂಗೋಳ
ಸ್ಥಳMadurai, ತಮಿಳುನಾಡು, India
ಸಂಸ್ಕೃತಿ
ಮುಖ್ಯ ದೇವರುGoddess Meenakshi (Parvati)
ವಾಸ್ತುಶಿಲ್ಪ
ವಾಸ್ತುಶಿಲ್ಪ ಶೈಲಿDravidian architecture
ಇತಿಹಾಸ ಮತ್ತು ಆಡಳಿತ
ನಿರ್ಮಾಣUnknown

ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನ ಅಥವಾ ಮೀನಾಕ್ಷಿ ಅಮ್ಮನ್ ದೇವಸ್ಥಾನ ವು ಮೀನಾಕ್ಷಿ ಸುಂದರೇಶ್ವರರ್ ದೇವಸ್ಥಾನ ಅಥವಾ ಮೀನಾಕ್ಷಿ ಅಮ್ಮನ್ ದೇವಸ್ಥಾನ ವು ತಮಿಳು:மீனாட்சி அம்மன் கோவில் ಭಾರತದ ತಮಿಳು ನಾಡಿನ ಪವಿತ್ರ ನಗರ ಮಧುರೈನಲ್ಲಿರುವ ಒಂದು ಐತಿಹಾಸಿಕ ಹಿಂದು ದೇವಾಲಯವಾಗಿದೆ. ಇದು ಶಿವ ದೇವರಿಗೆ (ಸುಂದರೇಶ್ವರರ್‌ ಅಥವಾ ಸುಂದರ ದೇವರ ರೂಪದಲ್ಲಿ) ಮತ್ತು ಅವನ ಪತ್ನಿ ಪಾರ್ವತಿಗೆ (ಮೀನಾಕ್ಷಿ ರೂಪದಲ್ಲಿ) ಸಮರ್ಪಿತವಾಗಿದೆ. ಈ ದೇವಸ್ಥಾನವು ೨೫೦೦ ವರ್ಷ ಪುರಾತನ ನಗರ ಮಧುರೈನ ಹೃದಯಭಾಗ ಮತ್ತು ಜೀವಾಧಾರವಾಗಿದೆ. ಸೂಕ್ಷ್ಮಪರಿಶೀಲನೆಯಿಂದ ಕೆತ್ತಿದ ಮತ್ತು ಬಣ್ಣಬಳಿದ ಪ್ರಮುಖ ದೇವರುಗಳಿರುವ ಎರಡು ಬಂಗಾರದ ಗೋಪುರಗಳನ್ನೂ ಒಳಗೊಂಡಂತೆ ಈ ಸಂಕೀರ್ಣವು ೧೪ ಭವ್ಯವಾದ ಗೋಪುರಗಳನ್ನು ಹೊಂದಿದೆ. ಈ ದೇವಸ್ಥಾನವು ತಮಿಳರ ಮಹತ್ವಪೂರ್ಣ ಸಂಕೇತವಾಗಿದೆ, ಹಾಗೂ ಪ್ರಾಚೀನ ಕಾಲದಿಂದ ತಮಿಳು ಸಾಹಿತ್ಯದಲ್ಲಿ ಸೂಚಿಸಲ್ಪಟ್ಟಿದೆ. ಆದರೆ ಪ್ರಸ್ತುತವಿರುವ ರಚನೆಯನ್ನು ೧೬೦೦ರಲ್ಲಿ ನಿರ್ಮಿಸಿರುವುದೆಂದು ನಂಬಲಾಗಿದೆ[೧]. ಅತಿ ಎತ್ತರದ ದೇವಸ್ಥಾನದ ಗೋಪುರವು 51.9 metres (170 ft)ನಷ್ಟು ಎತ್ತರವಿದೆ[೧].

ಇತಿಹಾಸ[ಬದಲಾಯಿಸಿ]

ಹಿಂದು ನಂಬಿಕೆ[ಬದಲಾಯಿಸಿ]

