ವಿಷಯಕ್ಕೆ ಹೋಗು

ವಿಜಯಕಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯಕಲಾ
ಸಾವುಸಪ್ಟೆಂಬರ್ ೩೦, ೨೦೧೩
ಉದ್ಯೋಗಚಲನಚಿತ್ರ ಮತ್ತು ರಂಗ ನಟಿ
ಸಕ್ರಿಯ ವರ್ಷಗಳು೧೯೭೧-೧೯೯೧

ವಿಜಯಕಲಾ ಕನ್ನಡದ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದೆ [][]. ಉತ್ತರ ಕರ್ನಾಟಕದ ನಾಟಕ ಕಂಪೆನಿಗಳ ಮೂಲಕ ರಂಗಭೂಮಿಯಲ್ಲಿ ಅಪಾರ ಯಶಸ್ಸು ಗಳಿಸಿದ್ದ ವಿಜಯಕಲಾ ಸುಮಾರು ೫೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ೭೦ ಮತ್ತು ೮೦ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ವಿಜಯಕಲಾ ಅವರ ಪ್ರಮುಖ ಚಿತ್ರಗಳೆಂದರೆ ಮಗ ಮೊಮ್ಮಗ(೧೯೭೪), ಯಾರು ಹಿತವರು (೧೯೭೬) ಮತ್ತು ತೀರದ ಬಯಕೆ(೧೯೮೧).

ವೃತ್ತಿ ಜೀವನ

[ಬದಲಾಯಿಸಿ]

ಕಲ್ಯಾಣಿ(೧೯೭೧) ಮತ್ತು ತ್ರಿವೇಣಿ(೧೯೭೨) ಮುಂತಾದ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ವಿಜಯಕಲಾ ಮಗ ಮೊಮ್ಮಗ(೧೯೭೪) ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಾಯಿ ಮತ್ತು ಮಗಳ ಪಾತ್ರಗಳಲ್ಲಿ ಇವರ ಅಭಿನಯ ಗಮನಾರ್ಹವಾಗಿತ್ತು. ವಿಜಯಕಲಾ ನಾಯಾಕಿಯಾಗಿ ಅಭಿನಯಿಸಿದ ಪ್ರಮುಖ ಚಿತ್ರಗಳೆಂದರೆ ಆಶೀರ್ವಾದ(೧೯೭೫), ಯಾರು ಹಿತವರು(೧೯೭೬) ಮತ್ತು ತೀರದ ಬಯಕೆ(೧೯೮೧). ಪ್ರಖ್ಯಾತ ನಿರ್ದೇಶಕ ಸಿ.ವಿ.ಶಿವಶಂಕರ್ ಅವರ ನಿರ್ದೇಶನದ ಮಹಾತಪಸ್ವಿ(೧೯೭೭) ಮತ್ತು ಹೊಯ್ಸಳ(೧೯೭೮) ಚಿತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ ವಿಜಯಕಲಾ ಪ್ರೇಮ ಮಂದಿರ(೧೯೮೪) ಮತ್ತು ಡೈಮಂಡ್ ಸಿಕ್ರೆಟ್ ಚಿತ್ರಗಳನ್ನು ಸ್ವತಃ ತಾವೇ ನಿರ್ಮಿಸಿ ನಿರ್ದೇಶಿಸಿದ್ದರು. ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಕಾಣದಿದ್ದ ಕಾರಣಕ್ಕೆ ಚಿತ್ರರಂಗದಿಂದ ದೂರ ಸರಿದಿದ್ದರು[].

೨೦೧೩ರ ಸಪ್ಟೆಂಬರ್ ೩೦ರಂದು ಉಸಿರಾಟದ ತೊಂದರೆಯಿಂದ ನಿಧನರಾದರು.[]

