ವಿಷಯಕ್ಕೆ ಹೋಗು

ಶ್ರೀಲಲಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ರೀಲಲಿತ
ಹುಟ್ಟು
ಭದ್ರಾವತಿ, ಮೈಸೂರು ರಾಜ್ಯ, ಭಾರತ
ಉದ್ಯೋಗಚಲನಚಿತ್ರ ಮತ್ತು ಕಿರುತೆರೆ ನಟಿ
ಸಕ್ರಿಯ ವರ್ಷಗಳು೧೯೭೦-ಪ್ರಸ್ತುತ


ಶ್ರೀಲಲಿತ ಕನ್ನಡದ ಚಲನಚಿತ್ರ ನಟಿ. ೧೯೭೦ರಲ್ಲಿ ತೆರೆಗೆ ಬಂದ ಸೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಶ್ರೀಲಲಿತ ಆನಂತರದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡುವಾರಳ್ಳಿ ಪಾಂಡವರು(೧೯೭೮) ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡದ ಶ್ರೀಲಲಿತ ಅವರ ಕೆಲವು ಮಹತ್ವದ ಚಿತ್ರಗಳೆಂದರೆ ನಾಡಿನ ಭಾಗ್ಯ(೧೯೭೧) ಅಪರಿಚಿತ(೧೯೭೮), ಸುಬ್ಬಿ ಸುಬ್ಬಕ್ಕ ಸುವ್ವಲಾಲಿ(೧೯೮೦), ಮಾಯೆಯ ಮುಸುಕು(೧೯೮೦), ಬಾಳು ಬಂಗಾರ(೧೯೮೧) ಮತ್ತು ಹೆಂಡ್ತೀರೆ ಹುಷಾರ್. ಪ್ರಸಿದ್ಧ ನಿರ್ದೇಶಕ ಬಸವರಾಜ್ ಕೆಸ್ತೂರ್ ಅವರ ವಿಭಿನ್ನ ಚಿತ್ರಗಳಾದ ನಂಜುಂಡ ನಕ್ಕಾಗ(೧೯೭೫), ಸಂಘರ್ಷ(೧೯೭೭) ಮತ್ತು ಸ್ವಾಮೀಜಿ(೧೯೮೦) ಚಿತ್ರಗಳಲ್ಲಿ ನಾಯಕಿಯಾಗಿ ವಿಶಿಷ್ಠ ಅಭಿನಯ ನೀಡಿದ್ದಾರೆ.

ಜನಪ್ರಿಯ ನಟರಾದ ಮಾನು ಅವರೊಂದಿಗೆ ಶ್ರೀ ರಾಘವೇಂದ್ರ ಕರುಣೆ(೧೯೮೦) ಮತ್ತು ಮೈಲಾರ ಲಿಂಗ(೧೯೮೯) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜನಪ್ರಿಯ ನಟರಾದ ರಾಜೇಶ್, ಸುದರ್ಶನ್, ಶ್ರೀನಾಥ್, ಗಂಗಾಧರ್, ಅಂಬರೀಶ್, ಶ್ರೀನಿವಾಸಮೂರ್ತಿ, ಮಾನು, ರಾಮ್ ಗೋಪಾಲ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.[]