ಮಧುರೈನ ದೇವತೆ ಮೀನಾಕ್ಷಿ ಅಮ್ಮನ್

ಹಿಂದು ಪುರಾಣದ ಪ್ರಕಾರ, ಶಿವನು ಸುಂದರೇಶ್ವರರ್‌ನ ರೂಪದಲ್ಲಿ ಪಾರ್ವತಿಯ ಅವತಾರ ಮೀನಾಕ್ಷಿಯನ್ನು ವಿವಾಹವಾಗಲು ಭೂಮಿಗೆ ಇಳಿದುಬಂದನು. ಮಧುರೈನ ಆಡಳಿತಗಾರ ಮಲಯದ್ವಜ ಪಾಂಡ್ಯನ ಪ್ರಾಯಶ್ಚಿತಕ್ಕೆ ಪ್ರತಿಯಾಗಿ ಪಾರ್ವತಿಯು ಮೊದಲೇ ಸಣ್ಣ ಮಗುವಿನ ರೂಪದಲ್ಲಿ ಭೂಮಿಗೆ ಇಳಿದುಬಂದಿದ್ದಳು. ಆಕೆ ಬೆಳೆದು ದೊಡ್ಡವಳಾದ ನಂತರ ನಗರವನ್ನು ಆಳಲು ಪ್ರಾರಂಭಿಸಿದಳು. ಶಿವ ದೇವರು ಭೂಮಿಗೆ ಇಳಿದು ಬಂದು, ಆಕೆಗೆ ವಿವಾಹದ ಪ್ರಸ್ತಾಪ ಮಾಡಿದನು. ಆ ಮದುವೆಯಲ್ಲಿ ಪ್ರಪಂಚದ ಎಲ್ಲಾ ಕಡೆಯವರು ಮಧುರೈನಲ್ಲಿ ನೆರೆದು, ಅದು ಭೂಮಿಯಲ್ಲೇ ಅತಿ ದೊಡ್ಡ ಕಾರ್ಯಕ್ರಮವಾಗುವುದರಲ್ಲಿತ್ತು. ಮೀನಾಕ್ಷಿಯ ಸಹೋದರ ವಿಷ್ಣು ಮದುವೆಯ ಮೇಲ್ವಿಚಾರಣೆ ವಹಿಸಲು ಅವನ ಪವಿತ್ರ ನೆಲೆ ವೈಕುಂಠದಿಂದ ಹೋಗುತ್ತಿದ್ದನು. ದಾರಿಯಲ್ಲಿ ದೇವರ ಮಹಿಮಾ ಆಟದಲ್ಲಿ ಇಂದ್ರನಿಂದ ಮೋಸಹೋಗಿ ತಡವಾಯಿತು. ಅಷ್ಟರಲ್ಲಿ ವಿವಾಹವು ಸ್ಥಳೀಯ ದೇವರು ತಿರುಪ್ಪರಂಕುಂದ್ರಮ್‌ನಿಂದ (ಪಾವಲಾಕನಿವೈ ಪೆರುಮಾಳ್) ನಡೆಸಲ್ಪಟ್ಟಿತು. ಇದನ್ನು ವಾರ್ಷಿಕವಾಗಿ ಮಧುರೈನಲ್ಲಿ 'ಚಿತಿರೈ ತಿರುವಿಳ'ವೆಂದು ಆಚರಿಸಲಾಗುತ್ತದೆ. ಮಧುರೈನಲ್ಲಿ ನಾಯಕರ್ ಆಳುತ್ತಿದ್ದ ಅವಧಿಯಲ್ಲಿ, ನಂತರದ ಆಡಳಿತಗಾರ ತಿರುಮಲೈ ನಾಯಕರ್, 'ಅಜಕರ್ ತಿರುವಿಳ' ಮತ್ತು 'ಮೀನಾಕ್ಷಿ ಮದುವೆ'ಯ ಮಧ್ಯೆ ಸಂಬಂಧ ಕಲ್ಪಿಸಿದ್ದಾನೆ. ಆದ್ದರಿಂದ 'ಅಜಘರ್ ತಿರುವಿಳ' ಅಥವಾ 'ಚಿತಿರೈ ತಿರುವಿಳ' ಹುಟ್ಟಿಕೊಂಡಿದೆ.

ಮಧುರೈನ ಮೀನಾಕ್ಷಿ ಅಮ್ಮನ್ ದೇವಸ್ಥಾನ

ಆಧುನಿಕ ಇತಿಹಾಸ[ಬದಲಾಯಿಸಿ]

ಮ‌ೂಲ ರಚನೆಯ ಇತಿಹಾಸವು ನಿಖರವಾಗಿ ತಿಳಿದಿಲ್ಲ. ಆದರೆ ತಮಿಳು ಸಾಹಿತ್ಯವು ದೇವಸ್ಥಾನವು ಕಳೆದ ಕೆಲವು ಸಾವಿರವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂದು ಹೇಳುತ್ತದೆ. ಶೈವ ತತ್ವಶಾಸ್ತ್ರದ ಪ್ರಸಿದ್ಧ ಹಿಂದು ಸಂತ ತಿರುಗ್ನಾನಸಂಬಂದರ್ ಈ ದೇವಸ್ಥಾನವು ೭ನೇ ಶತಮಾನದಷ್ಟು ಹಿಂದಿನದಾಗಿದೆ ಎಂದು ಸೂಚಿಸಿದ್ದಾನೆ, ಹಾಗೂ ಶಿವ ದೇವರನ್ನು ಅಲವೈ ಇರೈವನ್ ಆಗಿ ವರ್ಣಿಸಿದ್ದಾನೆ. ಈ ದೇವಸ್ಥಾನವು ಕುಪ್ರಸಿದ್ಧ ಮುಸ್ಲಿಂ ಆಕ್ರಮಣಕಾರ ಮಲಿಕ್ ಕಾಫರ್‌‌ನಿಂದ ೧೩೧೦ರಲ್ಲಿ ಕೊಳ್ಳೆಹೊಡೆಯಲ್ಪಟ್ಟಿತ್ತು; ಅಲ್ಲದೇ ಎಲ್ಲಾ ಪುರಾತನ ಅಂಶಗಳು ನಾಶಗೊಂಡಿದ್ದವೆಂದು ನಂಬಲಾಗಿದೆ. ಇದರ ಪುನರ್ನಿಮಾಣದ ಆರಂಭವನ್ನು ಮಧುರೈನ ಮೊದಲ ನಾಯಕ್ ರಾಜನ (ರಾಜ ವಿಶ್ವನಾಥ ನಾಯಕ್ : ೧೫೫೯-೧೬೦೦ A.D.) ಪ್ರಧಾನ ಮಂತ್ರಿ ಮತ್ತು ಪಾಲಿಗರ್ ವ್ಯವಸ್ಥೆಯ ಸಂಸ್ಥಾಪಕ ಆರ್ಯನಾಥ ಮುದಲಿಯಾರ್ ಮಾಡಿದನು. ನಂತರ ಸುಮಾರು ೧೬೨೩ರಿಂದ ೧೬೫೯ರವರೆಗೆ ಅವಧಿಯಲ್ಲಿ ತಿರುಮಲೈ ನಾಯಕ್ ಇದಕ್ಕೆ ಅಮ‌ೂಲ್ಯವಾದ ಕೊಡುಗೆಗಳನ್ನು ನೀಡಿದನು. ಆತ ದೇವಸ್ಥಾನದ ಸಂಕೀರ್ಣದ ವಸಂತ ಮಂಟಪವನ್ನು ಬಹಳ ಆಸಕ್ತಿವಹಿಸಿಕೊಂಡು ಕಟ್ಟಿಸಿದನು. ಇಲ್ಲಿ ಮತ್ತಷ್ಟು ಇತರ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.

