ವಿಷಕನ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to searchವಿಷಕನ್ಯೆ ಭಾರತದ ಪುರಾಣ ಪುಣ್ಯ ಕಥೆಗಳಲ್ಲಿ ಇದನ್ನು ಸಾಮಾನ್ಯವಾಗಿ ಕೇಳುತ್ತೇವೆ .ಆ ವಿಷಕನ್ಯೆ ನೋಡೋದಿಕ್ಕೆ ಅದ್ಭುತವಾಗಿರ್ತಿದ್ದಳಂತೆ ಅಥವಾ ಅದ್ಭುತವಗಿರೋರನ್ನೇ ವಿಷಕನ್ಯೆ ಮಾಡುತ್ತಿದ್ದರು . ರಾಜ ಮಹಾರಾಜರು ತಮ್ಮ ಎದುರಾಳಿಗಳನ್ನ ಕೊಲ್ಲೋಕೆ ಇವರನ್ನ ಕಳಿಸುತ್ತಿದ್ದರು.ಇವರ ಜೊತೆಗೆ ಏನಾದರೂ ವಿರೋಧಿ ದೇಶದ ರಾಜ ಮಲಗಿದ ಅಂದರೆ ಆತ ಕತೆ ಮುಗಿಯಿತು.ಪ್ರಣಯದಾಟ ಮುಗಿಯುವ ಮುಂಚೆಯೇ ಈತನ ಇಹಲೋಕದಾಟ ಕೊನೆಗೊಂಡಿರುತ್ತಿತ್ತು. ಇವರು ವಿಷಕನ್ಯೆ ಹೇಗಾಗುತ್ತಿದ್ದರು ಹಾಗಾದರೆ . ಒಂದು ಸುಂದರವಾದ ಹೆಣ್ಣು ಹಸುಗೂಸನ್ನ ರಾಜರು ದತ್ತು ತೆಗೆದುಕೊಂಡು ಅವರಿಗೆ ನಿಯಮಿತ ಪ್ರಮಾಣದ ಪಾದಸರಸವನ್ನ ದೇಹಕ್ಕೆ ಕೊದುತ್ತಿದ್ದರಂತೆ. ಅವರ ದೇಹ ಹಾಗಾಗಿ ವಿಷಪೂರಿತವಾಗುತ್ತಿತ್ತು.


ಉಗಮ[ಬದಲಾಯಿಸಿ]

ಈ ವಿಷಕನ್ಯೆಯ ಬಗ್ಗೆ ಹಲವಾರು ದಂತಕತೆಗಳಿವೆ.ಕೆಲವೊಂದು ಮೂಲದ ಪ್ರಕಾರ ಚಾಣಕ್ಯನ ಕಾಲದಲ್ಲಿ ಇವರ ಕಲ್ಪನೆ ಪ್ರಾರಂಭವಾಯಿತು.ಚಾಣಕ್ಯನೆ ಈ ವಿಷಕನ್ಯೆಯರ ಉಗಮಕ್ಕೆ ಕಾರಣ ಹೇಳಿ ಕೂಡ ವಾದವಿದೆ.ಮತ್ತೊಂದು ಮೂಲದ ಪ್ರಕಾರ .ಕಲ್ಕಿ ಪುರಾಣದಲ್ಲಿ ಇವರ ಉಲ್ಲೇಖವಿದ್ದು ., ಕೇವಲ ದೃಷ್ಟಿಮಾತ್ರದಿಂದಲೇ ಮನುಷ್ಯರನ್ನ ಕೊಲ್ಲಬಲ್ಲ ಸಾಮರ್ಥ್ಯವಿತ್ತು ಎಂದೂ ಕೂಡ ಹೇಳಲಾಗುತ್ತದೆ.ಗಂಧರ್ವನಾದ ಚಿತ್ರಗ್ರೀವ ಎಂಬಾತನ ಹೆಂಡತಿ .,ಸುಲೋಚನ ವಿಷಕನ್ಯೆ ಆಗಿದ್ದಳೆಂದು ಹೇಳಲಾಗುತ್ತದೆ