ಬಿ.ವಿ. ರಾಧಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬಿ.ವಿ. ರಾಧಾ ಒಬ್ಬ ಅನುಭವಿ ಕನ್ನಡ ಚಿತ್ರ ಹಾಗೂ ರಂಗಭೂಮಿ ಕಲಾವಿದೆ. ಮೊದಲಿನ ಹೆಸರು ರಾಜಲಕ್ಷ್ಮಿ, ರಾಧಾ ಅವರು (ಬೆಂಗಳೂರು ವಿಜಯಾ ರಾಧಾ) ತಮ್ಮ ಪರದೆಯ ಮೇಲಿನ ಹೆಸರನ್ನು ನವಕೋಟಿ ನಾರಾಯಣ ಚಿತ್ರದಲ್ಲಿನ ಪಾದಾರ್ಪಣೆಯ ನಂತರ ಪಡೆದರು. ಆಗಸ್ಟ್ ೧೯೪೮ರಲ್ಲಿ ಒಂದು ರೈತ ಕುಟುಂಬದಲ್ಲಿ ಜನಿಸಿದ ರಾಧಾ ಅವರು, ತಮ್ಮ ಕುಟುಂಬದ ಆಕ್ಷೇಪದ ನಡುವೆಯೂ ಚಿತ್ರರಂಗ ಸೇರಲು ಶಾಲೆಯನ್ನು ತೊರೆದರು.

'ತೂಗುದೀಪ' ಚಿತ್ರದಿ೦ದ ಚಿರಪರಿಚಿತರಾದ ರಾಧ, ಆನ೦ತರದಲ್ಲಿ ನಾಯಕಿ, ತ೦ಗಿ, ಋಣಾತ್ಮಕ ಮು೦ತಾದ ವಿಭಿನ್ನ ಪಾತ್ರಗಳಲ್ಲಿ ಮಿ೦ಚಿದರು. ಆ ಕಾಲದ ಬೇದಿಕೆಯ ನಟರಾದ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಶ್ರೀನಾಥ್, ರಾಜೇಶ್ ಮು೦ತಾದವರಿಗೆ ನಾಯಕಿಯಾಗಿ, ತ೦ಗಿಯಾಗಿ ಅಮೋಘ ಅಭಿನಯ ನೀದಿದರು.