ಮಧುರೈನ ಮೀನಾಕ್ಷಿ ಅಮ್ಮನ್ ದೇವಸ್ಥಾನ


ಈ ದೆವಾಲಯದಲ್ಲಿ ಮೀನಕ್ಷಿ ಅಮ್ಮನಿಗೆ ದಿನಕ್ಕೆ ಆರು ಬಾರಿ ಪೂಜೆ ನಡೆಯಲಿದೆ.

ದೇವಸ್ಥಾನದ ರಚನೆ[ಬದಲಾಯಿಸಿ]

ಈ ದೇವಾಲಯವು ಪುರಾತನ ನಗರ ಮಧುರೈನ ಭೌಗೋಳಿಕ ಮತ್ತು ಧಾರ್ಮಿಕ ಅನುಷ್ಠಾನಗಳ ಕೇಂದ್ರವಾಗಿದೆ. ದೇವಸ್ಥಾನದ ಸುತ್ತಲಿನ ಗೋಡೆಗಳು, ರಸ್ತೆಗಳು ಮತ್ತು ಕೊನೆಯದಾಗಿ ನಗರದ ಗೋಡೆಗಳನ್ನೂ (ಪುರಾತನ) ಏಕಕೇಂದ್ರೀಯ ಕೋಟೆಯ ಚೌಕಟ್ಟಿನಲ್ಲಿ ನಿರ್ಮಿಸಲಾಗಿದೆ. ಪ್ರಾಚೀನ ತಮಿಳು ಶ್ರೇಷ್ಠ ಗ್ರಂಥಗಳು, ದೇವಸ್ಥಾನವು ನಗರದ ಕೇಂದ್ರವಾಗಿದೆ, ಅಲ್ಲದೇ ರಸ್ತೆಗಳು ತಾವರೆ ಮತ್ತು ಅದರ ದಳಗಳಂತೆ ಹರಡಿಕೊಂಡಿವೆ ಎಂದು ಸೂಚಿಸುತ್ತವೆ. ತಮಿಳು ನಾಡಿನಲ್ಲಿರುವ ನಾಲ್ಕು ದಿಕ್ಕಿನಲ್ಲಿ ನಾಲ್ಕು ಪ್ರವೇಶಗಳನ್ನು ಹೊಂದಿರುವ ಕೆಲವು ದೇವಸ್ಥಾನಗಳಲ್ಲಿ ಇದೂ ಒಂದಾಗಿದೆ.

ಮಧುರೈನ ಮೀನಾಕ್ಷಿ ಅಮ್ಮನ್ ದೇವಸ್ಥಾನದ ಗೋಪುರ

ದೇವಸ್ಥಾನದ ಸಂಕೀರ್ಣವು ಸುಮಾರು 45 acres (180,000 m2) ಪ್ರದೇಶದಲ್ಲಿದೆ; ಅಲ್ಲದೇ ಈ ದೇವಸ್ಥಾನದವು ೨೫೪ ಮೀಟರ್ ಉದ್ದ ೨೩೭ ಮೀಟರ್ ಅಗಲದ ಒಂದು ಭಾರಿ ರಚನೆಯಾಗಿದೆ. ದೇವಸ್ಥಾನವು ೧೨ ಗೋಪುರಗಳಿಂದ ಆವರಿಸಲ್ಪಟ್ಟಿದೆ. ಅವುಗಳಲ್ಲಿ ಅತಿ ಎತ್ತರವಾದ ಪ್ರಸಿದ್ಧ ದಕ್ಷಿಣದ ಗೋಪುರವು ಸುಮಾರು 170 ft (52 m)ನಷ್ಟು ಎತ್ತರವಿದೆ.[೨]

ವಿಷ್ಣು ಅವನ ಸಹೋದರಿಯನ್ನು ಶಿವನಿಗೆ ಒಪ್ಪಿಸುತ್ತಿರುವುದು

ಗುಡಿಗಳು[ಬದಲಾಯಿಸಿ]