ಶ್ರೀಲಲಿತ ಅಭಿನಯದ ಚಿತ್ರಗಳು

[ಬದಲಾಯಿಸಿ]
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೦ನಾಡಿನ ಭಾಗ್ಯಆರ್.ನಾಗೇಂದ್ರ ರಾವ್ರಾಜ್ ಕುಮಾರ್, ಆರ್.ಎನ್.ಸುದರ್ಶನ್, ಸುರೇಖಾ
೧೯೭೦ಸೀತಾವಾದಿರಾಜ್ಕಲ್ಪನಾ, ಗಂಗಾಧರ್, ಶ್ರೀನಾಥ್
೧೯೭೨ಮರೆಯದ ದೀಪಾವಳಿಆರ್.ಸಂಪತ್ರಾಜೇಶ್, ಕಲ್ಪನಾ
೧೯೭೪ಬಾಳುವೆ ನಿನಗಾಗಿಎಲ್.ಸತ್ಯವಿಜಯ್ ರಾಜ್, ಉಮಾ ರಾಣಿ
೧೯೭೫ನಂಜುಂಡ ನಕ್ಕಾಗಬಸವರಾಜ್ ಕೆಸ್ತೂರ್ರಾಮ್ ಗೋಪಾಲ್
೧೯೭೭ಪುನರ್ಮಿಲನಎಂ.ಆರ್.ವಿಠಲ್ಬಿ.ವಿ.ರಾಧ, ರಾಮ್ ಗೋಪಾಲ್
೧೯೭೭ಬಯಸದೇ ಬಂದ ಭಾಗ್ಯಆರ್.ರಾಮಮೂರ್ತಿವಿಷ್ಣುವರ್ಧನ್, ಮಂಜುಳಾ, ರಾಮ್ ಗೋಪಾಲ್
೧೯೭೭ವೇದಾಂತಕೆ.ಸಿ.ಪಾಂಡುಟಿ.ಎನ್.ಸೀತಾರಾಮ್, ರಮೇಶ್ ಭಟ್
೧೯೭೭ಸಂಘರ್ಷಬಸವರಾಜ್ ಕೆಸ್ತೂರ್ಶ್ರೀನಾಥ್, ಲಕ್ಷ್ಮಿ
೧೯೭೮ಅಪರಿಚಿತಕಾಶಿನಾಥ್ಸುರೇಶ್ ಹೆಬ್ಳೀಕರ್, ಶೋಭಾ
೧೯೭೮ಪಡುವಾರಹಳ್ಳಿ ಪಾಂಡವರುಪುಟ್ಟಣ್ಣ ಕಣಗಾಲ್ಅಂಬರೀಶ್, ರಾಮಕೃಷ್ಣ, ಜೈಜಗದೀಶ್
೧೯೭೯ಅತ್ತೆಗೆ ತಕ್ಕ ಸೊಸೆವೈ.ಆರ್.ಸ್ವಾಮಿಮಾನು, ರೇಖಾ ರಾವ್, ಗಂಗಾಧರ್, ಲೀಲಾವತಿ
೧೯೭೯ಮಂಗಳಎನ್.ಟಿ.ಜಯರಾಮ ರೆಡ್ಡಿಲೀಲಾವತಿ, ರಾಮ್ ಗೋಪಾಲ್, ವಾಣಿಚಂದ್ರ
೧೯೮೦ಗುರು ಸಾರ್ವಭೌಮ ಶ್ರೀರಾಘವೇಂದ್ರ ಕರುಣೆಹುಣಸೂರು ಕೃಷ್ಣಮೂರ್ತಿಜಮುನಾ, ರಾಜೇಶ್, ಬಿ.ಸರೋಜಾದೇವಿ, ಗಂಗಾಧರ್, ಮಾನು
೧೯೮೦ದೊಡ್ಡಮನೆ ಎಸ್ಟೇಟ್ಸಿ.ಚಂದ್ರಶೇಖರ್ಮಾನು, ಪ್ರಮೀಳಾ ಜೋಷಾಯ್
೧೯೮೦ಮಾಯೆಯ ಮುಸುಕುಬಿ.ವೈ.ರಾಮದಾಸ್ರಾಜೇಶ್
೧೯೮೦ರಾಮ ಲಕ್ಷ್ಮಣಕೆ.ಎಸ್.ಎಲ್.ಸ್ವಾಮಿ, ಎಂ.ಪಿ.ಶಂಕರ್ಅಶೋಕ್, ಮಂಜುಳಾ
೧೯೮೦ಸುಬ್ಬಿ ಸುಬ್ಬಕ್ಕ ಸುವ್ವಲಾಲಿಎನ್.ಎಸ್.ಧನಂಜಯಅಂಬರೀಶ್, ರಾಮಕೃಷ್ಣ, ಅಮರೀಶ್ ಪುರಿ
೧೯೮೦ಸ್ವಾಮೀಜಿಬಸವರಾಜ ಕೆಸ್ತೂರ್ಸುಂದರ್ ಕೃಷ್ಣ ಅರಸ್
೧೯೮೧ನಮ್ಮಮ್ಮ ತಾಯಿ ಅಣ್ಣಮ್ಮಸಿ.ಚಂದ್ರಶೇಖರ್ಬಿ.ಸರೋಜಾದೇವಿ, ಸುಂದರ್ ಕೃಷ್ಣ ಅರಸ್
೧೯೮೧ಬಾಳು ಬಂಗಾರಗೀತಪ್ರಿಯಅಶೋಕ್, ಶ್ರೀನಿವಾಸಮೂರ್ತಿ, ಮಾನು, ಕಲಾವತಿ
೧೯೮೨ಜೋಡಿ ಜೇವಗೀತಪ್ರಿಯಶ್ರೀನಿವಾಸಮೂರ್ತಿ, ಇಂದಿರಾ
೧೯೮೯ಮೈಲಾರ ಲಿಂಗಗುರುರಾಜ ಕಟ್ಟೆಮಾನು


[]

ಉಲ್ಲೇಖಗಳು

[ಬದಲಾಯಿಸಿ]
  1. "ಶ್ರೀಲಲಿತ". ಚಿಲೋಕ.ಕಾಮ್.
  2. "ಶ್ರೀಲಲಿತ ಅಭಿನಯದ ಚಿತ್ರಗಳ ಪಟ್ಟಿ". ಚಿಲೋಕ.ಕಾಮ್.