ವಿಜಯಕಲಾ ಅಭಿನಯದ ಕೆಲವು ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೭೧ತಂದೆ ಮಕ್ಕಳುಕನ್ನಡಎಸ್.ವಿ.ಶ್ರೀಕಾಂತ್ಜಯಂತಿ, ಬಿ.ಸರೋಜಾ ದೇವಿ, ರಮೇಶ್, ಆರ್.ಎನ್.ಸುದರ್ಶನ್, ಶ್ರೀನಾಥ್
೧೯೭೧ನಮ್ಮ ಬದುಕುಕನ್ನಡಎಂ.ಎನ್.ಆರಾಧ್ಯರಾಜೇಶ್, ಪಂಢರೀಬಾಯಿ, ಪೂರ್ಣಿಮಾ, ಕೆ.ಎಸ್.ಅಶ್ವಥ್
೧೯೭೧ಕಲ್ಯಾಣಿಕನ್ನಡಗೀತಪ್ರಿಯಜಯಂತಿ, ಗಂಗಾಧರ್, ರಂಗಾ
೧೯೭೨ತ್ರಿವೇಣಿಕನ್ನಡಎಂ.ಎನ್.ಪ್ರಸಾದ್ಕಲ್ಪನಾ, ಉದಯಕುಮಾರ್
೧೯೭೨ಸುಭದ್ರಾ ಕಲ್ಯಾಣಕನ್ನಡಕಣಗಾಲ್ ಪ್ರಭಾಕರ ಶಾಸ್ತ್ರಿರಾಜೇಶ್, ಕಲ್ಪನಾ, ಗಂಗಾಧರ್, ಬಿ.ವಿ.ರಾಧ
೧೯೭೨ಸಿಪಾಯಿ ರಾಮುಕನ್ನಡವೈ.ಆರ್.ಸ್ವಾಮಿಡಾ.ರಾಜ್ ಕುಮಾರ್, ಲೀಲಾವತಿ, ಆರತಿ
೧೯೭೩ಧರ್ಮಪತ್ನಿಕನ್ನಡಆರೂರು ಪಟ್ಟಾಭಿರಾಜಾಶಂಕರ್, ಲೀಲಾವತಿ
೧೯೭೪ಗೃಹಿಣಿಕನ್ನಡವಿಜಯ ಸತ್ಯಂರಾಜೇಶ್, ಬಿ.ಸರೋಜಾ ದೇವಿ, ರಾಮ್ ಗೋಪಾಲ್
೧೯೭೪ಮಗ ಮೊಮ್ಮಗಕನ್ನಡವೈ.ಆರ್.ಸ್ವಾಮಿದ್ವಾರಕೀಶ್, ಚಂದ್ರಕಲಾ, ಕೆ.ಎಸ್.ಅಶ್ವಥ್, ಲೀಲಾವತಿ, ಶೈಲಶ್ರೀ, ವಜ್ರಮುನಿ
೧೯೭೪ಮಹಾತ್ಯಾಗಕನ್ನಡಮಾರುತಿ ಶಿವರಾಂಆರತಿ, ಜಯಲಕ್ಷ್ಮಿ, ಲೀಲಾವತಿ
೧೯೭೫ಜಾಗೃತಿಕನ್ನಡಬಿ.ಶ್ರೀಧರ್ಉದಯಕುಮಾರ್, ಜಯಲಕ್ಷ್ಮಿ, ಶೈಲಶ್ರೀ
೧೯೭೫ದೇವರ ಕಣ್ಣುಕನ್ನಡವೈ.ಆರ್.ಸ್ವಾಮಿಲೋಕೇಶ್, ಜಯಲಕ್ಷ್ಮಿ, ಆರತಿ
೧೯೭೫ಆಶೀರ್ವಾದಕನ್ನಡಕುಣಿಗಲ್ ನಾಗಭೂಷಣ್ಉದಯಕುಮಾರ್, ರಾಜೇಶ್, ರಾಜಶ್ರೀ
೧೯೭೬ಯಾರು ಹಿತವರುಕನ್ನಡಪಿ.ಎಸ್.ಮೂರ್ತಿಜಯಮಾಲ, ರಾಮ್ ಗೋಪಾಲ್
೧೯೭೭ಮಹಾತಪಸ್ವಿಕನ್ನಡಸಿ.ವಿ.ಶಿವಶಂಕರ್ಜಿ.ಟಿ.ಯಾದವ್
೧೯೭೮ಹೊಯ್ಸಳಕನ್ನಡಸಿ.ವಿ.ಶಿವಶಂಕರ್
೧೯೮೧ತೀರದ ಬಯಕೆಕನ್ನಡರಾಜುರಾಮ್ ಗೋಪಾಲ್
೧೯೮೪ಪ್ರೇಮ ಮಂದಿರಕನ್ನಡವಿಜಯಕಲಾವಿಜಯಕಲಾ
೧೯೯೧ಡೈಮಂಡ್ ಸಿಕ್ರೆಟ್ಕನ್ನಡವಿಜಯಕಲಾವಿಜಯಕಲಾ, ರವೀಂದ್ರ

[]

ಉಲ್ಲೇಖಗಳು

[ಬದಲಾಯಿಸಿ]
  1. "ವಿಜಯಕಲಾ". ಚಿಲೋಕ.
  2. 1 2 3 "ಕನ್ನಡಸಿನಿಮಾ ಹಾಗೂ ರಂಗಭೂಮಿ ಕಲಾವಿದೆ ವಿಜಯಕಲಾ ನಿಧನ". ಕನ್ನಡ ಫಿಲ್ಮಿ ಬೀಟ್.
  3. "ವಿಜಯಕಲಾ ಅಭಿನಯದ ಕನ್ನಡ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್.
"https://kn.wikipedia.org/w/index.php?title=ವಿಜಯಕಲಾ&oldid=1363531" ಇಂದ ಪಡೆಯಲ್ಪಟ್ಟಿದೆ