ಈ ದೇವಸ್ಥಾನವು ಅನೇಕ ದೇವರುಗಳ ವಿಗ್ರಹಗಳನ್ನು ಒಳಗೊಂಡಿದೆ. ಶಿವನ ಗುಡಿಯು ಸಂಕೀರ್ಣದ ಕೇಂದ್ರಭಾಗದಲ್ಲಿದೆ. ಇದು ದೇವತೆಯ ಧಾರ್ಮಿಕ ಅನುಷ್ಠಾನವನ್ನು ನಂತರ ಅಭಿವೃದ್ಧಿಪಡಿಸಲಾಯಿತೆಂಬುದನ್ನು ಸೂಚಿಸುತ್ತದೆ. ಈ ಗುಡಿಯ ಹೊರಗೆ ಏಕಶಿಲೆಯಿಂದ ಕೆತ್ತಿದ ದೊಡ್ಡ ಗಣೇಶನ ವಿಗ್ರಹವಿದೆ ಮತ್ತು ಆ ಭಾರಿ ಗಣೇಶನಿಗೆ ಮುಕುರುನಿ ವಿನಾಯಕರ್ ಎನ್ನುವ ಒಂದು ಗುಡಿಯಿದೆ. ಈ ದೇವರ ಮೂರ್ತಿಯು ದೇವಸ್ಥಾನದ ಕೆರೆಯನ್ನು ಅಗೆಯುವ ಸಂದರ್ಭದಲ್ಲಿ ಲಭಿಸಿತೆಂದು ನಂಬಲಾಗಿದೆ. ಮೀನಾಕ್ಷಿ ಗುಡಿಯು ಶಿವನ ಗುಡಿಯ ಎಡಭಾಗಕ್ಕೆ ಇದೆ, ಹಾಗೂ ಇದು ಶಿವನ ಗುಡಿಗಿಂತ ಶಿಲ್ಪೀಯವಾಗಿ ಕೊಂಚ ಕಡಿಮೆ ಹೊಳಪಿನದಾಗಿದೆ.

ಮೀನಾಕ್ಷಿ ದೇವಸ್ಥಾನದಲ್ಲಿರುವ ವಿಷ್ಣು ದೇವರು

ವೆಲ್ಲಿ ಅಂಬಲಮ್[ಬದಲಾಯಿಸಿ]

ಇದು ಶಿವ ದೇವರ ವೆಲ್ಲಿ (ತಮಿಳಿನಲ್ಲಿ, ಬೆಳ್ಳಿ) ಅಂಬಲಮ್‌ನ (ತಮಿಳಿನಲ್ಲಿ ಜಗಲಿ ಅಥವಾ ಪೂಜಾವೇದಿಕೆ) ಐದು ಭವ್ಯ ಮಂದಿರಗಳಲ್ಲಿ (ಶಬೈ ಅಥವಾ ಶಾಬ) ಒಂದಾಗಿದೆ. ಈ ಶಿವ ಗುಡಿಯು ಹಿಂದು ದೇವರು ನಟರಾಜನ ಅಸಾಮಾನ್ಯ ವಿಗ್ರಹವೊಂದನ್ನೂ ಹೊಂದಿದೆ. ಈ ಭಾರಿ ನಟರಾಜನ ವಿಗ್ರಹವು ದೊಡ್ಡದಾದ ಬೆಳ್ಳಿಯ ಪೂಜಾವೇದಿಕೆಯನ್ನು ಹೊಂದಿದೆ, ಆದ್ದರಿಂದ ಇದನ್ನು ವೆಲ್ಲಿ ಅಂಬಲಮ್ (ಬೆಳ್ಳಿಯ ನಿವಾಸ) ಎನ್ನುತ್ತಾರೆ. ಸಾಮಾನ್ಯವಾಗಿ ಎಡ ಕಾಲು ಮೇಲಕ್ಕೆತ್ತಿರುವ ಶಿವನ ಪ್ರಖ್ಯಾತ ಹಿಂದು ಮಾದರಿ ಮತ್ತು ನೃತ್ಯ ಮಾಡುವ ರೂಪವು, ಈ ದೇವಸ್ಥಾನದಲ್ಲಿ ಬಲ ಕಾಲು ಮೇಲಕ್ಕೆತ್ತಿ ಇದೆ. ಪುರಾಣದ ಪ್ರಕಾರ, ಶಿವ ದೇವರ ಪ್ರಾಮಾಣಿಕ ಭಕ್ತ ರಾಜಶೇಖರ ಪಾಂಡ್ಯನ ವಿನಂತಿ ಮೇರೆಗೆ ಅದು ಹಾಗಿದೆ. ನೃತ್ಯದಲ್ಲಿನ ವೈಯಕ್ತಿಕ ಪ್ರಯೋಗದ ಆಧಾರದಲ್ಲಿ ಆತ ಯಾವಾಗಲೂ ಒಂದು ಕಾಲನ್ನು ಮೇಲಕ್ಕೆತ್ತಿಟ್ಟುಕೊಳ್ಳುವುದರಿಂದ ಅದರ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ ಎಂದು ಭಾವಿಸಿ, ಶಿವನಲ್ಲಿ ಅವನ ಸ್ಥಾನವನ್ನು ಬದಲಿಸುವಂತೆ ಕೇಳಿಕೊಂಡನು.

ತಮಿಳು ನಾಡಿನಲ್ಲಿರುವ ಶಿವ ದೇವರ ಇತರ ನಾಲ್ಕು ಮಂದಿರಗಳು:

ಶಾಬ(ಮಂದಿರ) ಸ್ಥಳ ದೇವತಾ ಮೂರ್ತಿ ನಿರ್ಮಾಣ
ಪಾನ್ ಅಂಬಲಮ್ ಪಾರ್ಶಬೈ ಚಿದಂಬರಂ ಚಿನ್ನ
ಚಿತ್ರ ಶಾಬೈ ಕೋರ್ಟಲ್ಲಮ್ ಅಥವಾ ಕುಟ್ರಲ್ಲಮ್ ಹಸಿಚಿತ್ರ(ಹಸಿ ಇರುವಾಗಲೇ ಮೂಡಿಸಿದ ಚಿತ್ರ)
ತಮಿರ ಶಾಬೈ ತಿರ್ನೆಲ್ವೆಲಿ ತಾಮ್ರ
ರತ್ನ ಶಾಬೈ ತಿರುವಾಲಂಗಡು ರತ್ನಮಣಿಗಳು

ಪೋರ್ತಮರೈ ಕೆರೆ[ಬದಲಾಯಿಸಿ]

ದೇವಸ್ಥಾನದ ಒಳಗಿರುವ ಪವಿತ್ರ ಕೆರೆಯಾದ ಪೋರ್ತಮರೈ ಕುಳಮ್ ಭಕ್ತರಿಗೆ ತುಂಬಾ ಪೂಜನೀಯ ಸ್ಥಳವಾಗಿದೆ. ಜನರು ಪ್ರಮುಖ ಮಂದಿರದೊಳಗೆ ಪ್ರವೇಶಿಸುವುದಕ್ಕಿಂತ ಮೊದಲು ಸುಮಾರು 165 ft (50 m) ಉದ್ದ ಮತ್ತು 120 ft (37 m)[೩] ಅಗಲದ ಕೆರೆಯನ್ನು ದಾಟಿ ಮುಂದೆ ಹೋಗುತ್ತಾರೆ. ಇದರ ಹೆಸರಿನ ಅರ್ಥವೆಂದರೆ ಚಿನ್ನದ ತಾವರೆಗಳ ಕೆರೆ . ಇದರಲ್ಲಿ ಬೆಳೆಯುವ ತಾವರೆಗಳು ಚಿನ್ನದ ಬಣ್ಣದಿಂದಿರುತ್ತವೆ. ಪುರಾಣ ಕಥೆಯ ಪ್ರಕಾರ, ಶಿವ ದೇವರು ಇಲ್ಲಿ ಯಾವುದೇ ಮೀನು ಅಥವಾ ಇತರ ಜಲಚರ ಜೀವಿಗಳು ಬೆಳೆಯುವುದಿಲ್ಲವೆಂದು ಕೊಕ್ಕರೆಯೊಂದಕ್ಕೆ ಮಾತುಕೊಟ್ಟಿರುತ್ತಾನೆ, ಆದ್ದರಿಂದ ಈ ಕೆರೆಯಲ್ಲಿ ಯಾವುದೇ ಜಲಚರ ಜೀವಿಗಳು ಕಂಡುಬರುವುದಿಲ್ಲ.[೪] ತಮಿಳು ಪುರಾಣ ಕಥೆಗಳಲ್ಲಿ, ಈ ಕೆರೆಯನ್ನು ಹೊಸ ಸಾಹಿತ್ಯದ ಮೌಲ್ಯವನ್ನು ನಿರ್ಣಯಿಸುವ ತೀರ್ಪುಗಾರನೆಂದು ಹೇಳಲಾಗುತ್ತದೆ. ಆದ್ದರಿಂದ ಲೇಖಕರು ಅವರ ಕೃತಿಗಳನ್ನು ಇಲ್ಲಿಡುತ್ತಾರೆ. ಅಷ್ಟೊಂದು ಚೆನ್ನಾಗಿ ಬರೆದಿಲ್ಲದ ಕೃತಿಗಳು ಮುಳುಗುತ್ತವೆ; ಮತ್ತು ಪಾಂಡಿತ್ಯಪೂರ್ಣವಾದವು ತೇಲುತ್ತವೆ ಎಂದು ನಂಬಲಾಗುತ್ತದೆ.[೩][೫]

ಸಾವಿರ ಕಂಬದ ಮಂಟಪ[ಬದಲಾಯಿಸಿ]

ಬೆಳಗಿನ ಜಾವದಲ್ಲಿ ಸಾವಿರ ಕಂಬದ ಮಂಟಪದ ಒಂದು ಭಾಗ

ಮಧುರೈ ಮೀನಾಕ್ಷಿ ಅಮ್ಮನ್ ದೇವಸ್ಥಾನದ ಸಾವಿರ ಕಂಬದ ಮಂಟಪವು ಪುರಾತನ ತಿರುನೆಲ್ವೆಲ್ಲಿ[೬]ನೆಲ್ಲೆಯಪ್ಪರ್‌ ದೇವಸ್ಥಾನದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಆಯಿರಮ್ ಕಾಲ್ ಮಂಡಪಮ್ ಅಥವಾ ಸಾವಿರ ಕಂಬದ ಮಂಟಪವು ೯೮೫ (೧೦೦೦ದ ಬದಲಿಗೆ) ಕೆತ್ತಿದ ಕಂಬಗಳನ್ನು ಹೊಂದಿದೆ. ಇದನ್ನು ಸಾಂಸ್ಕೃತಿಕವಾಗಿ ಮಹತ್ವವಾದುದೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಭಾರತದ ಪುರಾತನ ಶಾಸ್ತ್ರದ ಸಮೀಕ್ಷೆಯು ನಿರ್ವಹಿಸುತ್ತದೆ. ಈ ಸಾವಿರ ಕಂಬದ ಮಂಟಪ ವನ್ನು ಆರ್ಯನಾಥ ಮುದಲಿಯಾರ್‌ ೧೫೬೯ರಲ್ಲಿ ರಚಿಸಿದನು.[೭]. ಅವನು ಮಧುರೈನ ಮೊದಲ ನಾಯಕ ವಿಶ್ವನಾಥ ನಾಯಕ್‌ನ (ಕ್ರಿ.ಶ. ೧೫೫೯-೧೬೦೦) ಪ್ರಧಾನ ಮಂತ್ರಿ ಮತ್ತು ಜನರಲ್ ಆಗಿದ್ದನು. ಆತ ರಾಷ್ಟ್ರದ ಭಾಗಶಃ-ಊಳಿಗಮಾನ್ಯ ಪದ್ಧತಿಯ ಸಂಘಟನೆ ಪಾಲಿಗರ್ ವ್ಯವಸ್ಥೆಯ ಸಂಸ್ಥಾಪಕನೂ ಆಗಿದ್ದಾನೆ. ಇದು ಹಲವು ಪಾಲಯಮ್ ಗಳಾಗಿ ಅಥವಾ ಸಣ್ಣ ಪ್ರಾಂತಗಳಾಗಿ ವಿಭಾಗಿಸಲ್ಪಟ್ಟು, ಪ್ರತಿಯೊಂದು ಪಾಲಯಮ್ಅನ್ನು ಪಾಲಯಕ್ಕಾರರ್ ಅಥವಾ ಸಣ್ಣ ನಾಯಕರು ಆಳುತ್ತಿದ್ದರು.[೮]. ಮಂಟಪವನ್ನು ಪ್ರವೇಶಿಸುವಾಗ ಈ ಪ್ರತಿಮೆಯನ್ನು ಕಾಣಬಹುದು; ಸುಂದರವಾದ ಕುದುರೆಯ ಮೇಲೆ ಕುಳಿತಿರುವ ಆರ್ಯನಾಥ ಮುದಲಿಯಾರ್‌ನ ಗಂಭೀರ ಭಂಗಿಯ ವಿಗ್ರಹವೊಂದು ದೇವಸ್ಥಾನದ ಒಂದು ದಿಕ್ಕಿನ ಪ್ರವೇಶದಲ್ಲಿ ಕಂಡುಬರುತ್ತದೆ. ಆ ವಿಗ್ರಹಕ್ಕೆ ಈಗಲೂ ನಿಯತಕಾಲಿಕವಾಗಿ ಈಗಿನ ಆರಾಧಕರು ಹಾರಗಳನ್ನು ಹಾಕಿ ಕಿರೀಟಧಾರಣೆ ಮಾಡುತ್ತಾರೆ[೭]. ಪ್ರತಿಯೊಂದು ಕಂಬವನ್ನು ಸುಂದರವಾಗಿ ಕೆತ್ತಿ ರಚಿಸಲಾಗಿದೆ. ಅಲ್ಲದೇ ಇದು ದ್ರಾವಿಡ ಶಿಲ್ಪದ ಒಂದು ಸ್ಮಾರಕವಾಗಿದೆ. ಮಂಟಪದಲ್ಲಿ ದೇವಾಲಯ-ಕಲೆಯ ಮ್ಯೂಸಿಯಂ ಒಂದಿದೆ. ಅಲ್ಲಿ ೧೨೦೦ ವರ್ಷಗಳಷ್ಟು ಹಿಂದಿನ ಮ‌ೂರ್ತಿಗಳು, ಛಾಯಾಚಿತ್ರಗಳು, ರೇಖಾಚಿತ್ರಗಳು ಮತ್ತು ಇತರ ದಾಖಲೆಗಳು ಪ್ರದರ್ಶಿಸಲ್ಪಡುತ್ತವೆ. ಈ ಮಂಟಪದ ಹೊರಗೆ, ಪಶ್ಚಿಮ ದಿಕ್ಕಿಲ್ಲಿ ಸಂಗೀತದ ಕಂಬಗಳಿವೆ. ಪ್ರತಿಯೊಂದು ಕಂಬವು ಹೊಡೆದಾಗ(ಮೀಟಿದಾಗ) ವಿವಿಧ ರೀತಿಯ ಸಂಗೀತವನ್ನು ಹೊರಡಿಸುತ್ತದೆ. ಕಂಬಗಳ ಮಂಟಪದ ದಕ್ಷಿಣ ದಿಕ್ಕಿನಲ್ಲಿರುವ ಕಲ್ಯಾಣ ಮಂಟಪದಲ್ಲಿ ಪ್ರತಿ ವರ್ಷ ಮಧ್ಯ-ಎಪ್ರಿಲ್‌ನಲ್ಲಿ ಚಿತಿರೈ ಹಬ್ಬದ ಸಂದರ್ಭದಲ್ಲಿ ಶಿವ ಮತ್ತು ಪಾರ್ವತಿಯ ಮದುವೆಯನ್ನು ಆಚರಿಸುತ್ತಾರೆ.

ಅಷ್ಟ ಶಕ್ತಿ ಮಂಟಪ[ಬದಲಾಯಿಸಿ]

ಇದು ಪೂರ್ವದ ಗೋಪುರಕ್ಕೆ ಹತ್ತಿರದಲ್ಲಿ ಮೀನಾಕ್ಷಿ ಮಂದಿರ ಗೋಪುರವನ್ನು ಪ್ರವೇಶಿಸುವಾಗ ಮೊದಲಿಗೆ ಸಿಗುವ ಮಂಟಪವಾಗಿದೆ. ಈ ಮಂಟಪದಲ್ಲಿ ಎಂಟು ದೇವತೆಗಳ ಮ‌ೂರ್ತಿಗಳಿವೆ, ಆದ್ದರಿಂದ ಈ ಹೆಸರು ಬಂದಿದೆ. ಪ್ರಸ್ತುತ ಈ ಮಂಟಪದಲ್ಲಿ ಪೂಜಾ ಸಾಮಗ್ರಿಗಳನ್ನು ಮಾರಾಟಮಾಡುವ ಅನೇಕ ಅಂಗಡಿಗಳನ್ನು ಕಾಣಬಹುದು.

ದೇವಸ್ಥಾನದ ಗೋಪುರದ ವಿವರಗಳು[ಬದಲಾಯಿಸಿ]

ಉತ್ಸವಗಳು[ಬದಲಾಯಿಸಿ]

ಈ ದೇವಸ್ಥಾನಕ್ಕೆ ಸಂಬಂಧಿಸಿದ ಅತಿ ಮುಖ್ಯ ಉತ್ಸವವೆಂದರೆ ಮೀನಾಕ್ಷಿ ತಿರುಕಲ್ಯಾಣಂ (). ಇದನ್ನು ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ಆಚರಿಸಲಾಗುತ್ತದೆ. ತಮಿಳು ನಾಡಿನ ಹೆಚ್ಚಿನ ದೇವಸ್ಥಾನಗಳು ವಾರ್ಷಿಕೋತ್ಸವಗಳನ್ನು ಆಚರಿಸುವ ಆ ಒಂದು ತಿಂಗಳಲ್ಲಿ, ಇಲ್ಲಿ ತೇರ್ ತಿರುವಿಳ (ರಥೋತ್ಸವ) ಮತ್ತು ತೆಪ್ಪ ತಿರುವಿಳ ವನ್ನೂ (ತೆಪ್ಪ ಉತ್ಸವ) ಒಳಗೊಂಡಂತೆ ಅನೇಕ ಉತ್ಸವಗಳನ್ನು ಆಚರಿಸಲಾಗುತ್ತದೆ. ಇದನ್ನು ಹೊರತು ಪಡಿಸಿ, ನವರಾತ್ರಿ, ಶಿವರಾತ್ರಿಯಂತಹ ಪ್ರಮುಖ ಹಿಂದು ಹಬ್ಬಗಳನ್ನು ಇಲ್ಲಿ ಅದ್ದೂರಿಯಿಂದ ಆಚರಿಸಲಾಗುತ್ತದೆ. ತಮಿಳು ನಾಡಿನಲ್ಲಿರುವ ಹೆಚ್ಚಿನ ಶಕ್ತಿ ದೇವಸ್ಥಾನಗಳಂತೆ, ತಮಿಳು ತಿಂಗಳು ಆದಿ (ಜುಲೈ ೧೫ - ಆಗಸ್ಟ್ ೧೭) ಮತ್ತು ಥೈಯ (ಜನವರಿ ೧೫ರಿಂದ ಫೆಬ್ರವರಿ ೧೫) ಪ್ರತಿ ಶುಕ್ರವಾರದಂದು ಈ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ನೆರೆದು ಪೂಜೆ ಸಲ್ಲಿಸುತ್ತಾರೆ. ಪ್ರತಿ ತಮಿಳು ತಿಂಗಳಲ್ಲಿ ದೇವಸ್ಥಾನದಲ್ಲಿ ಆವನಿ ಉರ್ಚವಮ್, ಮಾರ್ಗಜಿ ಉರ್ಚವಮ್, ನವರಾತ್ರಿ ಇತ್ಯಾದಿ ಕೆಲವು ಉತ್ಸವಗಳೂ ನಡೆಯುತ್ತವೆ. ಮೀನಾಕ್ಷಿ ತಿರುಕಲ್ಯಾಣಂ ಹಬ್ಬದಂತೆ ಆವನಿ ಮ‌ೂಲ ಉತ್ಸವಂ ಸಹ ಮೀನಾಕ್ಷಿ ಅಮ್ಮನ್ ದೇವಸ್ಥಾನದ ಒಂದು ಪ್ರಮುಖ ಹಬ್ಬವಾಗಿದೆ. ಇದು ೧೦-ದಿನಗಳ ಹಬ್ಬವಾಗಿದ್ದು, ಮುಖ್ಯವಾಗಿ ಸುಂದರೇಶ್ವರರ್‌ ದೇವರನ್ನು ಪೂಜಿಸಲಾಗುತ್ತದೆ. ಈ ಹಬ್ಬವು ಮಧುರೈ ನಗರದಲ್ಲಿ ಸುಂದರೇಶ್ವರರ್‌ ದೇವರು ತನ್ನ ಭಕ್ತರನ್ನು ಗೊಂದಲ ಮತ್ತು ಸಮಸ್ಯೆಗಳಿಂದ ರಕ್ಷಿಸಲು ಮಾಡಿದ ತಿರುವಿಳಯಾದಲ್ ಎಂದೂ ಕರೆಯುವ ಅವನ ವಿವಿಧ ಲೀಲೆಗಳನ್ನು ವರ್ಣಿಸುತ್ತದೆ.[೯]

ಪ್ರಚಲಿತ ಸ್ಥಿತಿ[ಬದಲಾಯಿಸಿ]

ದೇವಸ್ಥಾನದ ಗೋಪುರಗಳನ್ನು ಪುನಃಬಣ್ಣ ಬಳಿಯುವುದಕ್ಕಾಗಿ ೨೦೦೯ರ ಮಾರ್ಚ್‌ವರೆಗೆ ಸಾರುವೆಗಳಿಂದ ಆವರಿಸಲಾಗಿತ್ತು. ಕೆಲಸವು ಅನೇಕ ದೇವಸ್ಥಾನದ-ಕರಕುಶಲಕರ್ಮಿಗಳಿಂದ ೨೦೦೯ರ ಎಪ್ರಿಲ್‌ನೊಳಗೆ ಪೂರ್ಣಗೊಂಡಿತು. ಅವರು ಎಲ್ಲಾ ಕೆಟ್ಟ ಚಟಗಳನ್ನು ಬಿಟ್ಟು ಈ ಕೆಲಸವನ್ನು ಮಾಡಿದ್ದರು. ದೇವಸ್ಥಾನದೊಳಗಿನ ವರ್ಣಚಿತ್ರ, ಗೋಡೆ, ಶಾಸನ, ಮ‌ೂರ್ತಿಗಳ ಮೇಲಿನ ಹೆಚ್ಚಿನ ಪುರಾತತ್ವಶಾಸ್ತ್ರದ ಪುನರೂರ್ಜಿತಗೊಳಿಸುವ ಕೆಲಸವು ಯುದ್ಧೋಪಾದಿಯಲ್ಲಿ (ಅತಿ ಶೀಘ್ರದಲ್ಲಿ) ಪೂರ್ಣಗೊಂಡಿತು. ಈಗ ಈ ದೇವಸ್ಥಾನವು ಹೆಚ್ಚು ತಾಜಾ ನೋಟದೊಂದಿಗೆ ಕಂಗೊಳಿಸುತ್ತಿದೆ.

ದೇವಸ್ಥಾನದ ಪವಿತ್ರೀಕರಣವು (ಕುಂಭಾಭಿಷೇಕ) ೨೦೦೯ರ ಎಪ್ರಿಲ್ ೮ರ ಬುಧವಾರದಂದು ಬೆಳಿಗ್ಗಿನ ೯:೦೦ರಿಂದ ೯:೪೫ರವರೆಗೆ ೩೦೦ ಶಿವಾರ್ಚಕರಿಂದ ಅದ್ಧೂರಿಯಿಂದ ನಡೆಸಲ್ಪಟ್ಟಿತು[೧೦][೧೧]. ನೀವು ಜಗತ್ಪ್ರಸಿದ್ಧ ಮಧುರೈ ಮೀನಾಕ್ಷಿ ಅಮ್ಮನ್ ದೇವಸ್ಥಾನದ ಕುಂಭಾಭಿಷೇಕದ ವೀಡಿಯೊವನ್ನು ಇಲ್ಲಿ ವೀಕ್ಷಿಸಬಹುದು.[೧೨]

ಇದನ್ನೂ ಗಮನಿಸಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ SkyscraperPage - ಮೀನಾಕ್ಷಿ ಅಮ್ಮನ್ ದೇವಸ್ಥಾನ
 2. "Madurai.com - The meenakshi temple". Archived from the original on 2008-05-13. Retrieved 2010-06-09.
 3. ೩.೦ ೩.೧ "MAKING OF THE MAGNIFICENT TEMPLE DEDICATED TO MEENAKSHI SUNDERESWARAR". Archived from the original on 2008-05-11. Retrieved 2010-06-09.
 4. "Temple theertham". Archived from the original on 2012-03-28. Retrieved 2010-06-09.
 5. "Sanga Thamizh". Archived from the original on 2008-05-09. Retrieved 2010-06-09.
 6. "Tirunleveli Nellaiappar Temple".
 7. ೭.೦ ೭.೧ ಶ್ರೀ ಮೀನಾಕ್ಷಿ ದೇವಸ್ಥಾನದ ಇತಿಹಾಸ ಮತ್ತು ವಿವರಣೆ - T. G. S. ಬಲರಾಮ್ ಐಯರ್, T. R. ರಾಜಗೋಪಾಲಂ, ಮೀನಾಕ್ಷಿ ದೇವಸ್ಥಾನ, ೧೯೭೭ - ೪೨ ಪುಟಗಳು
 8. ಸುಸಾನ್ ಬೇಯ್ಲಿಯ ಸೈಂಟ್ಸ್, ಗಾಡೆಸಸ್ ಆಂಡ್ ಕಿಂಗ್ಸ್
 9. "Avani Moola Utsavam History and Festival Details".
 10. TripsGuru ವಿನ ಮಧುರೈ ಕುಂಭಾಭಿಷೇಕದ ಫೋಟೋಗಳು Archived 2009-04-24 ವೇಬ್ಯಾಕ್ ಮೆಷಿನ್ ನಲ್ಲಿ., ಎಪ್ರಿಲ್ ೮, ೨೦೦೯
 11. http://travel.webshots.com/album/೫೭೦೮೭೫೬೯೮ACevpL[ಶಾಶ್ವತವಾಗಿ ಮಡಿದ ಕೊಂಡಿ]
 12. "Madurai Meenakshi Sundareswarar Temple Kumbabishekam Video Clipping".

ಬಾಹ್ಯ ಕೊಂಡಿಗಳು[ಬದಲಾಯಿಸಿ]

9°55′10″N 78°07′10″E / 9.91944°N 78.11944°E / 9.91944; 78.11944